BSNL Recruitment 2023: ಭಾರತ್ ಸಂಚಾರ ನಿಗಮ ಲಿಮಿಟೆಡ್(Bharat Sanchar Nigam Limited -BSNL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬರೋಬ್ಬರಿ 11,705 ಜೂನಿಯರ್ ಟೆಲಿಕಾಂ ಆಫೀಸರ್(ಟೆಲಿಕಾಂ)(Junior Telecom Officer) ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ(Apply) ಹಾಕಿ.
ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್/ಆಫ್ಲೈನ್(Online/Offline) ಎರಡರ ಮೂಲಕವೂ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್ಎನ್ಎಲ್(BSNL)ನ ಅಧಿಕೃತ ವೆಬ್ಸೈಟ್ bsnl.co.in ಗೆ ಭೇಟಿ ನೀಡಬಹುದು. ಡಿಸೆಂಬರ್ 31, 2022ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ವಿದ್ಯಾರ್ಹತೆ ಏನಿರಬೇಕು?
ಅಭ್ಯರ್ಥಿಗಳು ಕಡ್ಡಾಯವಾಗಿ ದೂರಸಂಪರ್ಕ/ಎಲೆಕ್ಟ್ರಾನಿಕ್ಸ್/ರೇಡಿಯೊ/ಕಂಪ್ಯೂಟರ್/ಎಲೆಕ್ಟ್ರಿಕಲ್/ಐಟಿ/ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಬಿ.ಇ ಅಥವಾ ಬಿ.ಟೆಕ್, ಎಲೆಕ್ಟ್ರಾನಿಕ್ಸ್/ಸಿಎಸ್ಇಯಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: Job Alert: ತಿಂಗಳಿಗೆ 60,000 ಸಂಬಳ- ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ- ಆಸಕ್ತರು ಈಗಲೇ Apply ಮಾಡಿ
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?
ಜನವರಿ 31, 2023ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD(ಜನರಲ್) ಅಭ್ಯರ್ಥಿಗಳು-10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಹುದ್ದೆಯ ಮಾಹಿತಿ ಹೀಗಿದೆ:
ಸಂಸ್ಥೆ | ಭಾರತ್ ಸಂಚಾರ ನಿಗಮ ಲಿಮಿಟೆಡ್ |
ಹುದ್ದೆ | ಜೂನಿಯರ್ ಟೆಲಿಕಾಂ ಆಫೀಸರ್ |
ಒಟ್ಟು ಹುದ್ದೆ | 11,705 |
ವೇತನ | ಮಾಸಿಕ 16,400-40,500 ರೂ. |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಕೆ ಬಗೆ | ಆನ್ಲೈನ್/ಆಫ್ಲೈನ್ |
ಕೊನೆಯ ದಿನಾಂಕ | ಜನವರಿ 31, 2023 |
ಅರ್ಜಿ ಶುಲ್ಕ ಎಷ್ಟು?
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಶುಲ್ಕ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: Bank Job: ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿದೆ ಕೆಲಸ, ನೀವೂ ಅಪ್ಲೈ ಮಾಡಬಹುದು
ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?
ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಕೊಡಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅರ್ಜಿ ಹೇಗೆ ಸಲ್ಲಿಸಬೇಕು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪೋಸ್ಟ್ ಮುಖಾಂತರ ಹೀಗೆ ಕಳುಹಿಸಿ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 31ರೊಳಗೆ ಕಳುಹಿಸಬೇಕು.
ನೋಂದಾಯಿತ ಕಚೇರಿ BSNL
ನವದೆಹಲಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ