• ಹೋಂ
  • »
  • ನ್ಯೂಸ್
  • »
  • Jobs
  • »
  • Police Jobs: ಡಿಗ್ರಿ ಪಾಸಾಗಿದ್ರೆ ಸಬ್​ ಇನ್ಸ್​​ಪೆಕ್ಟರ್​​​ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ- ತಿಂಗಳಿಗೆ 1.12 ಲಕ್ಷ ಸಂಬಳ

Police Jobs: ಡಿಗ್ರಿ ಪಾಸಾಗಿದ್ರೆ ಸಬ್​ ಇನ್ಸ್​​ಪೆಕ್ಟರ್​​​ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ- ತಿಂಗಳಿಗೆ 1.12 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 23 ಸಬ್​ ಇನ್​ಸ್ಪೆಕ್ಟರ್, ಜೂನಿಯರ್ ಎಂಜಿನಿಯರ್/ SI ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

BSF Recruitment 2023: ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 23 ಸಬ್​ ಇನ್​ಸ್ಪೆಕ್ಟರ್, ಜೂನಿಯರ್ ಎಂಜಿನಿಯರ್/ SI ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗಡಿ ಭದ್ರತಾ ಪಡೆ
ಹುದ್ದೆಸಬ್​ ಇನ್​ಸ್ಪೆಕ್ಟರ್, ಜೂನಿಯರ್ ಎಂಜಿನಿಯರ್/ SI
ಒಟ್ಟು ಹುದ್ದೆ23
ವಿದ್ಯಾರ್ಹತೆಪದವಿ, ಡಿಪ್ಲೊಮಾ
ವೇತನಮಾಸಿಕ ₹ 44,900-1,42,400
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 24, 2023

ಹುದ್ದೆಯ ಮಾಹಿತಿ:
ಇನ್​ಸ್ಪೆಕ್ಟರ್​- 1
ಸಬ್​ ಇನ್​ಸ್ಪೆಕ್ಟರ್​- 18
ಜೂನಿಯರ್ ಎಂಜಿನಿಯರ್/ SI- 4


ವಿದ್ಯಾರ್ಹತೆ:
ಇನ್​ಸ್ಪೆಕ್ಟರ್​- ಆರ್ಕಿಟೆಕ್ಚರ್​​ನಲ್ಲಿ ಪದವಿ
ಸಬ್​ ಇನ್​ಸ್ಪೆಕ್ಟರ್​- ಸಿವಿಲ್​ ಎಂಜಿನಿಯರಿಂಗ್​​ನಲ್ಲಿ ಡಿಪ್ಲೋಮಾ
ಜೂನಿಯರ್ ಎಂಜಿನಿಯರ್/ SI- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ


ಇದನ್ನೂ ಓದಿ: Job Alert: ಬೆಂಗಳೂರಿನಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಹಾಕಿ- ತಿಂಗಳಿಗೆ 81,000 ಸಂಬಳ


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 24, 2023 ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಇನ್​ಸ್ಪೆಕ್ಟರ್​- ಮಾಸಿಕ ₹ 44,900-1,42,400
ಸಬ್​ ಇನ್​ಸ್ಪೆಕ್ಟರ್​- ಮಾಸಿಕ ₹ 35,400-1,12,400
ಜೂನಿಯರ್ ಎಂಜಿನಿಯರ್/ SI- ಮಾಸಿಕ ₹ 35,400-1,12,400


ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.




ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 24, 2023

Published by:Latha CG
First published: