• ಹೋಂ
  • »
  • ನ್ಯೂಸ್
  • »
  • Jobs
  • »
  • BSF Recruitment 2023: ತಿಂಗಳಿಗೆ ₹ 69,000 ಸಂಬಳ- ಹತ್ತನೇ ತರಗತಿ ಪಾಸಾದವರು ಅರ್ಜಿ ಹಾಕಿ

BSF Recruitment 2023: ತಿಂಗಳಿಗೆ ₹ 69,000 ಸಂಬಳ- ಹತ್ತನೇ ತರಗತಿ ಪಾಸಾದವರು ಅರ್ಜಿ ಹಾಕಿ

BSF

BSF

ಒಟ್ಟು 1284 ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date).

  • News18 Kannada
  • 5-MIN READ
  • Last Updated :
  • New Delhi, India
  • Share this:

BSF Recruitment 2023: ಗಡಿ ಭದ್ರತಾ ಪಡೆ (Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1284 ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗಡಿ ಭದ್ರತಾ ಪಡೆ
ಹುದ್ದೆಕಾನ್ಸ್​ಟೇಬಲ್
ಒಟ್ಟು ಹುದ್ದೆ1284
ವಿದ್ಯಾರ್ಹತೆ10ನೇ ತರಗತಿ
ವೇತನಮಾಸಿಕ ₹ 21,700-69,100
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 12, 2023

ಯಾವ್ಯಾವ ಹುದ್ದೆ ಎಷ್ಟು ಇವೆ?
ಕಾನ್ಸ್​ಟೇಬಲ್ (ಪುರುಷ)- 1220
ಕಾನ್ಸ್​ಟೇಬಲ್ (ಮಹಿಳಾ)- 64


ಇದನ್ನೂ ಓದಿ: Army Jobs: SSLC ಪಾಸಾಗಿದ್ರೆ ₹ 63,000 ಸಂಬಳ- ಈಗಲೇ ಅರ್ಜಿ ಹಾಕಿ


ಟ್ರೇಡ್ ಆಧಾರದ ಮೇಲೆ ಯಾವ್ಯಾವ ಹುದ್ದೆ ಖಾಲಿ ಇವೆ?
ಕಾನ್ಸ್​ಟೇಬಲ್ (ಕೋಬ್ಲರ್)- 23
ಕಾನ್ಸ್​ಟೇಬಲ್ (ಟೈಲರ್)- 13
ಕಾನ್ಸ್​ಟೇಬಲ್ (ಕುಕ್)- 480
ಕಾನ್ಸ್​ಟೇಬಲ್ (ವಾಟರ್ ಕ್ಯಾರಿಯರ್)- 294
ಕಾನ್ಸ್​ಟೇಬಲ್ (ವಾಶರ್ ಮ್ಯಾನ್)- 132
ಕಾನ್ಸ್​ಟೇಬಲ್ (ಬಾರ್ಬರ್)- 60
ಕಾನ್ಸ್​ಟೇಬಲ್ (ಸ್ವೀಪರ್)- 277
ಕಾನ್ಸ್​ಟೇಬಲ್ (ವೈಟರ್)- 5


ವಿದ್ಯಾರ್ಹತೆ:
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 12, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ: UPSC ನೇಮಕಾತಿ: 73 ಹುದ್ದೆಗಳ ಭರ್ತಿಗೆ ಅಧಿಸೂಚನೆ- ಪದವೀಧರರು ಅರ್ಜಿ ಹಾಕಿ


ವೇತನ:
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,700-69,100 ವೇತನ ನೀಡಲಾಗುತ್ತದೆ.


ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಆಯ್ಕೆ ಪ್ರಕ್ರಿಯೆ:
ಫಿಜಿಕಲ್ ಸ್ಟ್ಯಾಂಡರ್ಡ್ ಟೆಸ್ಟ್​
ಟ್ರೇಡ್ ಟೆಸ್ಟ್​


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 12, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು