BSF Recruitment 2022: ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 254 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬೇಕು.
ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:
ಸಂಸ್ಥೆ | ಗಡಿ ಭದ್ರತಾ ಪಡೆ |
ಹುದ್ದೆ | ಹೆಡ್ ಕಾನ್ಸ್ಟೇಬಲ್ |
ಒಟ್ಟು ಹುದ್ದೆ | 254 |
ವೇತನ | ಮಾಸಿಕ ₹ 25,500-81,100 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಇದನ್ನೂ ಓದಿ: Job Alert: ಬೆಳಗಾವಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗ, 10ನೇ ತರಗತಿ ಪಾಸಾಗಿದ್ರೆ ಸಾಕು
ವಿದ್ಯಾರ್ಹತೆ ಏನಿರಬೇಕು?
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೋಮಾ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 3, 2023ಕ್ಕೆ ಗರಿಷ್ಠ 52 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (Tpt),
ಡೈರೆಕ್ಟೋರೇಟ್ ಜನರಲ್
BSF, ಬ್ಲಾಕ್ ನಂ.10
ಸಿಜಿಒ ಕಾಂಪ್ಲೆಕ್ಸ್
ಲೋಧಿ ರಸ್ತೆ
ನವಹದೆಲಿ- 110003
ಇದನ್ನೂ ಓದಿ: Govt Job: ಚಿಕ್ಕಬಳ್ಳಾಪುರ ಡಿಸಿ ಆಫೀಸ್ನಲ್ಲಿದೆ ಬಂಪರ್ ಉದ್ಯೋಗ, ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 03/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ