• Home
  • »
  • News
  • »
  • jobs
  • »
  • JOBS: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ರಸ್ತೆಗಳ ಸಂಸ್ಥೆ- ಜ. 31ರೊಳಗೆ ಅಪ್ಲೈ ಮಾಡಿ

JOBS: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ರಸ್ತೆಗಳ ಸಂಸ್ಥೆ- ಜ. 31ರೊಳಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 567 ಆಪರೇಟರ್​ ಕಮ್ಯುನಿಕೇಷನ್, ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಕೆಲಸಕ್ಕೆ ಅಪ್ಲೈ ಮಾಡಿ.

  • Share this:

BRO Recruitment 2023: ಗಡಿ ರಸ್ತೆಗಳ ಸಂಸ್ಥೆಯು(Border Roads Organization) ಖಾಲಿ ಇರುವ ಹುದ್ದೆಗಳನ್ನು(Jobs) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 567 ಆಪರೇಟರ್​ ಕಮ್ಯುನಿಕೇಷನ್, ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಕೆಲಸಕ್ಕೆ ಅಪ್ಲೈ ಮಾಡಿ. ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗಡಿ ರಸ್ತೆಗಳ ಸಂಸ್ಥೆ
ಹುದ್ದೆಆಪರೇಟರ್​ ಕಮ್ಯುನಿಕೇಷನ್, ವೆಹಿಕಲ್ ಮೆಕ್ಯಾನಿಕ್
ಒಟ್ಟು ಹುದ್ದೆ567
ವೇತನನಿಯಮಾನುಸಾರ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಜನವರಿ 31, 2023


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಹುದ್ದೆಯ ಮಾಹಿತಿ:
ರೇಡಿಯೋ ಮೆಕ್ಯಾನಿಕ್- 2
ಆಪರೇಟರ್ ಕಮ್ಯುನಿಕೇಷನ್ - 154
ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್​ಪೋರ್ಟ್​​-9
ವೆಹಿಕಲ್ ಮೆಕ್ಯಾನಿಕ್-236
MSW ಡ್ರಿಲ್ಲರ್- 11
MSW ಮಾಸನ್- 149
MSW ಪೇಂಟರ್- 5
MSW ಮೆಸ್​ ವೇಟರ್-1


ಇದನ್ನೂ ಓದಿ: LIC ನೇಮಕಾತಿ- 300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು Apply ಮಾಡಿ


ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಂತಿಷ್ಟೇ ವೇತನ ಎಂದು ನಿಗದಿಪಡಿಸಿಲ್ಲ. ನಿಯಮಾನುಸಾರ ಸಂಬಳ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ.


ಆಯ್ಕೆ ಪ್ರಕ್ರಿಯೆ:
ಡ್ರೈವಿಂಗ್ ಟೆಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ




ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 31/01/2023

Published by:Latha CG
First published: