BHEL Recruitment 2022: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Heavy Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 1 ಪಾರ್ಟ್ ಟೈಂ ಮೆಡಿಕಲ್ ಕನ್ಸಲ್ಟೆಂಟ್(Part-Time Medical Consultant) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ(Apply) ಸಲ್ಲಿಸಬಹುದಾಗಿದೆ. ಡಿಸೆಂಬರ್ 13 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 04, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ BHELನ ಅಧಿಕೃತ ವೆಬ್ಸೈಟ್ www.bhel.com ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್-BHEL |
ಹುದ್ದೆ | ಪಾರ್ಟ್ ಟೈಂ ಮೆಡಿಕಲ್ ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 1 |
ವೇತನ | ವಾರ್ಷಿಕ ಪ್ಯಾಕೇಜ್ 5,49,120 +ಭತ್ಯೆ 54,000 |
ಉದ್ಯೋಗದ ಸ್ಥಳ | ಬೆಂಗಳೂರು (BHEL ಮಲ್ಲೇಶ್ವರಂ ಕಾಂಪ್ಲೆಕ್ಸ್) |
ವಯೋಮಿತಿ:
ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 1, 2023ಕ್ಕೆ ಗರಿಷ್ಠ 64 ವರ್ಷ ಮೀರಿರಬಾರದು.
ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಕೆಲಸಕ್ಕೆ ರಾಜೀನಾಮೆ ನೀಡಿದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ನೋಟಿಸ್ ಪಿರಿಯಡ್ ಇರುತ್ತದೆ.
ಇದನ್ನೂ ಓದಿ: ಕೆಲಸ ಹುಡುಕುತ್ತಿದ್ದೀರಾ? ನಿಮ್ಹಾನ್ಸ್ನಲ್ಲಿದೆ 67,000 ಸಂಬಳದ ಉದ್ಯೋಗ- ಡಿ. 26ಕ್ಕೆ ಸಂದರ್ಶನ
ಅನುಭವ:
ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಕೆಲಸದ ಸಮಯ:
ಸೋಮವಾರದಿಂದ ಶನಿವಾರ- 12.30 ರಿಂದ 4.30ರವರೆಗೆ
ವೇತನ:
ಪ್ರತಿ ಗಂಟೆಗೆ 440 ರೂ.
ಸಾಗಣೆ ಭತ್ಯೆ- ತಿಂಗಳಿಗೆ 4,500
ಸಂಬಳ-5,49,120(ವಾರ್ಷಿಕ ಪ್ಯಾಕೇಜ್)+ ಭತ್ಯೆ 54,000
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳಾದ SSLC ಅಂಕಪಟ್ಟಿ, ಪದವಿ/ಸ್ನಾತಕೋತ್ತರ/ಎಂಬಿಬಿಎಸ್ ಸರ್ಟಿಫಿಕೇಟ್, MCI ನ ರಿಜಿಸ್ಟ್ರೇಶನ್ ಸರ್ಟಿಫಿಕೇಟ್, ಅನುಭವದ ಸರ್ಟಿಫಿಕೇಟ್-ಇಷ್ಟು ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
HRM ಡಿಪಾರ್ಟ್ಮೆಂಟ್
BHEL- ಸೋಲಾರ್ ಬ್ಯುಸಿನೆಸ್ ಡಿವಿಶನ್
ಪ್ರೊ. CNR ರಾವ್ ಸರ್ಕಲ್
IISc ಪೋಸ್ಟ್
ಬೆಂಗಳೂರು-560012
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 04/01/2023
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ