• Home
 • »
 • News
 • »
 • jobs
 • »
 • Bengaluru Jobs: ಡಿಪ್ಲೋಮಾ ಪಾಸಾದವ್ರಿಗೆ ಇಲ್ಲಿದೆ ಒಳ್ಳೆಯ ಉದ್ಯೋಗ-ಡಿ.29ಕ್ಕೆ ನಡೆಯಲಿದೆ ಸಂದರ್ಶನ

Bengaluru Jobs: ಡಿಪ್ಲೋಮಾ ಪಾಸಾದವ್ರಿಗೆ ಇಲ್ಲಿದೆ ಒಳ್ಳೆಯ ಉದ್ಯೋಗ-ಡಿ.29ಕ್ಕೆ ನಡೆಯಲಿದೆ ಸಂದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2022ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.

 • Share this:

  NCBS Recruitment 2022: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (National Centre For Biological Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 1 ಟೆಕ್ನಿಕಲ್ ಟ್ರೇನಿ​ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಡಿಸೆಂಬರ್ 29, 2022 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ​
  ಹುದ್ದೆಟೆಕ್ನಿಕಲ್ ಟ್ರೇನಿ
  ಒಟ್ಟು ಹುದ್ದೆ1
  ವೇತನತಿಂಗಳಿಗೆ 16,000
  ಉದ್ಯೋಗದ ಸ್ಥಳಬೆಂಗಳೂರು


  ವಿದ್ಯಾರ್ಹತೆ:
  ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.


  ವಯೋಮಿತಿ:
  ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2022ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.


  ಇದನ್ನೂ ಓದಿ: BE/B.Tech ಪದವೀಧರರಿಗೆ ಬೆಂಗಳೂರಿನ BELನಲ್ಲಿದೆ ಕೆಲಸ- ತಿಂಗಳಿಗೆ 50,000 ಸಂಬಳ


  ವೇತನ:
  ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಟ್ರೇನಿ​ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಗೆ 16,000 ಸಂಬಳ ಕೊಡಲಾಗುತ್ತದೆ.


  ಸಂದರ್ಶನ ನಡೆಯುವ ಸ್ಥಳ:


  ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS)
  ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್ (TIFR)
  GKVK
  ಬಳ್ಳಾರಿ ರಸ್ತೆ
  ಬೆಂಗಳೂರು-560065


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ಸಂದರ್ಶನ


  ಸಂದರ್ಶನಕ್ಕೆ ಭಾಗಿಯಾಗುವ ಮುನ್ನ ಇಲ್ಲಿ ಆನ್​ಲೈನ್ ಮೂಲಕ ಅರ್ಜಿ ಹಾಕಿ.


  ಪ್ರಮುಖ ದಿನಾಂಕಗಳು:
  ನೋಟಿಫಿಕೇಶನ್ ಬಿಡುಗಡೆ ದಿನಾಂಕ: 20/12/2022
  ಸಂದರ್ಶನ ನಡೆಯುವ ದಿನ: 29/12/2022 ಬೆಳಗ್ಗೆ 10 ಗಂಟೆಗೆ

  Published by:Latha CG
  First published: