BECIL Recruitment 2023: ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(The Broadcast Engineering Consultants India Ltd) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್, ಮಾರ್ಕೆಟಿಂಗ್ ಸೂಪರ್ವೈಸರ್ ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಮೇ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ becil.com ಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ |
ಹುದ್ದೆ | ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್, ಮಾರ್ಕೆಟಿಂಗ್ ಸೂಪರ್ವೈಸರ್ |
ಒಟ್ಟು ಹುದ್ದೆ | 6 |
ವಿದ್ಯಾರ್ಹತೆ | ಪಿಯುಸಿ, ಪದವಿ |
ವೇತನ | ಮಾಸಿಕ ₹30,000 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 21, 2023 |
ಇದನ್ನೂ ಓದಿ: BECIL Recruitment 2023: ಪಿಯುಸಿ ಓದಿದ್ರೆ ಈ ಹುದ್ದೆಗೆ ಅಪ್ಲೈ ಮಾಡಿ- 30,000 ಸಂಬಳ ಕೊಡ್ತಾರೆ
ವಿದ್ಯಾರ್ಹತೆ:
ಅಸಿಸ್ಟೆಂಟ್ ಎಡಿಟರ್ (ಹಿಂದಿ)- ಪದವಿ
ಮಾರ್ಕೆಟಿಂಗ್ ಸೂಪರ್ವೈಸರ್ (ಡಿಜಿಟಲ್ ಮಾರ್ಕೆಟಿಂಗ್)- ಎಂಬಿಎ, ಸ್ನಾತಕೋತ್ತರ ಪದವಿ
ಡೇಟಾ ಎಂಟ್ರಿ ಆಪರೇಟರ್ (DEO)- ಪದವಿ
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್- ಪಿಯುಸಿ
ವಯೋಮಿತಿ:
ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು.
ವೇತನ:
ಅಸಿಸ್ಟೆಂಟ್ ಎಡಿಟರ್ (ಹಿಂದಿ)- ಮಾಸಿಕ ₹30,000
ಮಾರ್ಕೆಟಿಂಗ್ ಸೂಪರ್ವೈಸರ್ (ಡಿಜಿಟಲ್ ಮಾರ್ಕೆಟಿಂಗ್)- ಮಾಸಿಕ ₹ 30,000
ಡೇಟಾ ಎಂಟ್ರಿ ಆಪರೇಟರ್ (DEO)- ಮಾಸಿಕ ₹ 25,000
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್- ಮಾಸಿಕ ₹ 18,000
ಇದನ್ನೂ ಓದಿ: Bengaluru Jobs: ಪ್ರಸಾರ ಭಾರತಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 42,000 ಸಂಬಳ
ಉದ್ಯೋಗದ ಸ್ಥಳ:
ಬೆಂಗಳೂರು, ನವದೆಹಲಿ, ಗುವಾಹಟಿ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 21, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ