• Home
  • »
  • News
  • »
  • jobs
  • »
  • Jobs in Bengaluru: IIIT ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಪದವೀಧರರು Apply ಮಾಡಿ

Jobs in Bengaluru: IIIT ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಪದವೀಧರರು Apply ಮಾಡಿ

IIIT Bangalore

IIIT Bangalore

ಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್, ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ನವೆಂಬರ್ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    IIIT Bangalore Recruitment 2022: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು (International Institute of Information Technology Bangalore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್(Students Activities Co-Ordinator), ಜೂನಿಯರ್ ರಿಸರ್ಚ್​ ಫೆಲೋ(Junior Research Fellow- JRF) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ನವೆಂಬರ್ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಹೆಚ್ಚಿನ ಮಾಹಿತಿಗಾಗಿ iiitb.ac.inಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು
    ಹುದ್ದೆಯ ಹೆಸರುಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್, ಜೂನಿಯರ್ ರಿಸರ್ಚ್​ ಫೆಲೋ
    ಉದ್ಯೋಗದ ಸ್ಥಳಬೆಂಗಳೂರು
    ವೇತನನಿಯಮಾನುಸಾರ
    ವಿದ್ಯಾರ್ಹತೆಪದವಿ, ಎಂಎಸ್ಸಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/11/2022
    ಅರ್ಜಿ ಹಾಕಲು ಕೊನೆ ದಿನ: 30/11/2022


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ ಏನಿರಬೇಕು?
    ಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್- ಪದವಿ ಪಾಸಾಗಿರಬೇಕು.
    ಜೂನಿಯರ್ ರಿಸರ್ಚ್​ ಫೆಲೋ- ಎಂಎಸ್ಸಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: Central Government Job: ತಿಂಗಳಿಗೆ ₹ 25,000 ಸಂಬಳ- 10th, ಪಿಯುಸಿ ಪಾಸಾಗಿದ್ರೆ ಕೇಂದ್ರ ಸರ್ಕಾರದ ಉದ್ಯೋಗ


    ಅನುಭವ ಎಷ್ಟಿರಬೇಕು?
    ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ವಯೋಮಿತಿ:
    ಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್- 25 ರಿಂದ 35 ವರ್ಷ
    ಜೂನಿಯರ್ ರಿಸರ್ಚ್​ ಫೆಲೋ- ನಿಗದಿಪಡಿಸಿಲ್ಲ.


    ಅರ್ಜಿ ಶುಲ್ಕ:
    ಶುಲ್ಕ ವಿನಾಯಿತಿ ನೀಡಲಾಗಿದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Karnataka Jobs: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ Apply ಮಾಡಿ


    ಅರ್ಜಿ ಸಲ್ಲಿಸುವುದು ಹೇಗೆ?
    ಸ್ಟೂಡೆಂಟ್ಸ್​ ಆಕ್ಟಿವಿಟೀಸ್ ಕೋ-ಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು IIIT Bangalore ನ ಅಧಿಕೃತ ವೆಬ್​ಸೈಟ್​ iiitb.ac.in ಗೆ ಭೇಟಿ ನೀಡಿ ಅಪ್ಲೈ ಮಾಡಬೇಕು.


    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು, ರೆಸ್ಯೂಮ್​ ಸೇರಿ ಅಗತ್ಯ ದಾಖಲಾತಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಪ್ರೊ. ಅಶೋಕ್​
    ಸೆಂಟರ್ ಫಾರ್ ಕಾಂಪ್ಲೆಕ್ಸ್​ ಸಿಸ್ಟಮ್ಸ್​ & ಸಾಫ್ಟ್​ ಮ್ಯಾಟರ್ ಫಿಜಿಕ್ಸ್​​
    ಇಂಟರ್​ನ್ಯಾಷನಲ್ ಇನ್​​ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ಬೆಂಗಳೂರು
    26/C ಎಲೆಕ್ಟ್ರಾನಿಕ್ಸ್​ ಸಿಟಿ ಫೇಸ್ 1
    ಹೊಸೂರು ರಸ್ತೆ
    ಬೆಂಗಳೂರು- 560100


    ಅಥವಾ ಸಾಪ್ಟ್​ ಕಾಪಿಯನ್ನು ಇ-ಮೇಲ್​ ಐಡಿ bashok@iiitb.ac.in ಗೆ ಕಳುಹಿಸಬೇಕು.

    Published by:Latha CG
    First published: