• ಹೋಂ
 • »
 • ನ್ಯೂಸ್
 • »
 • Jobs
 • »
 • Bengaluru Jobs: ಸೆಕ್ಯುರಿಟಿ ಗಾರ್ಡ್​ ಹುದ್ದೆಗೆ 79 ಸಾವಿರ ಸಂಬಳ- 10ನೇ ಕ್ಲಾಸ್ ಪಾಸಾಗಿದ್ರೆ ಅರ್ಜಿ ಹಾಕಿ

Bengaluru Jobs: ಸೆಕ್ಯುರಿಟಿ ಗಾರ್ಡ್​ ಹುದ್ದೆಗೆ 79 ಸಾವಿರ ಸಂಬಳ- 10ನೇ ಕ್ಲಾಸ್ ಪಾಸಾಗಿದ್ರೆ ಅರ್ಜಿ ಹಾಕಿ

BEL

BEL

ಜಸ್ಟ್​​ ಎಸ್​ಎಸ್​ಎಲ್​ಸಿ ಪಾಸಾದವರಿಗೆ 79 ಸಾವಿರ ಸಂಬಳ ಯಾರ್ ಕೊಡ್ತಾರೆ. ತಡಮಾಡದೇ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

BEL Recruitment 2023: ಬೆಂಗಳೂರಿನಲ್ಲಿ ಕೆಲಸ ಹುಡುಕ್ತಿದ್ದೀರಾ? 10ನೇ ತರಗತಿ ಪಾಸಾಗಿದೆಯಾ? ಬರೋಬ್ಬರಿ 79 ಸಾವಿರ ಸಂಬಳ ಸಿಗೋ ಉದ್ಯೋಗ ನಿಮಗಾಗಿ ಲಭ್ಯವಿದೆ. ಈಗಲೇ ಅರ್ಜಿ ಹಾಕಿ, ಈ ಹುದ್ದೆ ಗಿಟ್ಟಿಸಿಕೊಳ್ಳಿ. ಜಸ್ಟ್​​ ಎಸ್​ಎಸ್​ಎಲ್​ಸಿ ಪಾಸಾದವರಿಗೆ 79 ಸಾವಿರ ಸಂಬಳ ಯಾರ್ ಕೊಡ್ತಾರೆ. ತಡಮಾಡದೇ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​ನಲ್ಲಿ ಒಟ್ಟು 12 ಹವಿಲ್ದಾರ್ (ಸೆಕ್ಯುರಿಟಿ) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಬಿಇಎಲ್​ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂನ್ 6, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರಿನ ಬಿಇಎಲ್​ ಕಂಪನಿಯಲ್ಲಿ ಈ ಹುದ್ದೆಗಳು ಖಾಲಿ ಇದ್ದು, ಬಂಪರ್ ವೇತನ ಕೊಡಲಾಗುತ್ತದೆ. ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
ಹುದ್ದೆಹವಿಲ್ದಾರ್ (ಸೆಕ್ಯುರಿಟಿ)
ಒಟ್ಟು ಹುದ್ದೆ12
ವಿದ್ಯಾರ್ಹತೆ10ನೇ ತರಗತಿ
ವೇತನಮಾಸಿಕ ₹ 20,500- 79,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 6, 2023

ವಿದ್ಯಾರ್ಹತೆ:
ನೋಟಿಫಿಕೇಶನ್​ನಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಗರಿಷ್ಠ 43 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ


ವೇತನ:
ಮಾಸಿಕ ₹ 20,500- 79,000


ಇದನ್ನೂ ಓದಿ: Bengaluru Metro Jobs: ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ಡಿಪ್ಲೊಮಾ ಆಗಿದ್ರೆ ಅಪ್ಲೈ ಮಾಡಿ


ಉದ್ಯೋಗದ ಸ್ಥಳ:
ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಫಿಜಿಕಲ್ ಎಂಡುರೆನ್ಸ್​ ಟೆಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಈ ಕೆಳಗೆ ಲಭ್ಯವಿರುವ ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.


DGM (HR/Central)
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಜಾಲಹಳ್ಳಿ ಅಂಚೆ
ಬೆಂಗಳೂರು-560013


ಅರ್ಜಿ ಇಲ್ಲಿದೆ:


12-Havildar-Security-Posts-Application-Form-BEL


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 6, 2023

First published: