AIISH Mysore Recruitment 2023: ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮೈಸೂರು ( ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ರಿಸರ್ಚ್ ಆಫೀಸರ್, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 6, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು (Last Date), ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮೈಸೂರು |
ಹುದ್ದೆ | ರಿಸರ್ಚ್ ಆಫೀಸರ್, ಡೇಟಾ ಎಂಟ್ರಿ ಆಪರೇಟರ್ |
ಒಟ್ಟು ಹುದ್ದೆ | 9 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 47,000 |
ಉದ್ಯೋಗದ ಸ್ಥಳ | ಮೈಸೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 6, 2023 |
ವಿದ್ಯಾರ್ಹತೆ:
ಲೆಕ್ಚರರ್- ಎಂ.ಎಸ್ಸಿ
ಡೇಟಾ ಎಂಟ್ರಿ ಆಪರೇಟರ್- ಪದವಿ
ರಿಸರ್ಚ್ ಆಫೀಸರ್- ಎಂ.ಎಸ್ಸಿ, ಸ್ನಾತಕೋತ್ತರ ಪದವಿ
ರಿಸರ್ಚ್ ಆಫೀಸರ್(ಸ್ಪೆಷಲ್ ಎಜುಕೇಷನ್)- ಬಿ.ಎಡ್
ಇದನ್ನೂ ಓದಿ: Practo ನೇಮಕಾತಿ- ನಾಳೆ ಬೆಂಗಳೂರಿನಲ್ಲಿ ಇಂಟರ್ವ್ಯೂ- ಆಸಕ್ತರು ಪಾಲ್ಗೊಳ್ಳಿ
ವಯೋಮಿತಿ:
ಲೆಕ್ಚರರ್- 40 ವರ್ಷ
ಡೇಟಾ ಎಂಟ್ರಿ ಆಪರೇಟರ್- 30 ವರ್ಷ
ರಿಸರ್ಚ್ ಆಫೀಸರ್- 35 ವರ್ಷ
ರಿಸರ್ಚ್ ಆಫೀಸರ್(ಸ್ಪೆಷಲ್ ಎಜುಕೇಷನ್)- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಲೆಕ್ಚರರ್- ಮಾಸಿಕ ₹ 47,000
ಡೇಟಾ ಎಂಟ್ರಿ ಆಪರೇಟರ್- ಮಾಸಿಕ ₹ 20,000
ರಿಸರ್ಚ್ ಆಫೀಸರ್- ಮಾಸಿಕ ₹ 39,000
ರಿಸರ್ಚ್ ಆಫೀಸರ್(ಸ್ಪೆಷಲ್ ಎಜುಕೇಷನ್)- ಮಾಸಿಕ ₹ 30,000
ಅರ್ಜಿ ಶುಲ್ಕ:
PWD & ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು- 40 ರೂ.
OBC/EWS & ಸಾಮಾನ್ಯ ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ- ಆನ್ಲೈನ್, NEFT
ಇದನ್ನೂ ಓದಿ: IAF Recruitment 2023: ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಹಾಕಿ- ಮಾಸಿಕ ವೇತನ ₹ 40,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ಆಡಳಿತಾಧಿಕಾರಿಗಳ ಕಛೇರಿ
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು-570006
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 6, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ