• Home
  • »
  • News
  • »
  • jobs
  • »
  • ADA Recruitment 2023: ತಿಂಗಳಿಗೆ 81,000 ಸಂಬಳ- ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿಯಲ್ಲಿ ಕೆಲಸ

ADA Recruitment 2023: ತಿಂಗಳಿಗೆ 81,000 ಸಂಬಳ- ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿಯಲ್ಲಿ ಕೆಲಸ

ADA

ADA

ಜನವರಿ 11, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆಫ್​ಲೈನ್/ ಆನ್​ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೈದರಾಬಾದ್, ನವದೆಹಲಿ ಹಾಗೂ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

    ADA Recruitment 2023: ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ(Aeronautical Development Agency -ADA) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 11, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆಫ್​ಲೈನ್/ ಆನ್​ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೈದರಾಬಾದ್, ನವದೆಹಲಿ ಹಾಗೂ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ
    ಹುದ್ದೆಅಸಿಸ್ಟೆಂಟ್, ಸ್ಟೆನೋಗ್ರಾಫರ್
    ಒಟ್ಟು ಹುದ್ದೆ14
    ವೇತನಮಾಸಿಕ ₹ 25,500-81,100
    ಉದ್ಯೋಗದ ಸ್ಥಳಹೈದರಾಬಾದ್, ನವದೆಹಲಿ, ಬೆಂಗಳೂರು


    ಹುದ್ದೆಯ ಮಾಹಿತಿ:
    ಅಸಿಸ್ಟೆಂಟ್- 11
    ಸ್ಟೆನೋಗ್ರಾಫರ್-3


    ಇದನ್ನೂ ಓದಿ: KSRTC Recruitment 2023: 2000 ಚಾಲಕ ಹುದ್ದೆಗಳ ನೇಮಕ- 10ನೇ ಕ್ಲಾಸ್​ ಪಾಸಾದವರು ಅರ್ಜಿ ಹಾಕಿ


    ವಿದ್ಯಾರ್ಹತೆ:
    ಅಸಿಸ್ಟೆಂಟ್- ಆರ್ಟ್ಸ್​/ಕಾಮರ್ಸ್​/ಸೈನ್ಸ್​/ ಬ್ಯುಸಿನೆಸ್ ಅಸ್ಮಿನಿಸ್ಟ್ರೇಶನ್/ ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ನಲ್ಲಿ ಪದವಿ
    ಸ್ಟೆನೋಗ್ರಾಫರ್- ಸೆಕ್ರೆಟರಿಯಲ್/ ಕಮರ್ಷಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ, ಆರ್ಟ್ಸ್​/ಕಾಮರ್ಸ್​/ ಸೈನ್ಸ್​/ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್/ ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ನಲ್ಲಿ ಪದವಿ.


    ವಯೋಮಿತಿ:
    ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 11, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಸಂಬಳ:
    ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,500-81,100 ವೇತನ ಕೊಡಲಾಗುತ್ತದೆ.


    ಉದ್ಯೋಗದ ಸ್ಥಳ:
    ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ಹೈದರಾಬಾದ್ ಹಾಗೂ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸ್ಕಿಲ್ ಟೆಸ್ಟ್​


    ಇದನ್ನೂ ಓದಿ: KVAFSU Recruitment 2023: ರಾಜ್ಯ ಸರ್ಕಾರದ ಈ ಹುದ್ದೆಗೆ ನಾಳೆ ಬೆಳಗ್ಗೆ 11 ಗಂಟೆಗೆ ಸಂದರ್ಶನ- ತಪ್ಪದೇ ಪಾಲ್ಗೊಳ್ಳಿ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 31ಕ್ಕೆ ಮುಂಚಿತವಾಗಿ ಕಳುಹಿಸಬೇಕು.


    ಜಂಟಿ ನಿರ್ದೇಶಕರು (A&E)’
    ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ
    ವಿಭೂತಿಪುರ
    ಮಾರತಹಳ್ಳಿ ಅಂಚೆ
    ಬೆಂಗಳೂರು-560037


    ಆನ್​ಲೈನ್ ಮೂಲಕ ಅರ್ಜಿ ಹಾಕಲು ಜನವರಿ 11, 2023 ಕೊನೆಯ ದಿನವಾಗಿದೆ.


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/12/2022
    ಅರ್ಜಿ ಸಲ್ಲಿಸಲು ಕೊನೆಯ ದಿನ(ಆನ್​ಲೈನ್)-11/01/2023
    ಅರ್ಜಿ ಸಲ್ಲಿಸಲು ಕೊನೆಯ ದಿನ (ಆಫ್​ಲೈನ್)- 31/01/2023

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು