• Home
  • »
  • News
  • »
  • jobs
  • »
  • AAI Recruitment 2023: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಎಂಜಿನಿಯರಿಂಗ್ ಆದವರಿಗೆ ಉದ್ಯೋಗ, ತಿಂಗಳಿಗೆ 1.40 ಲಕ್ಷ ಸಂಬಳ

AAI Recruitment 2023: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಎಂಜಿನಿಯರಿಂಗ್ ಆದವರಿಗೆ ಉದ್ಯೋಗ, ತಿಂಗಳಿಗೆ 1.40 ಲಕ್ಷ ಸಂಬಳ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ಜನವರಿ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

  • Share this:

    AAI Recruitment 2023: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(Airports Authority of India-AAI)ದಲ್ಲಿ 596 ಜೂನಿಯರ್ ಎಕ್ಸಿಕ್ಯೂಟಿವ್(Junior Executive) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ(Government Job) ಅರಸುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಜನವರಿ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಬಿಇ/ಬಿ.ಟೆಕ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ
    ಹುದ್ದೆಜೂನಿಯರ್ ಎಕ್ಸಿಕ್ಯೂಟಿವ್
    ಒಟ್ಟು ಹುದ್ದೆ596
    ವೇತನಮಾಸಿಕ 40,000-1,40,000
    ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ


    ಹುದ್ದೆಯ ಮಾಹಿತಿ:
    ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್)- 62
    ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)- 84
    ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್​)- 440
    ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್)-10


    ವಿದ್ಯಾರ್ಹತೆ:
    ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್)- ಸಿವಿಲ್ ಎಂಜಿನಿಯರಿಂಗ್​ನಲ್ಲಿ ಪದವಿ
    ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ
    ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್​)- ECEನಲ್ಲಿ ಪದವಿ
    ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್)-ಆರ್ಕಿಟೆಕ್ಚರ್​​​ನಲ್ಲಿ & ಪ್ಲ್ಯಾನಿಂಗ್​ನಲ್ಲಿ ಪದವಿ


    ಇದನ್ನೂ ಓದಿ: ECIL Recruitment 2022: ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಡಿ.14ರಂದು ಸಂದರ್ಶನ-ತಿಂಗಳಿಗೆ 31,000 ಸಂಬಳ


    ವಯೋಮಿತಿ:
    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಜನವರಿ 21, 2023 ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ(NCL) ಅಭ್ಯರ್ಥಿಗಳು-3 ವರ್ಷಗಳು
    ಎಸ್​​ಸಿ/ಎಸ್​​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು-10 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​​ಟಿ/PWD/ಮಹಿಳಾ ಅಭ್ಯರ್ಥಿಗಳು- ಇಲ್ಲ.
    ಉಳಿದ ಎಲ್ಲಾ ಅಭ್ಯರ್ಥಿಗಳು-300 ರೂ.
    ಪಾವತಿಸುವ ಬಗೆ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ
    ಗೇಟ್​ ಸ್ಕೋರ್
    ದಾಖಲಾತಿ ಪರಿಶೀಲನೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/12/2022
    ಅರ್ಜಿ ಸಲ್ಲಿಸಲು ಕೊನೆ ದಿನ: 21/01/2023

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು