AAICLAS Recruitment 2023: AAI ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವಿಸಸ್(AAI Cargo Logistics and Allied Services ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 400 ಸೆಕ್ಯುರಿಟಿ ಸ್ಕ್ರೀನರ್(Security Screener) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು(Candidates) ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ. ಜನವರಿ 14, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು.
ಅಭ್ಯರ್ಥಿಗಳು ಸಂದರ್ಶನಕ್ಕೆ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | AAI ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವಿಸಸ್ |
ಹುದ್ದೆ | ಸೆಕ್ಯುರಿಟಿ ಸ್ಕ್ರೀನರ್ |
ಒಟ್ಟು ಹುದ್ದೆ | 400 |
ವೇತನ | ತಿಂಗಳಿಗೆ 15,000 |
ಉದ್ಯೋಗದ ಸ್ಥಳ | ಭಾರತ |
ಇದನ್ನೂ ಓದಿ: CeNS Recruitment 2023: ಸೈಂಟಿಸ್ಟ್ ಆಗುವ ಅವಕಾಶ ಇಲ್ಲಿದೆ- ತಿಂಗಳಿಗೆ ₹ 39,000 ಸಂಬಳ
ವಯೋಮಿತಿ:
AAI ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವಿಸಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು/ ಮಾಜಿ ಸೈನಿಕ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
ಅರ್ಜಿ ಶುಲ್ಕ:
SC/ST/ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ- ಆನ್ಲೈನ್
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 14/ 01/2023
ಇದನ್ನೂ ಓದಿ: Job Alert: ಧಾರವಾಡ ಕೃಷಿ ವಿವಿ ನೇಮಕಾತಿ- ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಜ.6ರಂದು ಸಂದರ್ಶನ
ಆಯ್ಕೆ ಪ್ರಕ್ರಿಯೆ:
SSC ಶ್ರೇಣಿ-I ಪರೀಕ್ಷೆಯ ಅಂಕಗಳು
ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ