• Home
  • »
  • News
  • »
  • jobs
  • »
  • Central Government Job: ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Central Government Job: ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಆಸಕ್ತರು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಹಾಕಿ.

  • Share this:

    North Central Railway Recruitment 2022: ಉತ್ತರ ಮಧ್ಯೆ ರೈಲ್ವೆ(North Central Railway)ಯಲ್ಲಿ 11 ಗ್ರೂಪ್​ ಸಿ(Group C), ಗ್ರೂಪ್ ಡಿ(Group D) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ(PUC), ಐಟಿಐ(ITI) ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಆಸಕ್ತರು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಉತ್ತರ ಮಧ್ಯೆ ರೈಲ್ವೆ
    ಹುದ್ದೆಯ ಹೆಸರುಗ್ರೂಪ್​ ಸಿ, ಗ್ರೂಪ್​ ಡಿ
    ಒಟ್ಟು ಹುದ್ದೆ11
    ವಿದ್ಯಾರ್ಹತೆಪಿಯುಸಿ, ಐಟಿಐ
    ವೇತನನಿಯಮಾನುಸಾರ
    ಸ್ಥಳಪ್ಯಾನ್ ಇಂಡಿಯಾ
    ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
    ಎಸ್​​ಸಿ/ಎಸ್​​ಟಿ/ ಮಾಜಿ ಸೈನಿಕ/ PWD/ ಮಹಿಳಾ/ ಅಲ್ಪಸಂಖ್ಯಾತ & EBC ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ


    ಇದನ್ನೂ ಓದಿ: CISF Recruitment: ತಿಂಗಳಿಗೆ ₹ 69,000 ಸಂಬಳ, SSLC ಪಾಸಾದವರಿಗೆ ಇಲ್ಲಿದೆ ಬಂಪರ್ ಉದ್ಯೋಗ


    ಹುದ್ದೆಯ ಮಾಹಿತಿ:
    ಗ್ರೂಪ್​ ಸಿ- 03
    ಗ್ರೂಪ್​ ಡಿ-08
    ಒಟ್ಟು-11 ಹುದ್ದೆ


    ವಿದ್ಯಾರ್ಹತೆ:
    ಗ್ರೂಪ್​ ಸಿ- ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಹಾಗೂ ಐಟಿಐ ಪಾಸಾಗಿರಬೇಕು. ಇತರೆ ಹುದ್ದೆಗಳಿಗೆ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು.


    ಗ್ರೂಪ್​ ಡಿ- ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


    ವಯೋಮಿತಿ:
    ಗ್ರೂಪ್​ ಸಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-30 ವರ್ಷದೊಳಗಿರಬೇಕು.
    ಗ್ರೂಪ್ ಡಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-33 ವರ್ಷದೊಳಗಿರಬೇಕು.


    ಉದ್ಯೋಗದ ಸ್ಥಳ:
    ಗ್ರೂಪ್ ಸಿ, ಗ್ರೂಪ್​ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಗ್ರೂಪ್​ ಸಿ- ಲೆವೆಲ್ -2 ಗ್ರೇಡ್ ಪೇ 1900 ರೂ.
    ಗ್ರೂಪ್​ ಡಿ- ಲೆವೆಲ್ -1 ಗ್ರೇಡ್ ಪೇ 1800 ರೂ.


    ಇದನ್ನೂ ಓದಿ: IIT Dharwad Recruitment 2022: ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 21/11/2022

    Published by:Latha CG
    First published: