Central Bank of India Recruitment 2021: ತಿಂಗಳಿಗೆ 1 ಲಕ್ಷ ಸಂಬಳ, ಸೆಂಟ್ರಲ್ ಬ್ಯಾಂಕ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳು ಖಾಲಿ

ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Central Bank of India Recruitment 2021: ಸೆಂಟ್ರಲ್ ಬ್ಯಾಂಕ್ ಇಂಡಿಯಾ(Central Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 115 ಸ್ಪೆಷಲಿಸ್ಟ್ ಆಫೀಸರ್(Specialist Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ ಬಿ ಟೆಕ್, ಎಲ್​ಎಲ್​ಬಿ, ಸಿಎ, ICWA, ಎಂಎಸ್ಸಿ, ಎಂಬಿಎ, ಎಂ.ಟೆಕ್, ಎಂಇ, ಎಂಸಿಎ, ಪಿಎಚ್​ಡಿ, ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಆಸಕ್ತರು ಆನ್​ಲೈನ್(Online) ಮೂಲಕವೇ ಅರ್ಜಿ ಸಲ್ಲಿಸಬೇಕು. ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸೆಂಟ್ರಕ್ ಬ್ಯಾಂಕ್ ಆಫ್​ ಇಂಡಿಯಾದ ಅಧಿಕೃತ ವೆಬ್​ಸೈಟ್(Official Website)​ www.centralbankofindia.co.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆ ಸೆಂಟ್ರಲ್ ಬ್ಯಾಂಕ್​ ಆಫ್ ಇಂಡಿಯಾ
ಹುದ್ದೆಯ ಹೆಸರು ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಹುದ್ದೆಗಳು 115
ವಿದ್ಯಾರ್ಹತೆ  ಬಿಇ/ ಬಿ ಟೆಕ್, ಎಲ್​ಎಲ್​ಬಿ, ಸಿಎ, ICWA, ಎಂಎಸ್ಸಿ, ಎಂಬಿಎ, ಎಂ.ಟೆಕ್, ಎಂಇ, ಎಂಸಿಎ, ಪಿಎಚ್​ಡಿ, ಪದವಿ, ಸ್ನಾತಕೋತ್ತರ ಪದವಿ
ಉದ್ಯೋಗದ ಸ್ಥಳ ಭಾರತದ ಯಾವುದೇ ಭಾಗದಲ್ಲಿ
ವೇತನ ಮಾಸಿಕ ₹ 36,000-1,00,350
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/12/2021
ವಯೋಮಿತಿ 20-50 ವರ್ಷ



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/12/2021

ಇದನ್ನೂ ಓದಿ: BMTC Recruitment 2021: SSLC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ; ಈಗಲೇ ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:

SC/ST ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಕಟ್ಟಬೇಕು.

ಹುದ್ದೆಯ ಮಾಹಿತಿ:

ಎಕನಾಮಿಸ್ಟ್​- ಸಂಬಂಧಿತ ವಿಷಯದಲ್ಲಿ ಪಿಎಚ್​ಡಿ ಮಾಡಿರಬೇಕು. ಜೊತೆಗೆ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

ಆದಾಯ ತೆರಿಗೆ ಅಧಿಕಾರಿ- ಸಿಎ ಮಾಡಿರಬೇಕು. ಜೊತೆಗೆ ಕನಿಷ್ಠ 10 ವರ್ಷಗಳ ಅನುಭವ ಇರಬೇಕು.

ಮಾಹಿತಿ ತಂತ್ರಜ್ಞಾನ- ಸ್ನಾತಕೋತ್ತರ ಪದವಿ/ ಪದವಿ ಪೂರ್ಣಗೊಳಿಸಿರಬೇಕು. ಕಮನಿಷ್ಠ 10-12 ವರ್ಷ ಅನುಭವ ಇರಬೇಕು.

ಡಾಟಾ ಸೈಂಟಿಸ್ಟ್​- ಬಿಇ/ ಬಿ ಟೆಕ್​ ಪೂರ್ಣಗೊಳಿಸಿರಬೇಕು. 8-10 ವರ್ಷ ಅನುಭವ ಇರಬೇಕು.

ಕ್ರೆಡಿಟ್ ಆಫೀಸರ್- CS/CFA/ACMA ಅಥವಾ ಎಂಬಿಎ ಮಾಡಿರಬೇಕು. ಕನಿಷ್ಠ 4 ವರ್ಷ ಅನುಭವ ಇರಬೇಕು.

ಡಾಟಾ ಎಂಜಿನಿಯರ್- ಬಿಇ/ ಬಿ.ಟೆಕ್​ ಮಾಡಿರಬೇಕು. ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.

ಐಟಿ ಸೆಕ್ಯುರಿಟಿ ಅನಾಲಿಸ್ಟ್​- ಎಂಸಿಎ/ಎಂಸ್ಸಿ ಪೂರ್ಣಗೊಳಿಸಿರಬೇಕು. ಕನಿಷ್ಠ 6 ವರ್ಷ ಅನುಭವ ಇರಬೇಕು.

ಐಟಿ SOC ಅನಾಲಿಸ್ಟ್​- ಎಂಸಿಎ/ಎಂಸ್ಸಿ ಪೂರ್ಣಗೊಳಿಸಿರಬೇಕು. ಕನಿಷ್ಠ 6 ವರ್ಷ ಅನುಭವ ಇರಬೇಕು.

ರಿಸ್ಕ್ ಮ್ಯಾನೇಜರ್- ಎಂಬಿಎ/ ಎಂಜಿನಿಯರಿಂಗ್​ ಮಾಡಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಇರಬೇಕು.

ಟೆಕ್ನಿಕಲ್ ಆಫೀಸರ್- ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಇರಬೇಕು.

ಫಯನಾನ್ಷಿಯಲ್ ಅನಾಲಿಸ್ಟ್​- ಎಂಬಿಎ ಪೂರ್ಣಗೊಳಿಸಿರಬೇಕು. 3 ವರ್ಷಗಳ ಅನುಭವ ಇರಬೇಕು.

ಮಾಹಿತಿ ತಂತ್ರಜ್ಞಾನ- ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು, 2 ವರ್ಷಗಳ ಅನುಭವ ಇರಬೇಕು.

ಕಾನೂನು ಅಧಿಕಾರಿ- ಕಾನೂನು ಪದವಿ ಪಡೆದಿರಬೇಕು, ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.

ರಿಸ್ಕ್ ಮ್ಯಾನೇಜರ್- ಎಂಬಿಎ/ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಕನಿಷ್ಠ 2 ವರ್ಷಗಳ ಅನುಭವ ಇರಬೇಕು.

ಸೆಕ್ಯುರಿಟಿ- ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಇದನ್ನೂ ಓದಿ: BEL Recruitment 2021: ತಿಂಗಳಿಗೆ ₹ 1,80,000 ಸಂಬಳ, ಬೆಂಗಳೂರಿನಲ್ಲಿ ಉದ್ಯೋಗ, BE, B Tech ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ವಯೋಮಿತಿ:

ಸೆಂಟ್ರಲ್ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20-50 ವರ್ಷದೊಳಗಿರಬೇಕು.

ಆಯ್ಕೆ ಪ್ರಕ್ರಿಯೆ:

ಆನ್​ಲೈನ್​ ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: