• ಹೋಂ
  • »
  • ನ್ಯೂಸ್
  • »
  • Jobs
  • »
  • Career Life ನಲ್ಲಿ ಯಶಸ್ಸು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಫುಲ್​ ಟಿಪ್ಸ್​

Career Life ನಲ್ಲಿ ಯಶಸ್ಸು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಫುಲ್​ ಟಿಪ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಪರಿಶ್ರಮದೊಂದಿಗೆ ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ.

  • Share this:

ವೃತ್ತಿಯಲ್ಲಿ ಸಫಲತೆಯನ್ನು ಗಳಿಸಬೇಕು ಹಾಗೂ ಯಶಸ್ಸನ್ನು ಸಾಧಿಸಬೇಕು ಎಂದು ಹೆಚ್ಚಿನವರು ಹಗಲಿರುಳೂ ಶ್ರಮಿಸುತ್ತಾರೆ. ಹಾಗಾಗಿ ಹೆಚ್ಚು ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಪ್ರಾಜೆಕ್ಟ್‌ಗಳ (Project) ಯಶಸ್ಸಿನಲ್ಲಿ ಪಾಲುದಾರರಾಗುವುದು ಸಂಸ್ಥೆಯಲ್ಲಿ ಗುರುತಿಸಿಕೊಳ್ಳುವ ಕೆಲಸಗಳನ್ನು ಮಾಡುತ್ತಾರೆ. ಕಂಪನಿ (Company) ಅಥವಾ ಸಂಸ್ಥೆಗೆ ಸೇರಿದ ಕೆಲವೇ ವರ್ಷಗಳಲ್ಲಿ ಬಡ್ತಿ ಪಡೆಯುವುದು ಹಾಗೂ ಹೆಚ್ಚುವರಿ ವೇತನ ಗಳಿಸುವುದೂ ಕೂಡ ಯಶಸ್ಸಿನ ಒಂದು ಭಾಗವಾಗಿದೆ. ನಿಧಾನವಾಗಿಯಾದರೂ ನಿಮ್ಮ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದೀರಿ ಎಂಬ ಅಂಶವನ್ನು ಇದು ಬಿಂಬಿಸುತ್ತದೆ. ಹಾಗಿದ್ದರೆ ವೃತ್ತಿಜೀವನದಲ್ಲಿ (Career) ಇನ್ನಷ್ಟು ಯಶಸ್ಸು ಸಾಧಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ


ತಾಳ್ಮೆ ಹಾಗೂ ಪರಿಶ್ರಮ ಕೀಲಿಕೈ ಹೇಗೆ?


ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಪರಿಶ್ರಮದೊಂದಿಗೆ ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ. ವೃತ್ತಿ ಬದಲಾವಣೆಯ ಮೂಲಕ ಉತ್ತಮ ಯಶಸ್ಸು ಪಡೆಯಬಹುದು ಎಂಬುದು ನಿಮ್ಮ ಆಯ್ಕೆಯಾಗಿದ್ದರೆ ಅದರೊಂದಿಗೆ ಬರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಉದ್ಯೋಗಿ ಹೊಂದಿರಬೇಕಾಗುತ್ತದೆ.


ಉದ್ಯೋಗಿಯು ಕೌಶಲ್ಯಗಳನ್ನು ಹೊಸ ಪರಿಸರಕ್ಕೆ ಏಕೆ ಅನ್ವಯಿಸಿಕೊಳ್ಳಬೇಕು?


ನಿಮ್ಮಲ್ಲಿರುವ ಕೌಶಲ್ಯವನ್ನು ಹೊಸ ಪರಿಸರಕ್ಕೆ ಮಾರ್ಪಡಿಸಿಕೊಳ್ಳುವುದು ವೃತ್ತಿ ಬದಲಾವಣೆಯಲ್ಲಿ ಪ್ರಮುಖವಾಗಿರುತ್ತದೆ. ಈ ಹಂತವನ್ನು ನಿಭಾಯಿಸಿದರೆ ನಂತರ ವೃತ್ತಿಜೀವನದಲ್ಲಿ ಯಶಸ್ಸು ಖಾತ್ರಿಯಾಗಿರುತ್ತದೆ ಎಂಬುದು ವೃತ್ತಿ ಪರಿಣಿತರ ಮಾತಾಗಿದೆ. ಉದ್ಯೋಗಕ್ಕೆ ಸೇರಿದ ಆರು ತಿಂಗಳು ಇಲ್ಲವೇ ಇನ್ನೂ ಕೆಲವು ಸಮಯ ಹತಾಶೆ, ದುಃಖ, ಸವಾಲುಗಳು ನಿಮ್ಮನ್ನು ಕಾಡಬಹುದು ಆದರೆ ಯಶಸ್ಸು ಒಮ್ಮೆ ದೊರೆತ ನಂತರ ಇದೆಲ್ಲಾ ಸಹಿಸಿಕೊಂಡದ್ದು ಸಾರ್ಥಕವಾಯಿತು ಎಂಬ ಅನುಭೂತಿ ನಿಮ್ಮಲ್ಲುಂಟಾಗುತ್ತದೆ.


ವೃತ್ತಿಜೀವನದಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ ಹಾಗಾಗಿ ಸೋಲಿನಿಂದ ಗೆಲುವಿನ ಪಾಠಗಳನ್ನು ಅರಿತುಕೊಳ್ಳಿ ಎಂಬುದು ಪರಿಣಿತರ ಮಾತಾಗಿದೆ.


ವೃತ್ತಿಯಲ್ಲಿ ಒಮ್ಮೆಲೆ ಮೇಲೇರಬಾರದು ಏಕೆ?


ವೃತ್ತಿಜೀವನವನ್ನು ಏಣಿಯಂತೆ ಗ್ರಹಿಸಿಕೊಂಡು ಮೇಲೇರುವ ಕೆಲಸವನ್ನು ಪ್ರತಿಯೊಬ್ಬ ಉದ್ಯೋಗಿ ಮಾಡುತ್ತಾನೆ ಆದರೆ ಹೀಗೆ ಮಾಡುವುದರಿಂದ ಏಣಿಯ ಎತ್ತರ ಅಂದರೆ ವೃತ್ತಿಯ ಎತ್ತರ ಇನ್ನಷ್ಟು ಅಧಿಕವಾಗುತ್ತದೆ ಎಂಬುದು ತಜ್ಞರ ಮಾತಾಗಿದೆ.


ಇದನ್ನೂ ಓದಿ: Graphic Designer ಆಗೋಕೆ ಇಷ್ಟಾ ಇದ್ಯಾ? ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ


ವೃತ್ತಿಬೆಳವಣಿಗೆ ಎಂಬುದು ಸಸ್ಯದ ಬೆಳವಣಿಗೆಯಂತಿರಬೇಕು ಲೇಖಕರಾದ ಆಸ್ಟಿನ್ ಕ್ಲೆನ್ ಸಲಹೆ ನೀಡುತ್ತಾರೆ.


ವೃತ್ತಿಜೀವನವೆಂಬುದು ಸಸ್ಯದ ಬೆಳವಣಿಗೆಯಂತಿರಲಿ


ಉದ್ಯಾನವನದಲ್ಲಿ ನೆಡುವ ಸಸಿ ಒಂದೇ ದಿನದಲ್ಲಿ ಬೆಳೆದು ಹೆಮ್ಮರವಾಗುವುದಿಲ್ಲ. ಅದನ್ನು ನೆಡಲು ಉತ್ತಮ ಸ್ಥಳದ ಆಯ್ಕೆಮಾಡಬೇಕು ನಂತರ ಮಣ್ಣಿನ ಪರಿಶೀಲನೆ ನಡೆಸಬೇಕಾಗುತ್ತದೆ ಹಾಗೆಯೇ ಗಾಳಿ ಬೆಳಕು ಚೆನ್ನಾಗಿರುವಂತಹ ಸ್ಥಳದಲ್ಲಿಯೇ ಸಸಿ ನೆಡಬೇಕು. ಇದೇ ರೀತಿ ವೃತ್ತಿ ಜೀವನವನ್ನು ಕೊಂಡೊಯ್ಯಬೇಕು ಎಂದು ಆಸ್ಟಿನ್ ಸೂಚಿಸುತ್ತಾರೆ.


ವೃತ್ತಿ ಬೆಳವಣಿಗೆಯಲ್ಲಿ ಕಂಡುಕೊಳ್ಳಬೇಕಾದ ಅಂಶಗಳೇನು?


ನೀವು ಉದ್ಯೋಗ ನಡೆಸುವ ಸ್ಥಳ ಅಲ್ಲಿ ನಿಮ್ಮ ಭವಷ್ಯಕ್ಕೆ ದೊರೆಯುವ ಮಾರ್ಗೋಪಾಯಗಳು, ಅವಕಾಶಗಳು ಇವೆಲ್ಲವನ್ನೂ ಗಮನಿಸಿಕೊಂಡು ಮುಂದಡಿ ಇಡಿ ಎಂದು ಆಸ್ಟಿನ್ ಸೂಚಿಸುತ್ತಾರೆ. ಹೆಜ್ಜೆ ಹೆಜ್ಜೆ ಇಡುತ್ತಾ ವೃತ್ತಿಜೀವನದಲ್ಲಿ ಮುಂದುವರಿಯಿರಿ ಎಂಬುದು ಆಸ್ಟಿನ್ ಕಿವಿಮಾತಾಗಿದೆ.


ಇದನ್ನೂ ಓದಿ: ಪೇದೆಯಾಗಿ ಕೆಲಸ ಮಾಡಿಕೊಂಡೇ 8ನೇ ಪ್ರಯತ್ನದಲ್ಲಿ UPSC ಪಾಸ್ ಮಾಡಿದ ರಾಮ್ ಭಜನ್


ಸಹವರ್ತಿಗಳ ಸಲಹೆಯನ್ನು ಪಡೆದುಕೊಳ್ಳುವುದು


ಸಂಸ್ಥೆಯಲ್ಲಿ ನಿಮ್ಮೊಂದಿಗೆ ಜೊತೆಯಾಗಿ ಕೆಲಸ ಮಾಡುವ ಸಹೋದ್ಯೋಗಿಗಳ ನೆರವನ್ನು ವೃತ್ತಿ ಬೆಳವಣಿಗೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ಹೇಗೆ ಮುಂದುವರಿದಿದ್ದಾರೆ ಎಂಬುದನ್ನು ಅರಿತುಕೊಂಡು ಅವರ ಸಲಹೆಗಳನ್ನು ಪಡೆದುಕೊಂಡು ಮುಂದುವರಿಯಿರಿ. ಇದರಿಂದ ವೃತ್ತಿಬೆಳವಣಿಗೆಗ ಸಹಾಯ ದೊರೆಯುತ್ತದೆ. ನಿಧಾನವಾಗಿ ಯೋಚಿಸಿ ವೃತ್ತಿ ಬೆಳವಣಿಗೆ ಮಾಡಿಕೊಳ್ಳಿ ಎಂದು ಪರಿಣಿತರು ಸಲಹೆ ನೀಡುತ್ತಾರೆ.
ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ


ವೃತ್ತಿಯಲ್ಲಿ ಬಡ್ತಿ ಹೊಂದಬೇಕು ಎಂದಾದರೆ ಆ ಬಡ್ತಿಗೆ ಅನುಗುಣವಾಗಿರುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಂಸ್ಥೆಗಳು ಒದಗಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ಸೇರಿಕೊಳ್ಳಿ ಇಲ್ಲವೇ ಆನ್‌ಲೈನ್ ಕಾರ್ಯಾಗಾರಗಳಲ್ಲಿ ತೊಡಗಿಸಿಕೊಳ್ಳಿ.

First published: