• ಹೋಂ
  • »
  • ನ್ಯೂಸ್
  • »
  • Jobs
  • »
  • National Career Service ಬಳಸಿಕೊಂಡು ಒಳ್ಳೆಯ ಉದ್ಯೋಗ ಪಡೆಯಬಹುದು; ಇದು ನಿಮ್ಮ ಹಕ್ಕು ಮರೆಯಬೇಡಿ

National Career Service ಬಳಸಿಕೊಂಡು ಒಳ್ಳೆಯ ಉದ್ಯೋಗ ಪಡೆಯಬಹುದು; ಇದು ನಿಮ್ಮ ಹಕ್ಕು ಮರೆಯಬೇಡಿ

NCS

NCS

ರಾಷ್ಟ್ರೀಯ ವೃತ್ತಿ ಸೇವೆ (NCS) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಒಂದು ಯೋಜನೆಯಾಗಿದೆ. ಈ ಯೋಜನೆಯು NCS ಪೋರ್ಟಲ್ ಮೂಲಕ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು ಮತ್ತು ತರಬೇತುದಾರರನ್ನು ಒಟ್ಟುಗೂಡಿಸುತ್ತದೆ.

  • Share this:

ಉದ್ಯೋಗವೆಂಬುದು (Job) ಜೀವನಾಧಾರ. ನಗರಗಳಲ್ಲಿ ವಾಸಿಸುತ್ತಿರುವ ಪತಿ ಹಾಗೂ ಪತ್ನಿ ಇಬ್ಬರೂ ದುಡಿದರೆ ಮಾತ್ರ ತಕ್ಕಮಟ್ಟಿಗೆ ಆರಾಮ ಜೀವನ ನಡೆಸಬಹುದಾಗಿದೆ, ಏಕೆಂದರೆ ಖರ್ಚುವೆಚ್ಚಗಳ ವಿಪರೀತವಾಗಿರುತ್ತವೆ ಹಾಗಾಗಿ ಒಬ್ಬರ ಸಂಬಳದಿಂದ ( Salary) ಮಾತ್ರ ಜೀವನ ನಡೆಸುವುದು ತುಂಬಾ ಕಷ್ಟ. ಸರಿ ಜೀವನ ನಿರ್ವಹಣೆಗೆ ಉದ್ಯೋಗ ಬೇಕು ನಿಜ ಆದರೆ ಆ ಉದ್ಯೋಗ ಉತ್ತಮವಾಗಿರಬೇಕು ಹಾಗೂ ಕೈ ತುಂಬಾ ಸಂಬಳವನ್ನು ನೀಡುವಂತಿರಬೇಕು ಎಂಬುದು ಹೆಚ್ಚಿನ ಎಲ್ಲಾ ಉದ್ಯೋಗಾರ್ಥಿಗಳ (Employees) ಬಯಕೆಯಾಗಿರುತ್ತದೆ.


ಹಾಗಿದ್ದರೆ ಸೂಕ್ತವಾದ ವೇತನ ಯೋಗ್ಯ ಉದ್ಯೋಗವನ್ನು ಪಡೆಯುವುದು ಹೇಗೆ? ನಮ್ಮ ಅನುಭವಕ್ಕೆ ಸರಿಹೊಂದುವ ಉದ್ಯೋಗ ಗಿಟ್ಟಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


ಉದ್ಯೋಗಾರ್ಥಿಗಳಿಗೆ ಸಹಕಾರಿಯಾಗಿರುವ ರಾಷ್ಟ್ರೀಯ ವೃತ್ತಿ ಸೇವೆ


ರಾಷ್ಟ್ರೀಯ ವೃತ್ತಿ ಸೇವೆ (NCS) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಒಂದು ಯೋಜನೆಯಾಗಿದೆ. ಈ ಯೋಜನೆಯು NCS ಪೋರ್ಟಲ್ ಮೂಲಕ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು ಮತ್ತು ತರಬೇತುದಾರರನ್ನು ಒಟ್ಟುಗೂಡಿಸುತ್ತದೆ.


ಇದೊಂದು ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಪ್ರಾಥಮಿಕ ಸರ್ಕಾರಿ ಪೋರ್ಟಲ್ ಆಗಿದೆ ಹಾಗೂ ಉದ್ಯೋಗಾಂಕ್ಷಿಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರವನ್ನೊದಗಿಸುತ್ತದೆ. ಪ್ರಸ್ತುತ, NCS ಪೋರ್ಟಲ್‌ನಲ್ಲಿ 9,72,798 ಸಕ್ರಿಯ ಉದ್ಯೋಗದಾತರು ಮತ್ತು 3,73,956 ಸಕ್ರಿಯ ಖಾಲಿ ಹುದ್ದೆಗಳಿವೆ ಎಂಬುದು ವರದಿಯಾಗಿದೆ.


ಪೋರ್ಟಲ್ ಸರ್ಕಾರಿ ಉದ್ಯೋಗಗಳು, ಅಂತರಾಷ್ಟ್ರೀಯ ಅವಕಾಶಗಳ ಪಟ್ಟಿಯನ್ನು ಹೊಂದಿದೆ ಜೊತೆಗೆ ವಿಕಲಚೇತನರಿಗಾಗಿ ಉದ್ಯೋಗಗಳನ್ನು ಒಳಗೊಂಡಿದೆ ಅಂತೆಯೇ ಪೋರ್ಟಲ್ ಬಹು ಚಾನೆಲ್‌ಗಳ ಮೂಲಕ ವೃತ್ತಿ ಸಮಾಲೋಚನೆ ವಿಷಯವನ್ನು ಒದಗಿಸುತ್ತದೆ.


ಉದ್ಯಮ, ಇ-ಶ್ರಮ್ ಮತ್ತು ಎನ್‌ಸಿಎಸ್ ಪೋರ್ಟಲ್‌ಗಳನ್ನು ಪರಸ್ಪರ ಜೋಡಿಸಲಾಗಿದೆ. ಉದ್ಯೋಗದಾತರನ್ನು ಸಂಪರ್ಕಿಸಲು EPFO, ESIC ನೊಂದಿಗೆ ಆನ್‌ಲೈನ್ ಏಕೀಕರಣವನ್ನು ಸಹ ಮಾಡಲಾಗಿದೆ.


ಪ್ರಾತಿನಿಧಿಕ ಚಿತ್ರ


ನೋಂದಾಯಿಸುವುದು ಹೇಗೆ ಎಂಬುದನ್ನು ತಿಳಿಯೋಣ


ಹಂತ 1: ಇದಕ್ಕಾಗಿ ಮೊದಲಿಗೆ ಎನ್‌ಸಿಎಸ್ ಪೋರ್ಟಲ್‌ಗೆ ಭೇಟಿ ನೀಡಬೇಕು www.ncs.gov.in.


ಹಂತ 2: ಬಲಭಾಗದಲ್ಲಿ, 'ಸೈನ್ ಇನ್' ಬಟನ್‌ನೊಂದಿಗೆ ಲಾಗಿನ್ ಬಾಕ್ಸ್ ಇದೆ.


ಹಂತ 3: ಡ್ರಾಪ್-ಡೌನ್ ಆಯ್ಕೆಯಲ್ಲಿ 'ರಿಜಿಸ್ಟರ್ ಏಸ್' ಕೇಳುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಡ್ರಾಪ್-ಡೌನ್ ಪಟ್ಟಿಯಿಂದ 'ಉದ್ಯೋಗಾರ್ಥಿ' ಆಯ್ಕೆಯನ್ನು ಆಯ್ಕೆ ಮಾಡಬಹುದು.


ಹಂತ 4: ವಿಶಿಷ್ಟ ಗುರುತಿನ ಸಂಖ್ಯೆ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ UAN ಸಂಖ್ಯೆ ಸೇರಿದಂತೆ ಅಗತ್ಯವಿರುವ ವಿವರಗಳೊಂದಿಗೆ ಭರ್ತಿ ಮಾಡಬೇಕಾದ ನೋಂದಣಿ ಫಾರ್ಮ್ ಕಾಣಿಸಿಕೊಳ್ಳುತ್ತದೆ.


ಹಂತ 5: ನೋಂದಣಿ ಯಶಸ್ವಿಯಾದಾಗ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು-ಬಾರಿ ಪಾಸ್‌ವರ್ಡ್ (OTP) ಅನ್ನು ಸ್ವೀಕರಿಸಲಾಗುತ್ತದೆ, ಅದನ್ನು ಪೋರ್ಟಲ್‌ನಲ್ಲಿ ಪರಿಶೀಲಿಸಬೇಕಾಗುತ್ತದೆ.


ಇದನ್ನೂ ಓದಿ: Career Tips: ಜಾಸ್ತಿ ಸಂಬಳದ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದರೆ ಈ ಕೋರ್ಸ್​​ಗಳನ್ನು ಮಾಡಿ


ಲಾಗಿನ್ ಮತ್ತು ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡುವುದು ಹೇಗೆ:


ಯಶಸ್ವಿಯಾಗಿ ಲಾಗಿನ್ ಆದ ಮೇಲೆ, ಬಳಕೆದಾರರನ್ನು ಉದ್ಯೋಗಾಕಾಂಕ್ಷಿಗಳ ಡ್ಯಾಶ್‌ಬೋರ್ಡ್‌ಗೆ ನಿರ್ದೇಶಿಸಲಾಗುತ್ತದೆ. ಉದ್ಯೋಗಾಕಾಂಕ್ಷಿ ಪ್ರೊಫೈಲ್ ಅನ್ನು ವೀಕ್ಷಿಸಲು ಮತ್ತು ಅಪ್‌ಡೇಟ್ ಮಾಡುವ ಕ್ರಮಗಳು:


ಹಂತ 1: ಉದ್ಯೋಗಾಕಾಂಕ್ಷಿ ಡ್ಯಾಶ್‌ಬೋರ್ಡ್‌ನಲ್ಲಿ, ಎಡ ನ್ಯಾವಿಗೇಷನ್ ಪ್ಯಾನೆಲ್‌ನಲ್ಲಿ ಬಹು ಆಯ್ಕೆಗಳಿವೆ. ಎರಡನೇ ಆಯ್ಕೆಯು 'NCS ಪ್ರೊಫೈಲ್ ವೀಕ್ಷಿಸಿ/ಅಪ್‌ಡೇಟ್ ಮಾಡಿ', ಅದನ್ನು ಕ್ಲಿಕ್ ಮಾಡಬೇಕು.


ಹಂತ 2: ವೈಯಕ್ತಿಕ ಮಾಹಿತಿ, ಭೌತಿಕ ಗುಣಲಕ್ಷಣಗಳು, ಸಂವಹನ, ಶಿಕ್ಷಣ ಮತ್ತು ತರಬೇತಿ, ಅನುಭವ, ಇತರ ಕೌಶಲ್ಯಗಳು, ಉಲ್ಲೇಖಗಳು ಇತ್ಯಾದಿಗಳನ್ನು ಒಳಗೊಂಡಂತೆ ವಿವರವಾದ ಪ್ರೊಫೈಲ್ ಟ್ಯಾಬ್ ಅನ್ನು ಪ್ರದರ್ಶಿಸಲಾಗುತ್ತದೆ.


ಹಂತ 3: ಪ್ರತಿಯೊಂದು ಪ್ರೊಫೈಲ್ ಟ್ಯಾಬ್ ಅನ್ನು ಉದ್ಯೋಗಾಕಾಂಕ್ಷಿಗಳು ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸದೊಂದಿಗೆ ಭರ್ತಿ ಮಾಡಬೇಕಾಗುತ್ತದೆ.


ಹಂತ 4: 'ಡಿಜಿಲಾಕರ್ ಕನೆಕ್ಟ್' ಲಿಂಕ್ ಅನ್ನು ಬಳಸಿಕೊಂಡು ಪ್ರತಿ ಟ್ಯಾಬ್‌ನ ಅಡಿಯಲ್ಲಿ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.


NCS ನಲ್ಲಿ ಉದ್ಯೋಗಗಳನ್ನು ಹುಡುಕುವುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ:


ಹಂತ 1: 'ವ್ಯೂ/ಅಪ್‌ಡೇಟ್ NCS ಪ್ರೊಫೈಲ್’ ಆಯ್ಕೆಯ ಕೆಳಗೆ, ಸರ್ಚ್ ಜಾಬ್' ಬಟನ್ ಇರುತ್ತದೆ.


ಹಂತ 2: ‘ಕೀವರ್ಡ್’, ‘ಸ್ಥಳ’, ‘ನಿರೀಕ್ಷಿತ ಸಂಬಳ’ ಮತ್ತು ‘ಸಂಸ್ಥೆಯ ಪ್ರಕಾರ’ ನಮೂದಿಸಬಹುದು.


ಹಂತ 3: 'ಹುಡುಕಾಟ' ಬಟನ್ ಅನ್ನು ಒತ್ತಿದಾಗ ಲಭ್ಯವಿರುವ ಉದ್ಯೋಗಗಳ ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ.


ಹಂತ 4: ಆಸಕ್ತಿಗೆ ಅನುಗುಣವಾಗಿ ಉದ್ಯೋಗಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಬಲಭಾಗದಲ್ಲಿರುವ 'ಅನ್ವಯಿಸು' ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.


ಗಮನಿಸಿ: ಉದ್ಯೋಗಾಕಾಂಕ್ಷಿಗಳು ತಮ್ಮ ರಿಜಿಸ್ಟರ್ ಮಾಡಿರುವ ಇಮೇಲ್‌ನಲ್ಲಿ ಉದ್ಯೋಗ ಅಧಿಸೂಚನೆ ಇಮೇಲ್‌ಗಳನ್ನು ಪಡೆಯಲು ತಮ್ಮ ವಿವರಗಳನ್ನು ಉಳಿಸಬಹುದು.




NCS ಪೋರ್ಟಲ್‌ಗಾಗಿ ಸಂಪರ್ಕ ವಿವರಗಳು:

top videos


    ಟೋಲ್ ಫ್ರೀ ಸಹಾಯವಾಣಿ: 1514 ಆಗಿದೆ ಅಥವಾ ಕುಂದುಕೊರತೆಗಳ ತ್ವರಿತ ಪರಿಹಾರಕ್ಕಾಗಿ, NCS ಪೋರ್ಟಲ್‌ನಲ್ಲಿರುವ ಕುಂದುಕೊರತೆ ಪುಟಕ್ಕೆ ಭೇಟಿ ನೀಡಬಹುದು. ಇನ್ನಷ್ಟು  ಸಹಾಯ ಪಡೆದುಕೊಳ್ಳಲು, support.ncs@gov.in ಗೆ ಮೇಲ್ ಮಾಡಬಹುದು.

    First published: