• ಹೋಂ
  • »
  • ನ್ಯೂಸ್
  • »
  • Jobs
  • »
  • Career Advice: ಯಶಸ್ವಿ ವೃತ್ತಿಜೀವನಕ್ಕಾಗಿ ಮಹಿಳೆಯರು ಈ ಸೂತ್ರ ಪಾಲಿಸುವುದು ಸೂಕ್ತ; ತಜ್ಞರ ಅಭಿಪ್ರಾಯ

Career Advice: ಯಶಸ್ವಿ ವೃತ್ತಿಜೀವನಕ್ಕಾಗಿ ಮಹಿಳೆಯರು ಈ ಸೂತ್ರ ಪಾಲಿಸುವುದು ಸೂಕ್ತ; ತಜ್ಞರ ಅಭಿಪ್ರಾಯ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಉದ್ಯೋಗಸ್ಥ ಮಹಿಳೆಯರು ವೃತ್ತಿಗಿಂತಲೂ ಕುಟುಂಬದಕ್ಕೆ ಆದ್ಯತೆ ನೀಡುವುದು ಹೆಚ್ಚು ಎಂಬುದು ಸ್ವಾತಿ ಅವರ ಅಭಿಪ್ರಾಯವಾಗಿದೆ. ಆದರೆ ವೃತ್ತಿ ಆಯ್ಕೆಯ ವಿಷಯದಲ್ಲಿ ಮಹಿಳೆಯರು ತಮ್ಮ ಆಯ್ಕೆ, ಇಷ್ಟ, ಕೌಶಲ್ಯಗಳ ಬಗೆಗೆ ಜ್ಞಾನವನ್ನು ಹೊಂದಿರಬೇಕು ಎಂದು ಸಲಹೆ ನೀಡುತ್ತಾರೆ.

  • Share this:

    ಮಹಿಳೆ (Woman) ಉದ್ಯಮ ಕ್ಷೇತ್ರದಲ್ಲಿ (Business Field)ನಿಪುಣತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಜವಬ್ದಾರಿಯನ್ನು ಆಕೆ ತೆಗೆದುಕೊಂಡರೂ ಅದನ್ನು ಚಾಣಾಕ್ಷತನದಿಂದ ನಿಭಾಯಿಸುವ ಛಾತಿ ಅವರಲ್ಲಿರುತ್ತದೆ. ತಮ್ಮ ಸಾಮರ್ಥ್ಯ ಹಾಗೂ ಪ್ರಾವೀಣ್ಯತೆಯಿಂದ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿರುವ ಮಹಿಳೆಯರು ತಮ್ಮ ಸಹೋದ್ಯೋಗಿಗಳಿಗಿಂತ ಸಮಾನವಾಗಿ ಇಲ್ಲವೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿಯೇ ಅವರಿಗೆ ಇತರರಿಗೆ ನೀಡುವ ಅದೇ ಸಮಾನತೆ ಹಾಗೂ ಗೌರವವನ್ನು (Equity and Respect) ನೀಡಬೇಕು ಎಂಬುದು ಯುಟಿಐ ಮ್ಯೂಚುಯಲ್ ಫಂಡ್‌ ಇವಿಪಿ ಮತ್ತು ಫಂಡ್ ಮ್ಯಾನೇಜರ್ ಸ್ವಾತಿ ಕುಲಕರ್ಣಿ ಮಾತಾಗಿದೆ.


    ಮಹಿಳಾ ಸಬಲೀಕರಣ ಏಕೆ ಮುಖ್ಯ?


    ಉದ್ಯೋಗದಲ್ಲಿ ಮಹಿಳೆಯರಿಗಿರುವ ಅವಕಾಶಗಳಂತೆಯೇ ವೃತ್ತಿ ಸವಾಲುಗಳು ಇರುತ್ತವೆ. ಸ್ವಾತಿ ಅವರ ಅನುಭವ ಅವರು ಎದುರಿಸಿರುವ ಸಮಸ್ಯೆಗಳು ಮೊದಲಾದವನ್ನು ಈ ಲೇಖನದಲ್ಲಿ ಅವರು ಹಂಚಿಕೊಂಡಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿರುವ ಸ್ವಾತಿ ತಮ್ಮ ಪ್ರಕಾರ ಮಹಿಳಾ ಸಬಲೀಕರಣ ಎಂದರೇನು ಎಂಬುದನ್ನು ತಿಳಿಸಿದ್ದಾರೆ.


    ಮಹಿಳೆಯರನ್ನು ಸಶಕ್ತಗೊಳಿಸುತ್ತದೆ


    ಮಹಿಳಾ ಸಬಲೀಕರಣ ಎಂಬುದು ನನ್ನ ಪ್ರಕಾರ ನಿರ್ಧಾರ ತೆಗೆದುಕೊಳ್ಳುವ ಧೈರ್ಯ, ಭಾಗವಹಿಸುವಿಕೆ ಹಾಗೂ ನಿರ್ಧಾರಗಳ ಫಲಿತಾಂಶಗಳ ಜವಬ್ದಾರಿ ವಹಿಸಲು ಮಹಿಳೆಯರನ್ನು ಶಕ್ತಗೊಳಿಸುತ್ತದೆ ಎಂಬುದು ಸ್ವಾತಿಯವರ ಮಾತಾಗಿದೆ.


    ಸ್ವಾತಿ ಕುಲಕರ್ಣಿ


    ಆರ್ಥಿಕ ಸ್ವಾತಂತ್ರ್ಯ ಮಹಿಳೆಯರಿಗೆ ಏಕೆ ಅವಶ್ಯಕ?


    ಮಹಿಳೆಯರ ಅರ್ಥಿಕ ಸ್ವಾತಂತ್ರ್ಯದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿರುವ ಸ್ವಾತಿ, ತಮ್ಮ ಪ್ರಕಾರ ಆರ್ಥಿಕ ಸ್ವಾತಂತ್ರ್ಯ ಮಹಿಳೆಯರಿಗೆ ಏಕೆ ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಕುಟುಂಬದಲ್ಲಿ ಒಬ್ಬರೇ ದುಡಿಯುವ ವ್ಯಕ್ತಿಯನ್ನು ಸಂಪೂರ್ಣ ಕುಟುಂಬ ಅವಲಂಬಿಸಿರುವುದು ಅಪಾಯಕಾರಿ ಎಂದು ಸ್ವಾತಿ ಹೇಳುತ್ತಾರೆ. ಹಾಗಾಗಿ ಆರ್ಥಿಕ ಸ್ವಾತಂತ್ರ್ಯ ಹಾಗೂ ಉದ್ಯೋಗದ ಮಹತ್ವದ ಬಗ್ಗೆ ಅವರಿಗೆ ಮನವರಿಕೆ ಮಾಡುವಲ್ಲಿ ಸ್ವಾತಿ ಅವರ ತಾಯಿಯ ಪಾತ್ರ ಹಿರಿದಾದುದು ಎಂಬುದು ಅವರ ಹೇಳಿಕೆಯಾಗಿದೆ. ವೃತ್ತಿಜೀವನದ ಕುರಿತು ಸ್ವಾತಿ ಹೊಂದಿದ್ದ ಒಲವೇ ಅವರಿಗೆ ಹಣಕಾಸು ಕ್ಷೇತ್ರಕ್ಕೆ ಬರಲು ಪ್ರೇರಣೆಯನ್ನು ನೀಡಿತು ಎಂಬುದಾಗಿ ತಿಳಿಸಿದ್ದಾರೆ.


    ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸವಾಲುಗಳು


    ಕಾಲ ಬದಲಾಗುತ್ತಿರುವಂತೆ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸವಾಲುಗಳೇನು ಹಾಗೂ ಅವರನ್ನು ಸಬಲೀಕರಣಗೊಳಿಸುವ ಬಗ್ಗೆ ಜನರು ಹೊಂದಿರುವ ಮನಸ್ಥಿತಿಯ ಬಗ್ಗೆ ಸ್ವಾತಿ ಅವರಲ್ಲಿ ಕೇಳಿದಾಗ ಮಹಿಳೆಯರು ಯಾವುದಾದರೂ ನಿರ್ಧಾರ ಹಾಗೂ ಉದ್ದೇಶವನ್ನು ಈಡೇರಿಸಲು ಬಾಧ್ಯಸ್ಥರಾದರು ಎಂದರೆ ಅದನ್ನು ಅವರು ಈಡೇರಿಸುತ್ತಾರೆ ಎಂಬುದು ಸ್ವಾತಿ ಮಾತಾಗಿದೆ.




    ತಮ್ಮ ಸಾಮರ್ಥ್ಯಗಳು ಮತ್ತು ಪ್ರಾವೀಣ್ಯತೆಯ ಕಾರಣದಿಂದ ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಮಹಿಳೆಯರು ಯಾವಾಗಲೂ ತಮ್ಮ ಪ್ರತಿರೂಪಗಳಿಗಿಂತ ಸಮಾನವಾಗಿ ಅಥವಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸ್ವಾತಿ ಅವರ ಹೇಳಿಕೆಯಾಗಿದೆ.


    ಮಹಿಳೆಯರಿಗೆ ಸ್ವಾತಿ ಕೆಲವೊಂದು ಸಲಹೆಗಳನ್ನು ನೀಡಿದ್ದು, ಮಹಿಳೆಯರು ತಮ್ಮ ವೃತ್ತಿಜೀವನವನ್ನು ಹೇಗೆ ಸುಧಾರಿಸಬಹುದು ಉತ್ತಮ ಚೌಕಟ್ಟನ್ನು ಹೇಗೆ ಹಾಕಿಕೊಳ್ಳಬಹುದು ಎಂಬುದನ್ನು ತಿಳಿಸಿದ್ದಾರೆ.


    ಮಹಿಳೆಯರು ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳಬೇಕು


    ಉದ್ಯೋಗಸ್ಥ ಮಹಿಳೆಯರು ವೃತ್ತಿಗಿಂತಲೂ ಕುಟುಂಬದಕ್ಕೆ ಆದ್ಯತೆ ನೀಡುವುದು ಹೆಚ್ಚು ಎಂಬುದು ಸ್ವಾತಿ ಅವರ ಅಭಿಪ್ರಾಯವಾಗಿದೆ. ಆದರೆ ವೃತ್ತಿ ಆಯ್ಕೆಯ ವಿಷಯದಲ್ಲಿ ಮಹಿಳೆಯರು ತಮ್ಮ ಆಯ್ಕೆ, ಇಷ್ಟ, ಕೌಶಲ್ಯಗಳ ಬಗೆಗೆ ಜ್ಞಾನವನ್ನು ಹೊಂದಿರಬೇಕು ಎಂದು ಸಲಹೆ ನೀಡುತ್ತಾರೆ.


    ಇದನ್ನೂ ಓದಿ: Career Tips: ಟೆಕ್ ಉದ್ಯಮದಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಮಹಿಳೆಯರಿಗೆ ಇಲ್ಲಿದೆ ಸಲಹೆ


    ವೃತ್ತಿಜೀವನವನ್ನು ಮುಂದಿನ ಸ್ತರಕ್ಕೆ ಕೊಂಡೊಯ್ಯುವಲ್ಲಿ ಮಹಿಳೆಯರು ಯಾವಾಗಲೂ ಉನ್ನತ ಮಟ್ಟದಲ್ಲಿರಬೇಕು ಅಂತೆಯೇ ತಮ್ಮ ಪ್ರಗತಿ ಹಾಗೂ ಬೆಳವಣಿಗೆಗೂ ಆದ್ಯತೆ ನೀಡಬೇಕು ಎಂಬುದು ಸ್ವಾತಿ ನೀಡುವ ಸಲಹೆಯಾಗಿದೆ. ವೃತ್ತಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅದಕ್ಕಾಗಿ ಸಮಯ ನಿಯೋಜನೆಯನ್ನು ಮಹಿಳೆಯರು ಮಾಡಬೇಕು. ಅಂತೆಯೇ ಕಾಲಕ್ಕೆ ತಕ್ಕಂತೆ ಅಪ್‌ಟುಡೇಟ್ ಕೂಡ ಆಗಿರಬೇಕು ಎಂದು ಸ್ವಾತಿ ಸೂಚಿಸುತ್ತಾರೆ. ಅನುಭವ ಮತ್ತು ಶೈಕ್ಷಣಿಕ ಬದಲಾವಣೆಯೊಂದಿಗೆ ನೀವು ನಿಮ್ಮನ್ನು ನವೀಕರಿಸಿಕೊಳ್ಳಬೇಕು ಎಂದು ಸ್ವಾತಿ ಉದ್ಯೋಗಸ್ಥ ಮಹಿಳೆಯರಿಗೆ ಸಲಹೆ ನೀಡುತ್ತಾರೆ.

    Published by:Kavya V
    First published: