ಈ ಹಿಂದೆ ಬಂದ ಹಲವಾರು ಅಧ್ಯಯನಗಳು ಮಹಿಳಾ ಉದ್ಯೋಗಿಗಳು ವೇತನ, ಹುದ್ದೆ, ಪಾತ್ರಕ್ಕಿಂತ ಹೆಚ್ಚಾಗಿ ಅವರಿಗೆ ಹೊಂದಿಕೆಯಾಗುವ ಮತ್ತು ಅನುಕೂಲಕರವಾದ ಕೆಲಸಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿವೆ. ಆದರೆ ಈ ಸಾಂಪ್ರದಾಯಿಕ ನಂಬಿಕೆಯನ್ನು ಇಲ್ಲೊಂದು ಹೊಸ ಅಧ್ಯಯನ (New Study) ಹುಸಿ ಮಾಡಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಕೆಲಸದ ಆಯ್ಕೆಗಳನ್ನು ಮತ್ತು ಕೆಲಸ-ಜೀವನ-ಸಮತೋಲನವನ್ನು ಬಿಟ್ಟು ಮಹಿಳಾ (Women Employee) ಉದ್ಯೋಗಿಗಳು ವೃತ್ತಿಜೀವನದ ಬೆಳವಣಿಗೆ ಮತ್ತು ವೇತನಕ್ಕೆ (Salary) ಮಹತ್ವ ನೀಡುತ್ತಾರೆ ಎಂದು ತೋರಿಸಿಕೊಟ್ಟಿದೆ.
'ದಿ ಗ್ರ್ಯಾಂಡ್ ವುಮೆನ್ & ವರ್ಕ್‌ಪ್ಲೇಸ್ ರಿಪೋರ್ಟ್ʼ ಸಮೀಕ್ಷೆ
'ದಿ ಗ್ರ್ಯಾಂಡ್ ವುಮೆನ್ & ವರ್ಕ್‌ಪ್ಲೇಸ್ ರಿಪೋರ್ಟ್ʼ ಎಂಬ ಸಮೀಕ್ಷೆಯನ್ನು ಕಲಿಕೆ, ಕೌಶಲ್ಯ ಮತ್ತು ಉದ್ಯೋಗಿಗಳ ಅಭಿವೃದ್ಧಿ ಕಂಪನಿ ಅಪ್‌ಗ್ರ್ಯಾಡ್‌ನ ಭಾಗವಾಗಿ ಹರಪ್ಪಾ ಎಂಬ ಸಂಸ್ಥೆ ವರದಿ ತಯಾರಿಸಿದೆ. ಹರಪ್ಪಾ 225ಕ್ಕಿಂತ ಹೆಚ್ಚಿನ ಕಾರ್ಪೊರೇಟ್ ಮತ್ತು ಕ್ಯಾಂಪಸ್ ಕ್ಲೈಂಟ್‌ಗಳೊಂದಿಗೆ ವ್ಯವಹರಿಸಿ ಈ ಸಮೀಕ್ಷೆ ನಡೆಸಿದೆ.
ಏನು ಹೇಳಿದೆ ಹೊಸ ಸಮೀಕ್ಷೆ?
ಸಮೀಕ್ಷೆಯಲ್ಲಿ ಬಂದ ಉತ್ತರಗಳನ್ನು ಆಧರಿಸಿ ನೋಡುವುದಾದರೆ ಮಹಿಳಾ ಉದ್ಯೋಗಿಗಳು ವೃತ್ತಿಜೀವನದ ಬೆಳವಣಿಗೆ ಮತ್ತು ವೇತನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದು ತಿಳಿದು ಬಂದಿದೆ. ಸಮೀಕ್ಷೆಯಲ್ಲಿ ಕೆಲಸದ ವಿಚಾರವಾಗಿ ಪ್ರತಿಕ್ರಿಯಿಸಿದ 82% ಮಂದಿ ಹೆಚ್ಚಿನ ಮೌಲ್ಯಯುತ ವೃತ್ತಿಜೀವನದ ಬೆಳವಣಿಗೆಗೆ ಆದ್ಯತೆ ನೀಡಿದರೆ, 78% ಜನ ಹೆಚ್ಚಿನ ವೇತನಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ.
ಮಹಿಳೆಯರು ಕುಟುಂಬ, ಮಕ್ಕಳನ್ನು ನಿರ್ವಹಿಸುವುದರ ಜೊತೆ ಕೆಲಸ ಮಾಡುವುದರಿಂದ ಅವರಿಗೆ ಅನುಕೂಲಕರ ಕೆಲಸದ ವಾತಾವರಣ ಬಯಸುತ್ತಾರೆ ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ವೇತನಕ್ಕೆ ಮತ್ತು ಒಳ್ಳೆಯ ಕೆರಿಯರ್ ಬಗ್ಗೆ ಆದ್ಯತೆ ವ್ಯಕ್ತಪಡಿಸಿದ್ದಾರೆ.
ಹೊಂದಿಕೊಳ್ಳುವ ಕೆಲಸದ ಪ್ರವೃತ್ತಿ ಬಗ್ಗೆ ಪ್ರತಿಕ್ರಿಯೆ ಹೇಗಿದೆ?
ಸಮೀಕ್ಷೆಗೆ ಒಳಗಾದ ಮಹಿಳೆಯರಲ್ಲಿ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಜನರು ಹೊಂದಿಕೊಳ್ಳುವ ಕೆಲಸದ ಆಯ್ಕೆಗಳನ್ನು ಮತ್ತು ಕೆಲಸ-ಜೀವನ-ಸಮತೋಲನವನ್ನು ಪ್ರಮುಖ ವಿಷಯಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ; Career Tips: ವೃತ್ತಿ ಜೀವನದ ಭವಿಷ್ಯಕ್ಕೆ ತುಂಬಾ ಮುಖ್ಯ ನೆಟ್‌ವರ್ಕಿಂಗ್; ಇದನ್ನು ಬೆಳೆಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಸಮೀಕ್ಷೆಯ ಇತರೆ ಫಲಿತಾಂಶಗಳು
ಸಮೀಕ್ಷೆಯಲ್ಲಿ ವೃತ್ತಿಜೀವನದಿಂದ ವಿರಾಮಗಳನ್ನು ತೆಗೆದುಕೊಳ್ಳುವ ಹೆಚ್ಚಿನ ಮಹಿಳೆಯರು (58%) ತಾಯ್ತನದ ಉದ್ದೇಶಕ್ಕಾಗಿ ತೆಗೆದುಕೊಳ್ಳುತ್ತಾರೆ. ಪುರುಷರು ತಮ್ಮ ಶಿಕ್ಷಣವನ್ನು ಮುಂದುವರಿಸಲು ವೃತ್ತಿಪರ ಅನ್ವೇಷಣೆಗಳನ್ನು ವಿರಾಮಗೊಳಿಸುತ್ತಾರೆ (48%) ಎಂದು ಸಮೀಕ್ಷೆಯು ಕಂಡುಕೊಳ್ಳುತ್ತದೆ. ಮಹಿಳೆಯರು ತಮ್ಮ ವೃತ್ತಿಜೀವನದ ಜೊತೆಜೊತೆಯೇ ಪ್ರತಿದಿನ 2.5 ಪಟ್ಟು ಹೆಚ್ಚು ಸಮಯವನ್ನು ಮನೆಯ ಜವಾಬ್ದಾರಿಗಳೊಂದಿಗೆ ಕಳೆಯುತ್ತಾರೆ ಎಂದು ಹೇಳಿದೆ.
ಮಹಿಳೆಯರ ಮಹತ್ವಾಕಾಂಕ್ಷೆಗಳು, ವೃತ್ತಿ ಹಸ್ತಕ್ಷೇಪಗಳು ಮತ್ತು ವೃತ್ತಿಪರ ವಾಸ್ತವತೆಗಳ ಮೇಲೆ ಅಧ್ಯಯನ ನಡೆದಿದೆ. ಅಧ್ಯಯನದ ಮೂಲಕ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಹಲವಾರು ನಿರ್ಣಾಯಕ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ.
"ಮಹಿಳೆಯರು ಕೆಲಸದ ಸ್ಥಳದಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡಲು, ಉತ್ತಮ ಒಳಗೊಳ್ಳುವಿಕೆಗಾಗಿ ಕಾರ್ಯಕ್ರಮಗಳನ್ನು ರೂಪಿಸಲು ಸಂಸ್ಥೆಗಳು ಅಂತರವನ್ನು ಕಡಿಮೆ ಮಾಡಬೇಕಾಗಿದೆ" ಎಂದು ಹರಪ್ಪಾದ ಸಹ-ಸಂಸ್ಥಾಪಕ ಶ್ರೇಯಸಿ ಸಿಂಗ್ ಹೇಳಿದರು.
"ಲಿಂಗ ಅಸಮತೋಲನವನ್ನು ಕಂಪನಿಗಳೇ ಸರಿಮಾಡಬೇಕು"
ಕೆಲಸದ ಸ್ಥಳಗಳಲ್ಲಿ ಲಿಂಗ ಅಸಮತೋಲನವನ್ನು ಪೂರ್ವಭಾವಿಯಾಗಿ ಸರಿಪಡಿಸಲು ಸಂಸ್ಥೆಗಳಲ್ಲಿ ಪುರುಷ ನಾಯಕರಿಂದ ಹೆಚ್ಚಿನ ಬದ್ಧತೆಯ ಅಗತ್ಯವಿದೆ ಎಂದು ಹರಪ್ಪಾ ಸಹ ಸಂಸ್ಥಾಪಕ ಪ್ರಮತ್ ರಾಜ್ ಸಿನ್ಹಾ ಹೇಳಿದರು.
CXO ಮತ್ತು CXO-1 ಹಂತಗಳಲ್ಲಿ ವೇತನದ ಅಂತರವಿದೆಯೇ ಎಂದು ಪರಿಶೀಲಿಸುವ ಜವಾಬ್ದಾರಿ ಸಂಸ್ಥೆಗಳ ಮೇಲಿದೆ ಮತ್ತು ಎಷ್ಟು ಮಹಿಳಾ ವ್ಯವಸ್ಥಾಪಕರು P&L ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಸಿನ್ಹಾ ಹೇಳಿದರು. ಸೇವಾವಧಿಯಲ್ಲಿ 10 ಮಹಿಳಾ ಉದ್ಯೋಗಿಗಳಲ್ಲಿ ಐವರು 3-6 ತಿಂಗಳುಗಳಲ್ಲಿ ತಮ್ಮ ಪ್ರಸ್ತುತ ಪಾತ್ರಗಳನ್ನು ತ್ಯಜಿಸಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ