• Home
  • »
  • News
  • »
  • jobs
  • »
  • Success Story: ಸೋತವರೇ ಮುಂದೆ ಜೀವನದಲ್ಲಿ ಗೆಲ್ಲೋದು ಅನ್ನೋದಕ್ಕೆ ಈಕೆಯೇ ಸಾಕ್ಷಿ, ವಿಡಿಯೋ ನೋಡಿ

Success Story: ಸೋತವರೇ ಮುಂದೆ ಜೀವನದಲ್ಲಿ ಗೆಲ್ಲೋದು ಅನ್ನೋದಕ್ಕೆ ಈಕೆಯೇ ಸಾಕ್ಷಿ, ವಿಡಿಯೋ ನೋಡಿ

ಡೊಮಿನಿಕ್ ಸಿಂಥಿಯ

ಡೊಮಿನಿಕ್ ಸಿಂಥಿಯ

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಬಂದ ಪತ್ರವನ್ನು ತೆರೆದಾಗ ಕಾಲೇಜು ಆಕೆಗೆ ಪ್ರವೇಶ ನೀಡಿರುತ್ತದೆ. ಆಗ ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗುತ್ತೆ. 

  • Share this:

ಕೆಲವೊಮ್ಮೆ ನಾವು ನಮಗೆ ಬೇಕಾದ ಕಾಲೇಜು (College) ಸಿಗಲಿಲ್ಲ ಅಂತ ತುಂಬಾನೇ ಹತಾಶರಾಗಿರುತ್ತೇವೆ. ಜೀವನವೇ ಮುಗೀತು ಅನ್ನೋ ರೀತಿಯಲ್ಲಿ ನೋವು (Pain) ಅನುಭವಿಸುತ್ತಿರುತ್ತೇವೆ. ಆದರೆ ಮುಂದೆ ಹೋದಂತೆ ಆ ತಪ್ಪಿ ಹೋದ ಅವಕಾಶ ನಮಗೆ ಎಂತಹ ಬೇರೆ ರೀತಿಯ ಜೀವನದ (Life) ದಾರಿಗಳನ್ನು ಹುಡುಕಿಸಿ ಕೊಟ್ಟಿದೆ ಅಂತ ಅನೇಕ ವರ್ಷಗಳ (Year) ಬಳಿಕ ನಮಗೆ ಅರ್ಥವಾಗುತ್ತದೆ. ಅದಕ್ಕೆ ಹೇಳೋದು ಕಣ್ರೀ. ಸಿಕ್ಕಿದ್ದು ನಮಗಾಗಿಯೇ ಇದ್ದದ್ದು, ಕೈ ತಪ್ಪಿದ್ದು ನಮ್ಮದಲ್ಲವೇ ಅಲ್ಲ ಅಂತ.


ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ಈ ಮಹಿಳೆಯ ಕಥೆ ಅನೇಕರಿಗೆ ಸ್ಪೂರ್ತಿಯಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಾವು ಅಂದುಕೊಂಡ ಕಾಲೇಜಿನಲ್ಲಿ ಪ್ರವೇಶ ಸಿಗುವುದು ಕೆಲವೊಮ್ಮೆ ಕಷ್ಟಕರವಾಗಿರುತ್ತದೆ. ವಿಶ್ವಾದ್ಯಂತ ವಿದ್ಯಾರ್ಥಿಗಳು ತಮ್ಮ ಕನಸಿನ ಕಾಲೇಜುಗಳು ಮತ್ತು ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿದರೆ ಕೆಲವರಿಗೆ ಅದು ಸಲೀಸಾಗಿ ಸಿಕ್ಕರೆ, ಇನ್ನೂ ಕೆಲವರಿಗೆ ಅದು ಕನಸಾಗಿಯೇ ಉಳಿದು ಬಿಡುತ್ತದೆ.


ಸ್ಪೂರ್ತಿ ನೀಡುವ ಈ ವೀಡಿಯೋದಲ್ಲಿ ಏನಿದೆ ಗೊತ್ತೇ?


ಇನ್‌ಸ್ಟಾಗ್ರಾಮ್ ಬ್ಲಾಗರ್ ಡೊಮಿನಿಕ್ ಸಿಂಥಿಯ ಎಂಬ ಹೆಸರಿನ ಬಳಕೆದಾರರು ಇತ್ತೀಚೆಗೆ ತಮ್ಮ ಹಳೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಕಾಲೇಜು ಸ್ವೀಕಾರ ಪತ್ರಗಳನ್ನು ಪರಿಶೀಲಿಸುವುದನ್ನು ನೋಡಬಹುದು. ಆಕೆ ಕುಟುಂಬವನ್ನು ಸಹ ವಿಡಿಯೋದಲ್ಲಿ ನೋಡಬಹುದು. ವಿಡಿಯೋವು ಅವಳ ಆರಂಭಿಕ ಕಾಲೇಜು ಪ್ರವೇಶ ಪತ್ರಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ಮೊದಲಿಗೆ, ಅವರು ಬ್ರೌನ್ ವಿಶ್ವವಿದ್ಯಾಲಯದಿಂದ, ನಂತರ ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯದಿಂದ ಪ್ರವೇಶ ಸಿಕ್ಕಿಲ್ಲ ಅನ್ನೋ ಮಾಹಿತಿಯನ್ನು ಪಡೆಯುತ್ತಾರೆ.
ಅವಳು ಫಲಿತಾಂಶವನ್ನು ನೋಡುತ್ತಿದ್ದಂತೆ ಅಳಲು ಪ್ರಾರಂಭಿಸುತ್ತಾಳೆ. ಕೊನೆಯದಾಗಿ ಅವಳು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಬಂದ ಪತ್ರವನ್ನು ತೆರೆದಾಗ ಕಾಲೇಜು ಆಕೆಗೆ ಪ್ರವೇಶ ನೀಡಿರುತ್ತದೆ. ಆಗ ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗುತ್ತೆ. 


ಏನ್ ಹೇಳ್ತಾರೆ ನೋಡಿ ಆ ಮಹಿಳೆ ತಮ್ಮ ಕಾಲೇಜಿನ ಬಗ್ಗೆ..


ತನ್ನ ಯೂಟ್ಯೂಬ್ ವಿಡಿಯೋದಲ್ಲಿ ಅವರು "ನಾನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ನಿಂದ ಅರ್ಥಶಾಸ್ತ್ರದಲ್ಲಿ ಬಿ.ಎಸ್ ಪದವಿ,  ಮನರಂಜನೆ ಮತ್ತು ಮಾಧ್ಯಮ ನಿರ್ವಹಣೆಯಲ್ಲಿ ಕೋರ್ಸ್ ಅನ್ನು ಸಹ ಮುಗಿಸಿದ್ದೇನೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿ ಎಂದಿಗೂ ಊಹಿಸಲಾಗದ ರೀತಿಯಲ್ಲಿ ನಾನು ಬೆಳೆದಿದ್ದೇನೆ. ಈ ಬೆಳವಣಿಗೆಯು ಸ್ವಂತ ಕಂಪನಿಯನ್ನು (ಡಿಸಿ ಎಂಟರ್ಟೈನ್ಮೆಂಟ್) ಪ್ರಾರಂಭಿಸಲು ನನಗೆ ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ. 


ಇದನ್ನೂ ಓದಿ: UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ IAS ಅಧಿಕಾರಿ ಆದ ಸರ್ಜನಾ ಯಾದವ್


ಹಲವಾರು ಕಾಮೆಂಟ್ ಗಳನ್ನ ಪಡೆದಿದೆ ಈ ವೀಡಿಯೋ


ಈ ವೀಡಿಯೋವನ್ನು ಜನವರಿ 11 ರಂದು ಹಂಚಿಕೊಳ್ಳಲಾಗಿದ್ದು, ಅಪ್ಲೋಡ್ ಮಾಡಿದಾಗಿನಿಂದ  ನೂರಾರು ಮಂದಿ ಲೈಕ್​ ಮಾಡಿದ್ದಾರೆ. ಕಮೆಂಟ್​ ಮೂಲಕ ಆಕೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಯೂಟ್ಯೂಬ್ ಕಾಮೆಂಟ್ ಗಳಲ್ಲಿ ಒಬ್ಬ ವ್ಯಕ್ತಿ "ನೀವು ಯಾವ ಶಾಲೆಗೆ ಅಥವಾ ಕಾಲೇಜಿಗೆ ಹೋಗುತ್ತಿದ್ದೀರಿ ಎಂಬುದು ಮುಖ್ಯವಲ್ಲ, ನೀವು ಏನು ಬೇಕಾದರೂ ಸಾಧಿಸಬಹುದು ಅಂತ ನಿಮ್ಮನ್ನು ನೀವು ಎಷ್ಟು ನಂಬಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ” ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ "ನೀವು ಸಾಧಿಸಿ ತೋರಿಸಿದ್ದೀರಿ! ತುಂಬಾ ಹೆಮ್ಮೆ ಆಗುತ್ತಿದೆ. ಯುವ ಪೀಳಿಗೆಗೆ ನಿಮ್ಮ ಯಶಸ್ಸು ಸ್ಪೂರ್ತಿ ಆಗಲಿ' ಎಂದು ಬರೆದಿದ್ದಾರೆ.

Published by:Kavya V
First published: