ಸಾಂಕ್ರಾಮಿಕ ಕೋವಿಡ್ (Covid) ಹೊರತಾಗಿಯೂ ಕಾರ್ಪೊರೇಟ್ (Corporate) ವ್ಯವಹಾರಗಳಲ್ಲಿ ಅತಿಹೆಚ್ಚಿನ ಬೆಳವಣಿಗಳಾಗಿವೆ. ಇತ್ತೀಚಿಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿದ ವರದಿಯ ಇಂಥದ್ದೊಂದು ಆಶ್ಚರ್ಯಕರ ಅಂಕಿಅಂಶಗಳನ್ನು ಹಂಚಿಕೊಂಡಿದೆ. ಆರ್ಥಿಕ ವರ್ಷ 2022ರಲ್ಲಿ ಇಲ್ಲಿ 167,076 ಕಂಪನಿಗಳನ್ನು ಸ್ಥಾಪಿಸಲಾಗಿದ್ದು, ಇದು ಹಿಂದಿನ ವರ್ಷದಲ್ಲಿ ರಚಿಸಲಾದ 155,377 ಕಂಪನಿಗಳಿಗಿಂತ ಶೇ.7.5 ರಷ್ಟು ಹೆಚ್ಚು ಎಂಬುದಾಗಿ ವರದಿ ತಿಳಿಸಿದೆ. ಈ ಬೆಳವಣಿಗೆಯಿಂದ ಕಾರ್ಪೊರೇಟ್ ಕ್ಷೇತ್ರಗಳಾದ್ಯಂತ ನೇಮಕಾತಿಗಳು (Recruitment) ಹೆಚ್ಚಾಗುತ್ತವೆ.
ವೃತ್ತಿಪರ ಸೇವೆಗಳು ಮತ್ತು ಸ್ಟ್ರಾಟಜಿಕ್ ಕಂಪನಿಗಳು ಜೊತೆಗೆ ಭಾರತದಲ್ಲಿನ ಪ್ರಮುಖ ಕಾನೂನು ಸಂಸ್ಥೆಗಳು ಸಾಂಕ್ರಾಮಿಕ ರೋಗದ ನಂತರ ನೇಮಕಾತಿ ಹೆಚ್ಚು ಮಾಡಿವೆ. ಭಾರತದ ಉದ್ಯಮಶೀಲತೆಯ ಅಭಿವೃದ್ಧಿ ಮತ್ತು ನಮ್ಮ ಆರ್ಥಿಕ, ವ್ಯಾಪಾರದ ಬೆಳವಣಿಗೆಯಿಂದಾಗಿ ಈ ಶತಮಾನವನ್ನು ಭಾರತದ ಶತಮಾನ ಅಂತಲೇ ಹೇಳಲಾಗುತ್ತದೆ. ಇನ್ನು ಇಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಈ ಕೆಳಗಿನ ಕಾರಣಗಳಿಗಾಗಿ ವಿದ್ಯಾರ್ಥಿಗಳು ಕಾರ್ಪೊರೇಟ್ ಕಾನೂನಿನಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದು.
1.ಭಾರತದಲ್ಲಿ ಗರಿಷ್ಠ ವಿಲೀನ ಮತ್ತು ಸ್ವಾಧೀನ ಚಟುವಟಿಕೆ: ಜನವರಿ-ಸೆಪ್ಟೆಂಬರ್ 2022 ರ ಅವಧಿಯಲ್ಲಿ ಭಾರತದಲ್ಲಿ ವಿಲೀನ ಮತ್ತು ಸ್ವಾಧೀನ (M&A) ಚಟುವಟಿಕೆಯು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು. ಈ ವಾಣಿಜ್ಯ ಚಟುವಟಿಕೆಗಳಲ್ಲಿ ವಕೀಲರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆದ್ದರಿಂದ, ಬೆಳೆಯುತ್ತಿರುವ ವಿಲೀನಗಳು ಮತ್ತು ಸ್ವಾಧೀನಗಳೊಂದಿಗೆ, ಕಂಪನಿಗಳಿಗೆ ವಿಶೇಷ ಸೇವೆಗಳನ್ನು ಒದಗಿಸಲು ಕಾರ್ಪೊರೇಟ್ ವಕೀಲರ ಹೆಚ್ಚಳವನ್ನು ನಾವು ನೋಡಬಹುದು.
2.ಹೆಚ್ಚುತ್ತಿರುವ ಉದ್ಯಮಶೀಲತೆ : ಭಾರತದಲ್ಲಿ ಹೊಸದಾಗಿ ಗುರುತಿಸಲ್ಪಟ್ಟ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು 2016-17 ರಲ್ಲಿ ಕೇವಲ 733 ರಷ್ಟು ಇದ್ದಿದ್ದು 2021-22ರಲ್ಲಿ 14,000 ಕ್ಕೂ ಹೆಚ್ಚಿದೆ ಎಂಬುದಾಗಿ ಭಾರತ ಆರ್ಥಿಕ ಸಮೀಕ್ಷೆ 2021-22 ಹೇಳಿದೆ. ಭಾರತವು ಯುಎಸ್ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ವ್ಯವಸ್ಥೆಯಾಗಿದೆ. ಈ ಬೆಳವಣಿಗೆಯು ಸ್ಟಾರ್ಟ್-ಅಪ್‌ಗಳನ್ನು ಪೂರೈಸುವಲ್ಲಿ ಪರಿಣತಿ ಹೊಂದಿರುವ ವಕೀಲರ ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Career In Psychology: ಸೈಕಾಲಜಿ ಪದವೀಧರರಿಗೆ ಭರ್ಜರಿ ಅವಕಾಶ, ಈ 7 ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಳ್ಳಬಹುದು
3. ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್: ವ್ಯವಹಾರದಲ್ಲಿ ಆಗುವಂಥ ಮಹತ್ವದ ಬೆಳವಣಿಗೆಗಳಲ್ಲಿ ಒಪ್ಪಂದಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಒಪ್ಪಂದಗಳು ಎರಡೂ ಕಂಪನಿಗಳಿಗೆ ಸಂಬಂಧಪಟ್ಟಿದ್ದು ಅದರಂತೆ ನಡೆದುಕೊಳ್ಳುವುದು ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವುದು ನಿರ್ಣಾಯಕವಾಗಿದೆ. ಗುತ್ತಿಗೆ ನಿರ್ವಹಣೆ, ಗುತ್ತಿಗೆ-ಡ್ರಾಫ್ಟಿಂಗ್, ಸಮಾಲೋಚನೆ, ಅನುಮೋದನೆಗಳು, ಅನುಷ್ಠಾನ, ಕಾರ್ಯಗತಗೊಳಿಸುವಿಕೆ ಮತ್ತು ನವೀಕರಣ ಮುಂತಾದ ಕೆಲಸಗಳಿಗೆ ಕಾನೂನು ಸಂಸ್ಥೆ ಹಾಗೂ ವಕೀಲರು ಸಹಾಯ ಮಾಡುತ್ತಾರೆ.
4. ಭಾರತದಲ್ಲಿ ಖಾಸಗಿ ಷೇರುಗಳ ಬೆಳವಣಿಗೆ: 2011-2020ರ ಸಮಯವು ಭಾರತೀಯ ಪ್ರೈವೇಟ್ ಇಕ್ವಿಟಿ/ವೆಂಚರ್ ಕ್ಯಾಪಿಟಲ್ (PE/VC) ಉದ್ಯಮಕ್ಕೆ ಒಂದು ಪ್ರಮುಖ ಕಾಲಘಟ್ಟವಾಗಿದೆ. ಖಾಸಗಿ ಇಕ್ವಿಟಿ ವಕೀಲರು ಖಾಸಗಿ ಕಂಪನಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ನಿಧಿಗಳು ಮತ್ತು ಹೂಡಿಕೆದಾರರಿಗೆ ಸಹಾಯ ಮಾಡುತ್ತಾರೆ. ಖಾಸಗಿ ಇಕ್ವಿಟಿ ವಕೀಲರು ಘಟಕಗಳ ಸಂಯೋಜನೆ, ಅದರ ರಚನೆ ಮತ್ತು ರಚನೆ, ತೆರಿಗೆ, ಆಡಿಟ್, ಅನುಸರಣೆ ಮತ್ತು ನಿಯಮಗಳ ಕುರಿತು ಸಲಹೆ ನೀಡುತ್ತಾರೆ.
5. ಕಾರ್ಪೊರೇಟ್ ಅಪರಾಧಗಳು: ಕಾರ್ಪೊರೇಟ್ ಅಪರಾಧ ಮತ್ತು ವಂಚನೆ, ಬೆದರಿಕೆಯನ್ನು ನಿರ್ವಹಿಸಲು ವಕೀಲರು ಮತ್ತು ಪೂರ್ಣ-ಪ್ರಮಾಣದ ಕಾನೂನು ಸಂಸ್ಥೆಗಳನ್ನು ಹೊಂದಿರುವುದು ಅಗತ್ಯವಾಗಿದೆ. ದೃಢವಾದ ಇಲಾಖೆಗಳೊಂದಿಗೆ ವೈಟ್ ಕಾಲರ್ ಅಪರಾಧ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವವರು ಇದಕ್ಕೆ ಅಗತ್ಯವಾಗಿರುತ್ತಾರೆ. ಈ ತಂಡಗಳು ವಂಚನೆ, ಲಂಚ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತನಿಖೆಗಳನ್ನು ನಡೆಸುತ್ತವೆ.
ಕಾರ್ಪೊರೇಟ್ ಕಾನೂನಿನ ಕ್ಷೇತ್ರದಲ್ಲಿ ವಕೀಲರಿಗೆ ಇರುವಂಥ ಹಲವಾರು ಅವಕಾಶಗಳಲ್ಲಿ ಇವು ಕೆಲವು ಐದು ಮಾತ್ರ. ಹೊಸ ಕಾನೂನು ಪದವೀಧರರಿಗೆ ಕಾರ್ಪೊರೇಟ್ ಕಾನೂನು ಕ್ಷೇತ್ರದಲ್ಲಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ. ಇದಕ್ಕಾಗಿ ಅವರು ಅವಕಾಶಗಳಿಗೆ ಮುಕ್ತರಾಗಿರಬೇಕಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ