ಯಾವುದೇ ಪರೀಕ್ಷೆಗಳ ಫಲಿತಾಂಶ (Exam Result) ಪ್ರಕಟವಾಗಲಿ, ಹುಡುಗಿಯರೇ ಮೇಲುಗೈ ಅನ್ನೋದನ್ನು ಕಾಣಬಹುದು. ಓದಿನಲ್ಲಿ ಹುಡುಗರಿಗಿಂತ ಹುಡುಗಿಯರೇ ಮುಂದೆ ಇರುತ್ತಾರೆ. ಕಾಲೇಜು ಶಿಕ್ಷಣದಲ್ಲೂ (Education) ಯುವತಿಯರ ಶೈಕ್ಷಣಿಕ ಸಾಧನೆ ಹೆಚ್ಚಿರುತ್ತದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಯುವತಿಯರು ಹಿಂದೆ ಉಳಿಯುತ್ತಾರೆ, ಏಕೆ?
ಹೌದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮಾನವಾಗಿ ವಿದ್ಯಾರ್ಥಿನಿಯರ ಸಂಖ್ಯೆ ಇರುತ್ತೆ. ಓದಿನಲ್ಲೂ ಮುಂದೆ ಇರುತ್ತಾರೆ. ಆದರೆ ಕರಿಯರ್ (Career) ವಿಷಯಕ್ಕೆ ಬಂದರೆ ಹೆಣ್ಮಕ್ಕಳು ಹಿಂದೆಯೇ ಉಳಿದು ಬಿಡುತ್ತಾರೆ. ಪದವಿ ಪಡೆಯುವ ಶೇ.99ರಷ್ಟು ಯುವಕರು ಉದ್ಯೋಗ (Job) ಮಾಡುತ್ತಾರೆ. ಆದರೆ ಯುವತಿಯರಿಗೆ ಮಾತ್ರ ಕೆಲಸ ಮಾಡುವುದು ಒಂದು ಆಯ್ಕೆ ಆಗಿದೆ.
ಹಣಕ್ಕಾಗಿ ಬೇರೆಯವರನ್ನು ಅವಲಂಬಿಸಬೇಡಿ
ಮನೆಯ ಕೆಟ್ಟ ಆರ್ಥಿಕ ಪರಿಸ್ಥಿತಿ ಕಾರಣದಿಂದ ಸಾಕಷ್ಟು ಯುವತಿಯರು ಉದ್ಯೋಗಗಳನ್ನು ಮಾಡುತ್ತಾರೆ. ಆದರೆ ಕೆಲವರು ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ, ತಾವು ಸಂಪಾದಿಸುವ ಅಗತ್ಯವಿಲ್ಲ ಎಂದು ಕೆಲಸ ಮಾಡಲು ಮುಂದಾಗುವುದಿಲ್ಲ.
ಪದವೀಧರ ಯುವತಿಯರು ಆರ್ಥಿಕವಾಗಿ ಚೆನ್ನಾಗಿದ್ದೇವೆ ಎಂಬ ಒಂದೇ ಕಾರಣಕ್ಕೆ ವೃತ್ತಿಜೀವನವನ್ನು ಆಯ್ದುಕೊಳ್ಳದಿರುವುದು ನಿಜಕ್ಕೂ ಸೇಫ್ ಆಯ್ಕೆ ಅಲ್ಲ. ಹೆತ್ತವರು, ಪತಿ ಎಷ್ಟೇ ಶ್ರೀಮಂತರಾಗಿದ್ದರೂ ಮಹಿಳೆಯರು ಆರ್ಥಿಕ ಸ್ವಾಲಂಬನೆಯನ್ನು ಸಾಧಿಸಬೇಕು. ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಇದನ್ನೂ ಓದಿ: Career Options for Housewives: ಹೋಮ್ ಮೇಕರ್ಸ್ ಮನೆಯಿಂದಲೇ ಮತ್ತೆ ತಮ್ಮ ಕರಿಯರ್ ಶುರು ಮಾಡಬಹುದು
ನೀವು ಪಡೆದ ಶಿಕ್ಷಣವನ್ನು ವ್ಯರ್ಥ ಮಾಡಬೇಡಿ
Financial Independence ಅನ್ನೋದು ಪ್ರತಿಯೊಬ್ಬ ಯುವತಿ-ಮಹಿಳೆಗೂ ತುಂಬಾನೇ ಮುಖ್ಯ. ಹಣದ ವಿಚಾರದಲ್ಲಿ ಕುಟುಂಬದವರನ್ನು ಅವಲಂಬಿಸುವುದು ಒಳ್ಳೆಯಲ್ಲ. ಓದಿರುವ ಯುವತಿ ಯಾವುದೇ ಉದ್ಯೋಗ ಮಾಡದೆ ಮನೆಯಲ್ಲಿರುವುದು ನಿಜಕ್ಕೂ ನಷ್ಟ.
15 ವರ್ಷಗಳ ಕಾಲ ಶಿಕ್ಷಣ ಪಡೆದು ಅದನ್ನು ಯಾವುದಕ್ಕೂ ಬಳದೆ ಇರುವುದು ನಷ್ಟವೇ ಅಲ್ಲವೇ. ಕೌಶಲ್ಯ, ಪ್ರತಿಭೆ ಹೊರಗೆ ಬರದೆ ಮನೆಯಲ್ಲೇ ಬಂಧಿಯಾಗಬಹುದು. ನಿಮ್ಮ ಕೈಯಲ್ಲಿ ನಿಮ್ಮದೇ ಹಣ ಇರುವುದು ನಿಮ್ಮನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡುತ್ತೆ.
ಜೀವನದಲ್ಲಿ ಏನು ಬೇಕಾದರೂ ಆಗಬಹುದು!
ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಯಲ್ಲಿ ಆರ್ಥಿಕ ಹೊಡೆತ ಹೆಚ್ಚು ಕಷ್ಟಕರ. ಉದ್ಯೋಗದಲ್ಲಿದ್ದ ಆ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬಹುದು. ಜೀವನ ಯಾವುದೇ ಹಂತದಲ್ಲಿ ಒಂಟಿಯಾಗಿ ಬದುಕಬೇಕಾದ ಪರಿಸ್ಥಿತಿ ಬಂದರೆ, ಆದಾಯ ಮೂಲವಿರುವುದು ಮುಖ್ಯ.ಇನ್ನು ಕುಟುಂಬಕ್ಕೆ ಸಮಯ ಕೊಡಬೇಕು, ಮಕ್ಕಳನ್ನು ಸಾಕಬೇಕು ಎಂಬುವುದು ಕಾರಣವಲ್ಲ. ಹೆರಿಗೆ ರಜೆ, ಪೋಷಕ ರಜೆಗಳ ಆಯ್ಕೆ ಇದ್ದೇ ಇರುತ್ತೆ. ಉದ್ಯೋಗಸ್ಥ ಮಹಿಳೆಯರು ಎಲ್ಲವನ್ನೂ ನಿಭಾಹಿಸಿರುವ ನಿದರ್ಶನಗಳು ನಮ್ಮ ಮುಂದೆ ಸಾಕಷ್ಟಿದೆ.
ಹಣವೊಂದೇ ಅಲ್ಲ, ಆತ್ಮತೃಪ್ತಿಯೂ ಬೇಕು
ಇನ್ನು ಮನೆಯಿಂದ ಆಚೆ ಹೋಗಿಯೇ ದುಡಿಯಬೇಕು ಅಂತೇನು ಇಲ್ಲ. ಮನೆಯಲ್ಲಿದ್ದುಕೊಂಡೇ ಮಾಡಬಹುದಾದ ಸಾಕಷ್ಟು ಉದ್ಯೋಗಗಳಿದೆ. ಸ್ವಂತ ಉದ್ಯಮವನ್ನು ಮನೆಯಿಂದಲೇ ಮಾಡಬಹುದು. ಆನ್ ಲೈನ್ ಬ್ಯುಸಿನೆಸ್ ಕೂಡ ಮಾಡಬಹುದು.
ಹಣಕ್ಕಾಗಿ ಅಲ್ಲದಿದ್ದರು ಆತ್ಮತೃಪ್ತಿಗಾಗಿ ಉದ್ಯೋಗ ಮಾಡಬೇಕು. ಇರುವುದು ಒಂದೇ ಜೀವನ ಏನನ್ನಾದರೂ ಸಾಧನೆ ಮಾಡುವುದು ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ. ಈಗ ಸಮಯ ಕೈ ಚೆಲ್ಲಿ, ವಯಸ್ಸಾದ ಮೇಲೆ ವೃತ್ತಿ ಮಾಡಬೇಕಿತ್ತು ಅಂದುಕೊಳ್ಳುವ ತಪ್ಪು ಮಾಡಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ