• ಹೋಂ
  • »
  • ನ್ಯೂಸ್
  • »
  • Jobs
  • »
  • Cyber Security: ಸದಾ ಬೇಡಿಕೆಯಲ್ಲಿರುವ ವೃತ್ತಿ ಇದು; ಸೈಬರ್ ಸೆಕ್ಯೂರಿಟಿ ಆಯ್ಕೆಗೆ ಇವೆ 5 ಕಾರಣಗಳು

Cyber Security: ಸದಾ ಬೇಡಿಕೆಯಲ್ಲಿರುವ ವೃತ್ತಿ ಇದು; ಸೈಬರ್ ಸೆಕ್ಯೂರಿಟಿ ಆಯ್ಕೆಗೆ ಇವೆ 5 ಕಾರಣಗಳು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇಂಟರ್ನೆಟ್ ಮತ್ತು ಸೈಬರ್ ಇಂಟೆಲ್ ಬಳಕೆಯ ಪ್ರಕರಣಗಳು ಭವಿಷ್ಯದಲ್ಲಿ ಹೆಚ್ಚಾಗುತ್ತಲೇ ಹೋಗುವುದರಿಂದ ವೃತ್ತಿಜೀವನ ಸುರಕ್ಷಿತವಾಗಿರಲಿದೆ.

  • Trending Desk
  • 3-MIN READ
  • Last Updated :
  • Share this:

    ಈಗಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳು ಇಂಟರ್ನೆಟ್ ನಲ್ಲಿಯೇ (Internet)  ನಡೆಯುತ್ತಿರುವುದರಿಂದ ಈ ಡೇಟಾ (Data) ಎಂದರೆ ಮಾಹಿತಿಯನ್ನು (Information) ಯಾರು ಕದಿಯದಂತೆ ನೋಡಿಕೊಳ್ಳಲು ಮತ್ತು ನಮ್ಮ ಕಂಪ್ಯೂಟರ್ ನಲ್ಲಿರುವ ಮಾಹಿತಿ ಸೋರಿಕೆಯಾಗದಂತೆ ತಡೆಗಟ್ಟಲು ಈ ಸೈಬರ್ ಸೆಕ್ಯೂರಿಟಿ (Cyber Security)  ವೃತ್ತಿಪರರು ತುಂಬಾನೇ ಅವಶ್ಯಕವಾಗಿದ್ದಾರೆ ಅಂತ ಹೇಳಬಹುದು. ಅದರಲ್ಲೂ ಈ ಡೇಟಾ, ತಂತ್ರಜ್ಞಾನ, ಡಿಜಿಟಲೀಕರಣ ಮತ್ತು ಡೇಟಾ ಸೇರ್ಪಡೆಯ ವಿಷಯದಲ್ಲಿ ಭಾರತವು ಇಡೀ ಜಗತ್ತಿನಲ್ಲಿಯೇ ಉನ್ನತವಾದ ಸ್ಥಾನದಲ್ಲಿದೆ.


    ಹಾಗಾಗಿ ಇದನ್ನೆಲ್ಲಾ ಜೋಪಾನ ಮಾಡಿಕೊಳ್ಳಲು ಸೈಬರ್ ಸೆಕ್ಯೂರಿಟಿ ವೃತ್ತಿಪರರು ಬಹುತೇಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಬೇಕಾಗಿದ್ದಾರೆ ಅಂತ ಹೇಳಬಹುದು. ಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳು, ಜಾಗತಿಕ ಯುನಿಕಾರ್ನ್ ಗಳಾಗಲು ಅನುಕೂಲಕರ ವ್ಯಾಪಾರ ವಾತಾವರಣವನ್ನು ಬೆಳೆಸಲು ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಪ್ರಮುಖ ಕಾರ್ಯಕ್ರಮಗಳ ಮೂಲಕ ತಂತ್ರಜ್ಞಾನ ಆಧಾರಿತ ಉಪಕ್ರಮಗಳನ್ನು ಚಾಲನೆ ಮಾಡುವಲ್ಲಿ ಸರ್ಕಾರ ಮುಂಚೂಣಿಯಲ್ಲಿದೆ.


    ಸೈಬರ್​ ದಾಳಿಗಳು ಹೆಚ್ಚಾಗುತ್ತಿವೆ 


    ಆದಾಗ್ಯೂ, ದೇಶವು ಈಗ ಸೈಬರ್ ಬೆದರಿಕೆಗಳನ್ನು ಸಹ ಎದುರಿಸುತ್ತಿದೆ ಎಂದು ಭಾರತೀಯ ಅಧಿಕಾರಿಗಳು ಒಪ್ಪುತ್ತಾರೆ. ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ವಾಚ್ಡಾಗ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಐಎನ್) ಹಿಂದಿನ ವರ್ಷಕ್ಕೆ ಹೋಲಿಸಿದರೆ ನಿರ್ಣಾಯಕ ಮೂಲಸೌಕರ್ಯ ಸೇರಿದಂತೆ ರಾನ್ಸಮ್ವೇರ್ ದಾಳಿಗಳ ಸಂಖ್ಯೆಯಲ್ಲಿ 51 ಪ್ರತಿಶತದಷ್ಟು ಹೆಚ್ಚಳವನ್ನು ಗಮನಿಸಿದೆ.


    ಪ್ರಾತಿನಿಧಿಕ ಚಿತ್ರ


    ಆದ್ದರಿಂದ, ಭಾರತೀಯ ಸೈಬರ್ ಸೆಕ್ಯೂರಿಟಿಯ ಕೆಲಸಗಳಲ್ಲಿ ಯುವ ಪ್ರತಿಭೆಗಳನ್ನು ಪರಿಚಯಿಸಲು ಮತ್ತು ಆ ನಿರ್ದಿಷ್ಟ ಕ್ಷೇತ್ರದಲ್ಲಿ ಅದರ ಜಾಗತಿಕ ನಿಲುವನ್ನು ಬಲಪಡಿಸಲು ಸೈಬರ್ ಸುರಕ್ಷತೆಯನ್ನು ವೃತ್ತಿ ಆಯ್ಕೆಯಾಗಿ ಆಯ್ಕೆ ಮಾಡಲು ಭಾರತೀಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಇದು ಉತ್ತಮ ಸಮಯವಾಗಿದೆ.


    ಸೈಬರ್ ಸೆಕ್ಯೂರಿಟಿಯನ್ನು ವೃತ್ತಿಯಾಗಿ ಏಕೆ ಆಯ್ಕೆ ಮಾಡಿಕೊಳ್ಳಬೇಕು ಅಂತ ತಿಳಿಯಲು ಇಲ್ಲಿವೆ 5 ಕಾರಣಗಳು:


    1. ಶಾಶ್ವತವಾಗಿ ಬೇಡಿಕೆಯಲ್ಲಿರುವ ವೃತ್ತಿ


    ಸೈಬರ್ ಭದ್ರತೆಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ವಿದ್ಯಾರ್ಥಿಗಳು ಏಕೆ ಪರಿಗಣಿಸಬೇಕು ಎಂಬುದಕ್ಕೆ ಒಂದು ಪ್ರಾಥಮಿಕ ಕಾರಣವೆಂದರೆ, ಇಂದು ಪ್ರಪಂಚದಾದ್ಯಂತ ಬ್ಯಾಂಕಿಂಗ್ ನಿಂದ ಸರ್ಕಾರದವರೆಗೆ ಎಲ್ಲಾ ಕಚೇರಿಗಳಲ್ಲಿಯೂ ಇಂಟರ್ನೆಟ್ ಬಳಕೆಯಾಗುತ್ತಿದೆ.


    ಇಷ್ಟೇ ಅಲ್ಲದೆ ಇಂಟರ್ನೆಟ್ ಮತ್ತು ಸೈಬರ್ ಇಂಟೆಲ್ ಬಳಕೆಯ ಪ್ರಕರಣಗಳು ಭವಿಷ್ಯದಲ್ಲಿ ಹೆಚ್ಚಾಗುತ್ತಲೇ ಹೋಗುವುದಲ್ಲದೆ ವೃತ್ತಿಜೀವನದ ದೃಷ್ಟಿಯಿಂದ ಸುರಕ್ಷಿತವಾಗಿದೆ. ಸೈಬರ್ ಭದ್ರತೆಯಲ್ಲಿ ಮಾನವ ಸಂಪನ್ಮೂಲದ ಅಗತ್ಯವನ್ನು ಹೆಚ್ಚಿಸುತ್ತದೆ.


    ಇದನ್ನೂ ಓದಿ: Corporate Law: ಕಾನೂನು ಕ್ಷೇತ್ರದಲ್ಲಿ ಕಾರ್ಪೊರೇಟ್ ಲಾ ವೃತ್ತಿ ಆಯ್ಕೆ ಬೆಸ್ಟ್; 5 ಕಾರಣಗಳು ಇಲ್ಲಿವೆ


    2. ಆಟೋಮೇಷನ್ ಮತ್ತು ಎಐ ನಲ್ಲಿದೆ ಸುರಕ್ಷಿತ ಭವಿಷ್ಯ


    ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಯಾಂತ್ರೀಕೃತಗೊಳಿಸುವಿಕೆಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪ್ರಗತಿಯು ವಿವಿಧ ವಲಯಗಳಿಂದ ಮಾನವ ಕಾರ್ಮಿಕ ಶಕ್ತಿಯನ್ನು ನಿರ್ಮೂಲನೆ ಮಾಡಲು ಹೇಗೆ ಕಾರಣವಾಗುತ್ತಿದೆ ಎಂಬುದರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ.


    ಆದಾಗ್ಯೂ, ಈ ಬೆದರಿಕೆಯು ಸೈಬರ್ ಭದ್ರತೆಯ ಡೊಮೇನ್ ನಲ್ಲಿ ಇಲ್ಲ ಏಕೆಂದರೆ ಇದಕ್ಕೆ ಹೊಸ ಚೌಕಟ್ಟುಗಳು ಮತ್ತು ಫೈರ್ವಾಲ್ ಗಳನ್ನು ನಿರ್ಮಿಸುವುದರ ಜೊತೆಗೆ ನಿರಂತರ ಮಾನವ ಹಸ್ತಕ್ಷೇಪ ಮತ್ತು ತಪಾಸಣೆಗಳು ಬೇಕಾಗುತ್ತವೆ.


    ಸಾಂದರ್ಭಿಕ ಚಿತ್ರ


    3. ವಿವಿಧ ವಲಯಗಳಲ್ಲಿ ಸೈಬರ್ ಸೆಕ್ಯೂರಿಟಿ ವೃತ್ತಿಪರರ ಬೇಡಿಕೆ


    ಇಂಟರ್ನೆಟ್ ಮತ್ತು ಸಾಫ್ಟ್‌ವೇರ್ ಏಕೀಕರಣವು ಎಲ್ಲಾ ಕೈಗಾರಿಕೆಗಳು, ವಲಯಗಳು ಮತ್ತು ಉಪ-ವಲಯಗಳನ್ನು ಹೇಗೆ ಅವರಿಸಿಕೊಂಡಿದೆ ಎಂಬುದನ್ನು ನೀವು ಗಮನಿಸಿದರೆ, ಇದು ಕೆಲಸಗಳನ್ನು ಮಾಡುವ ವಿಧಾನದಲ್ಲಿ ರಚನಾತ್ಮಕ ಬದಲಾವಣೆಯನ್ನು ತಂದಿದೆ ಅಂತ ಅರ್ಥವಾಗುತ್ತದೆ.


    ಇದು ವಿವಿಧ ಕ್ಷೇತ್ರಗಳಲ್ಲಿ ನುರಿತ ಸೈಬರ್ ಭದ್ರತಾ ಕಾರ್ಯಪಡೆಗೆ ಭಾರಿ ಬೇಡಿಕೆಯನ್ನು ಉಂಟು ಮಾಡಿದೆ. ಬ್ಯಾಂಕಿಂಗ್ ಸಂಸ್ಥೆಗಳಿಂದ ಹಿಡಿದು ಸರ್ಕಾರಿ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಕಾನೂನು ಸಂಸ್ಥೆಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಸ್ಟಾಕ್ ಬ್ರೋಕರೇಜ್ ಕಂಪನಿಗಳು ಮತ್ತು ವಿಮಾ ಕಂಪನಿಗಳು ಸೇರಿದಂತೆ ಅನೇಕವು ವೈವಿಧ್ಯತೆ ಮತ್ತು ಬೇಡಿಕೆಯ ಪ್ರಮಾಣಕ್ಕೆ ಉದಾಹರಣೆಗಳಾಗಿವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಬಹುದು.


    4. ಒಳ್ಳೆಯ ವೇತನ ದೊರೆಯುವ ಕರಿಯರ್


    ಸೈಬರ್ ಸೆಕ್ಯೂರಿಟಿ ಕಾರ್ಮಿಕ ಮಾರುಕಟ್ಟೆಯಲ್ಲಿ ದಕ್ಷ ಪ್ರತಿಭೆಗಳ ಕೊರತೆ ಮತ್ತು ಕ್ಷೇತ್ರಗಳಾದ್ಯಂತ ಸಂಸ್ಥೆಗಳಿಂದ  ವೈವಿಧ್ಯಮಯ ಬೇಡಿಕೆಯಿಂದಾಗಿ, ವಿತ್ತೀಯ ಸಂಭಾವನೆಗಳು ಸಾಕಷ್ಟು ಲಾಭದಾಯಕವಾಗಿವೆ.


    ಪ್ರವೇಶ ಮಟ್ಟದ ಉದ್ಯೋಗದಿಂದ ಪ್ರಾರಂಭಿಸಿ ಸರಾಸರಿ ವೇತನ ಸ್ಲ್ಯಾಬ್ ವ್ಯಕ್ತಿಯ ಅರ್ಹತೆ ಮತ್ತು ಕೌಶಲ್ಯಗಳನ್ನು ಅವಲಂಬಿಸಿ 2.0 ಎಲ್‌ಪಿಎಯಿಂದ 5.3 ಎಲ್‌ಪಿಎ (AmbitionBox.com ಪ್ರಕಾರ) ನಡುವೆ ಇರುತ್ತದೆ. ಜನರು ವೃತ್ತಿಪರ ಶ್ರೇಣಿಯನ್ನು ಏರಲು ಪ್ರಾರಂಭಿಸುತ್ತಿದ್ದಂತೆ ಈ ಸರಾಸರಿ ಗಮನಾರ್ಹವಾಗಿ ಬೆಳೆಯುತ್ತದೆ.




    5. ಒಳ್ಳೆಯ ಉದ್ದೇಶವುಳ್ಳ ಮತ್ತು ಕ್ರಿಯಾತ್ಮಕ ಕೆಲಸ


    ಭವಿಷ್ಯದ ಅನಿರೀಕ್ಷಿತ ಸ್ವಭಾವದಿಂದಾಗಿ, ಸೈಬರ್ ಭದ್ರತೆಯಲ್ಲಿನ ವೃತ್ತಿಜೀವನದಲ್ಲಿ ಅಸ್ಥಿರತೆ ಕಾಡುವುದಿಲ್ಲ. ಇಲ್ಲಿ ನಿಮಗೆ ನಿಯಮಿತವಾಗಿ ಸವಾಲು ಹಾಕಲಾಗುತ್ತದೆ.ಹೊಸ ಮತ್ತು ಅನಿರೀಕ್ಷಿತ ವೈಫಲ್ಯಗಳು ಮತ್ತು ಆಶ್ಚರ್ಯಕರ ಆವಿಷ್ಕಾರಗಳು ಇರುತ್ತವೆ. ದಾಳಿಕೋರರು ನಿರಂತರ ಆಧಾರದ ಮೇಲೆ ಹೊಸ ಶೋಷಣೆಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತಾರೆ ಮತ್ತು ಉದ್ಭವಿಸುವ ಸಮಸ್ಯೆಗಳಿಗೆ ಸೃಜನಶೀಲ ಮತ್ತು ಉತ್ತಮ ಪರಿಹಾರಗಳನ್ನು ಕಂಡು ಹಿಡಿಯುವುದು ಈ ವೃತ್ತಿಪರರ ಕೆಲಸವಾಗಿದೆ.


    ಸೈಬರ್ ಸೆಕ್ಯೂರಿಟಿ ಕಂಪನಿಗಳು ನಮ್ಮ ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳುವ ವಿವಿಧ ಸೈಬರ್ ದಾಳಿಗಳ ವಿರುದ್ಧ ನಮ್ಮನ್ನು ರಕ್ಷಿಸಲು ಸದಾ ಮುಂದಿರುತ್ತವೆ.

    Published by:Kavya V
    First published: