• ಹೋಂ
  • »
  • ನ್ಯೂಸ್
  • »
  • Jobs
  • »
  • Job Market: ಈ ರೀತಿಯ ಶಿಕ್ಷಣ ದೊರತರಷ್ಟೇ ಉದ್ಯೋಗರಂಗದ ಸ್ಪರ್ಧೆಯನ್ನು ಯುವಜನತೆ ಎದುರಿಸಬಹುದಂತೆ

Job Market: ಈ ರೀತಿಯ ಶಿಕ್ಷಣ ದೊರತರಷ್ಟೇ ಉದ್ಯೋಗರಂಗದ ಸ್ಪರ್ಧೆಯನ್ನು ಯುವಜನತೆ ಎದುರಿಸಬಹುದಂತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬಂದಿದ್ದು, ಕೆಲ ಹೊಸ ಆಯಾಮಗಳಿಗೆ ನಾಂದಿ ಹಾಡಿದೆ. ಆ ಮೂಲಕ ಪ್ರಸ್ತುತ ಕೌಶಲ್ಯಾಧಾರಿತ ಕಲಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಹಾಗಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ಮುಂದೆ ಓದಿ ...
  • Share this:

    ಖಂಡಿತ ಶಿಕ್ಷಣ (Education) ಎಂಬುದು ಉಜ್ವಲ ಭವಿಷ್ಯಕ್ಕೆ ಬುನಾದಿ. ಶಿಕ್ಷಣದಿಂದ ಸಾಕಷ್ಟು ಕೌಶಲ್ಯ, ವ್ಯಕ್ತಿತ್ವ ನಿರ್ಮಾಣ ಹಾಗೂ ಸಂಪರ್ಕ ಜಾಲಗಳ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಈಗೀಗ ಶಿಕ್ಷಣದಲ್ಲಿ ಯಾವ ರೀತಿಯ ಪದವಿ (Degree) ಅಥವಾ ತರಬೇತಿ (Training) ಬೇಕು ಎಂಬುದು ಸಾಕಷ್ಟು ಪ್ರಾಮುಖ್ಯತೆಗಳಿಸುತ್ತಿವೆ. ಹಲವು ಪ್ರತಿಷ್ಠಿತ ಪದವಿ/ತರಬೇತಿಗಳು ಗುಣಾತ್ಮಕ ವೃತ್ತಿ (Career) ನಿರ್ಮಾಣಕ್ಕೆ ಕಾರಣವಾಗಿವೆ ಎಂದರೂ ತಪ್ಪಿಲ್ಲ.


    ಹಿಂದೆ ಶಿಕ್ಷಣ ಎಂದಾಗ ಒಂದೇ ಒಂದು ಕ್ರಮ ಜಾರಿಯಲ್ಲಿತ್ತು. ಅಂದರೆ ಸರಳವಾಗಿ ಹೇಳಬೇಕೆಂದರೆ ಒಬ್ಬ ವ್ಯಕ್ತಿ ಇಷ್ಟು ವರ್ಷ ಶಾಲಾ ಶಿಕ್ಷಣ ತದನಂತರ ಇಂತಿಷ್ಟು ವರ್ಷಗಳ ಕಾಲ ಕಾಲೇಜು ಶಿಕ್ಷಣ ಹಾಗೂ ಕೊನೆಯದಾಗಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾನೆ ಎಂಬುದು ನೇರವಾಗಿ ಒಪ್ಪಿಕೊಳ್ಳುವ ಮಾತಾಗಿತ್ತು.


    ಆದರೆ ಕಾಲ ಇಂದು ಬದಲಾಗಿದೆ. ಆಧುನಿಕತೆ ಹಾಗೂ ತಂತ್ರಜ್ಞಾನದ ವೇಗದ ಜೊತೆ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಹಾಗಾಗಿ ಈಗ ಒಬ್ಬ ವ್ಯಕ್ತಿ ಸದಾ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ. ಅದಕ್ಕಾಗಿ ತನ್ನ ಜೀವನದ ಯಾವುದೇ ಸಮಯದಲ್ಲೂ ಕಲಿಕೆ ಎಂಬುದು ನಿರಂತರವಾಗಿದೆ ಎನ್ನಬಹುದು.


    ಪ್ರಾತಿನಿಧಿಕ ಚಿತ್ರ


    ಹೀಗೆ ಈ ನಿರಂತರ ಕಲಿಕೆ ಎಂಬ ಅಂಶ ಪ್ರವರ್ಧಮಾನಕ್ಕೆ ಬರುತ್ತಿರುವ ಜೊತೆಗೆ ಅದಕ್ಕೆ ಪೂರಕವಾಗಿ ಕೌಶಲ್ಯಾಧಾರಿತ ಕಲಿಕೆ/ಪ್ರಮಾಣೀಕೃತ ಕಲಿಕೆಗಳೂ ಸಹ ಮಹತ್ವ ಪಡೆಯುತ್ತಿವೆ. ನೆನಪಿಡಿ ಈ ಕೌಶಲ್ಯ ಕಲಿಕೆಗಳು ನಿಮ್ಮ ಸಾಂಪ್ರದಾಯಿಕ ಪದವಿ ಶಿಕ್ಷಣದ ಜೊತೆ ಜೊತೆಗೆ ಹೆಚ್ಚುವರಿಯಾಗಿ ನೀವು ಗಳಿಸುವ ಶಿಕ್ಷಣವಾಗಿದ್ದು ಇವುಗಳಿಗೆ ಹೆಚ್ಚಿನ ಬೆಲೆ ಇರುವುದನ್ನು ಇಂದು ಕಾಣಬಹುದಾಗಿದೆ.


    ಸಮೀಕ್ಷೆ ಏನು ಹೇಳುತ್ತೆ? 


    * ಸಮೀಕ್ಷೆಯೊಂದರಲ್ಲಿ 96% ರಷ್ಟು ಭಾರತೀಯ ವಿದ್ಯಾರ್ಥಿಗಳು (ಜಗತ್ತಿನಾದ್ಯಂತ 90% ವಿದ್ಯಾರ್ಥಿಗಳ ಜೊತೆ ಹೋಲಿಸಿದಾಗ) ಪದವಿಯ ನಂತರ ಕೌಶಲ್ಯಾಧಾರಿತ ಪ್ರಮಾಣಪತ್ರಗಳನ್ನು ಪಡೆಯುವುದರ ಮೂಲಕ ಉದ್ಯೋಗದಾತರ ಲಕ್ಷ್ಯವನ್ನು ತಮ್ಮೆಡೆಗೆ ಹೆಚ್ಚು ಸೆಳೆಯುವಂತೆ ಮಾಡಬಹುದೆಂದು ನಂಬುತ್ತಾರೆಂದಾಗಿದೆ.


    * ಸಮೀಕ್ಷೆಯೊಂದರಲ್ಲಿ 92% ರಷ್ಟು ಭಾರತೀಯ ಉದ್ಯೋಗದಾತರು (ಜಗತ್ತಿನಾದ್ಯಂತ 88% ಉದ್ಯೋಗದಾತರ ಜೊತೆ ಹೋಲಿಸಿದಾಗ) ಪದವಿಯ ನಂತರ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಪ್ರಮಾಣಪತ್ರಗಳನ್ನು ಪಡೆಯುವುದರ ಮೂಲಕ ಉದ್ಯೋಗದಾತರ ಲಕ್ಷ್ಯವನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.


    ಭಾರತೀಯ ದೃಷ್ಟಿಕೋನದಲ್ಲಿ ಈ ಎರಡು ಅಂಶಗಳು ಸಾಕಷ್ಟು ಆಸಕ್ತಿದಾಯಕವಾಗಿವೆ ಎನ್ನಬಹುದು.


    ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ ಬಯಸುವ ವಿದ್ಯಾರ್ಥಿ ದರ ಶೇ. 30 ಕ್ಕಿಂತ ಕಡಿಮೆಯಿದೆ. ಕೌಶಲ್ಯಾಧಾರಿತ ಪ್ರಮಾಣೀಕೃತ ಕಲಿಕೆಗಳು ಉದ್ಯೋಗ ದೊರೆಯುವಲ್ಲಿ ಸಾಕಷ್ಟು ದೊಡ್ಡ ಪಾತ್ರವಹಿಸುತ್ತವೆ. ಉದಾಹರಣೆಗೆ ನಮಗೆ ಈ ಹಿಂದಿನಿಂದಲೂ ಅಪ್ರೆಂಟೈಸ್ ತರಬೇತಿ ಹಾಗೂ ಅದು ಕೆಲಸ ಕಂಡುಕೊಳ್ಳಲು ನೆರವಾಗುವ ಬಗೆ ಬಗ್ಗೆ ಗೊತ್ತೇ ಇದೆ.


    ಇಂದು ಕಲಿಯಲು ಸಾಕಷ್ಟು ವಿಷಯಗಳಿವೆಯಾದರೂ ಸದ್ಯ ಜಗತ್ತಿನಲ್ಲಿರುವ ಅವಶ್ಯಕತೆಗಳಿಗನುಸಾರವಾಗಿ ಯಾವ ಕಲಿಕೆ ಮಹತ್ವವಾದದ್ದು ಎಂಬುದನ್ನು ವಿನ್ಯಾಸಗೊಳಿಸಿ ರೂಪಿಸುವುದು ಸಹ ಪ್ರಮುಖವಾಗಿದೆ. ಇಂದು ಹೆಚ್ಚು ಹೆಚ್ಚು ಕಂಪನಿಗಳು ನಿರ್ದಿಷ್ಟ ಕೌಶಲ್ಯಾಧಾರಿತ ಕಲಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ ಎಂಬುದಂತೂ ಸುಳ್ಳಲ್ಲ.




    ಅಂತೆಯೇ ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಲವು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಬೇಡಿಕೆ ಆಧಾರಿತ ಕೌಶಲ್ಯಗಳ ತರಬೇತಿ/ಕೋರ್ಸ್ ಮುಂತಾದವುಗಳನ್ನು ಪರಿಚಯಿಸುತ್ತಿವೆ. ಅಷ್ಟೆ ಅಲ್ಲ, ಪ್ರಧಾನಮಂತ್ರಿಯವರ ಕೌಶಲ್ಯ ವಿಕಾಸ ಯೋಜನೆಯೂ ಸಹ ಯುವಶಕ್ತಿಗೆ ವೇಗದ ಗತಿಯನ್ನು ಕೊಡುವ ಉದ್ದೇಶದಿಂದ ಉತ್ತಮ ಯೋಜನೆಯಾಗಿ ರೂಪಗೊಂಡಿದೆ.


    ಈ ಸಂದರ್ಭದಲ್ಲಿ ಕಾಲೇಜುಗಳು/ವಿವಿಗಳು ಯಾವ ಪಾತ್ರ ನಿಭಾಯಿಸಬಲ್ಲವು?


    "ಭಾರತದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಮೈಕ್ರೋ ವಲಯದ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿರಿಸಿಕೊಂಡು ತಮ್ಮ ಹೊಸ ತರಬೇತಿ ಪಠ್ಯವನ್ನು ರೂಪಿಸುತ್ತಿವೆ. ಈ ಮೂಲಕ ತರಬೇತಿಗೊಳಪಟ್ಟ ವಿದ್ಯಾರ್ಥಿಯು ಹೊರ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಎಲ್ಲ ರೀತಿಯಿಂದಲೂ ಸಮರ್ಥನಾಗಿರುವಂತೆ ಮಾಡುತ್ತಿವೆ.


    ಇಂತಹ ಕೋರ್ಸುಗಳು ವಿದ್ಯಾರ್ಥಿಗೆ ಕೆಲಸದಲ್ಲಿ ವಾಸ್ತವಿಕವಾಗಿ ಬೇಕಾದ ಎಲ್ಲ ರೀತಿಯ ಕೌಶಲ್ಯ ಹಾಗೂ ಅಣುಕು ಅನುಭವವನ್ನು ಕಟ್ಟಿಕೊಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿವೆ" ಎಂದು ಕೋರ್ಸೆರಾದ APAC ಮತ್ತು ಭಾರತದ ವ್ಯವಸ್ಥಾಪಕ ನಿರ್ದೇಶಕರಾದ ರಾಘವ್ ಗುಪ್ತಾ ಅಭಿಪ್ರಾಯ ಪಡುತ್ತಾರೆ.


    ಅವರ ಪ್ರಕಾರ, ಕೌಶಲ್ಯಾಧಾರಿತ ಕಲಿಕೆ ಹಾಗೂ ಕೌಶಲ್ಯಾಧಾರಿತ ನೇಮಕಾತಿಗಳಿಂದಾಗಿ ಹೊಸ ಹೊಸ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದರೆ ಹೊಸ ಹೊಸ ಕ್ಷೇತ್ರಗಳಲ್ಲಿ ತಮ್ಮ ವಿಸ್ತರಣೆಯ ಯಶಸ್ಸನ್ನು ಕಂಪನಿಗಳು ಸಾಧಿಸಬಹುದಾಗಿದೆ.


    ಇದನ್ನೂ ಓದಿ: UPSC Success Story: ಸತತ 5ನೇ ಪ್ರಯತ್ನದಲ್ಲಿ IAS ಆದ ರೈತನ ಮಗ ಸೋಮನಾಥ್


    ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕೋರ್ಸೆರಾ ಮೇ 2022 ರಲ್ಲಿ ಕರಿಯರ್ ಅಕಾಡೆಮಿಯನ್ನು ಲಾಂಚ್ ಮಾಡಿದೆ. ಇದರ ಮೂಲಕ ಸಂಸ್ಥೆಯು ಬೇಡಿಕೆಯಲ್ಲಿರುವ ಹಾಗೂ ಮುಂದೆ ಬರುವ ಕೌಶಲ್ಯಗಳಾಧಾರಿತ ಹೊಸ ಹೊಸ ತರಬೇತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಒದಗಿಸುತ್ತಿದೆ. ಕೋರ್ಸೆರಾ ಈ ಕೋರ್ಸ್ ಗಳ ವಿಷಯಗಳನ್ನು ಐಬಿಎಂ, ಗೂಗಲ್, ಮೆಟಾ ಮುಂತಾದ ದಿಗ್ಗಜ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದು ವಿದ್ಯಾರ್ಥಿಗಳನ್ನು ಜಾಬ್ ರೆಡಿ ಅಭ್ಯರ್ಥಿಯನ್ನಾಗಿ ರೂಪಿಸಲು ಸಮರ್ಥವಾಗಿವೆ.


    ಅಲ್ಲದೆ, ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬಂದಿದ್ದು, ಕೆಲ ಹೊಸ ಆಯಾಮಗಳಿಗೆ ನಾಂದಿ ಹಾಡಿದೆ. ಆ ಮೂಲಕ ಪ್ರಸ್ತುತ ಕೌಶಲ್ಯಾಧಾರಿತ ಕಲಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.


    ಇವೆಲ್ಲದರ ಜೊತೆ ಇನ್ನೊಂದು ಪ್ರಮುಖ ವಿಷಯವೆಂದರೆ ಪ್ರಮಾಣೀಕೃತ ತರಬೇತಿಗಳೇ ಮುಂದೆ ಜಾಬ್ ಸಿಗುವಲ್ಲಿ ಮುಖ್ಯ ಪಾತ್ರವಹಿಸುವಂತಾದರೆ ಶಿಕ್ಷಣದ ವೆಚ್ಚವೂ ಇನ್ನೊಂದೆಡೆ ವಿದ್ಯಾರ್ಥಿಗಳ ಮೇಲಾಗಲಿ ಅಥವಾ ಪೋಷಕರ ಮೇಲಾಗಲಿ ಹೆಚ್ಚಿನ ಹೊರೆ ಆಗಲಾರದು.

    Published by:Kavya V
    First published: