ಜಗತ್ತು ತಂತ್ರಜ್ಞಾನದ (Technology) ವಿಚಾರವಾಗಿ ಕ್ಷಿಪ್ರವಾಗಿ ಬೆಳೆಯುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ ಕಿರುಬೆರಳಲ್ಲೇ ಎಲ್ಲಾ ಮಾಹಿತಿಯನ್ನು ಪಡೆಯುವಷ್ಟು, ಕೂತಲ್ಲೇ ಬೇಕಾದದ್ದನ್ನು ತರಿಸಿಕೊಳ್ಳವಷ್ಟು, ಎಲ್ಲೋ ಇರುವವರ ಜೊತೆ ಮಾತನಾಡಿ, ನೋಡುವಷ್ಟು, ಹಣವನ್ನು ಬಳಕೆ ಮಾಡದೇ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಷ್ಟು. ಹೀಗೆ ತಂತ್ರಜ್ಞಾನ ಎಂಬುವುದು ಜಗತ್ತನ್ನು ಚಾಲನೆ ಮಾಡುತ್ತಿದ್ದರೆ ಡೇಟಾ ಮತ್ತು ವಿಶ್ಲೇಷಣೆಗಳು ಕೂಡ ಜಗತ್ತನ್ನು(World) ಓಡಿಸುತ್ತಿರುವ ಜೋಡಿ ಎತ್ತುಗಳು. ಮಾರುಕಟ್ಟೆಯಲ್ಲಿ (Market) ವೇಗವಾಗಿ ಹೆಚ್ಚುತ್ತಿರುವ ಸ್ಪರ್ಧೆಯೊಂದಿಗೆ, ಕಂಪನಿಗಳು (Company) ತಮ್ಮ ವ್ಯವಹಾರದಲ್ಲಿ ಡೇಟಾ ಮತ್ತು ವಿಶ್ಲೇಷಣೆಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಪ್ರಮುಖವಾಗಿದೆ.
ಡೇಟಾ ಅಂದರೆ, ಕಂಪ್ಯೂಟರ್ ಸುಲಭವಾಗಿ ಓದಬಲ್ಲಂತೆ ಸಂಗ್ರಹವಾಗಿರುವ ಮಾಹಿತಿಗಳು. ಈ ಮಾಹಿತಿಯನ್ನು ಕಂಪನಿ ಸ್ವತಃ ವಿಶ್ಲೇಷಿಸಬಹುದು ಅಥವಾ ಬೇರೆ ಡೇಟಾ ಅನಾಲೈಸ್ ಕಂಪನಿಗಳಿಗೆ ನೀಡಬಹುದು.
ಪ್ರಸ್ತುತ ವಿದ್ಯಾಮಾನದಲ್ಲಿ ಈ ಡೇಟಾ ಮತ್ತು ಅನಾಲಿಟಿಕ್ಸ್ ಒಂದು ಕಂಪನಿಗೆ ವ್ಯಾಪಕವಾದ ಕೊಡುಗೆ ನೀಡುತ್ತಿದ್ದು, ಕಂಪನಿಗಳು ಸಹ ಅಗತ್ಯವಾಗಿ ನೇಮಿಸಿಕೊಳ್ಳುವ ಹುದ್ದೆಯಾಗಿದೆ.
ನೀವೂ ಸಹ ಸಾಕಷ್ಟು ಸ್ಕೋಪ್ ಇರುವ ಅನಾಲಿಟಿಕ್ಸ್ ವೃತ್ತಿಯಲ್ಲಿ ಕೆಲಸ ಆರಂಭಿಸಬೇಕು ಅಂತಿದ್ದರೆ ಅಥವಾ ಆ ಕ್ಷೇತ್ರದಲ್ಲಿರುವವರು ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಕೆಲವು ಮಾರ್ಗಗಳು ಇಲ್ಲಿವೆ.
* ಸರಿಯಾದ ಕೋರ್ಸ್ ಆಯ್ಕೆಮಾಡಿ
ನೀವು ಡೇಟಾ ಅನಾಲಿಟಿಕ್ಸ್ ಆಗಲು ಬಯಸಿದರೆ ನೀವು ಯಾವುದೇ ಸಂಬಂಧಿತ ಕ್ಷೇತ್ರದಲ್ಲಿ ಪದವಿಯನ್ನು ಹೊಂದಿರಬೇಕು. ಆದಾಗ್ಯೂ ಪದವಿಗಳು ಇಲ್ಲದಿದ್ದರೆ ಸರಿಯಾದ ಕೋರ್ಸ್‌ಗಳನ್ನು ಆರಿಸಿಕೊಂಡು ಅರ್ಹತೆ ಹೊಂದಬಹುದು.
ಈಗಂತೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಲು ಅದಕ್ಕೆ ಸಂಬಂಧಪಟ್ಟ ಪದವಿ ಇಲ್ಲದಿದ್ದರೂ ಆನ್‌ಲೈನ್ ಪ್ರೋಗ್ರಾಮ್‌ಗಳನ್ನು ತೆಗೆದುಕೊಂಡು ಕೆಲಸಕ್ಕೆ ಅರ್ಹತೆ ಪಡೆಯಬಹುದು.
ಇಲ್ಲೂ ಕೂಡ ನೀವು ಯಶಸ್ವಿ ಡೇಟಾ ಅನಾಲಿಟಿಕ್ಸ್ ಆಗಲು ಸರಿಯಾದ ಮಾಹಿತಿ ಮೇರೆಗೆ ಸರಿಯಾದ ಕೋರ್ಸ್ ಆಯ್ಕೆಮಾಡಿಕೊಳ್ಳಬೇಕು. ಉದ್ಯಮದಲ್ಲಿರುವ ಟ್ರೆಂಡ್ ಬಗ್ಗೆ ತಿಳಿದೂ ಸಹ ಕೋರ್ಸ್ ಆರಿಸಿಕೊಳ್ಳಬೇಕು.
ಇದನ್ನೂ ಓದಿ: ಒಳ್ಳೊಳ್ಳೆ ಉದ್ಯೋಗಿಗಳನ್ನು ಕಂಪನಿಗೆ ಸೆಳೆಯೋದೇ ಇವರ ಜಾಬ್!
ಪ್ರಸ್ತುತ ಡೇಟಾ ಅನಾಲಿಟಿಕ್ಸ್ ಕೋರ್ಸ್‌ಗಳು ಸಾಕಷ್ಟು ಲಭ್ಯವಿದೆ. ಅದರಲ್ಲೂ AI ಮತ್ತು ML ಪರಿಕರಗಳನ್ನು ನೀಡುವ ಕೋರ್ಸ್ ಹೊಸದಾಗಿ ಕೆಲಸ ಆರಂಭಿಸುವವರಿಗೆ ಉತ್ತಮ ಸಂಬಳ ನೀಡುವ ಜೊತೆಗೆ ಉದ್ಯೋಗ ಖಾತ್ರಿಯನ್ನು ನೀಡುತ್ತದೆ.
AI ಮತ್ತು ML ಪರಿಕರಗಳು ಡೇಟಾವನ್ನು ವಿಶ್ಲೇಷಿಸಲು ಮತ್ತು ಮಾರುಕಟ್ಟೆ ಪ್ರವೃತ್ತಿಗಳ ಕುರಿತು ಕ್ರಿಯಾಶೀಲ ಒಳನೋಟಗಳನ್ನು ಸೃಷ್ಟಿಸಲು ಸಹಾಯ ಮಾಡುವುದರಿಂದ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ.
ಕೋರ್ಸ್ ಅನ್ನು ಆಯ್ಕೆಮಾಡುವಾಗ, ಪ್ಲಾಟ್‌ಫಾರ್ಮ್ ಅಥವಾ ಅದರ ಪಾಲುದಾರರ ವಿಶ್ವಾಸಾರ್ಹತೆ ಮತ್ತು ಖ್ಯಾತಿಯನ್ನು ನಿರ್ಣಯಿಸುವುದು ಸಹ ಅತ್ಯಗತ್ಯ.
ಇತ್ತ ವೃತ್ತಿಪರರು ಕೂಡ ಅವರ ಕೆಲಸದಲ್ಲಿ ಮತ್ತಷ್ಟು ಪರಿಣಿತಿ ಹೊಂದಲೂ ಸಹ ಅಪ್‌ಗ್ರೇಡ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
* ಮೃದು ಕೌಶಲ್ಯಗಳ ಬಗ್ಗೆಯೂ ತಿಳಿದಿರಲಿ
ಪರಸ್ಪರ ಸಂವಹನ, ವ್ಯಕ್ತಿತ್ವ ಗುಣಲಕ್ಷಣಗಳು, ಸಂವಹನದ ಸ್ಪಷ್ಟತೆ ಮತ್ತು ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯದ ಸಂಯೋಜನೆಯಂತಹ ಸಾಫ್ಟ್ ಸ್ಕಿಲ್ ಬಗ್ಗೆಯೂ ಇಲ್ಲಿ ಕೆಲಸ ಮಾಡುವವರಿಗೆ ತಿಳಿದರಬೇಕು.
ಇದನ್ನೂ ಓದಿ: Food Businessನಲ್ಲಿ ಎಂದಿಗೂ ಭರ್ಜರಿ ಲಾಭವಿದೆ; ವೃತ್ತಿ ರೂಪಿಸಿಕೊಳ್ಳಲು ಈ ತರಬೇತಿ, ಅರ್ಹತೆ ಅಗತ್ಯ
ಎಲ್ಲವೂ ತಂತ್ರಜ್ಞಾನ, ಕಂಪ್ಯೂಟರ್ ಮೂಲಕ ನಡೆಯುತ್ತದೆ ಎಂದು ಇದಕ್ಕೆ ಸಂಬಂಧಪಟ್ಟ ಸ್ಕಿಲ್‌ಗಳನ್ನು ಮಾತ್ರ ಅಳವಡಿಸಿಕೊಂಡರೆ ಸಾಲದು. ಉತ್ತಮ ಕೆಲಸಗಾರನಾಗಲು ಸಾಫ್ಟ್ ಸ್ಕಿಲ್‌ಗಳು ಕೂಡ ಸಾಕಷ್ಟು ಮುಖ್ಯವಾಗಿರುತ್ತವೆ. ಡೇಟಾ ಅನಾಲಿಟಿಕ್ಸ್ ಹುದ್ದೆಯಲ್ಲೂ ನೀವು ಈ ಅಂಶಗಳ ಬಗ್ಗೆ ತಿಳಿದಿರಬೇಕು.
* ನೆಟ್‌ವರ್ಕಿಂಗ್
ಹೊಸದಾಗಿ ಅನಾಲಿಟಿಕ್ಸ್ ಆಗಿ ಕೆಲಸ ಆರಂಭಿಸಬೇಕು ಎನ್ನುವವರು ಅಥವಾ ಇಲ್ಲೇ ವೃತ್ತಿಜೀವನ ನಡೆಸುತ್ತಿರುವ ಇಬ್ಬರಿಗೂ ನೆಟ್‌ವರ್ಕಿಂಗ್ ಬಹಳ ಮುಖ್ಯ.
ಹೊಸಬರಿಗೆ ಕೆಲಸ ಹುಡುಕಲು ನೆಟ್‌ವರ್ಕ್ ಸಹಾಯ ಮಾಡಿದರೆ, ಇನ್ನೂ ಉತ್ತಮ ಸಂಬಳ ನೀಡುವ ಕಂಪನಿಗಳಿಗೆ ಹೋಗಲು ಈ ನೆಟ್‌ವರ್ಕ್ ವೃತ್ತಿಪರರಿಗೆ ಸಹಾಯ ಮಾಡುತ್ತದೆ.
ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿರುವವರ ಮತ್ತು ಉದ್ಯಮದಲ್ಲಿರುವವರ ಜೊತೆ ನಿರಂತರ ಸಂಪರ್ಕದಲ್ಲಿರಿ. ಈ ನೆಟ್‌ವರ್ಕಿಂಗ್ ಉದ್ಯೋಗಿಗಳಿಗೆ ಉದ್ಯಮದಲ್ಲಿನ ಖಾಲಿ ಹುದ್ದೆಗಳ ಬಗ್ಗೆಯೂ ತಿಳಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ