ಅದು ಒಳಗೊಂಡಿರುವ ಅಪಾಯಗಳ ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳು ಉದ್ಯಮಶೀಲತೆ ( Entrepreneurship) ಆಯ್ಕೆಯಿಂದ ದೂರ ಸರಿಯುತ್ತಾರೆ. ಆದರೆ, ಉದ್ಯಮಶೀಲತೆಯ ಚಟುವಟಿಕೆಗಳನ್ನು ಅನುಸರಿಸುವುದರಿಂದ ಉಂಟಾಗುವ ಸಂಭಾವ್ಯ ಪ್ರತಿಫಲಗಳು ಮತ್ತು ನಾವೀನ್ಯತೆಗಳ ಅವಕಾಶಗಳ ಬಗ್ಗೆ ಹೆಚ್ಚಿನ ಪ್ರಮಾಣದ ಜನರಿಗೆ ತಿಳಿದಿಲ್ಲ. ರಾಷ್ಟ್ರೀಯ ವಾಣಿಜ್ಯೋದ್ಯಮ ದೃಷ್ಟಿಯ ರಚನೆಯನ್ನು ನೀತಿ ನಿರೂಪಕರು, ಶಿಕ್ಷಣ ತಜ್ಞರು ಅಥವಾ ವೃತ್ತಿ ಸಮಾಲೋಚನೆ (Career Counselor) ವೃತ್ತಿಪರರು ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ.
ಉದ್ಯಮಶೀಲತೆಯ ಪ್ರಾಮುಖ್ಯತೆ
ಯುಎಇ, ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ಜಾಗತಿಕ ವಾಣಿಜ್ಯೋದ್ಯಮಕ್ಕೆ ಹೊಸ ಹಾಟ್‌ಸ್ಪಾಟ್‌ಗಳಾಗಿವೆ. ಸರ್ಕಾರದ ಬೆಂಬಲದ ಜೊತೆಗೆ, ಈ ದೇಶಗಳಲ್ಲಿ ಉದ್ಯಮಶೀಲತೆಯನ್ನು ಒಂದು ಮುಖ್ಯ ವಿಷಯವಾಗಿ ಶಾಲೆಯ ಪಾಠ್ಯಗಳಲ್ಲಿ ಅಳವಾಡಿಸಲಾಗಿದೆ ಹಾಗೂ ಈ ದೇಶಗಳಲ್ಲಿ ಉದ್ಯಮಶೀಲತೆಯನ್ನು ಕುರಿತು ಉನ್ನತ ಶಿಕ್ಷಣ ಕೋರ್ಸ್‌ಗಳಿವೆ.
ಆರ್ಥಿಕ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಸುಸ್ಥಿರ ಅಭಿವೃದ್ಧಿ ಕಾರ್ಯತಂತ್ರದ ಪ್ರಮುಖ ಭಾಗವಾಗಿ ಉದ್ಯಮಶೀಲತೆಯನ್ನು ಪರಿಗಣಿಸುತ್ತಾರೆ. ಭಾರತ ಸರ್ಕಾರವು ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಅಟಲ್ ಇನ್ನೋವೇಶನ್ ಮಿಷನ್ ಮತ್ತು ಆತ್ಮನಿರ್ಭರ್ ಭಾರತ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆಯಾದರೂ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯತ್ತ ಇನ್ನೂ ಉತ್ಸಾಹ ಕೊರತೆ ಎದ್ದು ಕಾಣ್ಣುತ್ತಿದೆ.
ಉದ್ಯಮಶೀಲತಾ ಚಟುವಟಿಕೆಗಳನ್ನು ಹೆಚ್ಚಾಗಿ ಐಐಎಮ್ ಗಳು, ಐಐಟಿ ಗಳು ಮತ್ತು ದೊಡ್ಡ ವ್ಯಾಪಾರ ಶಾಲೆಗಳಲ್ಲಿ ಉತ್ತೇಜಿಸಲಾಗುತ್ತದೆ ಆದರೆ ಇತರ ಸಂಸ್ಥೆಗಳು ನವೀನ ಆಲೋಚನೆಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವುದು ಕಷ್ಟಕರದ ಸಂಗತಿ.
ರಾಜ್ಯಗಳಲ್ಲಿ ನಿರುದ್ಯೋಗ ದರ
ಉದ್ಯೋಗ ಎಂಬುದು ಪ್ರಪಂಚದಾದ್ಯಂತ ಗಂಭೀರ ಸವಾಲಾಗಿದೆ, ಆದರೆ ಇತ್ತೀಚಿನ ಸಿಎಮ್‌ಐಇ ವರದಿಯ ಪ್ರಕಾರ, ಭಾರತದಲ್ಲಿ ಪರಿಸ್ಥಿತಿಯು ತುಂಬಾ ಕಠೋರವಾಗಿದೆ. ಎಲ್ಲಾ ರಾಜ್ಯಗಳು ಕಳಪೆ ನಿರುದ್ಯೋಗ ಅಂಕಿಅಂಶಗಳನ್ನು ಹೊಂದಿದ್ದು, ವಿದ್ಯಾವಂತ ಭಾರತೀಯರಿಗೆ ಉದ್ಯೋಗದ ಮಾರ್ಗಗಳು ಮತ್ತು ಅವಕಾಶಗಳನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
2019 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು 2025 ರ ವೇಳೆಗೆ ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಮಾಡುವ ತಮ್ಮ ದೂರದೃಷ್ಟಿಯ ಹೇಳಿಕೆಯನ್ನು ನೀಡಿದ್ದಾರೆ.
ಇತ್ತೀಚೆಗೆ, ಮೋರ್ಗನ್ ಸ್ಟಾನ್ಲಿ ಕೂಡ ಭಾರತವು 2027 ರ ವೇಳೆಗೆ ಮೂರನೇ-ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದೆ ಎಂದು ಘೋಷಿಸಿದೆ. ಯುವಜನರು ಕಾಲೇಜಿನಲ್ಲಿ ಇರುವಾಗಲೇ ಅವರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವು ಕಾರ್ಯಕ್ರಮಗಳನ್ನು ರೂಪಿಸಬೇಕು.
ಆರ್ಥಿಕ ಬೆಳವಣಿಗೆಗೆ ಸಹಕಾರಿ
20 ನೇ ಶತಮಾನದ ಪ್ರವರ್ತಕ ರಾಜಕೀಯ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಜೋಸೆಫ್ ಶುಂಪೀಟರ್ ಅವರ ಮೂಲ ಕೃತಿಯಾದ ದಿ ಥಿಯರಿ ಆಫ್ ಎಕನಾಮಿಕ್ ಡೆವಲಪ್‌ಮೆಂಟ್‌ನಲ್ಲಿ, ಉದ್ಯಮಶೀಲತೆಯು ಆರ್ಥಿಕತೆಯ ಬೆಳವಣಿಗಾಗಿ ಹೆಚ್ಚು ಪರಿಣಾಮಕಾರಿ ಅಸ್ತ್ರ ಎಂದು ತಿಳಿಸಲಾಗಿದೆ. ಉದ್ಯಮಶೀಲತೆ ಮತ್ತು ಆರ್ಥಿಕ ಬೆಳವಣಿಗೆಯ ನಡುವಿನ ಸಂಬಂಧದ ಹೊರತಾಗಿಯೂ, ಭಾರತದ ಉದ್ಯಮಶೀಲತೆಯ ಕಾರ್ಯಕ್ಷಮತೆಯು ನಿರೀಕ್ಷೆಗಿಂತ ಕಡಿಮೆಯಾಗಿದೆ.
ಲಂಡನ್ ಬ್ಯುಸಿನೆಸ್ ಸ್ಕೂಲ್ ಮತ್ತು ವರ್ಲ್ಡ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಶನ್ ಬಿಡುಗಡೆ ಮಾಡಿದ ಜಾಗತಿಕ ವಾಣಿಜ್ಯೋದ್ಯಮ ಮಾನಿಟರ್ ವರದಿ (2021) ಮತ್ತು ಇನ್ನೋವೇಶನ್ ಇಂಡೆಕ್ಸ್ (2022) ಪ್ರಕಾರ ದೇಶವು ಟಾಪ್ 10 ಉದ್ಯಮಶೀಲ ರಾಷ್ಟ್ರಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಅಲ್ಲದೆ, ಮಾಸ್ಟರ್‌ಕಾರ್ಡ್ ಮಹಿಳಾ ಉದ್ಯಮಿ ಸೂಚ್ಯಂಕ (2021) ಪ್ರಕಾರ ಮಹಿಳಾ ಉದ್ಯಮಶೀಲತೆಯ ವಿಷಯದಲ್ಲಿ ಭಾರತವು ಅತ್ಯಂತ ಕಡಿಮೆ ಸ್ಥಾನದಲ್ಲಿದೆ, ಇದು ವಿಷಾದನೀಯ.
ದೇಶಾದ್ಯಂತ ಉದ್ಯಮಶೀಲತೆಯ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯಮಶೀಲತೆಯ ಚಟುವಟಿಕೆಯನ್ನು ಅಳೆಯಲು ನಾವು 'ಭಾರತದ ವಾಣಿಜ್ಯೋದ್ಯಮ ಸೂಚ್ಯಂಕ'ವನ್ನು ಅಭಿವೃದ್ಧಿಪಡಿಸಬೇಕು ಹಾಗೂ ಬೆಳೆಯುವ ಯುವ ಉದ್ಯಮಿಗಳ ವೃತ್ತಿ ಮತ್ತು ಸಾಧನೆಗಳನ್ನು ನಾವು ಪ್ರಶಂಸಿಸಬೇಕು.
ಶಾಲೆಯಿಂದಲೇ ಉದ್ಯಮದ ಬಗ್ಗೆ ಮಾಹಿತಿ
ಎಂಟನೇ ತರಗತಿಯಿಂದಲೇ ಉದ್ಯಮಶೀಲತೆಯ ಪಠ್ಯವನ್ನು ಪ್ರಾರಂಭಿಸಿ, ಅಗತ್ಯವಿರುವ ಕ್ರೆಡಿಟ್ ಕೋರ್ಸ್‌ಗಳಂತೆ ಉದ್ಯಮಶೀಲತೆ-ಕೇಂದ್ರಿತ ಕೋರ್ಸ್‌ಗಳನ್ನು ಪರಿಚಯಿಸುವ ಮೂಲಕ ಶಾಲೆಗಳು ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು.
ಉದ್ಯಮಶೀಲತೆ ಮೂಲಭೂತ ಕೋರ್ಸ್, ಅವರಿಗೆ ಹೊಸ ಐಡಿಯಗಳನ್ನು ಯೋಚಿಸಲು, ಸೃಜನಶೀಲ ವಿಧಾನಗಳನ್ನು ಅಭ್ಯಾಸ ಮಾಡಲು ಮತ್ತು ವ್ಯಾಪಾರ ಪ್ರಪಂಚದ ಬಗ್ಗೆ ಅವರ ತಿಳುವಳಿಕೆಯನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ.
ವಿಶ್ವವಿದ್ಯಾನಿಲಯಗಳು ಸಹ ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯಾಗಿ ಉದ್ಯಮಶೀಲತೆಯ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು. ಆಯಿಷಾ ಡೇಟಾ (2021) ಪ್ರಕಾರ, 4.14 ಕೋಟಿ ವಿದ್ಯಾರ್ಥಿಗಳು ಈಗ ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ ಮತ್ತು ಅವರಲ್ಲಿ ಶೇಕಡಾ 78.9 ರಷ್ಟು ಪದವಿಪೂರ್ವ ಮಟ್ಟದಲ್ಲಿದ್ದಾರೆ.
ಕಾಲೇಜುಗಳು ವಿದ್ಯಾರ್ಥಿಗಳಿಗೆ ಸ್ಥಳೀಯ ಉದ್ಯಮಿಗಳೊಂದಿಗೆ ಮಾತನಾಡುವ ಹಾಗೂ ಅವರ ಐಡಿಯಾಗಳ ಕುರಿತು ಚರ್ಚಿಸುವ ಅವಕಾಶವನ್ನು ಮಾಡಿಕೊಡಬೇಕು ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ವಿದ್ಯಾರ್ಥಿಗಳಿಗೆ ಅವಕಾಶ
ಅಲ್ಲದೆ, ಇಂಟರ್ನ್‌ಶಿಪ್ ಮತ್ತು ಅಪ್ರೆಂಟಿಸ್‌ಶಿಪ್‌ಗಳನ್ನು ಕೊಡಿಸಲು ಸಹಾಯ ಮಾಡಬೇಕು. ದೇಶದಲ್ಲಿನ ಸಂಕೀರ್ಣ ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ವಿಸ್ತರಿಸಬೇಕು.
ಜಾಗತಿಕ ಆರ್ಥಿಕತೆಯು ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಅಳವಡಿಸಿಕೊಳ್ಳಲು ಸ್ಥಳಾಂತರಗೊಂಡಿರುವುದರಿಂದ, ಉದ್ಯಮಶೀಲತೆಯ ಶಿಕ್ಷಣದ ಅಗತ್ಯವು ನಿರ್ಣಾಯಕವಾಗಿದೆ.
ಎನ್‌ಇಪಿ 2020 ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಗುಣವನ್ನು ಹುಟ್ಟುಹಾಕುತ್ತದೆ ಎಂದು ನಂಬಲಾಗಿದೆ, ಅವರ ಪ್ರಮುಖ ವಿಷಯಗಳ ಜೊತೆಗೆ ಹಣಕಾಸು, ಅರ್ಥಶಾಸ್ತ್ರ, ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯಗಳು ಸಹಾಯ ಮಾಡುತ್ತಿವೆ.
ಇದನ್ನೂ ಓದಿ: ATM Franchise ಪಡೆದುಕೊಂಡ್ರೆ ಪ್ರತಿ ಹಣದ ಡ್ರಾ ಮೇಲೆ ನಿಮಗೆ ಎಷ್ಟು ಲಾಭ ಇದೆ ನೋಡಿ
ದೇಶದ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮತ್ತು ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಉದ್ಯಮಶೀಲತೆಯ ಶಿಕ್ಷಣ ಮತ್ತು ಅಭಿವೃದ್ಧಿಯು ಆದ್ಯತೆಯಾಗಿದೆ.
ಭಾರತವು ಇಸ್ರೇಲಿ ಮಾದರಿಯಿಂದ ಕಲಿಯಬಹುದು, ಇದು ತಾಂತ್ರಿಕ ಪ್ರಗತಿಗೆ ಹಣಕಾಸು ಒದಗಿಸುವಲ್ಲಿ ವಿಶ್ವದ ಅತ್ಯಂತ ನವೀನ ರಾಷ್ಟ್ರಗಳಲ್ಲಿ ಒಂದಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯಗಳು ವ್ಯಾಪಾರದ ವಾತಾವರಣವನ್ನು ವಿಶ್ಲೇಷಿಸಬೇಕು ಮತ್ತು ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾನೂನುಗಳನ್ನು ಮರುಪರಿಶೀಲಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ