ವರ್ಷದ ಕೊನೆಯಲ್ಲಿ (Year End) ಬಹುತೇಕ ಉದ್ಯೋಗಿಗಳು (Employees) ಒಂದು ರೀತಿಯ ವಿಷಾದದ ಮೂಡ್ಗೆ (Depressed) ಜಾರುತ್ತಾರೆ. ವರ್ಷವಿಡೀ ಕೆಲಸ ಮಾಡಿದಕ್ಕೆ ಹೈಕ್ (Salary Hike) ಸಿಕ್ಕಿದೆ. ಆದರೆ ನಾನು ಪಟ್ಟ ಶ್ರಮಕ್ಕೆ, ವ್ಯಯಿಸಿದ ಸಮಯಕ್ಕೆ ಹಾಗೂ ವೈಯಕ್ತಿಕ ಜೀವನದ ಕ್ಷಣಗಳನ್ನು ತ್ಯಾಗ ಮಾಡಿದ್ದಕ್ಕೆ ಸಂಬಳ ಏರಿಕೆ ಒಂದೇ ಪ್ರತಿಫಲವೇ? ಪ್ರತಿದಿನ ಈ ಸಮಯಕ್ಕೆ ಇದೇ ಆಫೀಸ್ನಲ್ಲಿ ಇದೇ ಕೆಲಸ ಮಾಡುತ್ತಿದ್ದೇನೆ. ಇದೊಂದು ರೀತಿಯ ಜೈಲೇ? ಜೀವನ ಪೂರ್ತಿ 9 ಗಂಟೆಗಳ ಕಾಲ ದುಡಿಯುತ್ತಲೇ ಇರಬೇಕೇ? ನನ್ನ ವೃತ್ತಿಜೀವನದಲ್ಲಿ ನಾನೇ ಕೈದಿನಾ ಎಂಬ ಭಾವನೆ ಬರುತ್ತೆ. ಮನಸ್ಸಿಗೆ ಇಷ್ಟವಾದದ್ದನ್ನು ಮಾಡುವುದು ಯಾವಾಗ ಎನಿಸುತ್ತೆ.
ವರ್ಷದ ಕೊನೆಯಲ್ಲಿ ಈ ರೀತಿ ಭಾವನೆ ಕಾಡುವುದು ಸಹಜ. ಆದರೆ ಅದು ತುಂಬಾ ದಿನಗಳ ತುಡಿತವಾಗಿದ್ದರೆ, ಗಂಭೀರವಾಗಿ ಪರಿಗಣಿಸಬೇಕು. ಇರುವುದು ಒಂದೇ ಜೀವನ ನಿಮಗೆ ಅನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ನಿಮ್ಮ ಕೈನಲ್ಲೇ ಇದೆ. ನಿಮ್ಮನ್ನು ತಡೆಯುತ್ತಿರುವ ಕಾರಣಗಳು ಯಾವುವು ಎಂದು ತಿಳಿದುಕೊಳ್ಳಿ.
ಹೊಸ ಉತ್ಸಾಹದಿಂದ ಎದ್ದು 9 to 5 ಜಾಬ್ ಗೆ ಗೈಡ್ ಬಾಯ್ ಹೇಳಿ, ನಿಮಗೆ ನೀವೇ ಬಾಸ್ ಆಗಿ. ಸಂಪೂರ್ಣವಾಗಿ ಹೊಸ ವೃತ್ತಿಯನ್ನು ಆರಂಭಿಸಿ. ಈಗಿರುವ ಕೆರಿಯರ್ ಬಿಟ್ಟು ಬೇರೊಂದು ಕೆರಿಯರ್ ಶುರು ಮಾಡುವುದು ಖಂಡಿತಾ ಕಷ್ಟ. ಆದರೆ ಅದು ಅಸಾಧ್ಯವಲ್ಲ. ಅದಕ್ಕಾಗಿಯೇ ಇಂದು ನಾವು ನಿಮ್ಮ ವೃತ್ತಿಜೀವನವನ್ನು ಬದಲಾಯಿಸಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ನೀಡಲಿದ್ದೇವೆ.
ನಿಮ್ಮ ಕೆಲಸ ನಿಮಗೆ ಖುಷಿ ನೀಡುತ್ತಿದೆಯೇ?
ನಿಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನಿಮ್ಮ ಕೆಲಸದಲ್ಲಿ ತೃಪ್ತರಾಗಿರುವುದು ಯಶಸ್ಸಿಗೆ ಮುಖ್ಯವಾಗಿದೆ. ನೀವು ಯಾವುದೇ ಕಾರಣವಿಲ್ಲದೆ ಏನನ್ನಾದರೂ ಮಾಡುತ್ತಿದ್ದರೆ, ನೀವು ಹೆಚ್ಚು ಕಾಲ ಸಂತೋಷವಾಗಿರುವುದಿಲ್ಲ. ಅದು ನಿಮ್ಮ ವ್ಯಕ್ತಿತ್ವ ಮತ್ತು ಕೆಲಸದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ವೃತ್ತಿಯನ್ನು ಬದಲಾಯಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.
ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಂಡ ಮೇಲೆ ಹಿಂತಿರುಗಿ ನೋಡಬೇಡಿ
ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು, ಅನೇಕ ಬಾರಿ ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವರು ತಮ್ಮ ಉತ್ಸಾಹವನ್ನು ಅನುಸರಿಸಲು ತಮ್ಮ ವೃತ್ತಿಯನ್ನು ಬದಲಾಯಿಸುತ್ತಾರೆ. ಆದಾಗ್ಯೂ, ಅಂತಹ ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸನ್ನು ಬಲಪಡಿಸುವುದು ಬಹಳ ಮುಖ್ಯ.
ಒಂದು ಬೇಕೆಂದರೆ, ಮತ್ತೊಂದನ್ನು ಬಿಡಲೇಬೇಕು
ನೀವು ವೃತ್ತಿಯನ್ನು ಬದಲಾಯಿಸಿದರೆ, ನೀವು ಸಂಬಳ ಮತ್ತು ಸ್ಥಾನದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇದು ವ್ಯಾಪಾರ ಅಥವಾ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸುವ ಸಂದರ್ಭವೂ ಆಗಿರಬಹುದು. ಕೆಲವೊಮ್ಮೆ ವ್ಯವಹಾರಗಳು ಮತ್ತು ಸ್ಟಾರ್ಟ್ ಅಪ್ಗಳು ಲಾಭ ಗಳಿಸಲು ಸಮಯ ತೆಗೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ, ಸ್ವಲ್ಪ ಸಮಯದವರೆಗೆ ಹಣಕಾಸು ಸಮಸ್ಯೆ ಎದುರಾಗಬಹುದು. ನೀವು ಉದ್ಯೋಗ ಭದ್ರತೆ ಅಥವಾ ಇನ್ನೇನಾದರೂ ಚಿಂತೆ ಮಾಡುತ್ತಿದ್ದರೆ, ನೀವು ಕೆಲಸ ಮಾಡಲು ಬಯಸುವ ಹೊಸ ಉದ್ಯಮದಲ್ಲಿ ಸ್ವಯಂಸೇವಕರಾಗಿ. ನಿಮ್ಮ ಕೆಲಸವನ್ನು ಬಿಡಬೇಡಿ, ರಜಾದಿನಗಳಲ್ಲಿ ಕೆಲಸ ಮಾಡಲು ಪ್ರಯತ್ನಿಸಿ. ಸ್ಟಾರ್ಟ್ ಅಪ್ಗಳಿಗೂ ನೀವು ಇದನ್ನು ಮಾಡಬಹುದು.
ಒಂದೊಳ್ಳೆಯ ವಿದಾಯ ಇರಲಿ
ನೀವು ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿ ಅಥವಾ ಉದ್ಯಮದಲ್ಲಿ ಮೇಲಧಿಕಾರಿಗಳ ಜೊತೆ ನಿಮ್ಮ ಸಂಬಂಧವನ್ನು ಹಾಳು ಮಾಡಬೇಡಿ. ನಿಮಗೆ ಕೆಲವೊಮ್ಮೆ ಅವು ಮತ್ತೆ ಬೇಕಾಗಬಹುದು. ನಿಮ್ಮ ಪ್ರಸ್ತುತ ವೃತ್ತಿಜೀವನದ ಅನುಭವವನ್ನು ನಿಷ್ಪ್ರಯೋಜಕವೆಂದು ತಳ್ಳಿಹಾಕಬೇಡಿ. ಎಲ್ಲೆಡೆ ಕೆಲವು ಕೌಶಲ್ಯಗಳು ಬೇಕಾಗುತ್ತವೆ.
ಇನ್ನೇಕೆ ತಡ ನಿಮ್ಮ ಕನಸುಗಳಿಗೆ ನೀವೇ ರೆಕ್ಕೆ ತಂದರಷ್ಟೇ ಸ್ವಚಂದವಾಗಿ ಹಾರಾಡಲು ಸಾಧ್ಯ. ಗಟ್ಟಿ ನಿರ್ಧಾರ ಮಾಡಬೇಕಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ