• ಹೋಂ
  • »
  • ನ್ಯೂಸ್
  • »
  • Jobs
  • »
  • Career Woman: ತಾಯಿಯಾದ ನಂತರ ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಯನ್ನು ಬಲಿ ಕೊಡುವುದು ಏಕೆ?

Career Woman: ತಾಯಿಯಾದ ನಂತರ ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಯನ್ನು ಬಲಿ ಕೊಡುವುದು ಏಕೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫುಲ್ ಟೈಮ್‌ನಲ್ಲಿ ದುಡಿಮೆ ಮಾಡುವ ಮಹಿಳೆಯರು ಕೂಡ ಕೌಟುಂಬಿಕ ಜವಾಬ್ದಾರಿಯಿಂದ, ಮಕ್ಕಳ ನಿರ್ವಹಣೆಯಿಂದಾಗಿ ತಮ್ಮ ಕೆಲಸಕ್ಕೆ ತಿಲಾಂಜಲಿ ಹಾಕುತ್ತಿದ್ದಾರೆ.

  • Share this:

ಮೇ 14 ಅಂದರೆ ನಿನ್ನೆಯಷ್ಟೇ ವಿಶ್ವ ತಾಯಂದಿರ ದಿನ (Mother's Day 2023) . ವಾಟ್ಸಾಪ್, ಸ್ಟೇಟಸ್‌ನಲ್ಲಿ ಎಲ್ಲರೂ ಅಮ್ಮಂದಿರಿಗೆ ಶುಭಾಶಯ ಕೋರಿದ್ರು. ಅಮ್ಮನೇ ದೇವರು, ಅಮ್ಮನೇ ಸರ್ವಸ್ವ ಅಂತ ಡೈಲಾಗ್ ಹೊಡೆದಿದ್ರು. ಆದರೆ, ಯಾರೊಬ್ಬರೂ ಕೂಡ ಅಮ್ಮನ ಕನಸುಗಳ  (Life Goals) ಬಗ್ಗೆ ಚಿಂತೆ ಮಾಡಿಲ್ಲ. ಆಕೆ ಏನಂದು ಕೊಂಡಿದ್ಳು? ಅವಳ ಕನಸುಗಳೇನು (Dreams) ಅಂತ ಮನೆಯ ಯಾರೊಬ್ಬರೂ ಕೇಳೋದೇ ಇಲ್ಲ.


ಕಟ್ಟಿಕೊಂಡ ಕನಸುಗಳಿಗೆ ಲೆಕ್ಕ ಇರಲ್ಲ.. ಆಸೆಗಳೇನು ಕಡಿಮೆ ಇರೋದಿಲ್ಲ.. ಓದಿಗೆ ತಕ್ಕಂತೆ ಕೆಲಸ ಮಾಡಬೇಕು. ಸ್ವತಃದ್ದಾಗಿ ಉದ್ದಿಮೆ ಶುರುಮಾಡಬೇಕು. ನನ್ನ ಕಾಲಿನ ಮೇಲೆ ನಾನು ನಿಲ್ಲಬೇಕು. ಇನ್ನೊಬ್ಬರಿಗೆ ಮಾದರಿ ಆಗಬೇಕು ಅಂತ ಪ್ರತಿಯೊಬ್ಬ ಹೆಣ್ಣು ಅಂದುಕೊಂಡಿರುತ್ತಾಳೆ. ಆದರೆ, ಒಮ್ಮೆ ಮದ್ವೆ ಆದಮೇಲೆ ಆಕೆ ತನ್ನ ಕನಸುಗಳನ್ನೆಲ್ಲ ಹತ್ತಿಕ್ಕಲು ಶುರುಮಾಡುತ್ತಾಳೆ. ಹೊಂದಾಣಿಕೆಯ ಹೆಸರಿನಲ್ಲಿ ತನ್ನೆಲ್ಲ ಆಸೆಗಳನ್ನ ಬಲಿ ಕೊಡಲು ಆರಂಭಿಸುತ್ತಾಳೆ. ಅದ್ರಲ್ಲೂ, ಒಂದು ಮಗುವಿಗೆ ಜನ್ಮ ನೀಡಿ ತಾಯಿ ಪಟ್ಟ ಸಿಕ್ಕ ನಂತರವಂತೂ ಸಂಪೂರ್ಣವಾಗಿ ಆಕೆಯ ತನ್ನ ಭವಿಷ್ಯವನ್ನೇ ನಿರ್ಲಕ್ಷ್ಯ ಮಾಡಿಬಿಡುತ್ತಾಳೆ.
ಹೌದು.. ಜವಾಬ್ದಾರಿ ಮತ್ತು ಸಾಂಸ್ಕೃತಿಕ ಸ್ಥಾನಮಾನಗಳು ಭಾರತದ ಮಹಿಳೆಯರನ್ನ ಬೇರೆಯದೇ ರೀತಿಯಲ್ಲಿ ಬದಲಾಗುವಂತೆ ಮಾಡುತ್ತಿವೆ. ಕುಟುಂಬದಲ್ಲಿನ ಒತ್ತಡಗಳು, ಕೌಟುಂಬಿಕ ನಿರ್ವಹಣೆಯ ಸವಾಲಿನ ಎದುರು, ಮಹಿಳೆಯರ ವೈಯಕ್ತಿಕ ಜೀವನ ಕಮರಿ ಹೋಗುತ್ತಿದೆ. ಕೆಲಸಕ್ಕೆ ಹೋಗುವ ಮಹಿಳೆಯರು ಕೂಡ ಕೌಟುಂಬಿಕ ನಿರ್ವಹಣೆಯಿಂದಾಗಿ ಅವರ ವೃತ್ತಿ ಜೀವನಕ್ಕೆ, ಭವಿಷ್ಯದ ಕನಸುಗಳಿಗೆ ಮಂಕು ಬಡಿಯುತ್ತಿದೆ.


ಅದ್ರಲ್ಲೂ ಅಮ್ಮನಾದ ಮೇಲೆ ಮಹಿಳೆಯರ ವೃತ್ತಿ ಬರೀ ಮನೆಗೆ ಮಾತ್ರ ಸೀಮಿತ ಆಗುತ್ತಿದೆ. ಫುಲ್ ಟೈಮ್‌ನಲ್ಲಿ ದುಡಿಮೆ ಮಾಡುವ ಮಹಿಳೆಯರು ಕೂಡ ಕೌಟುಂಬಿಕ ಜವಾಬ್ದಾರಿಯಿಂದ, ಮಕ್ಕಳ ನಿರ್ವಹಣೆಯಿಂದಾಗಿ ತಮ್ಮ ಕೆಲಸಕ್ಕೆ ತಿಲಾಂಜಲಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಬಹಳ ಇದೆ. ಮೊದಲನೆಯದಾಗಿ ಮಹಿಳೆ ತಾಯಿಯಾದ ಬಳಿಕ ಆಕೆಗೆ ವೃತ್ತಿ ಜೀವನ ಮುಂದುವರಿಸಲು ಸರಿಯಾದ ಬೆಂಬಲ ಸಿಗದೇ ಇರುವುದು. ಹಾಗೇ, ಉದ್ಯೋಗದ ಸ್ಥಳದಲ್ಲಿಯೂ ಕೂಡ ಪೂರಕವಾದ ಸಮಯ ಬದಲಾವಣೆ ಮಾಡಿಕೊಡೋದಿಲ್ಲ. ಇದ್ರಿಂದಾಗಿ, ತಾಯಿಯಾದ ಬಳಿಕ ಬಹುತೇಕ ಮಹಿಳೆಯರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.


ಮಹಿಳೆಯರ ಈ ಪರಿಸ್ಥಿತಿ ಕುರಿತು ಸೈಕಾಲಜಿಸ್ಟ್ ಅಗಿರುವ ಪ್ರತಿಕಾ ಗೊನ್ಸಾಲ್ವ್ಸ್ ಹೇಳೋದೀಗೆ


"ಭಾರತದಲ್ಲಿ ಮಹಿಳೆಯರು ಆರಂಭದಿಂದಲೂ ಮತ್ತೊಬ್ಬರ ನಿರ್ವಹಣೆ ಮತ್ತು ಲಿಂಗತಾರತಮ್ಯದ ನಡುವೆಯೇ ಬೆಳೆಯುತ್ತಾರೆ. ಇದರ ಜತೆಗೆ ಮದುವೆ ಆಗಿ ತಾಯಿಯಾದ ಬಳಿಕ ಆಕೆಗೆ ದುಡಿಯಲು ಪೂರಕ ವಾತಾವರಣ ಸೃಷ್ಟಿಸಿಲ್ಲ. ಬಹುತೇಕ ಕಂಪನಿ, ಫ್ಯಾಕ್ಟರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.


ಪ್ರಾತಿನಿಧಿಕ ಚಿತ್ರ


ಅನೇಕ ಮನೆಗಳಲ್ಲೂ ದುಡಿಯುವ ಮಹಿಳೆಗೆ ಸೂಕ್ತ ಬೆಂಬಲ ಸಿಗುವುದಿಲ್ಲ. ಹಾಗೇ, ಅಮ್ಮನಾದ ಬಳಿಕ ದುಡಿಯಲು ಹೋಗುವ ಮಹಿಳೆಯರಿಗೆ ಒಳ್ಳೆಯ ಸಂಬಳವೂ ಸಿಗೋದಿಲ್ಲ. ಪುಟ್ಟ ಮಕ್ಕಳನ್ನ ದುಡಿಯುವ ಸ್ಥಳಕ್ಕೆ ಕರೆತಂದರೂ ಅಲ್ಲಿ ಮಕ್ಕಳ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇರೋದಿಲ್ಲ. ಇದ್ರಿಂದಾಗಿ ಮಹಿಳೆಯರಿಗೆ ಮನೆಯಲ್ಲಿ ಇದ್ದುಕೊಂಡು ಮಕ್ಕಳನ್ನ ನೋಡಿಕೊಳ್ಳುವುದೇ ಮೊದಲ ಕೆಲಸವಾಗುತ್ತದೆ."


ಮಹಿಳೆಯರ ವೃತ್ತಿ ಕನಸನ್ನು ಬೆಂಬಲಿಸೋದು ಹೇಗೆ..?


ಅಮ್ಮನಾದ ಮೇಲೂ ಕೆಲಸಕ್ಕೆ ತೆರಳುವ ಮಹಿಳೆಯರನ್ನ ಪ್ರೋತ್ಸಾಹಿಸಲು ಹತ್ತಾರು ದಾರಿ ಇವೆ. ಮೊದಲನೆಯದಾಗಿ ಲಿಂಗತಾರತಮ್ಯವನ್ನ ತೊಲಗಿಸುವ ನಿಟ್ಟಿನಲ್ಲಿ ಕಾನೂನನ್ನ ಮತ್ತಷ್ಟು ಬಲಪಡಿಸಬೇಕು. ಪಿತೃತ್ವ ರಜೆ ಮೂಲಕ ತಂದೆಯರಿಗೂ ಕೂಡ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಹಂಚಿಕೊಳ್ಳುವಂತೆ ಮಾಡಬೇಕು. ಮಹಿಳೆಯರಿಗೆ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿಕೊಡಬೇಕು. ಹಾಗೇ, ದುಡಿಯುವ ಸ್ಥಳಗಳಲ್ಲಿ ಮಕ್ಕಳ ನಿರ್ವಹಣೆಗೆ ಪ್ರತ್ಯೇಕ ಅವಕಾಶ ಕಲ್ಪಿಸಿಕೊಡಬೇಕು.


ಇದನ್ನೂ ಓದಿ: UPSC Success Story: ಮದುವೆಯಾಗಿ ಮಕ್ಕಳಾದ ಬಳಿಕ IPS ಆಗಿ ಮಿಂಚಿದ ರಿಚಾ ತೋಮರ್


ಈ ರೀತಿಯ ವ್ಯವಸ್ಥೆ ಕಲ್ಪಿಸಿದ್ರೆ ಮಹಿಳೆಯರಿಗೆ ದುಡಿಯುವ ಉತ್ಸಾಹ ಹೆಚ್ಚಾಗುತ್ತದೆ. ಮನೆಯಲ್ಲೂ ಕೂಡ ಮಹಿಳೆಯರಿಗೆ ಬೆಂಬಲ ಕೊಟ್ಟರೆ, ಎರಡು ಕಡೆಯೂ ಮಹಿಳೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ತೋರುತ್ತಾಳೆ ಅನ್ನುತ್ತಾರೆ ಸೈಕಾಲಜಿಸ್ಟ್ ಆಗಿರುವ ಪ್ರತೀಕಾ.


ಸಾಮಾಜಿಕ ಸ್ಥಿತಿ-ಗತಿಗಳ ಹೆಸರಿನಲ್ಲಿ, ಸಂಸ್ಕೃತಿಯ ಗೆರೆ ಎಳೆದು ಭಾರತದ ಮಹಿಳೆಯರಿಗೆ ಬಂಧನದ ಗೆರೆ ಎಳೆದಿರುತ್ತಾರೆ. ಆದರೆ, ಮನೆಯಲ್ಲಿ ಆಕೆಗೆ ಉತ್ತಮವಾದ ಬೆಂಬಲ ದೊರೆತರೆ, ದುಡಿಯುವ ಸ್ಥಳಗಳಲ್ಲೂ ಪೂರಕವಾದ ವಾತವರಣ ಸೃಷ್ಟಿಯಾದರೆ, ಅಮ್ಮನಾದ ಬಳಿಕವೂ ಮಹಿಳೆ ತನ್ನ ನೆಚ್ಚಿನ ವೃತ್ತಿಗಳಿಗೆ ಹೋಗಬಹುದು. ಕಂಪನಿಗಳಲ್ಲಿ ಎಲ್ಲರಂತೆಯೇ ದುಡಿಯಬಹುದು.

top videos
    First published: