• ಹೋಂ
 • »
 • ನ್ಯೂಸ್
 • »
 • jobs
 • »
 • Career Tips: ಕೆರಿಯರ್ ಬಿಲ್ಡ್​ ಮಾಡೋದಕ್ಕೆ ಸ್ಟಾರ್ಟ್ಅಪ್ ಮತ್ತು ಕಾರ್ಪೊರೇಟ್​ಗಳಲ್ಲಿ ಯಾವುದು ಬೆಸ್ಟ್? ಆಯ್ಕೆ ಮಾಡುವ ಮೊದಲು ಇದನ್ನು ಓದಿ

Career Tips: ಕೆರಿಯರ್ ಬಿಲ್ಡ್​ ಮಾಡೋದಕ್ಕೆ ಸ್ಟಾರ್ಟ್ಅಪ್ ಮತ್ತು ಕಾರ್ಪೊರೇಟ್​ಗಳಲ್ಲಿ ಯಾವುದು ಬೆಸ್ಟ್? ಆಯ್ಕೆ ಮಾಡುವ ಮೊದಲು ಇದನ್ನು ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟಾರ್ಟ್‌ಅಪ್ ಮತ್ತು ಕಾರ್ಪೊರೇಶನ್​ ಕಂಪೆನಿಗಳಲ್ಲಿ ಕೆಲಸ ಮಾಡುವ ನಡುವಿನ ನಿರ್ಧಾರವು ಮುಂದಿನ ಕೆಲವು ವರ್ಷಗಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸ್ಟಾರ್ಟ್‌ಅಪ್‌ಗಳು ಉದ್ಯೋಗಿ ಸೌಕರ್ಯಗಳಿಗೆ ಆದ್ಯತೆ ನೀಡುತ್ತವೆ, ಹೆಚ್ಚಿನ ಅವಕಾಶಗಳನ್ನು ನೀಡುತ್ತವೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತವೆ. ಅದೇ ರೀತಿ ಕಾರ್ಪೊರೇಶನ್​ ಸಹ. ಆದರೆ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡ್ಬೇಕು ಎಂಬ ಗೊಂದಲ ಇದ್ರೆ ಈ ಲೇಖನವನ್ನೊಮ್ಮೆ ಓದಿ.

ಮುಂದೆ ಓದಿ ...
 • Share this:

ಒಮ್ಮೆ ಓದು ಮುಗೀತು ಅಂದ್ರೆ ಸಾಕು, ಯಾವ ಕಂಪೆನಿಯಲ್ಲಿ (Company) ಕೆಲಸ ಸಿಗುತ್ತೆ? ಸಿಕ್ಕ ಕಂಪೆನಿ ಎಂತದ್ದೋ? ಅಲ್ಲಿನ ಕೆಲಸ ಹೇಗಿದೆಯೋ? ಅದು ಸ್ಟಾರ್ಟ್ಅಪ್ ಕಂಪೆನಿಯೋ (Startup Company) ಅಥವಾ ಕಾರ್ಪೊರೇಟ್ ಕಂಪೆನಿಯೋ? (Corporate Company) ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಇವೆಲ್ಲಾ ಪ್ರಶ್ನೆಗಳಲ್ಲಿ ತುಂಬಾನೇ ಕಾಡುವ ಒಂದು ಪ್ರಶ್ನೆಯೆಂದರೆ, ಅದು ನಾವು ನಮ್ಮ ಕೆರಿಯರ್ (Career) ಅನ್ನು ಸ್ಟಾರ್ಟ್ಅಪ್ ಕಂಪೆನಿಯಿಂದ ಶುರು ಮಾಡಬೇಕೆ ಅಥವಾ ದೊಡ್ಡ ಕಾರ್ಪೊರೇಟ್ ಕಂಪೆನಿಯಿಂದ ಶುರು ಮಾಡಬೇಕೆ ಎಂಬುದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಿಸ್ಸಂದೇಹವಾಗಿ ನಾವು ಈ ಎರಡರಲ್ಲಿ ಯಾವುದು ಬೆಸ್ಟ್ ಅಂತ ತೆಗೆದುಕೊಳ್ಳುವ ನಿರ್ಧಾರ ನಮ್ಮ ವೃತ್ತಿಜೀವನದ ಮುಂದಿನ ಅನೇಕ ವರ್ಷಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಅಂತ ಹೇಳಬಹುದು.


ಆದ್ದರಿಂದ, ಯಾವ ರೀತಿಯ ಕಂಪೆನಿಯಿಂದ ನಮ್ಮ ವೃತ್ತಿಜೀವನವನ್ನು ಶುರು ಮಾಡಬೇಕು ಅನ್ನೋದನ್ನ ಚೆನ್ನಾಗಿ ಮೊದಲೇ ಯೋಚಿಸಬೇಕು. ಇದಲ್ಲದೆ, ಈ ಎರಡೂ ಆಯ್ಕೆಗಳು ತಮ್ಮದೇ ಆದ ಅನುಕೂಲತೆಗಳನ್ನು ಮತ್ತು ಅನಾನುಕೂಲತೆಗಳನ್ನು ಹೊಂದಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಈ ನಿರ್ಧಾರ ನಮ್ಮ ದೃಷ್ಟಿಕೋನ, ಆದ್ಯತೆಗಳು, ಮಹತ್ವಾಕಾಂಕ್ಷೆಗಳು ಮತ್ತು ನಾವು ಅಳವಡಿಸಿಕೊಳ್ಳಲು ಬಯಸುವ ಕೆಲಸದ ರೀತಿ-ನೀತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ.


 • ಸ್ಟಾರ್ಟ್ಅಪ್ ಮತ್ತು ಕಾರ್ಪೊರೇಟ್ ಕಂಪೆನಿಗಳಲ್ಲಿ ಯಾವುದು ಬೆಸ್ಟ್?


ಸ್ಟಾರ್ಟ್ಅಪ್ ಎಂಬ ಪದವನ್ನು ಕೇಳಿದ ತಕ್ಷಣ, ನಾವು ಹೆಚ್ಚು ಮಂದಿ ನಮಗೆ ಹೊಂದಿಕೊಳ್ಳುವ ಕೆಲಸದ ವಾತಾವರಣದಲ್ಲಿ ಕೆಲಸ ಮಾಡಲಿದ್ದೇವೆ ಅಂತ ನಾವು ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತೇವೆ. ಅಲ್ಲಿ ಹೊಸತನ ಮತ್ತು ಸಹಯೋಗ ತುಂಬಾನೇ ಇರುತ್ತದೆ. ಆದರೆ ಸ್ಟಾರ್ಟ್ಅಪ್ ಗಳಲ್ಲಿ ಕೆಲಸದ ವಿಷಯದಲ್ಲಿ ಅಸ್ಥಿರತೆಯ ಪ್ರಜ್ಞೆ ಹೆಚ್ಚಾಗಿ ನಮ್ಮನ್ನು ಕಾಡುತ್ತದೆ.


ಇದನ್ನೂ ಓದಿ: ಆನ್​ಲೈನ್​ ಮೂಲಕವೇ ಎಂಟ್ರಟೈನ್ ಮಾಡುವ ಪ್ರತಿಭೆ ನಿಮ್ಮಲ್ಲಿದ್ದರೆ, 5 ಆಯ್ಕೆಗಳು ಇಲ್ಲಿದೆ ನೋಡಿ


ಮತ್ತೊಂದೆಡೆ, ಕಾರ್ಪೊರೇಟ್ ಕಂಪೆನಿಗಳು ಅದರಲ್ಲೂ ವಿಶೇಷವಾಗಿ ಟೆಕ್ ಕಂಪೆನಿಗಳು ಕೆಲಸದ ವಿಷಯದಲ್ಲಿ ಹೆಚ್ಚು ಸ್ಥಿರವಾದ ಆದಾಯ ಮತ್ತು ಉತ್ತಮವಾಗಿ ಜವಾಬ್ದಾರಿಗಳನ್ನು ಸಹ ನೀಡುತ್ತಾರೆ. ಆದರೆ ಇಲ್ಲಿ ನಾವು ಯೋಚಿಸಿದಷ್ಟು ವೇಗವಾಗಿ ಬೆಳೆಯಲು ಮತ್ತು ಬಡ್ತಿಯನ್ನು ಪಡೆಯಲು ಆಗುವುದಿಲ್ಲ.


ಇವೆರಡನ್ನು ನೋಡಿದರೆ ಯಾರಿಗಾದರೂ ನಿಜಕ್ಕೂ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಅಂತ ಗೊಂದಲವಾಗುತ್ತದೆ. ಈ ಲೇಖನದಲ್ಲಿ ಈ ಎರಡು ಆಯ್ಕೆಗಳ ಸಾಧಕ ಮತ್ತು ಭಾದಕಗಳನ್ನು ನೀಡಲಾಗಿದೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಮೊದಲು ಇದನ್ನು ಚೆನ್ನಾಗಿ ಓದಿಕೊಳ್ಳಿ.


 • ಸ್ಟಾರ್ಟ್ಅಪ್ ನ ಅನುಕೂಲಗಳು ಮತ್ತು ಅನಾನುಕೂಲಗಳು ಹೀಗಿವೆ..


ಈಗಂತೂ ಭಾರತದಲ್ಲಿ ಸ್ಟಾರ್ಟ್ಅಪ್ ಕಂಪೆನಿಗಳು ತುಂಬಾನೇ ಶುರುವಾಗುತ್ತಿವೆ ಅಂತ ಹೇಳಬಹುದು. ಏಕೆಂದರೆ ಸ್ಟಾರ್ಟ್ಅಪ್ ಗಳು ಯುವ ಜನರಿಂದ ಶುರು ಮಾಡಲ್ಪಟ್ಟ ಕಂಪೆನಿಗಳಾಗಿವೆ ಮತ್ತು ಅವರ ಆಲೋಚನೆಗಳು ಮತ್ತು ಅವರ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಕ್ರಾಂತಿಯನ್ನುಂಟು ಮಾಡಬಹುದು.


ಪೇಟಿಎಂ, ನೈಕಾ, ಜೊಮ್ಯಾಟೊ, ಓಯೋ, ಓಲಾ, ಸಿಆರ್‌ಇಡಿ ಮತ್ತು ಫ್ಲಿಪ್ಕಾರ್ಟ್ ನಂತಹ ಅನೇಕ ಸ್ಟಾರ್ಟ್ಅಪ್ ಗಳು ತಮ್ಮ ನವೀನ ಪರಿಹಾರಗಳು, ಮಾರ್ಕೆಟಿಂಗ್ ತಂತ್ರಗಳು ಮತ್ತು ಸೃಜನಶೀಲ ಉದ್ಯಮಶೀಲ ಕೌಶಲ್ಯಗಳೊಂದಿಗೆ ಭಾರತೀಯ ಆರ್ಥಿಕತೆಯ ಬೆಳವಣಿಗೆಯನ್ನು ಹೆಚ್ಚಿಸಿವೆ.


ಜನಪ್ರಿಯತೆಯನ್ನು ಪಡೆದ ನಂತರವೂ, ಈ ಕಂಪೆನಿಗಳು ಇನ್ನೂ ಹೊಸ ಹೊಸ ಆಲೋಚನೆಗಳನ್ನು ಪರಿಚಯಿಸುತ್ತಲೇ ಇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


 • ಸ್ಟಾರ್ಟ್ಅಪ್ ಕಂಪೆನಿಗಳಲ್ಲಿರುವ ಅನುಕೂಲಗಳು


1. ಉದ್ಯೋಗಿಗಳ ಆರಾಮಕ್ಕೆ ಆದ್ಯತೆ ನೀಡುತ್ತವೆ: ಹಲವಾರು ಸ್ಟಾರ್ಟ್ಅಪ್ ಗಳು ತಮ್ಮ ಉದ್ಯೋಗಿಗಳ ಅನುಕೂಲತೆ ಮತ್ತು ಸೌಕರ್ಯಗಳಿಗೆ ಎಲ್ಲಕ್ಕಿಂತ ಹೆಚ್ಚಾಗಿ ಆದ್ಯತೆ ನೀಡುತ್ತಾರೆ ಅಂತ ಹೇಳಬಹುದು.


ಅನೌಪಚಾರಿಕ ಡ್ರೆಸ್ ಕೋಡ್ ಗಳು, ಮೋಜಿನ ಚಿಂತನ-ಮಂಥನ ಅಧಿವೇಶನಗಳು, ಆರೋಗ್ಯಕರ ಚರ್ಚೆಗಳು, ದೂರದ ಕೆಲಸದ ಅವಕಾಶಗಳು ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಉದ್ಯೋಗಿ ವಿಶ್ರಾಂತಿ ಪ್ರದೇಶಗಳು ಈ ಸಣ್ಣ ಕಂಪೆನಿಗಳು ಹೆಚ್ಚು ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ತೆಗೆದುಕೊಳ್ಳುವ ಕ್ರಮಗಳಲ್ಲಿ ಸೇರಿವೆ.


2. ಇಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತೀರಿ: ಮೊದಲೇ ಹೇಳಿದಂತೆ, ನಾವೀನ್ಯತೆ ಮತ್ತು ಉತ್ಸಾಹವು ಪ್ರತಿ ಸ್ಟಾರ್ಟ್ಅಪ್ ನ ಎರಡು ಶಕ್ತಿಗಳಾಗಿವೆ ಮತ್ತು ಇದಕ್ಕಾಗಿಯೇ ಉದ್ಯೋಗಿಯ ಬುದ್ಧಿವಂತಿಕೆಯನ್ನು ಇಲ್ಲಿ ಪ್ರಶಂಸಿಸಲಾಗುತ್ತದೆ ಮತ್ತು ಗುರುತಿಸಲಾಗುತ್ತದೆ.


ಸ್ಟಾರ್ಟ್ಅಪ್ ಅನ್ನು ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಪ್ರಾರಂಭಿಸಲಾಗಿರುವುದರಿಂದ ಮತ್ತು ಸಾಮಾನ್ಯವಾಗಿ 50 ಕ್ಕಿಂತ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯ ನಿರ್ವಹಿಸುವುದರಿಂದ, ಒಬ್ಬ ವ್ಯಕ್ತಿಗೆ ಕಲಿಯಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ.


3. ನೀವು ಕಂಪೆನಿಯೊಂದಿಗೆ ಬೆಳೆಯುತ್ತೀರಿ: ನೀವು ಸಣ್ಣ ತಂಡದ ಭಾಗವಾಗಿರುವುದರಿಂದ, ನಿಮ್ಮ ಕಠಿಣ ಪರಿಶ್ರಮ ಮತ್ತು ಕೊಡುಗೆ ನೇರವಾಗಿ ಕಂಪನಿಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.


ಬೇರೆ ರೀತಿಯಲ್ಲಿ ಹೇಳುವುದಾದರೆ, ಕಂಪೆನಿಯು ಬೆಳೆದಂತೆ ನಿಮ್ಮಲ್ಲೂ ಸಹ ಸಾಧನೆ ಮತ್ತು ಹೆಮ್ಮೆಯ ಪ್ರಜ್ಞೆ ಮೂಡುತ್ತದೆ. ಇದಲ್ಲದೆ, ಸದಸ್ಯರ ಗುಂಪಿನೊಂದಿಗೆ ನಿಕಟವಾಗಿ ಕೆಲಸ ಮಾಡುವಾಗ, ನೀವು ಅತ್ಯಂತ ಪ್ರಮುಖ ಕೌಶಲ್ಯವನ್ನು ಮೈಗೂಡಿಸಿಕೊಳ್ಳುತ್ತೀರಿ.


 • ಸ್ಟಾರ್ಟ್ಅಪ್ ನ ಅನಾನುಕೂಲತೆಗಳು


1. ಉದ್ಯೋಗ ಭದ್ರತೆಯ ಕೊರತೆ: ಅನೇಕ ಸ್ಟಾರ್ಟ್ಅಪ್ ಗಳು ಕೆಲವೇ ವರ್ಷಗಳಲ್ಲಿ ವಿಫಲವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಹಾಗಾಗಿ ಸ್ಟಾರ್ಟ್ಅಪ್ ಗೆ ಸಂಬಂಧಿಸಿದ ದೊಡ್ಡ ಅಪಾಯದ ಅಂಶವೆಂದರೆ ಇಲ್ಲಿ ಉದ್ಯೋಗ ಭದ್ರತೆ ಇರುವುದಿಲ್ಲ.


ಕೆಲವೊಂದು ಸ್ಟಾರ್ಟ್ಅಪ್ ಗಳು ಯಶಸ್ವಿಯಾಗಿ ಪ್ರಸಿದ್ಧ ಯುನಿಕಾರ್ನ್ ಗಳಾಗಿ ಪರಿವರ್ತನೆಗೊಂಡಿವೆ. ಆದರೆ ಇಂದು ಸ್ಟಾರ್ಟ್ಅಪ್ ಮಿಲಿಯನ್ ಡಾಲರ್ ವ್ಯವಹಾರವನ್ನು ಮಾಡುತ್ತಿದ್ದು, ಮರುದಿನವೇ ಅದು ದಿವಾಳಿಯಾಗಬಹುದು.


2. ನೀವು ಕಡಿಮೆ ಸಂಬಳ ಪಡೆಯುತ್ತೀರಿ: ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿ, ಸ್ಟಾರ್ಟ್ಅಪ್ ಗಳು ಧನಸಹಾಯಕ್ಕಾಗಿ ಹೆಣಗಾಡುತ್ತವೆ. ಪರಿಣಾಮವಾಗಿ, ಉದ್ಯೋಗಿಗಳು ನಿಜವಾಗಿಯೂ ಅರ್ಹವಾದ ವೇತನವನ್ನು ಪಡೆಯದಿರಬಹುದು.


ಸ್ಟಾರ್ಟ್ಅಪ್ ಹಲವಾರು ವರ್ಷಗಳ ಅಸ್ತಿತ್ವದ ನಂತರ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುತ್ತದೆ, ಇದು ಸಾಮಾನ್ಯವಾಗಿ ಮಲ್ಟಿ-ಟಾಸ್ಕ್ ಮಾಡುತ್ತಿರುವ ಉದ್ಯೋಗಿಗಳಲ್ಲಿ ಹತಾಶೆಯನ್ನು ಹೆಚ್ಚಿಸುತ್ತದೆ.


ನೀವು ಕಂಪೆನಿಯ ಷೇರುಗಳನ್ನು ಮತ್ತು ಹಲವಾರು ಸವಲತ್ತುಗಳನ್ನು ಪಡೆಯಬಹುದು, ಆದರೆ ಕೈಗೆ ಬರುವ ಸಂಬಳ ಮಾತ್ರ ಕಡಿಮೆ ಇರುತ್ತದೆ.


3. ಕೆಲಸದ ಹೊರೆ ತುಂಬಾ ಇರುತ್ತದೆ: ಸ್ಟಾರ್ಟ್ಅಪ್ ಗಳಲ್ಲಿ ನೀವು ಪ್ರತಿದಿನ ಸಾಮಾನ್ಯ ಕೆಲಸದ ಸಮಯಕ್ಕಿಂತ ಹೆಚ್ಚಿನದನ್ನು ಮೀಸಲಿಡುವ ನಿರೀಕ್ಷೆಯಿದೆ. ಈ ಕಂಪೆನಿಗಳ ಉದ್ಯೋಗಿಗಳು ಹೆಚ್ಚಿನ ಮಾನಸಿಕ ಒತ್ತಡ ಅನುಭವಿಸಬಹುದು.


ಆದ್ದರಿಂದ, ನಿಮ್ಮ ಬಾಸ್ ನಿಮಗೆ ಮನೆಯಿಂದ ಕೆಲಸ ಮಾಡುವ ಆರ್ಡರ್​ ಅನ್ನೂ ನೀಡಬಹುದು. ಜೊತೆಗೆ ನಿಮ್ಮ ರಜಾದಿನಗಳಲ್ಲಿ ನೀವು ಸಾಕಷ್ಟು ಕರೆಗಳನ್ನು ಸ್ವೀಕರಿಸಲು ಸಿದ್ಧರಾಗಿರಬೇಕಾಗುತ್ತದೆ.


4. ಕಾರ್ಪೊರೇಟ್ ಕಂಪೆನಿಗಳ ಅನುಕೂಲಗಳು ಮತ್ತು ಅನಾನುಕೂಲಗಳು


ಸ್ಟಾರ್ಟ್ಅಪ್ ಗಳಿಗಿಂತ ಭಿನ್ನವಾಗಿರುತ್ತವೆ ಈ ಕಾರ್ಪೊರೇಟ್ ಕಂಪನಿಗಳು ಅಂತ ಹೇಳಬಹುದು. ಇವುಗಳು ಉತ್ತಮವಾಗಿ ರಚಿತವಾದ ಘಟಕಗಳಾಗಿರುತ್ತವೆ.


ಈ ಕಂಪೆನಿಗಳು ವಿವಿಧ ಹಂತಗಳು ಮತ್ತು ವಿಭಾಗಗಳಲ್ಲಿ ಕೆಲಸವೂ ಸುಲಭವಾಗಿ ನಡೆಯಲು ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ. ಈ ಸುಸ್ಥಾಪಿತ ಕಂಪೆನಿಗಳಲ್ಲಿ ಕೆಲಸ ಮಾಡಲು ನೀವು ಬೆಳಗ್ಗೆ ಹೋದರೆ ನಿಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಾಕು ಎಂಬಂತಿರುತ್ತದೆ.


ಸಾಂದರ್ಭಿಕ ಚಿತ್ರ


 • ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸ ಮಾಡುವುದರ ಅನುಕೂಲಗಳು


1. ಕಂಪೆನಿ ಬ್ರ್ಯಾಂಡ್ ನಿಮ್ಮ ಕೆರಿಯರ್ ಗೆ ಬಲ ನೀಡುತ್ತದೆ: ಕೆಲಸಕ್ಕೆ ಅಂತ ಹೋದಾಗ ನಿಮ್ಮ ರೆಸ್ಯೂಮ್ ನಲ್ಲಿ ನೀವು ಓದಿದ ಪ್ರತಿಷ್ಠಿತ ಶಾಲೆಗಳು, ವಿಶ್ವವಿದ್ಯಾಲಯಗಳನ್ನು ಕಂಪೆನಿಗಳು ಮೊದಲು ನೋಡಲು ಇಷ್ಟಪಡುತ್ತಾರೆ.


ನಿಮ್ಮ ಭವಿಷ್ಯದ ಉದ್ಯೋಗದಾತರು ಸಹ ನಿಮ್ಮ ಕ್ರಿಯಾತ್ಮಕ ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಜೊತೆಗೆ ನೀವು ಯಾವ ಯಾವ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೀರಿ ಅಂತ ಸಹ ನೋಡುತ್ತವೆ. ಗೂಗಲ್ ಅಥವಾ ಇನ್ಫೋಸಿಸ್ ನಲ್ಲಿ ಕೆಲಸ ಮಾಡಿದ್ದೀರಿ ಎಂದರೆ ಅದು ನಿಮ್ಮ ಕೆರಿಯರ್ ಗೆ ಇನ್ನಷ್ಟು ಬಲವನ್ನು ತಂದು ಕೊಡುತ್ತದೆ.


2. ಆರ್ಥಿಕ ಭದ್ರತೆ ಮತ್ತು ಕಡಿಮೆ ಒತ್ತಡ: ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾಸಿಕ ವೇತನವನ್ನು ಹೊರತು ಪಡಿಸಿ ಬೇರೆ ಯಾವುದೇ ಧನಸಹಾಯವನ್ನು ಪಡೆಯಲು ಅವಲಂಬಿಸಿರುವುದಿಲ್ಲ.


ಸಂಕ್ಷಿಪ್ತವಾಗಿ ಹೇಳುವುದಾದರೆ, ಆರ್ಥಿಕವಾಗಿ ಸುರಕ್ಷಿತವಾಗಲು ನೀವು ಹೆಣಗಾಡಬೇಕಾಗಿಲ್ಲ. ಇದಲ್ಲದೆ, ಅವರು ನಿಮ್ಮನ್ನು ಉಳಿಸಿಕೊಳ್ಳಲು ನಿಮ್ಮ ತರಬೇತಿ, ಕೌಶಲ್ಯ ಮತ್ತು ಮರುಕುಶಲೀಕರಣ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.


ಇದಲ್ಲದೆ, ಹೆಚ್ಚಿನ ಸಂಬಳದ ಪ್ಯಾಕೇಜ್ ಗಳ ಜೊತೆಗೆ, ಪ್ರಯಾಣ ಭತ್ಯೆ, ವೈದ್ಯಕೀಯ ವಿಮೆಯಂತಹ ಹಲವಾರು ಪ್ರಯೋಜನಗಳನ್ನು ಸಹ ನೀವು ಪಡೆಯಬಹುದು.


3. ನಿರ್ದಿಷ್ಟವಾದ ಕೆಲಸ ಮಾಡುತ್ತೀರಿ: ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವ ಗಮನಾರ್ಹ ಪ್ರಯೋಜನವೆಂದರೆ ಪ್ರತಿ ಪಾತ್ರಕ್ಕೂ ಪ್ರತಿಭಾವಂತ ವ್ಯಕ್ತಿಗಳು ಇರುತ್ತಾರೆ.


ಪಾತ್ರಗಳ ಈ ನಿರ್ದಿಷ್ಟತೆಯಿಂದಾಗಿಯೇ ನೀವು ನಿಮ್ಮ ಕೌಶಲ್ಯವನ್ನು ಕರಗತ ಮಾಡಿಕೊಳ್ಳುತ್ತೀರಿ ಮತ್ತು ಪರಿಣತಿ ಪಡೆಯುತ್ತೀರಿ. ಇದಲ್ಲದೆ, ನಿಮ್ಮ ಜವಾಬ್ದಾರಿಗಳ ಮೇಲೆ ಕೇಂದ್ರೀಕರಿಸಲು ನಿಮ್ಮನ್ನು ಕೇಳಿದಾಗ, ನೀವು ಅದನ್ನು ಪೂರ್ಣ ಮನಸ್ಸಿನಿಂದ ಮತ್ತು ಯಾವುದೇ ರೀತಿಯ ತಪ್ಪುಗಳಿಗೆ ಅವಕಾಶ ನೀಡದೆ ಮಾಡುತ್ತೀರಿ.


 • ಕಾರ್ಪೊರೇಟ್ ಕಂಪೆನಿಗಳ ಅನಾನುಕೂಲತೆಗಳು


1. ನೀವು ಎಂದಿಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿರುವುದಿಲ್ಲ: ಸ್ಟಾರ್ಟ್ಅಪ್ ನಲ್ಲಿ ವ್ಯವಹಾರದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಭಾಗವಹಿಸಬಹುದು.


ಆದರೆ, ಕಾರ್ಪೊರೇಟ್ ಸೆಟಪ್ ನಲ್ಲಿ ನೀವು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಮಾಡಿದ ನಿರ್ಧಾರಗಳನ್ನು ಮಾತ್ರ ಅನುಸರಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ವಾಸ್ತವವಾಗಿ, ಕಾರ್ಯತಂತ್ರವನ್ನು ಸ್ವಲ್ಪ ಬದಲಾಯಿಸಲು ಸಹ, ನೀವು ಅನೇಕ ತಂಡದ ನಾಯಕರು ಮತ್ತು ವ್ಯವಸ್ಥಾಪಕರ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.


2. ಕೆಲಸ ಉಳಿಸಿಕೊಂಡು ಬಡ್ತಿ ಪಡೆಯಲು ಕಷ್ಟ ಪಡಬೇಕಾಗುತ್ತದೆ: ಪ್ರತಿಯೊಬ್ಬ ವ್ಯಕ್ತಿಯು ಪ್ರಸಿದ್ಧ ಕಂಪೆನಿಗಳಿಂದ ನೇಮಕಗೊಳ್ಳಲು ಪ್ರಯತ್ನ ಪಡುತ್ತಿರುತ್ತಾರೆ ಅಂತ ಹೇಳಬಹುದು.


ಈ ಹೋರಾಟವು ಕೆಲಸವನ್ನು ಪಡೆಯುವುದರೊಂದಿಗೆ ಕೊನೆಗೊಳ್ಳುವುದಿಲ್ಲ, ಇದು ಅವರ ಪ್ರಸ್ತುತ ಸ್ಥಾನವನ್ನು ಬಿಗಿಯಾಗಿ ಹಿಡಿದಿಡಲು ಅಥವಾ ಬಡ್ತಿ ಪಡೆಯಲು ನೀವು ಸಂಸ್ಥೆಯೊಳಗೆ ಹೋರಾಡಬೇಕಾಗುತ್ತದೆ.
3. ಹೊಸ ಪ್ರಯೋಗಗಳಿಗೆ ಅವಕಾಶವಿರುವುದಿಲ್ಲ: ನೀವು ಪ್ರತಿದಿನ ಹೊಸದನ್ನು ಪ್ರಯತ್ನಿಸುವ ಉತ್ಸಾಹದಿಂದ ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸುತ್ತಿದ್ದರೆ, ಅಲ್ಲಿ ಈ ಅವಕಾಶವಿರುವುದಿಲ್ಲ.

top videos


  ಕಾರ್ಪೊರೇಟ್ ಉದ್ಯೋಗಿಗಳು ಸಂಸ್ಥೆಯೊಳಗೆ ತಮ್ಮ ಪ್ರೊಫೈಲ್ ಅಥವಾ ಪಾತ್ರವನ್ನು ಪೂರೈಸದ ಕೌಶಲ್ಯವನ್ನು ಕಲಿಯುವುದು ಬಹಳ ಅಪರೂಪ. ನಿಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ, ನೀವು ನೇಮಕಗೊಂಡ ಕೆಲಸಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.

  First published: