• ಹೋಂ
  • »
  • ನ್ಯೂಸ್
  • »
  • Jobs
  • »
  • Interview Tips-20: ನೀವು 5 ವರ್ಷಗಳಲ್ಲಿ ಏನಾಗಬೇಕು ಅಂದುಕೊಂಡಿದ್ದೀರಿ; ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ?

Interview Tips-20: ನೀವು 5 ವರ್ಷಗಳಲ್ಲಿ ಏನಾಗಬೇಕು ಅಂದುಕೊಂಡಿದ್ದೀರಿ; ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮೊದಲಿಗೆ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಫ್ಯೂಚರ್​ ಪ್ಲ್ಯಾನ್​ ಏನು ಎಂದು ಹೇಳಿದರೆ ಪರ್ಸನಲ್​​ ಆಗಿ ಉತ್ತರಿಸಬಾರದು. ನಿಮ್ಮ ಕರಿಯರ್​ ಫ್ಯೂಚರ್​ ಬಗ್ಗೆ ಉತ್ತರಿಸಬೇಕು.

  • Share this:

ಜಾಬ್​​ ಇಂಟರ್​ವ್ಯೂ (Job Interview) ಎಂದ ತಕ್ಷಣ ಬಹುತೇಕ ಅಭ್ಯರ್ಥಿಗಳಿಗೆ (Candidates) ಸಣ್ಣ ಅಳುಕು ಇರುತ್ತದೆ. ಏನು ಕೇಳುತ್ತಾರೋ, ಉತ್ತರ ಗೊತ್ತಿಲ್ಲದಿದ್ದರೆ ಏನು ಮಾಡೋದು ಅಂತೆಲ್ಲಾ ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಸಂದರ್ಶನಕ್ಕೂ ಮುನ್ನ ಈ ಪ್ರಶ್ನೆ ನಿಮಗೆ ಬರಲೇಬೇಕು. ಕೆಲಸಕ್ಕಾಗಿ (Job) ನಡೆಯುವ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ರೀತಿಯಲ್ಲಿ ಉತ್ತರಿಸುವುದು ಹೇಗೆ? ಈ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ಆತ್ಮವಿಶ್ವಾಸದಿಂದ ಇರುವುದು ಸಾಧ್ಯವಿಲ್ಲ.


ಜಾಬ್​ ಇಂಟರ್​ ವ್ಯೂಗಳಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಬಾರಿ ಕೇಳುವ ಪ್ರಶ್ನೆಗೆ ಉತ್ತರವನ್ನು ಇಂದು ಇಲ್ಲಿ ನೀಡಿದ್ದೇವೆ. ಆ ಪ್ರಶ್ನೆಯೇ ಮಂದಿನ 5 ವರ್ಷದಲ್ಲಿ ನೀವು ಏನಾಗಿರಬೇಕು ಎಂದು ಬಯಸುತ್ತೀರಿ? ಅಥವಾ ನಿಮ್ಮ ಫ್ಯೂಚರ್​ ಪ್ಲ್ಯಾನ್​ (Future Plan) ಏನು ಎಂದು.. ಇದಕ್ಕೆ ಯಾವ ರೀತಿ ಉತ್ತರಿಸುವುದು ಸೂಕ್ತ ಎಂದು ತಿಳಿಯೋಣ ಬನ್ನಿ.


ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ


ಮೊದಲಿಗೆ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಫ್ಯೂಚರ್​ ಪ್ಲ್ಯಾನ್​ ಏನು ಎಂದು ಹೇಳಿದರೆ ಪರ್ಸನಲ್​​ ಆಗಿ ಉತ್ತರಿಸಬಾರದು. ಕಾರು ತೆಗೆದುಕೊಳ್ಳಬೇಕು, ಮನೆ ಕಟ್ಟಬೇಕು, ನನ್ನಿಷ್ಟದ ಟೂರಿಸ್ಟ್​ ಸ್ಥಳಕ್ಕೆ ಭೇಟಿ ನೀಡಬೇಕು ಅಂತೆಲ್ಲಾ ಉತ್ತರಿಸುವುದು ಸೂಕ್ತವಲ್ಲ. ಇನ್ನು ನಾನು ಯಾವುದನ್ನು ಪ್ಲ್ಯಾನ್​ ಮಾಡುವುದಿಲ್ಲ. ಜೀವನ ಹೇಗೆ ಬರುತ್ತೋ ಆ ರೀತಿ ಸ್ವೀಕರಿಸುವೆ ಎಂದು ಉತ್ತರಿಸುವುದು ಕೂಡ ತಪ್ಪಾಗುತ್ತದೆ. ಇಲ್ಲಿ ನಿಮ್ಮ ಫ್ಯೂಚರ್​ ಪ್ಲ್ಯಾನ್​​ ಅನ್ನು ವೃತ್ತಿಜೀವನದ ನಿಟ್ಟಿನಲ್ಲಿ ಕೇಳುತ್ತಿದ್ದಾರೆ ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ಉತ್ತರಿಸಿ.


7 common interview questions and answers
ಪ್ರಾತಿನಿಧಿಕ ಚಿತ್ರ


ಪ್ರಶ್ನೆಯ ಉದ್ದೇಶವೇನು?


ಸಂದರ್ಶಕರು ಯಾವ ದೃಷ್ಟಿಯಿಂದ ಈ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ಈ ಕೆಲಸವನ್ನು ನಿಮಗೆ ಕೊಟ್ಟರೆ ಮುಂದಿನ ದಿನಗಳಲ್ಲಿ ನೀವು ಯಾವ ರೀತಿ ಅಭಿವೃದ್ಧಿ ಹೊಂದುತ್ತೀರಿ, ಯಾವ ಎತ್ತರಕ್ಕೆ ಬೆಳೆಯಬೇಕು ಎಂಬ ಗುರಿ ಹೊಂದಿದ್ದೀರಿ ಎಂದು ತಿಳಿದುಕೊಳ್ಳಲು ಸಂದರ್ಶಕರು ಈ ಪ್ರಶ್ನೆಯನ್ನು ಕೇಳುತ್ತಾರೆ. ಹಾಗಾದರೆ ಫ್ಯೂಚರ್​ ಪ್ಲಾನ್​​ ಏನು ಎಂಬ ಪ್ರಶ್ನೆಗೆ ಸೂಕ್ತ ರೀತಿಯಲ್ಲಿ ಉತ್ತರಿಸೋದು ಹೇಗೆ, ಅದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ.ಈ ಪ್ರಶ್ನೆಗೆ ಉತ್ತರ ನೀಡುವ ಮೂಲಕ ನೀವು ಭವಿಷ್ಯದ ಬಗ್ಗೆ ಸಿರಿಯಸ್​ ಆಗಿ ಇದ್ದೀರಿ ಎಂದು ಸಂದರ್ಶಕರಿಗೆ ಮನದಟ್ಟು ಮಾಡಬೇಕು.


Interview question Tell me about your ideal work environment


ಉತ್ತರ ಯಾವ ರೀತಿ ಇದ್ದರೆ, ಸೂಕ್ತ?


ನಿಮ್ಮ ಉತ್ತರ ಆದಷ್ಟು ಸ್ವಂತಿಕೆಯಿಂದ ಕೂಡಿರಬೇಕು. ಆ ನಿಟ್ಟಿನಲ್ಲಿ ಕೆಲ ಮಾದರಿ ಉತ್ತರಗಳು ಹೀಗಿವೆ. ನೀವು ನನಗೆ ಈ ಕೆಲಸವನ್ನು ಕೊಟ್ಟರೆ ಮುಂದಿನ ದಿನಗಳಲ್ಲಿ ಶ್ರಮ ಮತ್ತು ಪ್ರತಿಭೆಯಿಂದ ಎತ್ತರಕ್ಕೆ ಬೆಳೆಯಲು ಯತ್ನಿಸುವೆ ಎಂದು ಹೇಳಬೇಕು. ಉದಾಹರಣೆಗೆ ನೀವೊಬ್ಬರು ಟೀಂ ಸದಸ್ಯರಾಗಿ ಉದ್ಯೋಗಕ್ಕೆ ಸೇರುತ್ತಿದ್ದರೆ ಟೀಂ ಲೀಡರ್​ ಆಗುವುದು ನಿಮ್ಮ ಗುರಿಯಾಗಿರಬೇಕು.  ಇನ್ನು ಕೆಲಸಕ್ಕೆ ಸಂಬಂಧಿಸಿದಂತೆ ಕೋರ್ಸ್​, MBA ಮಾಡುವ ಪ್ಲ್ಯಾನ್​ ಇದ್ದರೆ, ಅದನ್ನು ಹೇಳುವುದು ಕೂಡ ಸೂಕ್ತವೆನಿಸುತ್ತೆ. ನೀವೊಬ್ಬರು ಮಹಾತ್ವಾಕಾಂಕ್ಷೆ ಇರುವ ವ್ಯಕ್ತಿ ಎಂಬುವುದನ್ನು ಮನವರಿಕೆ ಮಾಡಿಕೊಡಿ. ಇದರಿಂದ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.




ಮುಂದಿನ 5 ವರ್ಷದಲ್ಲಿ ನೀವು ಏನಾಗಿರಬೇಕು ಎಂಬ ಪ್ರಶ್ನೆಗೂ ಮೇಲಿನ ಸಲಹೆಗಳ ಅನುಸಾರ ಉತ್ತರಿಸಿ. ನಿಮ್ಮ ಉತ್ತರ ವಾಸ್ತವಕ್ಕೆ ಹತ್ತಿರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಅತಿಯಾಗಿ ಪ್ಲ್ಯಾನ್​ ಮಾಡಿದ್ದೀರಿ ಎಂಬಂತೆ ಉತ್ತರ ಕೊಡಬೇಡಿ. ಸದ್ಯಕ್ಕೆ ಈ ಕೆಲಸ ಪಡೆಯುವುದು ನನ್ನ ಗುರಿ, ಇದರಲ್ಲಿ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಕರಿಯರ್​ನಲ್ಲಿ ಬೆಳೆಯಬೇಕು ಎಂದಿದ್ದೇನೆ ಎಂದು ಉತ್ತರಿಸುವುದು ಸೂಕ್ತ. ​​​​​​​​​​​​​​​

Published by:Kavya V
First published: