• ಹೋಂ
  • »
  • ನ್ಯೂಸ್
  • »
  • Jobs
  • »
  • Layoff: ವಿಶ್ವದ ಉದ್ಯೋಗ ವಂಚಿತರಲ್ಲಿ ಸಾಫ್ಟ್​ವೇರ್​​ ಕ್ಷೇತ್ರದವರು ಎರಡನೇ ಸ್ಥಾನದಲ್ಲಿದ್ದಾರಂತೆ: ಮೊದಲ ಸ್ಥಾನದಲ್ಲಿರೋರು ಯಾರು?

Layoff: ವಿಶ್ವದ ಉದ್ಯೋಗ ವಂಚಿತರಲ್ಲಿ ಸಾಫ್ಟ್​ವೇರ್​​ ಕ್ಷೇತ್ರದವರು ಎರಡನೇ ಸ್ಥಾನದಲ್ಲಿದ್ದಾರಂತೆ: ಮೊದಲ ಸ್ಥಾನದಲ್ಲಿರೋರು ಯಾರು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೇವಲ ಇಂಜಿನಿರ್ಯಸ್​ ಮಾತ್ರವಲ್ಲ. ವಿವಿಧ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಜಾಗತಿಕವಾಗಿ ಟೆಕ್ ವಲಯದಲ್ಲೇ ಸಾಮೂಹಿಕವಾಗಿ ವಜಾಗೊಳಿಸುವಿಕೆ ಪ್ರಕ್ರಿಯೆ ಹೆಚ್ಚಾಗಿದೆ.

  • Share this:

ಕೋವಿಡ್ (Covid 19)​ ಸಾಂಕ್ರಾಮಿಕದ ನಂತರ ಜಾಗತಿಕ ಮಟ್ಟದಲ್ಲಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಅದರಲ್ಲೂ ಟೆಕ್​ ವಲಯದಲ್ಲಿ ಇದು ನಿರೀಕ್ಷಿತ ಎನ್ನುವಷ್ಟರಮಟ್ಟಿಗೆ ಉದ್ಯೋಗ ನಷ್ಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ತೀರಾ ಇತ್ತೀಚೆಗೆ ಅಮೇರಿಕಾದಲ್ಲಿ ಸಾಫ್ಟ್​ವೇರ್​​ ಕಂಪನಿಗಳು ಸಾಮೂಹಿಕವಾಗಿ ಭಾರತದ ಲಕ್ಷಾಂತರ ಉದ್ಯೋಗಿಗಳಿಗೆ ಪಿಂಕ್​ ಸ್ಲಿಪ್ ನೀಡಿದೆ. ಮೇಲ್ನೋಟಕ್ಕೆ ತಂತ್ರಜ್ಞಾನ ( Technology) ಕ್ಷೇತ್ರದಲ್ಲೇ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗದಿಂದ ವಂಚಿತರಾದರು ಎನ್ನುವುದು ಗೋಚರಿಸುತ್ತಿದೆ. ಆದರೆ ಇಂಜಿನಿರ್ಯ​ (Engineer) ಅಲ್ಲದೇ ಬೇರೆ ಕ್ಷೇತ್ರದಲ್ಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ವಜಾಗೊಳಿಸುವಿಕೆ ಪ್ರಕ್ರಿಯೆ ನಡೆದಿದೆ.


ಇಂಜಿನಿರ್ಯಸ್​​ ಮಾತ್ರ ಕೆಲಸ ಕಳೆದುಕೊಳ್ಳಲಿಲ್ಲ


ಆದರೆ ವಾಸ್ತವದಲ್ಲಿ ಅದು ಬೇರೆಯೇ ಇದೆ. ಕೇವಲ ಇಂಜಿನಿರ್ಯಸ್​ ಮಾತ್ರವಲ್ಲ. ವಿವಿಧ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಜಾಗತಿಕವಾಗಿ ಟೆಕ್ ವಲಯದಲ್ಲೇ ಸಾಮೂಹಿಕವಾಗಿ ವಜಾಗೊಳಿಸುವಿಕೆ ಪ್ರಕ್ರಿಯೆ ಹೆಚ್ಚಾಗಿದೆ. ಇದರ ಹಿಂದಿರೋ ಕಾರಣಗಳೇನು? ಜೊತೆಗೆ ಯಾವೆಲ್ಲ ವಿಭಾಗದಲ್ಲಿ ಉದ್ಯೋಗ ನಷ್ಟವಾಗಿದೆ ಎನ್ನುವುದರ ವಿವರ ಇಲ್ಲಿದೆ.


365 ಡೇಟಾಸೈನ್ಸ್ ವರದಿ ಪ್ರಕಾರ ಶೇ ಶೇಕಡಾ 28 ರಷ್ಟು ಉದ್ಯೋಗಿಗಳು ಮಾನವ ಸಂಪನ್ಮೂಲ ವಿಭಾಗ ಅಂದರೆ ಎಚ್​ ಆರ್​​ ಮತ್ತು ಟ್ಯಾಲೆಂಟ್​​ ಸೋರ್ಸಿಂಗ್​ನಲ್ಲಿ ಕಾರ್ಯನಿರ್ವಹಿಸುವವರು ಕೆಲಸ ಕಳೆದುಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.


ಇದರ ನಂತರ ಸಾಫ್ಟ್​​ವೇ​ರ್​ ಇಂಜಿನಿರ್ಯಸ್​​ ಎರಡನೇ ಸ್ಥಾನದಲ್ಲಿದ್ದಾರೆ. ಅಂದರೆ ಶೇಕಡಾ 22.1 ರಷ್ಟು ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆದಿದ್ದಾರೆ. ಬಳಿಕ ಮಾರ್ಕೆಂಟಿಂಗ್​ ವಿಭಾಗದಲ್ಲಿ ಶೇಕಡಾ 7.1 ರಷ್ಟು ಮತ್ತು ಗ್ರಾಹಕರ ಸೇವಾ ವಿಭಾಗದಲ್ಲಿ 4.6 ರಷ್ಟು ಉದ್ಯೋಗ ನಷ್ಟವಾಗಿದೆ. ಇನ್ನೂ ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕ ಸಂವಹನ ಮತ್ತು ಸ್ಟಾಟಜಿ ವಿಭಾಗದಲ್ಲಿ 4.4 ರಷ್ಟು ಉದ್ಯೋಗಿಗಳನ್ನು ಲೇ ಆಫ್​ ಮಾಡಲಾಗಿದೆ ಎಂದು ಡೇಟಾ ಹೇಳಿದೆ.


30 ವಯಸ್ಸಿನಿಂದ 40 ರ ಆಸುಪಾಸಿನವರೇ ಟಾರ್ಗೆಟ್​


ಈ ಸಾಮೂಹಿಕ ವಜಾಗೊಳಿಸುವಿಕೆಯಲ್ಲಿ ಕೆಲಸ ಕಳೆದುಕೊಂಡವರಲ್ಲಿ ಮಧ್ಯವಯಸ್ಕರೇ ಹೆಚ್ಚು. ಅದರಲ್ಲೂ 30 ರಿಂದ 40 ವರ್ಷ ವಯಸ್ಸಿನ ಅಂತರದವರಾಗಿದ್ದಾರೆ. ಇನ್ನೂ ಸುಮಾರು 11 ವರ್ಷಗಳ ಉದ್ಯೋಗಾನುಭವವನ್ನು ಹೊಂದಿದ ಕೆಲಸಗಾರರಾಗಿದ್ದಾರೆ. ಕಿರಿಯರು ಮತ್ತು ಹಿರಿಯರು ಎನ್ನದೇ ಎಲ್ಲರೂ ಉದ್ಯೋಗ ನಷ್ಟ ಅನುಭವಿಸಿದ್ದಾರೆ.


ವಜಾಗೊಳಿಸಿದ್ದು ಏಕೆ?


ಹಣದುಬ್ಬರ, ಪೂರೈಕೆ- ಸರಪಳಿ ಸಮಸ್ಯೆ ಮತ್ತು ಭೌಗೋಳಿಕ ರಾಜಕೀಯ ಅಶಾಂತಿ ಈ ಎಲ್ಲಾ ಕಾರಣಗಳು ಕಂಪನಿಗಳ ಲಾಭದ ಮೇಲೆ ಅಪಾರ ನಷ್ಟವನ್ನುಂಟು ಮಾಡಿದೆ.


ಇದನ್ನೂ ಓದಿ: ಬ್ರ್ಯಾಂಡೆಡ್ ಫುಡ್ಸ್​ ಮೇಲೆ ಭರ್ಜರಿ ಡಿಸ್ಕೌಂಟ್​, ಇದರ ಹಿಂದಿದೆ ಪರಿಸರ ಕಾಳಜಿ!


ಕೋವಿಡ್​ಗೂ ಮುನ್ನ ಹೆಚ್ಚಿನ ವೇತನವನ್ನು ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದ ಕಂಪನಿಗಳು ಕೊರೋನಾ ಸಾಂಕ್ರಮಿಕದ ಬಳಿಕ ಇದಕ್ಕೆ ವ್ಯತಿರಿಕ್ತವಾಗಿವೆ. ಸ್ಟಾಕ್​ ಬೆಲೆಯಲ್ಲಿ ಕುಸಿತ, ಸೇಲ್ಸ್​​ ನಲ್ಲಿ ಕಾಣದ ಪ್ರಗತಿ, ಆರ್ಥಿಕ ಅಸ್ಥಿರತೆಯ ಭಯ ಈ ಎಲ್ಲಾ ಕಾರಣಗಳಿಂದ ಸಾಫ್ಟ್​ವೇರ್​ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ.


ಸ್ಟಾರ್ಟ್​ ಅಪ್​ಗಳಿಗೂ ತಾಕಿದ ಬಿಸಿ


ಇನ್ನೂ ಅನೇಕ ಸ್ಟಾರ್ಟ್ ಅಪ್​ಗಳು ವಜಾಗೊಳಿಸುವಿಕೆ ಪ್ರಕ್ರಿಯೆ ನಡೆಸಬೇಕಾಯಿತು. ಸ್ಟಾರ್ಟ್​ಅಪ್​ ಮೌಲ್ಯಮಾಪನದ ಕುಸಿತದಿಂದ ಕಳಪೆ ಹಣಕಾಸಿನ ಕಾರ್ಯಕ್ಷಮತೆ, ಹೆಚ್ಚಿದ ಸ್ಪರ್ಧೆ ಅಥವಾ ಬದಲಾದ ಮಾರುಕಟ್ಟೆ ಪರಿಸ್ಥಿತಿಗಳು ಇದಕ್ಕೆ ಕಾರಣವಾಗಿರಬಹುದು.


ಇದನ್ನೂ ಓದಿ: ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ! ಜನಸಾಮ್ಯಾನರ ಹೊಟ್ಟೆ ಸೇರಲ್ಲ ಬಿಡಿ ಈ ಫಿಶ್!


ವೆಂಚರ್​ ಕ್ಯಾಪಿಟಲ್​ ಫಂಡಿಂಗ್​​ ಅನೇಕ ಸ್ಟಾರ್ಟ್​ ಅಪ್​ಗಳ ಹಣದ ಮೂಲವಾಗಿದ್ದು ಅಲ್ಲಿ ಕೊರತೆಯಾದಾಗ ಆರ್ಥಿಕ ವೆಚ್ಚ ಕಡಿತಗೊಳಿಸಲು ಲೇ ಆಫ್​ ಗಳು ನಡೆದಿವೆ.


ನಿವ್ವಳ ಆದಾಯದಲ್ಲಿ ಕುಸಿತ


ಇನ್ನೂ ವರ್ಷದಿಂದ ವರ್ಷಕ್ಕೆ ನಿವ್ವಳ ಆದಾಯದಲ್ಲಿ ಕುಸಿತವಾಗಿದೆ. ಅಮೇಜಾನ್​ 2021 ಕ್ಕಿಂತ 2022 ರ ನಿವ್ವಳ ಆದಾಯದಲ್ಲಿ ಶೇಕಡಾ 115 ರಷ್ಟು ಕುಸಿತ ಕಂಡಿದೆ. ಇನ್ನೂ ಎಸ್​ಎಪಿ, ಸೇಲ್ಸ್​​ಫೋರ್ಸ್​​, ಮೆಟಾ ಮತ್ತು ಗೂಗಲ್​​ ಕೂಡ ಕುಸಿತ ಕಂಡಿವೆ. ಆದರೆ ಮೈಕ್ರೋಸಾಫ್ಟ್​ 17. 7 ರಷ್ಟು ಹೆಚ್ಚಳ ಕಂಡಿದೆ.




AI ಪ್ರಭಾವ?

top videos


    ಈ ಉದ್ಯೋಗ ನಷ್ಟದಲ್ಲಿ ಕೃತಕ ಬುದ್ಧಿಮತ್ತೆಯೂ ಪ್ರಮುಖ ಕಾರಣವಾಗಿದೆ. ಚಾಟ್​ಬಾಟ್​, ಚಾಟ್​ಜಿಪಿಟಿ , ಮೈಕ್ರೋಸಾಫ್ಟ್​ನ ಬಿಂಗ್​ ಏಐ ಚಾಟ್​ಬಾಟ್​​ ಮತ್ತು ಗೂಗಲ್​ ಬಾರ್ಡ್​​​ ಕೃತಕ ಬುದ್ಧಿಮತ್ತೆ ಪರಿಚಯಿಸಿದೆ. ಇದು ಕೂಡ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ.

    First published: