• Home
  • »
  • News
  • »
  • jobs
  • »
  • Interview Tips-17: ಕೆಲಸ ಬಿಟ್ಟಾಗ ಮಾಡುವ ಎಕ್ಸಿಟ್ ಇಂಟರ್​ವ್ಯೂನಲ್ಲಿ ಬಾಸ್ ವಿರುದ್ಧ ದೂರ ಸಲ್ಲಿಸಬಹುದೇ?

Interview Tips-17: ಕೆಲಸ ಬಿಟ್ಟಾಗ ಮಾಡುವ ಎಕ್ಸಿಟ್ ಇಂಟರ್​ವ್ಯೂನಲ್ಲಿ ಬಾಸ್ ವಿರುದ್ಧ ದೂರ ಸಲ್ಲಿಸಬಹುದೇ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅನೇಕ ಉದ್ಯೋಗಿಗಳಿಗೆ ಬಾಸ್‌ ಇಷ್ಟವಾಗಿರುವುದಿಲ್ಲ. ಅವರೊಂದಿಗೆ ಬಾಸ್‌ ನಡೆದುಕೊಳ್ಳುವ ರೀತಿ ಇಷ್ಟವಾಗುವುದಿಲ್ಲ. ಅಲ್ಲದೇ ಕೆಲಸದ ವಾತಾವರಣದ ಬಗ್ಗೆಯೂ ಅಸಮಾಧಾನ ಇರುತ್ತೆ.

  • Trending Desk
  • 2-MIN READ
  • Last Updated :
  • Share this:

    ನೀವು ಒಂದು ಸಂಸ್ಥೆಯಲ್ಲಿ ಕೆಲ ಕಾಲ ಕೆಲಸ (Job) ಮಾಡಿ ಯಾವುದೋ ಕಾರಣಕ್ಕಾಗಿ ರಾಜೀನಾಮೆ (Resignation) ನೀಡುತ್ತೀರಿ ಎಂದುಕೊಳ್ಳಿ. ಒಳ್ಳೆಯ ಅವಕಾಶಕ್ಕೋ ಅಥವಾ ಸದ್ಯದ ಕಂಪನಿಯ ಕೆಲಸ ಇಷ್ಟವಾಗದ ಕಾರಣಕ್ಕೋ… ಅಥವಾ ಇನ್ಯಾವುದಕ್ಕೋ… ನೀವು ಅಂಥ ನಿರ್ಧಾರ ಕೈಗೊಂಡಿರುತ್ತೀರಿ. ನೀವು ರಾಜೀನಾಮೆ ನೀಡಿದ ಮೇಲೆ ಸಾಮಾನ್ಯವಾಗಿ ಎಕ್ಸಿಟ್‌ ಇಂಟರ್​ವ್ಯೂ ( EXIT INTERVIEW) ಅಥವಾ ನಿರ್ಗಮನ ಸಂದರ್ಶನವನ್ನು ಎದುರಿಸಬೇಕಾಗುತ್ತದೆ.


    ಈ ರೀತಿಯ ನಿರ್ಗಮನ ಸಂದರ್ಶನದಲ್ಲಿ ಕಂಪನಿಯ ಅನುಭವ, ಬಿಡಲು ಕಾರಣ ಮುಂತಾದ ವಿಷಯಗಳ ಬಗ್ಗೆ ನಿಮ್ಮನ್ನು ಕೇಳಬಹುದು. ಅದಕ್ಕಾಗಿ ಹೆಚ್‌ಆರ್‌ ಎದುರು ಏನು ಹೇಳಬೇಕು.. ಏನನ್ನು ಹೇಳಬಾರದು ಎಂಬುದು ನಿಮಗೆ ತಿಳಿದಿರಬೇಕು. ಹಾಗಾಗಿ ನೀವು ಸ್ವಲ್ಪ ಮಟ್ಟಿಗೆ ತಯಾರಿ ಮಾಡಬೇಕಾಗಿರುವುದು ಕೂಡ ಮುಖ್ಯ.


    ಹಾಗಿದ್ರೆ ನಿಮ್ಮ ನಿರ್ಗಮನ ಸಂದರ್ಶನದ ಉತ್ತರಗಳನ್ನು ಹೇಗೆ ಉತ್ತಮಗೊಳಿಸುವುದು ಹೇಗೆ ಎಂದು ನೀವು ಆಲೋಚಿಸುತ್ತಿದ್ದರೆ ಅದಕ್ಕೆ ಈ ಕೆಳಗಿನ ಅಂಶಗಳು ನಿಮಗೆ ಸಹಾಯ ಮಾಡಬಹುದು.


    ಎಕ್ಸಿಟ್‌ ಇಂಟರ್ವ್ಯೂದಲ್ಲಿ ಮಾಡಬೇಕಾದ ಕೆಲಸಗಳಿವು:


    1.ಸರಿಯಾಗಿ ತಯಾರಾಗಿ ಹೋಗಿ: ಅನೇಕ ನಿರ್ಗಮನ ಸಂದರ್ಶನಗಳು ಕಷ್ಟವೇನೋ ಎಂದು ಬಹಳಷ್ಟು ಜನರು ಭಾವಿಸಬಹುದು. ಆದರೆ ನೀವು ಅದಕ್ಕೆ ಚೆನ್ನಾಗಿ ತಯಾರಾಗಿ ಹೋದರೆ ಅದು ನಿಜಕ್ಕೂ ಕಷ್ಟವೇನಲ್ಲ. ಹಾಗಿದ್ರೆ ಹೇಗೆ ತಯಾರಾಗುವುದು ಅನ್ನೋ ಪ್ರಶ್ನೆ ಉದ್ಭವಿಸಬಹುದು.




    ನೀವು ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಹೇಗೆ ಸಿದ್ಧರಾಗಿ ಹೋಗುತ್ತೀರೋ ಹಾಗೆಯೇ ಇದಕ್ಕೂ ತಯಾರಾಗಿ. ಅಲ್ಲಿ ಏನನ್ನು ಹೇಳಬೇಕು... ಕೇಳಿದ್ದಕ್ಕೆ ಹೇಗೆ ಉತ್ತರಿಸಬೇಕು... ಯಾವುದನ್ನು ಹೇಳಬೇಕು ಮುಂತಾವುಗಳಿಗೆ ಉತ್ತರ ಹುಡುಕಿಕೊಂಡು ಹೋಗಿ. ಅಲ್ಲಿ ಸರಾಗವಾಗಿ ಮಾತನಾಡಿ. ಸಂದರ್ಶನಕ್ಕೆ ಮುಂಚಿತವಾಗಿ ನಿಮ್ಮ ಆಲೋಚನೆಗಳನ್ನು ಸರಿಯಾಗಿ ಪೋಣಿಸಿ.


    2.ಕಂಪನಿ ತೊರೆಯಲು ಕಾರಣವನ್ನು ಚರ್ಚಿಸಿ: ನಿರ್ಗಮನ ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಸದ್ಯದ ಕಂಪನಿ ತೊರೆಯಲು ಕಾರಣಗಳೇನು ಎಂಬುದನ್ನು ಕೇಳಲಾಗುತ್ತದೆ. ಹಾಗಾಗಿ ಅದನ್ನು ಸರಾಗವಾಗಿ ನಿರ್ವಹಿಸಲು, ನೀವು ಕಂಪನಿಯನ್ನು ಏಕೆ ತೊರೆಯುತ್ತಿರುವಿರಿ ಎಂಬುದರ ಕುರಿತು ವಿವರವಾಗಿ ಹೇಳಿ.


    ಈ ಸಂದರ್ಭದಲ್ಲಿ ನೀವು ಕಾರಣಗಳನ್ನು ನೀಡುವಾಗ ಸಾಧ್ಯವಾದಷ್ಟು ಪ್ರಾಮಾಣಿಕರಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಜೊತೆಗೆ ಸಂದರ್ಶನದಲ್ಲಿ ಗೌರವದಿಂದ ನಡೆದುಕೊಳ್ಳಿ.


    ಸಾಕಷ್ಟು ನಿರ್ಗಮಿಸುವ ಉದ್ಯೋಗಿಗಳು ಕೆಟ್ಟ ಬಾಸ್ ಅಥವಾ ಕೆಲಸದ ಸ್ಥಳದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿರುವುದು ತುಂಬಾ ಸಾಮಾನ್ಯವಾಗಿದೆ. ಆದಾಗ್ಯೂ, ಅಹಂಕಾರವಿಲ್ಲದೆ ಇದನ್ನು ವ್ಯಕ್ತಪಡಿಸಲು ನೀವು ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕು.


    ಪ್ರಾತಿನಿಧಿಕ ಚಿತ್ರ


    3.ಒಳ್ಳೆಯ ಸಮಯದ ಬಗ್ಗೆ ಮಾತನಾಡಿ: ನೀವು ಕೆಲಸವನ್ನು ತೊರೆಯಲು ನಿರ್ಧರಿಸಿದ್ದರೂ ಸಹ, ನೀವು ಕೆಟ್ಟ ಅನುಭವವನ್ನು ಹೊಂದಿದ್ದೀರಿ ಎಂದರ್ಥವಲ್ಲ.


    ಜನರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹೋಗುತ್ತಾರೆ. ಏಕೆಂದರೆ ಅವರು ಬೆಳೆಯಲು ಉತ್ತಮ ಅವಕಾಶವನ್ನು ಕಂಡುಕೊಂಡರೆ ಅವರು ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ.


    ಆದರೆ ಸದ್ಯ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ನಿಮಗೆ ಸಾಕಷ್ಟು ಒಳ್ಳೆಯದಾಗಿರಬಹುದು. ಒಳ್ಳೆಯ ಘಟನೆಗಳು ನಡೆದಿರಬಹುದು. ಅದನ್ನು ಸಂದರ್ಶನದಲ್ಲಿ ಹಂಚಿಕೊಳ್ಳಿ.


    ಏಕೆಂದರೆ ನೀವು ಅವರೊಂದಿಗೆ ಕೆಲಸ ಮಾಡುವಾಗ ಉತ್ತಮ ಅನುಭವವನ್ನು ಹೊಂದಿದ್ದೀರಾ ಎಂದು ತಿಳಿಯಲು ನಿಮ್ಮ ಉದ್ಯೋಗದಾತರು ಇಷ್ಟಪಡುತ್ತಾರೆ. ಆದ್ದರಿಂದ ಎಕ್ಸಿಟ್‌ ಇಂಟರ್ವ್ಯೂನಲ್ಲಿ ನೀವು ಕಂಪನಿಯಲ್ಲಿ ಯಾವಾಗಲೂ ಪ್ರೀತಿಸುವ ಆ ಅದ್ಭುತ ಕ್ಷಣಗಳನ್ನು ಚರ್ಚಿಸಿ.


    4.ನಿಮ್ಮ ಉದ್ಯೋಗ ತೃಪ್ತಿಯನ್ನು ಹೈಲೈಟ್ ಮಾಡಿ: ನಿಮ್ಮ ನಿರ್ಗಮನ ಸಂದರ್ಶನದಲ್ಲಿ ಏನು ಹೇಳಬೇಕೆಂದು ಯೋಚಿಸುವಾಗ ನೀವು ಚರ್ಚಿಸಬಹುದಾದ ಇನ್ನೊಂದು ವಿಷಯವೆಂದರೆ ನಿಮ್ಮ ಕೆಲಸದ ತೃಪ್ತಿ. ಏಕೆಂದರೆ ಇದು ಉದ್ಯೋಗದಾತರು ಹೆಚ್ಚು ಗಮನ ಹರಿಸುವ ಮತ್ತೊಂದು ವಿಷಯವಾಗಿದೆ.


    ಕಂಪನಿಯಲ್ಲಿ ನೀವು ಸಾಮಾನ್ಯವಾಗಿ ಹೇಗೆ ಕೆಲಸ ಮಾಡುತ್ತಿದ್ದಿರಿ ಎಂಬುದನ್ನು ಹೇಳಬೇಕು. ನಿಮಗೆ ಆಗಿದ್ದ ಪ್ರಮೋಷನ್‌ ಆಗಲಿ ಅಥವಾ ಮೇಲಧಿಕಾರಿಯಿಂದ ಸಿಕ್ಕಂತಹ ಪ್ರಶಂಸೆಯಾಗಲಿ ನಿಮಗೆ ಹೆಚ್ಚು ತೃಪ್ತಿ ನೀಡಿರುತ್ತದೆ. ಸಂದರ್ಶನದಲ್ಲಿ ಈ ಬಗ್ಗೆ ನೀವು ಮಾತನಾಡಿ. ಅಲ್ಲದೇ ನಿಮ್ಮ ಸಾಧನೆಗಳು ಯಾವುದಾದರೂ ಸಾಲಿನಲ್ಲಿ ಸೇರಿದ್ದರೆ ಅದನ್ನೂ ಚರ್ಚಿಸಿ.


    5.ಸಲಹೆಗಳನ್ನು ನೀಡಿ: ನಿರ್ಗಮನ ಸಂದರ್ಶನಗಳನ್ನು ನಿರ್ವಹಿಸಲು ಮತ್ತು ಯಶಸ್ವಿಯಾಗಿ ಮುಕ್ತಾಯಗೊಳಿಸುವ ಮೊದಲು ನೀವು ಉದ್ಯೋಗದಾತರಿಗೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು.


    ಸಾಂದರ್ಭಿಕ ಚಿತ್ರ


    ವಿಷಯಗಳನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಸಂಬಂಧಿತ ಸಲಹೆಗಳನ್ನು ನೀವು ನೀಡಬಹುದು. ಈ ಮೂಲಕ ನೀವು ಕಂಪನಿ ಮತ್ತು ಅಲ್ಲಿಯ ಉದ್ಯೋಗಿಗಳಿಗೆ ಸಹಾಯ ಮಾಡುತ್ತೀರಿ.


    ನಿಮ್ಮ ಆಲೋಚನೆಗಳೊಂದಿಗೆ ಪ್ರಾಮಾಣಿಕವಾಗಿರಿ. ನೀವು ನೀಡುವ ಸಲಹೆಗಳನ್ನು ಕಂಪನಿ ಅಳವಡಿಸಿಕೊಂಡರೆ ಅದು ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ಅವರಿಗೆ ವಿವರಿಸಿ. ಇವಿಷ್ಟು ನಿರ್ಗಮನ ಸಂದರ್ಶದಲ್ಲಿ ಏನನ್ನು ಹೇಳಬೇಕು ಎಂಬುದರ ಬಗ್ಗೆಯಾದರೆ ಅಂಥ ಸಂದರ್ಭದಲ್ಲಿ ಏನನ್ನು ಹೇಳಬಾರದು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.


    ಇದನ್ನೂ ಓದಿ: Interview Tips-16: ನಿಮ್ಮ ಪ್ರಕಾರ ಆಫೀಸ್ ವಾತಾವರಣ ಹೇಗಿರಬೇಕು? ಈ ಇಂಟರ್​ವ್ಯೂ ಪ್ರಶ್ನೆಗೆ ಉತ್ತರ ಹೀಗಿರಲಿ


    ಕೆಲವೊಬ್ಬರಿಗೆ ಏನನ್ನು ಹೇಳಬಾರದು ಎಂದು ಗೊತ್ತಿರುವುದಿಲ್ಲ. ಹಾಗಾಗಿ ಶಾಂತಿಯುತವಾಗಿ ನಿರ್ಗಮಿಸುವ ಬದಲು, ಅವರು ದೊಡ್ಡ ಗೊಂದಲವನ್ನು ಉಂಟುಮಾಡುತ್ತಾರೆ.


    ಇದರಿಂದ ಹೊರಡುವ ಸಮಯದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಇದಕ್ಕೆ ಅವಕಾಶ ಕೊಡದಂತೆ ಇಲ್ಲಿ ಏನನ್ನು ಹೇಳಬಾರದು ಎಂಬುದನ್ನು ನೋಡೋಣ.


    ನಿರ್ಗಮನ ಸಂದರ್ಶನದಲ್ಲಿ ಏನನ್ನು ಮಾಡಬಾರದು?


    1.ಅಗೌರವ ತೋರಿ ಮಾತನಾಡುವುದು: ನಿಮಗೆ ನಿಮ್ಮ ಹಳೆಯ ಕೆಲಸವನ್ನು, ಕಂಪನಿಯನ್ನು ತೊರೆಯುವ ಆಲೋಚನೆಯು ರೋಮಾಂಚನಕಾರಿಯಾಗಿರಬಹುದು. ಆದರೆ ನಿಮಗೆ ಉದ್ಯೋಗ ನೀಡಿದವರಿಗೆ ಹಾಗಲ್ಲ.


    ಅವರು ಅದಕ್ಕೆ ಕಾರಣಗಳನ್ನು ತಿಳಿಯುವ ಉದ್ದೇಶ ಹೊಂದಿರುತ್ತಾರೆ. ಇನ್ನೇನು ಈ ಕಂಪನಿಯ ಹಂಗಿಲ್ಲ ಎಂಬಂತೆ ನೀವು ಮಾತನಾಡಬಾರದು. ನಿಮ್ಮ ನಿರ್ಗಮನ ಸಂದರ್ಶನದ ಸಮಯದಲ್ಲಿ ನೀವು ಗೌರವವಿಲ್ಲದೆ ಮಾತನಾಡುವುದನ್ನು ತಪ್ಪಿಸಬೇಕು. ಇಷ್ಟು ದಿನ ಕೆಲಸ ನೀಡಿದ್ದ ಕಂಪನಿಯಿಂದ ಹೊರಗೆ ಬರುವಾಗಲೂ ನೀವು ಗೌರವದಿಂದಲೇ ಇರಬೇಕು.


    2.ನಿಮ್ಮ ಬ್ಯಾಡ್ ಬಾಸ್ ಬಗ್ಗೆ ಕಾಮೆಂಟ್‌ ಮಾಡುವುದು: ಅನೇಕ ಉದ್ಯೋಗಿಗಳಿಗೆ ಬಾಸ್‌ ಇಷ್ಟವಾಗಿರುವುದಿಲ್ಲ. ಅವರೊಂದಿಗೆ ಬಾಸ್‌ ನಡೆದುಕೊಳ್ಳುವ ರೀತಿ ಇಷ್ಟವಾಗುವುದಿಲ್ಲ. ಅಲ್ಲದೇ ಕೆಲಸದ ವಾತಾವರಣದ ಬಗ್ಗೆಯೂ ಅವರ ಕಂಪ್ಲೇಂಟ್‌ ಇರುತ್ತದೆ. ಆದರೆ ವೃತ್ತಿಪರತೆಯನ್ನು ಕಾಪಾಡಿಕೊಳ್ಳುವುದು ಯಶಸ್ಸಿಗೆ ಪ್ರಮುಖವಾಗಿದೆ.


    Career Tips in kannada every employee should know How to Deal with bad Boss
    ಸಾಂದರ್ಭಿಕ ಚಿತ್ರ


    ಈ ಎಕ್ಸಿಟ್‌ ಇಂಟರ್ವ್ಯೂನಲ್ಲಿ ನಿಮ್ಮ ಬಾಸ್‌ಗೆ ಅವಮಾನ ಮಾಡುವಂಥ ಮಾತನಾಡದೇ ಅಥವಾ ಅವರ ಬಗ್ಗೆ ಅಥವಾ ನಕಾರಾತ್ಮಕವಾಗಿ ಕಾಮೆಂಟ್‌ ಮಾಡದೆಯೇ ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ತಿಳಿಸಿ. ಗೌರವಯುತವಾಗಿಯೇ ಅವುಗಳನ್ನು ಸರಿಯಾಗಿ ವಿವರಿಸಿ.


    3. ನಿಮ್ಮ ಹೊಸ ಕೆಲಸದ ಬಗ್ಗೆ ಹೊಗಳುವುದು: ನಿರ್ಗಮನ ಸಂದರ್ಶನದಲ್ಲಿ ನಿಮ್ಮ ಹೊಸ ಕೆಲಸದ ಬಗ್ಗೆ ತುಂಬಾ ಹೊಗಳುವ ಕೆಲಸ ಮಾಡಬೇಡಿ. ಇಂಥ ವರ್ತನೆಯನ್ನು ಅವರು ಸಹಿಸುವುದಿಲ್ಲ.


    ಹಾಗಾಗಿ ನಿಮ್ಮ ಹಿಂದಿನ ಕಂಪನಿಯನ್ನು ನಿಮ್ಮ ಹೊಸ ಕಂಪನಿಯೊಂದಿಗೆ ಹೋಲಿಸುವುದನ್ನು ತಪ್ಪಿಸಿ. ಜೊತೆಗೆ ನಿಮ್ಮ ಹೊಸ ಕೆಲಸವನ್ನೂ ಹೋಲಿಸಿ ಮಾತನಾಡಬೇಡಿ.


    4.ಅಪ್ರಸ್ತುತ ಹೇಳಿಕೆಗಳನ್ನು ನೀಡುವುದು: ನೀವು ತಪ್ಪಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಕಂಪನಿ ಅಥವಾ ಸಂದರ್ಶನಕ್ಕೆ ಮುಖ್ಯವಲ್ಲದ ವಿಷಯಗಳನ್ನು ಹೇಳುವುದು.


    ನೀವು ನೀಡುವ ವಿವರಗಳು ಅವರಿಗೆ ಸಹಾಯಕವಾಗಿವೆ ಮತ್ತು ಉಪಯುಕ್ತವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಅಗತ್ಯವಿದ್ದಷ್ಟೇ ಮಾತನಾಡಿ. ಆ ಸಂದರ್ಭಕ್ಕೆ ಪ್ರಸ್ತುತವಲ್ಲದ ಹೇಳಿಕೆಗಳನ್ನು ನೀಡಬೇಡಿ.


    5.ನಿಮ್ಮ ಗೋಳು ಹೇಳಿಕೊಳ್ಳುವುದು: ನೀವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ನೀವು ಸಾಕಷ್ಟು ಸಮಸ್ಯೆಗಳನ್ನು ಹೊಂದಿರಬಹುದು. ಆ ಬಗ್ಗೆ ನೀವು ದುಃಖಪಟ್ಟಿರಬಹುದು. ಆದರೆ ಅದನ್ನು ಹೇಳುವಂಥ ಸಮಯ ಇದಲ್ಲ ಎನ್ನುವುದನ್ನು ನೆನಪಿಡಿ.


    ಸಂದರ್ಶನದ ಉದ್ದಕ್ಕೂ ಆ ರೀತಿ ಮಾತನಾಡುವುದನ್ನು ತಪ್ಪಿಸಿ. ಪ್ರತಿ ಉದ್ಯೋಗದಾತರಿಗೆ ಅಗತ್ಯವಿರುವ ಸಲಹೆಯನ್ನು ನೀಡುವ ಕೆಲಸವನ್ನಷ್ಟೇ ನೀವು ಮಾಡಬಹುದು. ನಕಾರಾತ್ಮಕವಾಗಿ ಏನನ್ನೂ ಮಾತನಾಡಬೇಡಿ.




    ನಿಮ್ಮ ನಿರ್ಗಮನ ಸಂದರ್ಶನದಲ್ಲಿ ನೀವು ಸುಳ್ಳು ಹೇಳಬೇಕೇ?


    "ಹಾಗಿದ್ರೆ ನಿರ್ಗಮನ ಸಂದರ್ಶನದಲ್ಲಿ ಸುಳ್ಳು ಹೇಳಬಹುದೇ?" ಇದು ಅನೇಕರು ಕೇಳುವ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲ, ನೀವು ಹಾಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ.


    ಆದರೆ, ವೃತ್ತಿಪರತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಲು, ನಿಮ್ಮ ಅಭಿಪ್ರಾಯಗಳೊಂದಿಗೆ ನೀವು ಪ್ರಾಮಾಣಿಕವಾಗಿರಬೇಕು ಅಷ್ಟೇ. ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೀವು ಪ್ರಾಮಾಣಿಕ ಉತ್ತರವನ್ನು ನೀಡಬೇಕು. ಆದರೆ ಅದು ಒಂದು ನಿರ್ದಿಷ್ಟ ವಿಧಾನದಲ್ಲಿ ಋಣಾತ್ಮಕವಾಗಿರದೇ ಪಾಸಿಟಿವ್‌ ಆಗಿರಬೇಕು ಎಂಬುದು ಮುಖ್ಯ. ಅದರ ಬಗ್ಗೆಯೂ ಗಮನ ಹರಿಸಿ.




    ಕಂಪನಿಯಿಂದ ಹೊರಗೆ ಬರುವಾಗ ನೀವು ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ಅವರಿಗೆ ಹೇಳಿದಲ್ಲಿ ಅವರು ಅದನ್ನು ಸುಧಾರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.


    ಇದರಿಂದ ಮುಂದೆ ಬರುವಂಥ ಹೊಸ ಉದ್ಯೋಗಿಗಳಿಗೆ ನೀವು ಅನುಭವಿಸಿದ ತೊಂದರೆಗಳು ಎದುರಾಗದೇ ಹೋಗಬಹುದು. ಆದ್ದರಿಂದ ಸರಿಯಾಗಿ ಸಿದ್ಧರಾಗಿ, ಗೌರವದಿಂದ ನಡೆದುಕೊಂಡು, ಪ್ರಾಮಾಣಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬಂದರೆ ನಿಮ್ಮ ನಿರ್ಗಮನ ಸಂದರ್ಶನ ಯಶಸ್ವಿಯಾದಂತೆ.

    Published by:Kavya V
    First published: