ಕೇವಲ ಸಂಬಳದ (Salary) ದೃಷ್ಟಿಯಿಂದ ಮಾತ್ರವಲ್ಲದೇ ಉದ್ಯೋಗಾಂಕ್ಷಿಗಳು ಕಂಪನಿ ಹಿನ್ನೆಲೆ, ಮೌಲ್ಯ, ಖ್ಯಾತಿ ಬಗ್ಗೆಯೂ ಅವಲೋಕಿಸಿ ಅಲ್ಲಿ ಕೆಲಸಕ್ಕೆ (Work) ಅರ್ಜಿ ಹಾಕುವ ಮನಸ್ಸು ಮಾಡುತ್ತಾರೆ. ಇದು ಉದ್ಯೋಗಿಗಳ ವಿಚಾರವಾದರೆ ಅದರ ಉತ್ಪನ್ನವನ್ನು ತೆಗೆದುಕೊಳ್ಳುವ ಗ್ರಾಹಕರು ಕೂಡ ಕಂಪನಿಯ ಹಿನ್ನೆಲೆಯನ್ನು ಗಮನಿಸುತ್ತಾರೆ. ಹೀಗೆ ಒಂದು ಕಂಪನಿಯು (Company) ಅದರ ಪ್ರಸ್ತುತತೆ, ಪರಿಚಯ, ನಿರತವಾಗಿರುವ ಕಾರ್ಯ, ಮುಂಬರುವ ಯೋಜನೆ (Plan) ಬಗ್ಗೆ ಹೊರ ಜಗತ್ತಿಗೆ ತೋರಿಸುವ ಸಲುವಾಗಿ ಬ್ರ್ಯಾಂಡಿಂಗ್ ಎಂಬ ವಿಭಾಗವನ್ನು ಹೊಂದಿರುತ್ತದೆ.
ಇನ್ನು ಉದ್ಯೋಗಿಗಳನ್ನು ಸೆಳೆಯುವ, ಪ್ರತಿಭೆಗಳನ್ನು ಆಕರ್ಷಿಸುವ, ಆನ್‌ಬೋರ್ಡ್ ಮಾಹಿತಿಯನ್ನು ಹಂಚಿಕೊಳ್ಳುವ ಕಾರಣಕ್ಕೆ ಇದೇ ರೀತಿಯಾದ ಎಂಪ್ಲಾಯರ್ ಬ್ರ್ಯಾಂಡಿಂಗ್ ಎಂಬ ಶಾಖೆಯನ್ನು ಹೊಂದಿರುತ್ತದೆ.
ಕೆಲಸ ಹುಡುಕುತ್ತಿದ್ದರೆ ಇದನ್ನು ಗಮನಿಸಿ
ನೀವೂ ಕೂಡ ಹೊಸ ಉದ್ಯೋಗದ ಅನ್ವೇಷಣೆಯಲ್ಲಿದ್ದರೆ ಉದ್ಯೋಗದಾತ ಬ್ರ್ಯಾಂಡಿಂಗ್ ಕೆಲಸ ನಿಮಗೆ ಒಂದೊಳ್ಳೆ ಆಯ್ಕೆಯಾಗಿರುತ್ತದೆ. ಹಾಗಾದರೆ ಉದ್ಯೋಗದಾತ ಬ್ರ್ಯಾಂಡಿಂಗ್ ಕೆಲಸ ಹೇಗಿರುತ್ತದೆ, ಬೇಕಿರುವ ಅರ್ಹತೆಗಳೇನು? ಯಾವೆಲ್ಲಾ ಹುದ್ದೆಗಳು ಈ ವಿಭಾಗದಲ್ಲಿದೆ ಅಂತಾ ನೋಡೋಣ.
ಏನಿದು ಉದ್ಯೋಗದಾತ ಬ್ರ್ಯಾಂಡಿಂಗ್ ವೃತ್ತಿ?
ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ಉನ್ನತ ಪ್ರತಿಭೆಗಳನ್ನು ಆಕರ್ಷಿಸಲು ಕಂಪನಿಗಳು ಎದ್ದು ಕಾಣಬೇಕು. ಹೀಗೆ ಇದನ್ನು ಮತ್ತಷ್ಟು ತೋರಿಸುವ ಕೆಲಸ ಉದ್ಯೋಗದಾತರ ಬ್ರ್ಯಾಂಡಿಂಗ್ ಅಡಿಯಲ್ಲಿ ಬರುತ್ತದೆ. 84 ಪ್ರತಿಶತ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಕಂಪನಿಯ ಖ್ಯಾತಿಯನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ ಎಂದು TalentNow ವರದಿ ಹೇಳುತ್ತದೆ.
ಒಂದು ಕಂಪನಿ ಉದ್ಯೋಗದಾತ ಬ್ರಾಂಡ್ ಅನ್ನು ಸಕ್ರಿಯವಾಗಿ ನಿರ್ವಹಿಸಿದಾಗ 10 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರ್ಕಬಲ್ ಸಮೀಕ್ಷೆಯು ಬಹಿರಂಗಪಡಿಸಿದೆ.
ಕಂಪನಿಯ ಮೌಲ್ಯಗಳು, ಸಂಸ್ಕೃತಿ ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ ಉದ್ಯೋಗದಾತರಾಗಿ ಕಂಪನಿಯ ಖ್ಯಾತಿಯನ್ನು ಹಂಚಿಕೊಳ್ಳುವುದು, ನಿರ್ವಹಿಸುವುದು ಮತ್ತು ಉಳಿಸಿಕೊಳ್ಳುವ ಜವಬ್ದಾರಿ ಇವರ ಮೇಲಿರುತ್ತದೆ. ಹಾಗೆಯೇ ನಿಮ್ಮ ಉದ್ಯೋಗದಾತ ಬ್ರ್ಯಾಂಡ್‌ಗೆ ಆದ್ಯತೆ ನೀಡುವ ಮೂಲಕ, ನೀವು ಉನ್ನತ ಪ್ರತಿಭೆಯನ್ನು ಆಕರ್ಷಿಸಬಹುದು. ಪ್ರಸ್ತುತ ಉದ್ಯೋಗಿಗಳನ್ನು ಉಳಿಸಿಕೊಳ್ಳಬಹುದು ಕಂಪನಿಯ ಖ್ಯಾತಿಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ: Career Tips: ವೃತ್ತಿ ಜೀವನದ ಭವಿಷ್ಯಕ್ಕೆ ತುಂಬಾ ಮುಖ್ಯ ನೆಟ್‌ವರ್ಕಿಂಗ್; ಇದನ್ನು ಬೆಳೆಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಒಟ್ಟಾರೆಯಾಗಿ ಕಂಪನಿಗೆ ದೃಢವಾದ ಅಡಿಪಾಯವನ್ನು ನಿರ್ಮಿಸುವ ಈ ಪ್ರಕ್ರಿಯೆಯಲ್ಲಿ ಉದ್ಯೋಗದಾತರ ಬ್ರ್ಯಾಂಡಿಂಗ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಉದ್ಯೋಗದಾತರ ಬ್ರ್ಯಾಂಡಿಂಗ್‌ನಲ್ಲಿರುವ ಹುದ್ದೆಗಳು
ಉದ್ಯೋಗದಾತರ ಬ್ರ್ಯಾಂಡಿಂಗ್‌ನಲ್ಲಿ ಹಲವಾರು ಉದ್ಯೋಗ ಪಾತ್ರಗಳಿವೆ. ಪ್ರತಿಯೊಂದೂ ತನ್ನದೇ ಆದ ಜವಾಬ್ದಾರಿಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಉದ್ಯಮದಲ್ಲಿರುವ ಕೆಲವು ಅತ್ಯಂತ ಸೂಕ್ತವಾದ ಉದ್ಯೋಗ ಪಾತ್ರಗಳು ಹೀಗಿವೆ ನೋಡಿ.
* ಉದ್ಯೋಗದಾತ ಬ್ರ್ಯಾಂಡಿಂಗ್ ಮ್ಯಾನೇಜರ್
ಉದ್ಯೋಗದಾತ ಬ್ರ್ಯಾಂಡಿಂಗ್ ಮ್ಯಾನೇಜರ್ ಪಾತ್ರವು ಪ್ರಸ್ತುತ ಹೆಚ್ಚು ಸ್ಕೋಪ್ ಇರುವ ಹುದ್ದೆ. ವಿವಿಧ ಚಾನೆಲ್‌ಗಳ ಮೂಲಕ ಗುಣಮಟ್ಟದ ಯೋಜನೆಗಳನ್ನು ತಲುಪಿಸಲು ನಾಯಕತ್ವದೊಂದಿಗೆ ಈ ಹುದ್ದೆಯಿರುತ್ತದೆ.
ಸಾಮಾಜಿಕ ಮಾಧ್ಯಮ ಮತ್ತು ವೈಯಕ್ತಿಕ ಸಂವಹನಗಳ ಮೂಲಕ ಉದ್ಯೋಗದಾತರ ಬ್ರಾಂಡ್ ಅನ್ನು ನಿರ್ಮಿಸಿ ನಿರ್ವಹಿಸುವುದು, ಸಂಶೋಧನೆ ನಡೆಸುವುದು ಮತ್ತು ಕಂಪನಿಯ ಉದ್ಯೋಗದಾತರ ಖ್ಯಾತಿಯನ್ನು ಮೇಲ್ವಿಚಾರಣೆ ಮಾಡುವುದು, ಉದ್ಯೋಗದಾತ ಬ್ರ್ಯಾಂಡಿಂಗ್ ಮ್ಯಾನೇಜರ್ ಕೆಲಸವಾಗಿರುತ್ತದೆ.
* ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್
ಉದ್ಯೋಗದಾತ ಬ್ರ್ಯಾಂಡಿಂಗ್‌ನಲ್ಲಿ ಇರುವ ಮತ್ತೊಂದು ಪ್ರಮುಖ ಹುದ್ದೆ ಇದು. ಸಕಾರಾತ್ಮಕ ಕೆಲಸದ ವಾತಾವರಣವನ್ನು ಸೃಷ್ಟಿಸಲು, ಉದ್ಯೋಗಿ ಕ್ಷೇಮವನ್ನು ಉತ್ತೇಜಿಸಲು ಮತ್ತು ಒಟ್ಟಾರೆ ಉದ್ಯೋಗಿ ಅನುಭವವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಇವರು ಜವಾಬ್ದಾರರಾಗಿರುತ್ತಾರೆ. ಉದ್ಯೋಗಿಗಳು ಮತ್ತು ಕಂಪನಿಯ ನಡುವಿನ ಸಂವಹನ ಮತ್ತು ಸಹಯೋಗವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ.
* ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಸ್ಪೆಷಲಿಸ್ಟ್
ಮಾರ್ಕೆಟಿಂಗ್ ಮತ್ತು ಸಂವಹನ ತಜ್ಞರು ಸಂಭಾವ್ಯ ಅಭ್ಯರ್ಥಿಗಳು ಪ್ರಸ್ತುತ ಉದ್ಯೋಗಿಗಳಿಗೆ ಉದ್ಯೋಗದಾತ ಬ್ರ್ಯಾಂಡ್ ಅನ್ನು ಉತ್ತೇಜಿಸುವ ಮಾರ್ಕೆಟಿಂಗ್ ಪ್ರಚಾರಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅವರು ಕಂಪನಿಯ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಚಾನೆಲ್‌ಗಳು ಮತ್ತು ಇತರ ಮಾರ್ಕೆಟಿಂಗ್ ವಸ್ತುಗಳಿಗೆ ವಿಷಯವನ್ನು ಸಹ ರಚಿಸುತ್ತಾರೆ.
* ವೆಲ್‌ನೆಸ್ ಮ್ಯಾನೇಜರ್
ಪೋಷಕ ಕೆಲಸದ ವಾತಾವರಣವನ್ನು ರಚಿಸುವುದು, ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ತಂಡದ ಒಟ್ಟಾರೆ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಈ ಹುದ್ದೆ ಇದೆ.
ಉದ್ಯೋಗದಾತರ ಬ್ರ್ಯಾಂಡಿಂಗ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬೇಕಿರುವ ಅರ್ಹತೆ ಮತ್ತು ಕೌಶಲ್ಯ
ಉದ್ಯೋಗದಾತರ ಬ್ರ್ಯಾಂಡಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು, ಉದ್ಯೋಗದ ಪಾತ್ರ ಮತ್ತು ಸಾಂಸ್ಥಿಕ ನೀತಿಗಳ ಆಧಾರದ ಮೇಲೆ ಅರ್ಹತಾ ಮಾನದಂಡಗಳು ಬದಲಾಗಬಹುದು. ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಗೆ ಆದ್ಯತೆ ನೀಡಲಾಗಿದ್ದರೂ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಅಥವಾ ಸಂವಹನಗಳಲ್ಲಿ ಸಂಬಂಧಿತ ಕೆಲಸದ ಅನುಭವದ ಅಗತ್ಯವಿರುತ್ತದೆ.
ಔಪಚಾರಿಕ ಶಿಕ್ಷಣ ಮತ್ತು ಕೆಲಸದ ಅನುಭವದ ಹೊರತಾಗಿ ಮಾರ್ಕೆಟಿಂಗ್, ನಿರ್ವಹಣೆ, ವಿಶ್ಲೇಷಣಾತ್ಮಕ ಕೌಶಲ್ಯಗಳು, ಅತ್ಯುತ್ತಮ ಯೋಜನಾ ನಿರ್ವಹಣೆ ಮತ್ತು ಸಂವಹನಗಳಲ್ಲಿ ಪರಿಣತಿ, ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮ, ಕಾರ್ಯಕ್ಷಮತೆ ಮಾರ್ಕೆಟಿಂಗ್ ಮತ್ತು ಗೂಗಲ್ ಅನಾಲಿಟಿಕ್ಸ್ ಸೇರಿದಂತೆ ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನ ಉತ್ತಮ ತಿಳುವಳಿಕೆಯನ್ನು ಕಂಪನಿಗಳು ಉದ್ಯೋಗಿಗಳಿಂದ ಬಯಸುತ್ತಾರೆ. ಕಂಪನಿಗಳು ಬಯಸುವ ಸ್ಕಿಲ್ ಜೊತೆಗೆ ಶಿಕ್ಷಣ ಇದ್ದರೆ ಇಲ್ಲಿ ನೀವು ಕೆಲಸ ಆರಂಭಿಸಬಹುದು.
ಪ್ಯಾಕೇಜ್ ಹೇಗಿದೆ?
ಉದ್ಯೋಗದಾತ ಬ್ರ್ಯಾಂಡಿಂಗ್ ವೃತ್ತಿಪರರಿಗೆ ಸಂಬಳದ ನಿರೀಕ್ಷೆಗಳು ಕೆಲಸದ ಪಾತ್ರ, ಅನುಭವ ಮತ್ತು ಸ್ಥಳದಂತಹ ಅಂಶಗಳ ಆಧಾರದ ಮೇಲೆ ಭಿನ್ನವಾಗಿರುತ್ತವೆ. ಉದಾಹರಣೆಗೆ, ಒಂದು ವರ್ಷದ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಯ ವರ್ಷದ ವೇತನ ಪ್ಯಾಕೇಜ್ ಸುಮಾರು ರೂ 7-8 LPA ಯಿಂದ ಪ್ರಾರಂಭವಾಗುತ್ತದೆ.
ಭಾರತದಲ್ಲಿ ಉದ್ಯೋಗದಾತರ ಬ್ರ್ಯಾಂಡಿಂಗ್ ಮ್ಯಾನೇಜರ್‌ನ ಸರಾಸರಿ ವಾರ್ಷಿಕ ವೇತನವು Rs 25 ಲಕ್ಷ ಆಗಿದ್ದರೆ, ಪ್ರತಿಭೆ ನಿರ್ವಹಣಾ ತಜ್ಞರು ಸರಾಸರಿ ವರ್ಷಕ್ಕೆ Rs 12 ಲಕ್ಷ ಗಳಿಸುತ್ತಾರೆ.
ಸ್ಕೋಪ್ ಇದೆಯೇ?
ಕಂಪನಿಯು ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು, ಪ್ರತಿಭಾವಂತರನ್ನು ಆಕರ್ಷಿಸಲು ಅಗತ್ಯವಾಗಿ ಈ ಹುದ್ದೆಯನ್ನು ನೇಮಿಸಿಕೊಳ್ಳುವುದರಿಂದ ಉದ್ಯೋಗದಾತ ಬ್ರ್ಯಾಂಡಿಂಗ್‌ಗೆ ಅವಕಾಶಗಳು ಹೆಚ್ಚಿವೆ. ಉದ್ಯೋಗದಾತರ ಬ್ರ್ಯಾಂಡಿಂಗ್ ವಿಶ್ವಾದ್ಯಂತ ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ವೃತ್ತಿ ಆಯ್ಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ