• ಹೋಂ
  • »
  • ನ್ಯೂಸ್
  • »
  • jobs
  • »
  • Career Tips: ಸೋಶಿಯಲ್ ಸೆಕ್ಟರ್​ನಲ್ಲಿ ವೃತ್ತಿ ಜೀವನ, ಉದ್ಯೋಗ ಸಿಗೋದ್ರಲ್ಲಿ ಮೋಸ ಇಲ್ಲ!

Career Tips: ಸೋಶಿಯಲ್ ಸೆಕ್ಟರ್​ನಲ್ಲಿ ವೃತ್ತಿ ಜೀವನ, ಉದ್ಯೋಗ ಸಿಗೋದ್ರಲ್ಲಿ ಮೋಸ ಇಲ್ಲ!

ವೃತ್ತಿ

ವೃತ್ತಿ

ಬಡವರು ಮತ್ತು ದುರ್ಬಲರಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಈ ವಲಯದಲ್ಲಿ ಉತ್ತೇಜನ ದೊರೆಯುತ್ತದೆ.

  • Share this:

ಸಾಮಾಜಿಕ ವಲಯಗಳು ಎಂದರೆ ಅಭಿವೃದ್ಧಿ ಹಾಗೂ ಕಲ್ಯಾಣ ಚಟುವಟಿಕೆಗಳನ್ನೊಳಗೊಂಡಿರುವ ಕ್ಷೇತ್ರವಾಗಿದೆ. ಆರೋಗ್ಯ, ಶಿಕ್ಷಣ, ನೀರು ಸರಬರಾಜು, ಸಾರಿಗೆ, ಕೃಷಿ  (Farmer) ಮೊದಲಾದ ಸಂಬಂಧಿತ ಚಟುವಟಿಕೆಗಳು ಸಾಮಾಜಿಕ ವಲಯದಲ್ಲಿ ಬರುತ್ತವೆ. ಈ ಕ್ಷೇತ್ರದಲ್ಲಿ ಉದ್ಯೋಗ ಅರಸುವವರ ಸಂಖ್ಯೆ ಕೂಡ ಬಹಳಷ್ಟಿದೆ. ಆದರೆ ಈ ಕ್ಷೇತ್ರದಲ್ಲಿ ವೃತ್ತಿ ಜೀವನ (Career Tips) ಆರಂಭಿಸುವ ಮುನ್ನ ಸಾಮಾಜಿಕ ವಲಯದ ಬಗ್ಗೆ ಅರಿತುಕೊಳ್ಳುವುದು ಮುಖ್ಯವಾಗಿದೆ. ಸಾಮಾಜಿಕ ಸುಧಾರಣೆಗಳನ್ನು ಮಾಡುವಂತಹ ವೃತ್ತಿ ಆಯ್ಕೆಗಳು ಸಾಮಾಜಿಕ ವಲಯದಲ್ಲಿ ಯಾರೂ ಮಾಡಬಹುದಾಗಿದೆ. ಬಡವರು ಮತ್ತು ದುರ್ಬಲರಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಿಗೆ (Activity) ಈ ವಲಯದಲ್ಲಿ ಉತ್ತೇಜನ ದೊರೆಯುತ್ತದೆ.


ಸಾಮಾಜಿಕ ವಲಯದಲ್ಲಿ ವೃತ್ತಿ ನಡೆಸುವವರು ಮಾನವೀಯತೆ, ಸಾಮಾಜಿಕ ಚಟುವಟಿಕೆಗಳು, ಸಮಾಜ ಸುಧಾರಣೆಯ ಮೇಲಿನ ಆಸಕ್ತಿಗಳು ಮುಖ್ಯವಾಗಿದೆ. ಈ ವೃತ್ತಿಯನ್ನು ಆಯ್ದುಕೊಳ್ಳುವ ಮೊದಲು ನೀವು ಬದಲಾವಣೆ ತರುವ ಪ್ರವೃತ್ತಿಯಲ್ಲಿ ಆಸಕ್ತಿಯುಳ್ಳವರಾಗಿರಬೇಕು.


ಸಾಮಾಜಿಕ ವಲಯದಲ್ಲಿ ವೃತ್ತಿ ಆರಂಭಿಸಲು ಕೆಲವೊಂದು ಕೌಶಲ್ಯಗಳು ಹಾಗೂ ವೃತ್ತಿ ಆದ್ಯತೆಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಸಮಾಜದಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ನೀವಾಗಿರುವುದರಿಂದ ಅದಕ್ಕೆ ಬೇಕಾದ ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ.


ಸಾಮಾಜಿಕ ವಲಯದಲ್ಲಿ ವೃತ್ತಿ ಆರಂಭ: ಸಲಹೆ ಸೂಚನೆಗಳೇನು


ನೀವು ಕಲಿಯುತ್ತಿರುವಾಗಲೇ ಕಾಲೇಜಿನ ಸಾಂಸ್ಕೃತಿಕ ಕ್ಲಬ್‌ಗಳನ್ನು ಸೇರುವುದು ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಸಾಮಾಜಿಕ ವಲಯದಲ್ಲಿ ಕೆಲಸ ಹೇಗಿರುತ್ತದೆ ಎಂಬುದನ್ನು ಅರಿತುಕೊಳ್ಳಲು ಲಾಭರಹಿತ/ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಸಂಸ್ಥೆಗಳೊಂದಿಗೆ ಇಂಟರ್ನ್‌ಶಿಪ್ ಮಾಡಿ ಅಥವಾ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ. ಇದರಿಂದ ಈ ಕ್ಷೇತ್ರದಲ್ಲಿ ವೃತ್ತಿಯನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಇದು ತಿಳಿಸಿಕೊಡುತ್ತದೆ.


ಇದನ್ನೂ ಓದಿ: ಒಳ್ಳೊಳ್ಳೆ ಉದ್ಯೋಗಿಗಳನ್ನು ಕಂಪನಿಗೆ ಸೆಳೆಯೋದೇ ಇವರ ಜಾಬ್!


ಫೆಲೋಶಿಪ್‌ನಲ್ಲಿ ಅವಕಾಶ ಪಡೆದುಕೊಳ್ಳುವುದು


ನೀವು ಪದವೀಧರರಾದ ನಂತರ, ನಿಮ್ಮನ್ನು ಫೆಲೋಶಿಪ್‌ನಲ್ಲಿ ನೋಂದಾಯಿಸಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬಹುದು. ಫೆಲೋಶಿಪ್‌ಗಳು ಸಾಮಾನ್ಯವಾಗಿ ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇರುತ್ತದೆ.


ಈ ಸಮಯದಲ್ಲಿ ಸಾಮಾಜಿಕ ವಲಯದ ವೈಯಕ್ತಿಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಬಹುದು. ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸುವುದು, ನಾಯಕರೊಂದಿಗೆ ಉದ್ಯೋಗ ನಿರ್ವಹಿಸುವ ಅವಕಾಶವನ್ನು ಮಾಡಿಕೊಡುತ್ತದೆ. ಮಾರ್ಗದರ್ಶನ ಹಾಗೂ ವೃತ್ತಿಯ ಒಳಹೊರಗನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.


ನಿಮ್ಮ ಫೆಲೋಶಿಪ್ ಪೂರ್ಣಗೊಂಡ ನಂತರ, ಹೋಸ್ಟ್/ಪಾಲುದಾರ ಸಂಸ್ಥೆಗಳು (ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಂತೆಯೇ) ನೀಡುವ ನಿಯೋಜನೆಗಳಿಗಾಗಿ ನೀವು ಪಾಲ್ಗೊಳ್ಳಬಹುದು. ಪರ್ಯಾಯವಾಗಿ, ನೀವು ಲಾಭರಹಿತ/ಫೌಂಡೇಶನ್‌ಗಳಲ್ಲಿ ಮಧ್ಯಮ-ನಿರ್ವಹಣಾ ಮಟ್ಟದ ಹುದ್ದೆಗಳಿಗೆ ಸಹ ಅರ್ಜಿ ಸಲ್ಲಿಸಬಹುದು.


ಸಾಮಾಜಿಕ ವಲಯದಲ್ಲಿ ಹೊಂದಿರಬೇಕಾದ ಕೌಶಲ್ಯಗಳು


ಸಮಸ್ಯೆ ಪರಿಹರಿಸುವ ಕೌಶಲ್ಯ


ಸಾಮಾಜಿಕ ಬದಲಾವಣೆ ಎಂಬುದು ಹೆಚ್ಚು ಮುಂಚೂಣಿಯಲ್ಲಿರುವ ಕ್ಷೇತ್ರವಾಗಿರುವುದರಿಂದ ಸವಾಲುಗಳನ್ನು ಅಡೆತಡೆಗಳಾಗಿ ಕಾಣದೆ ಅದನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡು ಮುನ್ನಡೆಯಬೇಕು.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ- ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್


ವಿಮರ್ಶಾತ್ಮಕ ಚಿಂತನೆ


ಯಶಸ್ಸಿಗೆ ಹೊಂದಿಕೊಳ್ಳುವಂತೆ ಭಾವನಾತ್ಮಕವಾಗಿ ಯೋಚಿಸುವುದು ಪ್ರಾಯೋಗಿಕ ವಿಧಾನವನ್ನು ಹೊಂದಿರುವ ನಡುವಿನ ಸರಿಯಾದ ಸಮತೋಲನವನ್ನು ನಿರ್ವಹಿಸುವುದು, ನಿರ್ಣಾಯಕ ಚಿಂತನೆಯನ್ನು ನಡೆಸುವುದು ಮುಖ್ಯವಾಗಿದೆ. ನೀವು ಆಯ್ದುಕೊಳ್ಳುವ ಕೆಲಸ ಎಷ್ಟು ಯಶಸ್ಸನ್ನು ತಂದುಕೊಡುತ್ತದೆ ಎಂಬುದನ್ನು ಪರಿಗಣಿಸುವುದು ಇಲ್ಲಿ ಮುಖ್ಯವಾಗಿದೆ.


ಚಿಂತನೆ ಮತ್ತು ಕ್ರಿಯೆಯಲ್ಲಿ ಬದ್ಧವಾಗಿರುವುದು


ಸಾಮಾಜಿಕ ವಲಯದಲ್ಲಿ, ಕೆಲವೊಮ್ಮೆ, ಇತರ ಪ್ರಮುಖ ಕೌಶಲ್ಯಗಳಿಗಿಂತ ಉತ್ಸಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ನಿಮ್ಮ ಉತ್ಸಾಹವನ್ನು ಜವಾಬ್ದಾರಿಯುತವಾಗಿ ಹಿಡಿದಿಟ್ಟುಕೊಳ್ಳುವುದು, ಚಿಂತನೆ ಮತ್ತು ಅಭ್ಯಾಸದಲ್ಲಿ ನೀವು ಹೊಂದಿರುವ ಬದ್ಧತೆಯಾಗಿದೆ.


ಸಾಮಾಜಿಕ ಕೌಶಲ್ಯ ವೃತ್ತಿ ಅವಕಾಶಗಳು


ಸಾಮಾಜಿಕ ವಲಯದ ವೈವಿಧ್ಯತೆಯನ್ನು ಪರಿಗಣಿಸಿ ಅದು ವಿವಿಧ ಶಾಖೆಗಳೊಂದಿಗೆ ವೃತ್ತಿ ನಿರತರಿಗೆ ವ್ಯಾಪಕ ಅವಕಾಶವನ್ನೊದಗಿಸುತ್ತದೆ.




  • ಸರಕಾರಿ ಹಾಗೂ ಸಾರ್ವಜನಿಕ ಸೇವೆಗಳು

  • ವಾಣಿಜ್ಯೋದ್ಯಮ ಮತ್ತು ಸಾಮಾಜಿಕ ಉದ್ಯಮ

  • ಲಾಭರಹಿತ ಸಂಸ್ಥೆಗಳು

  • ಆರೋಗ್ಯ

  • ಶಿಕ್ಷಣ

  • ಸುಸ್ಥಿರತೆ ಮತ್ತು ಪರಿಸರ

  • ಜೀವನೋಪಾಯ ಹಾಗೂ ಕೌಶಲ್ಯ ಅಭಿವೃದ್ಧಿ

  • ಮಹಿಳಾ ಸಬಲೀಕರಣ

  • ಕಾರ್ಪೋರೇಟ್ ಕಂಪನಿ

  • ಸಾಮಾಜಿಕ ಜವಬ್ದಾರಿ ವಿಭಾಗ

  • ಮಾನವ ಹಕ್ಕುಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಕಾನೂನು

  • ಅಂತಾರಾಷ್ಟ್ರೀಯ ಅಭಿವೃದ್ಧಿ

  • ಸಾಮಾಜಿಕ ಪರಿಣಾಮ ಸಮಾಲೋಚನೆ

First published: