• ಹೋಂ
  • »
  • ನ್ಯೂಸ್
  • »
  • Jobs
  • »
  • Retirement Age: ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೆ ಬದುಕಿನ ಸಂಜೆ ಕಾಲ ಸುಖಮಯವಾಗಿರುತ್ತೆ?

Retirement Age: ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೆ ಬದುಕಿನ ಸಂಜೆ ಕಾಲ ಸುಖಮಯವಾಗಿರುತ್ತೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೆಲವರು ನಿವೃತ್ತಿ ಜೀವನದ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರೆ, ಇನ್ನೂ ಕೆಲವರು ಮತ್ತಷ್ಟು ವರ್ಷ ಕೆಲಸ ಮಾಡಲು ಬಯಸುತ್ತಾರೆ.

  • Trending Desk
  • 2-MIN READ
  • Last Updated :
  • Share this:

    ಜೀವನ ಮಾಡೋಕೆ ದುಡಿಯಲೇ ಬೇಕು (Job). ಕೆಲಸ ಮಾಡುತ್ತಿದ್ದರೆ ಆದಾಯದ ಜೊತೆಗೆ ದೇಹ- ಮನಸ್ಸು ಎರಡೂ ಚಟುವಟಿಕೆಯಿಂದಿರುತ್ತದೆ. ಸಾಮಾನ್ಯವಾಗಿ ಜನರು 20-25 ನೇ ವಯಸ್ಸಿನಲ್ಲಿ ದುಡಿಯೋಕೆ ಶುರು ಮಾಡಿದರೆ 60-70 ವಯಸ್ಸಿನ ತನಕವೂ ದುಡಿಯುತ್ತಲೇ ಇರುತ್ತಾರೆ. ಈ ದುಡಿತಕ್ಕೆ ನಿವೃತ್ತಿ (Retirement) ಬೇಕು ಅಲ್ವಾ? ಹಾಗಿದ್ರೆ ನಿವೃತ್ತಿಯಾಗೋಕೆ ಸರಿಯಾದ ವಯಸ್ಸು (Age) ಯಾವುದು?


    ಓದು ಮುಗಿದ ಬಳಿಕ ಅಂದರೆ ಸಾಮಾನ್ಯವಾಗಿ 20-25 ವರ್ಷ ವಯಸ್ಸಿನಲ್ಲಿ ವಿದ್ಯಾರ್ಥಿ ಜೀವನ ಮುಗಿಸಿ ವೃತ್ತಿಜೀವನಕ್ಕೆ ಕಾಲಿಟ್ಟಾಗ ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು. ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರದಲ್ಲಿ ಅದೇ ಅಭ್ಯಾಸವಾಗಿ ಹಂತ ಹಂತವಾಗಿ ನೀವು ಅಭಿವೃದ್ಧಿ ಕಾಣುತ್ತೀರಿ. ನಂತರ 30-40-50 ರ ದಶಕಗಳಲ್ಲಿ ಕೆಲಸವು ನಿಮ್ಮ ಜೀವನದ ಅಗತ್ಯವಾಗಿರುತ್ತದೆ. ಕಚೇರಿ ಕೆಲಸ ನಿಮಗೆ ಅಭ್ಯಾಸವಾಗುತ್ತದೆ. ಅದಕ್ಕೆ ನೀವು ಹೊಂದುಕೊಂಡು ಬಿಡುತ್ತೀರಿ. ಈ ಹಂತಗಳನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿರುತ್ತಾರೆ.


    ನಿವೃತ್ತಿ ಒಪ್ಪಿಕೊಳ್ಳಲು ಕಷ್ಟವಾಗಬಹುದು!


    ಕಾಲಾನಂತರದಲ್ಲಿ ನೀವು ಕೆಲಸದಲ್ಲಿ ಅಭಿವೃದ್ಧಿ ಕಾಣುತ್ತ ಉನ್ನತ ಹಂತವನ್ನು ತಲುಪುತ್ತೀರಿ. ಹಾಗೆಯೇ ಒಳ್ಳೆಯ ವೇತನವನ್ನೂ ಪಡೆಯುತ್ತೀರಿ. ಆದ್ರೆ ವಯಸ್ಸಾಗುತ್ತ ಬಂದ ಹಾಗೆ ನಿಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಗಳೆರಡೂ ಕಡಿಮೆಯಾಗುತ್ತ ಬರುತ್ತವೆ. ಆದ್ರೆ ಕೆಲಸಕ್ಕೆ ಹೊಂದಿಕೊಂಡಿದ್ದರಿಂದ ನಿಮಗೆ ನಿವೃತ್ತಿ ಬೇಕು ಎಂದೇ ಅನಿಸುವುದಿಲ್ಲ. ಇದು ಸಾಮಾನ್ಯ.
    ಆಶ್ಚರ್ಯಕರ ವಿಚಾರವೆಂದರೆ ಪ್ರಪಂಚದ ಹೆಚ್ಚಿನ ಶೇಕಡಾವಾರು ಜನರು ನಿವೃತ್ತಿ ವಯಸ್ಸನ್ನು ದಾಟಿದ ನಂತರವೂ ಕೆಲಸವನ್ನು ಮುಂದುವರಿಸಲು ಇಷ್ಟಪಡುತ್ತಾರೆ. ಏಕೆಂದರೆ ಅಂಥವರಿಗೆ ಕೆಲಸವಿಲ್ಲದೇ ಜೀವನ ಅರ್ಥಹೀನ ಎನಿಸತೊಡಗುತ್ತದೆ. ಆದರೆ ನಿವೃತ್ತಿ ವಿನೋದಮಯವಾಗಿರಬಹುದು. ಅದು ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ನಿಮ್ಮ ಇಡೀ ಜೀವನವನ್ನು ಕಷ್ಟಪಟ್ಟು ಕೆಲಸ ಮಾಡಿ ಕಳೆದ ಬಳಿಕ ನೀವು ಇಂಥದ್ದೊಂದು ವಿಶ್ರಾಂತಿಯ ಸಮಯಕ್ಕೆ ಖಂಡಿತವಾಗಿಯೂ ಅರ್ಹರಾಗಿರುತ್ತೀರಿ.


    ನಿವೃತ್ತಿ ಜೀವನದಲ್ಲಿ ಜನರು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಬಹುದು. ಪ್ರವಾಸ ಹೋಗಬಹುದು ಹಾಗೆಯೇ ಜೀವನವನ್ನು ಪೂರ್ಣವಾಗಿ ಆನಂದಿಸಬಹುದು.


    ನಿವೃತ್ತಿಯಾಗಲು 62 ಸರಿಯಾದ ವಯಸ್ಸು!


    ಅಂದಹಾಗೆ ಭಾರತದಲ್ಲಿ ನಿವೃತ್ತಿ ವಯಸ್ಸು 58 ಮತ್ತು 65 ವರ್ಷಗಳ ನಡುವೆ ಇರುತ್ತದೆ. ಕಾರ್ಪೋರೇಟ್‌ ಸಂಸ್ಥೆಯಲ್ಲಿ ಹೆಚ್‌ಆರ್‌ ಆಗಿರುವ ಸಾಹೇಲಿ, ನಿವೃತ್ತಿಗೆ 62 ಸರಿಯಾದ ವಯಸ್ಸು ಎಂದು ಹೇಳುತ್ತಾರೆ. "60 ಅಥವಾ 61 ನೇ ವಯಸ್ಸನ್ನು ತಲುಪಿದಾಗ ನಿವೃತ್ತರಾದ ಅನೇಕ ಹಿರಿಯ ಅಧಿಕೃತ ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ಅವರು ಬಹಳಷ್ಟು ವರ್ಷದಿಂದ ದುಡಿದು ಬಳಲಿರುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ.


    ಆದರೆ ಅಂಥವರಲ್ಲಿ ಕೆಲವರು ನಿವೃತ್ತಿ ಜೀವನದ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರೆ, ಇನ್ನೂ ಕೆಲವರು ಮತ್ತಷ್ಟು ವರ್ಷ ಕೆಲಸ ಮಾಡಲು ಬಯಸುತ್ತಾರೆ. ಆದ್ರೆ 62 ವರ್ಷವು ನಿವೃತ್ತಿ ಹೊಂದಲು ಸರಿಯಾದ ವಯಸ್ಸು. ಏಕೆಂದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನೀವು ವಿಶ್ರಾಂತಿ ಪಡೆದು ಆರೋಗ್ಯಕರ ಜೀವನ ನಡೆಸಲು ಇದರಿಂದ ಸಾಧ್ಯವಾಗುತ್ತದೆ ಎಂಬುದಾಗಿ ಸಾಹೇಲಿ ಹೇಳುತ್ತಾರೆ.


    ನಿವೃತ್ತಿ ಜೀವನಕ್ಕಾಗಿ ಹಣ ಉಳಿಸುವುದು ಮುಖ್ಯ!


    ನಿವೃತ್ತಿಗಾಗಿ ಹಣವನ್ನು ಉಳಿಸುವುದು ನಿವೃತ್ತಿಯ ಯೋಜನೆಯ ಅವಶ್ಯಕ ಭಾಗವಾಗಿದೆ. ಕೆಲವು ಜನರು ಉಳಿತಾಯವನ್ನು ಹೊಂದಿಲ್ಲದಿದ್ದರೆ ಬೇಗನೆ ನಿವೃತ್ತರಾಗಲು ಸಾಧ್ಯವಿಲ್ಲ. ಹಾಗಾಗಿ ದುಡಿಯುವುದರ ಜೊತೆಗೆ ನಿವೃತ್ತಿಗಾಗಿ ಉಳಿತಾಯ ಮಾಡುವುದೂ ಅಷ್ಟೇ ಮುಖ್ಯ. ವಾಸ್ತವವಾಗಿ, ನಿವೃತ್ತಿಯ ಸರಿಯಾದ ಸಮಯವು ನಿಮ್ಮ ಜೀವನಶೈಲಿಯ ಆಯ್ಕೆಗಳು ಮತ್ತು ಹಣಕಾಸಿನ ಗುರಿಗಳ ಮೇಲೂ ಅವಲಂಬಿತವಾಗಿರುತ್ತದೆ.
    ನೀವು ಐಷಾರಾಮಿ ಜೀವನವನ್ನು ನಡೆಸಲು ಬಯಸಿದರೆ, ಅಗತ್ಯವಾದ ಉಳಿತಾಯ ಮಾಡದೇ ಹೋದರೆ 60 ರ ನಂತರವೂ ನೀವು ದುಡಿಯುತ್ತಲೇ ಇರಬೇಕಾಗಬಹುದು. ಆದರೆ ಅನೇಕ ಜನರು ತಮ್ಮ ಸಾಮರ್ಥ್ಯ ಇರುವವರೆಗೂ ಕೆಲಸ ಮಾಡುತ್ತಲೇ ಇರಲು ಬಯಸುತ್ತಾರೆ. ಇದಕ್ಕೆ ಕಾರಣಗಳು ಹೀಗಿರಬಹುದು.


    * ನಿವೃತ್ತಿ ವಯಸ್ಸಿನ ನಂತರವೂ ಕೆಲಸ ಮಾಡುವುದರಿಂದ ಜೀವನಕ್ಕೊಂದು ಉದ್ದೇಶವಿದೆ ಎಂದು ಅನಿಸಬಹುದು.


    * ಅವರು ಬಯಸುವ ಜೀವನಶೈಲಿಗೆ ಹೊಂದಿಕೊಳ್ಳಬಹುದು.


    * ಜನರು ತಮ್ಮ ವೃತ್ತಿ ಮತ್ತು ಆದಾಯದ ಜೊತೆಗೆ ಜೀವನದಲ್ಲಿ ಇತರ ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಬಯಸಬಹುದು.


    ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಹೆಚ್‌ಆರ್‌ ಆಗಿ ಕೆಲಸ ಮಾಡುವ ಅನುಷಾ, “ಹೊಂದಿಕೊಳ್ಳುವ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಜನರು ತಮ್ಮ ನಿವೃತ್ತಿ ವಯಸ್ಸನ್ನು ವಿಸ್ತರಿಸುತ್ತಾರೆ. ಅವರು ಬೇಗನೆ ನಿವೃತ್ತರಾಗಲು ಇಷ್ಟಪಡುವುದಿಲ್ಲ. ಏಕೆಂದರೆ ಅವರು ಇನ್ನೂ ಕೆಲಸ ಮಾಡುವ ಉತ್ಸಾಹವನ್ನು ಹೊಂದಿರುತ್ತಾರೆ. ಅವರು ಕಚೇರಿಗೆ ಬರಲು ಮತ್ತು ಕೆಲಸ ಮಾಡಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ಸುಕರಾಗಿರುತ್ತಾರೆ" ಎಂದು ಹೇಳುತ್ತಾರೆ.


    ಇದನ್ನೂ ಓದಿ: Job Search Tips: ಉದ್ಯೋಗ ಹುಡುಕಾಟದ ಸಮಯದಲ್ಲಿ ಈ 5 ವಿಷಯಗಳನ್ನು ಎಂದಿಗೂ ಮರೆಯಬೇಡಿ


    ಒಟ್ಟಾರೆ, ವೃತ್ತಿಪರ ಗುರಿಗಳು, ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ತೃಪ್ತಿ ಮುಖ್ಯ. ಒಬ್ಬರು ತಮ್ಮ 30 ಅಥವಾ 40 ರ ದಶಕದಲ್ಲಿ ಸಾಕಷ್ಟು ಹಣ ಗಳಿಸಿದರೆ ಬೇಗನೆ ನಿವೃತ್ತಿ ಹೊಂದಬಹುದು.


    ಇನ್ನೂ ಕೆಲವರು 65 ಅನ್ನು ತಲುಪಿದ ನಂತರವೂ ಕೆಲಸ ಮಾಡಲು ಬಯಸಬಹುದು. ಇದು ವ್ಯಕ್ತಿಯ ವೈಯಕ್ತಿಕ ಅಗತ್ಯಗಳನ್ನು ಅವಲಂಬಿಸಿರುತ್ತದೆ. ನೀವು ಅದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ನಿವೃತ್ತಿಗೆ ಸರಿಯಾದ ವಯಸ್ಸೆಂಬುದು ಇಲ್ಲ ಎನ್ನುವುದು ಅರ್ಥವಾಗುತ್ತದೆ.

    Published by:Kavya V
    First published: