• ಹೋಂ
 • »
 • ನ್ಯೂಸ್
 • »
 • Jobs
 • »
 • UPSC Exam: ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆಗಲು 5 ಸ್ಟೆಪ್ಸ್ ಪಾಲಿಸಿ

UPSC Exam: ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆಗಲು 5 ಸ್ಟೆಪ್ಸ್ ಪಾಲಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು ಮೇ 28, 2023 ರಂದು ನಿಗದಿಪಡಿಸಲಾಗಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೆಪ್ಟೆಂಬರ್ 15, 2023 ರಂದು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು.

 • Trending Desk
 • 2-MIN READ
 • Last Updated :
 • Share this:

  ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಯುಪಿಎಸ್‌ಸಿ ಪರೀಕ್ಷೆಯನ್ನು (UPSC Exam) ಬರೆಯಲು ಹಗಲು ರಾತ್ರಿ ಎನ್ನದೆ ಅನೇಕ ವರ್ಷಗಳಿಂದ ಸಮಚಿತ್ತದಿಂದ ಮತ್ತು ನಿರ್ದಿಷ್ಟವಾದ ಹುದ್ದೆಗೆ ಹೋಗಬೇಕು ಅಂತ ಪಟ್ಟು ಹಿಡಿದು ಓದುತ್ತಾ ಕುಳಿತ್ತಿರುತ್ತಾರೆ ಅಂತ ಹೇಳಬಹುದು. ಹೌದು.. ಅನೇಕ ಪದವೀಧರರಿಗೆ ತಾವು ಕೆಲಸ ಮಾಡಿದರೆ ಭಾರತೀಯ ಆಡಳಿತ ಸೇವೆ (IAS) ಆಗಿಯೇ ಕೆಲಸ ಮಾಡಬೇಕು ಅಂತ ಕನಸು ಮತ್ತು ಗುರಿ (Goal) ಎರಡು ಇರುತ್ತವೆ ಅಂತ ಹೇಳಬಹುದು.


  ಔಪಚಾರಿಕವಾಗಿ ನಾಗರಿಕ ಸೇವೆಗಳ ಪರೀಕ್ಷೆ (CSE) ಎಂದು ಕರೆಯಲ್ಪಡುವ ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪಕ್ಕೆ ಗಮನಾರ್ಹ ಪ್ರಮಾಣದ ಸಮರ್ಪಣೆ ಮತ್ತು ಸಿದ್ಧತೆಯ ಅಗತ್ಯವಿದೆ. ಕೆಲವು ವ್ಯಕ್ತಿಗಳು ಈ ಅವಕಾಶವನ್ನು ಪೂರ್ಣಕಾಲಿಕವಾಗಿ ಮುಂದುವರಿಸಲು ಆಯ್ಕೆ ಮಾಡಿದರೆ, ಇತರರು ತಮ್ಮ ಉದ್ಯೋಗದ ಜೊತೆಗೆ ತಮ್ಮ ಸಿದ್ಧತೆಯನ್ನು ಮಾಡಿಕೊಳ್ಳುತ್ತಾ ಇರುತ್ತಾರೆ ಅಂತ ಹೇಳಬಹುದು.


  ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ನೋಂದಣಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಫೆಬ್ರವರಿ 1, 2023 ರಿಂದ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಹ ನಿನ್ನೆ ಎಂದರೆ ಫೆಬ್ರವರಿ 21, 2023ಕ್ಕೆ ಮುಗಿದಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಿದ್ದರೂ, ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮಾತ್ರ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.
  ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು ಮೇ 28, 2023 ರಂದು ನಿಗದಿಪಡಿಸಲಾಗಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೆಪ್ಟೆಂಬರ್ 15, 2023 ರಂದು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ನೀವು ಪೂರ್ಣ ಸಮಯದ ಉದ್ಯೋಗವನ್ನು ಹೊಂದಿದ್ದರೆ ಮತ್ತು ಐಎಎಸ್ ಪರೀಕ್ಷೆಗೆ ಪರಿಣಾಮಕಾರಿಯಾಗಿ ತಯಾರಿ ಮಾಡಲು ನಿಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದರೆ, ಈ ಪರೀಕ್ಷೆಯಲ್ಲಿ ಹೇಗೆ ಯಶಸ್ಸನ್ನು ಕಾಣಬೇಕು ಎಂಬುದರ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ ನೋಡಿ.


  1. ನಿಮ್ಮ ಸಿದ್ಧತೆಗಳನ್ನು ಮುಂಚಿತವಾಗಿ ಪ್ರಾರಂಭಿಸಿ


  ಪೂರ್ವಭಾವಿ ಪರೀಕ್ಷೆಗೆ ಸುಮಾರು ಒಂಬತ್ತರಿಂದ ಹತ್ತು ತಿಂಗಳುಗಳ ಮುಂಚಿತವಾಗಿಯೇ ನಾಗರಿಕ ಸೇವಾ ಪರೀಕ್ಷೆ (ಸಿಎಸ್ಇ) ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ. ಈ ತಯಾರಿಯ ಅವಧಿಯಲ್ಲಿ, ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜಕೀಯದಂತಹ ಪ್ರಮುಖ ವಿಷಯಗಳಲ್ಲಿ ಮತ್ತು ನೀವು ಆಯ್ಕೆ ಮಾಡಿದ ಐಚ್ಛಿಕ ವಿಷಯಗಳಲ್ಲಿ ಬಲವಾದ ಹಿಡಿತವನ್ನು ಸಾಧಿಸುವುದು ತುಂಬಾನೇ ಮುಖ್ಯವಾಗಿದೆ.


  ಆರಂಭಿಕ ಆರು ತಿಂಗಳುಗಳನ್ನು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿಗೆ ಏಕಕಾಲದಲ್ಲಿ ಸಿದ್ಧತೆಗೆ ಮೀಸಲಿಡಬೇಕು, ಏಕೆಂದರೆ ಇದು ಕೇಂದ್ರ ಲೋಕಸೇವಾ ಆಯೋಗವು ನಿಗದಿಪಡಿಸಿದ ಪಠ್ಯಕ್ರಮದ ಗಣನೀಯ ಭಾಗವನ್ನು ಪರಿಣಾಮಕಾರಿಯಾಗಿ ಓದಿ ಮುಗಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.


  2. ನಿಮ್ಮ ವೇಳಾಪಟ್ಟಿಯನ್ನು ಆಪ್ಟಿಮೈಸ್ ಮಾಡಿ


  ಹೆಚ್ಚು ಸ್ಪರ್ಧಾತ್ಮಕ ಸಿಎಸ್ಇಯಲ್ಲಿ ಅಭ್ಯರ್ಥಿಯ ಯಶಸ್ಸು, ಹೆಚ್ಚಾಗಿ ಅವರ ಸಿದ್ಧತೆಯ ಮಟ್ಟ ಮತ್ತು ಅತ್ಯಂತ ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಅನೇಕ ಆಕಾಂಕ್ಷಿಗಳು ಸಹ ಕೆಲಸ ಮಾಡುವ ವೃತ್ತಿಪರರಾಗಿರುವುದರಿಂದ, ಅವರ ಸಿದ್ಧತೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮಾರ್ಗವನ್ನು ಕಂಡು ಹಿಡಿಯುವುದು ಬಹಳ ಮುಖ್ಯವಾಗುತ್ತದೆ.
  ಇದನ್ನು ಸಾಧಿಸುವ ಒಂದು ವಿಧಾನವೆಂದರೆ ಅಧ್ಯಯನದ ಸಮಯವನ್ನು ಹಲವಾರು ವಿಭಾಗಗಳಾಗಿ ವಿಂಗಡಿಸುವುದು, ಉದಾಹರಣೆಗೆ ಕೆಲಸದ ಮೊದಲು, ಸಾಧ್ಯವಾದರೆ ಕೆಲಸದ ಸಮಯದಲ್ಲಿ, ಕೆಲಸದ ನಂತರ ಅಂತ ಅನೇಕ ವಿಭಾಗಗಳಾಗಿ ವಿಂಗಡಿಸಿಕೊಳ್ಳಿರಿ.


  ಕೆಲಸದ ಸಮಯದಲ್ಲಿ ಅಧ್ಯಯನವನ್ನು ಸಂಯೋಜಿಸುವ ಒಂದು ಪರಿಣಾಮಕಾರಿ ವಿಧಾನವೆಂದರೆ ದೈನಂದಿನ ಪತ್ರಿಕೆಗಳ ಮಾಹಿತಿಯುಕ್ತ ವೀಡಿಯೋ ವಿಶ್ಲೇಷಣೆಗಳನ್ನು ವೀಕ್ಷಿಸುವುದು ಅಥವಾ ಊಟದ ವಿರಾಮದ ಸಮಯದಲ್ಲಿ ಪತ್ರಿಕೆಯನ್ನು ಓದುವುದು ಆಗಿದೆ.


  ಈ ವಿಧಾನವು ಬಿಡುವಿಲ್ಲದ ದಿನಗಳಲ್ಲಿಯೂ ಸಿದ್ಧತೆಯ ನಿರಂತರತೆಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಅಂತ ಹೇಳಬಹುದು. ಈ ಕಠಿಣ ಪೂರ್ವಸಿದ್ಧತಾ ವೇಳಾಪಟ್ಟಿಯು ಸಾಮಾನ್ಯ ಅಧ್ಯಯನಗಳು, ಪ್ರಚಲಿತ ವ್ಯವಹಾರಗಳು ಮತ್ತು ಆಯ್ಕೆಯ ಐಚ್ಛಿಕ ವಿಷಯ ಸೇರಿದಂತೆ ಎಲ್ಲಾ ನಿರ್ಣಾಯಕ ಕ್ಷೇತ್ರಗಳನ್ನು ಸಹ ಒಳಗೊಂಡಿರಬೇಕು.


  3. ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ


  ಸಿಎಸ್ಇ ಪರೀಕ್ಷೆಯನ್ನು ಪಾಸ್ ಮಾಡಲು ಬಯಸುವ ಅನೇಕ ಕೆಲಸ ಮಾಡುವ ವೃತ್ತಿಪರರಿಗೆ, ತಮ್ಮ ಪ್ರಸ್ತುತ ಉದ್ಯೋಗವನ್ನು ಬಿಡಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಯು ಸದಾ ಕಾಡುತ್ತಲೇ ಇರುತ್ತದೆ.


  ಒಂದೆಡೆ, ಸಿಎಸ್ಇ ಪರೀಕ್ಷೆ ಸಿದ್ಧತೆಗೆ ಪೂರ್ಣ ಸಮಯದ ಪ್ರಯತ್ನ ನೀಡುವುದು ಒಂದು ರೀತಿಯಲ್ಲಿ ಆದರ್ಶವಾದ ಮಾರ್ಗವೆಂದು ತೋರಬಹುದು, ಆದರೆ ಮತ್ತೊಂದೆಡೆ, ಪ್ರಸ್ತುತವಾದ ವೃತ್ತಿಜೀವನದ ಪ್ರಗತಿಯನ್ನು ತ್ಯಾಗ ಮಾಡಿ ಬೇರೆ ಕ್ಷೇತ್ರಕ್ಕೆ ಕಾಲಿಟ್ಟ ಹಾಗೆ ಆಗುವುದಂತೂ ನಿಜ.
  ಈ ನಿಟ್ಟಿನಲ್ಲಿ, ಆದರ್ಶವಾದ ಮತ್ತು ವಾಸ್ತವಿಕತೆಯ ನಡುವೆ ಸೂಕ್ಷ್ಮ ಸಮತೋಲನವನ್ನು ಸಾಧಿಸುವುದು ಮುಖ್ಯವಾಗಿದೆ. ನಿಮ್ಮ ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ ನಿಮ್ಮನ್ನು ಬೆಂಬಲಿಸಲು ನೀವು ಆರ್ಥಿಕ ಸಾಧನಗಳನ್ನು ಹೊಂದಿದ್ದರೆ, ಮತ್ತು ಪರೀಕ್ಷೆಗೆ ಹಾಜರಾಗುವುದು ನಿಮ್ಮ ದೀರ್ಘಕಾಲೀನ ವೃತ್ತಿಜೀವನದ ಗುರಿಗಳಿಗೆ ಹೊಂದಿಕೆಯಾಗುತ್ತದೆ ಎಂದು ನೀವು ನಂಬಿದರೆ, ನಿಮ್ಮ ಕೆಲಸವನ್ನು ತ್ಯಜಿಸುವುದು ಒಂದು ರೀತಿಯಲ್ಲಿ ಒಳ್ಳೆಯ ಆಯ್ಕೆಯಾಗಿದೆ.


  ಆದಾಗ್ಯೂ, ಯುಪಿಎಸ್‌ಸಿ ಪರೀಕ್ಷೆಯ ಸಂದರ್ಶನದಲ್ಲಿ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಕೆಲಸದ ಅನುಭವವು ಸಹ ತುಂಬಾನೇ ಮಹತ್ವದ ಪಾತ್ರ ವಹಿಸುತ್ತದೆ. ಕೆಲಸ ಮಾಡುವ ವೃತ್ತಿಪರರು ತಮ್ಮ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಿಎಸ್ಇ ಪರೀಕ್ಷೆಗೆ ತಯಾರಿ ಮಾಡುವಾಗ ವೃತ್ತಿಪರ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವುದು ಸೂಕ್ತ.


  ವಾರದ ದಿನಗಳಲ್ಲಿ ಅಧ್ಯಯನಕ್ಕಾಗಿ ಕನಿಷ್ಠ 3 ರಿಂದ 4 ಗಂಟೆಗಳನ್ನು ಮೀಸಲಿಡುವುದು ಮತ್ತು ವಾರಾಂತ್ಯದಲ್ಲಿ ಈ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.


  4. ನೀವು ಮಾಡಿಕೊಂಡಿರುವ ವೇಳಾಪಟ್ಟಿಗೆ ಬದ್ದರಾಗಿರಿ


  ಉತ್ತಮ ವೇಳಾಪಟ್ಟಿಯನ್ನು ಪರೀಕ್ಷೆಯ ತಯಾರಿಗೆ ಸಿದ್ದ ಪಡಿಸಿಕೊಳ್ಳುವುದು ಎಂದರೆ ನಿದ್ರೆ ಮತ್ತು ಊಟವನ್ನು ಬಿಟ್ಟು ಬರೀ ಓದಬೇಕು ಎಂದಲ್ಲ. ನೀವು ತಯಾರಿಸಿಕೊಳ್ಳುವ ವೇಳಾಪಟ್ಟಿಯು ಆರೋಗ್ಯಕರ ಕೆಲಸ ಮತ್ತು ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.


  ಕೆಲಸ ಮಾಡುವಾಗ ತಯಾರಿ ಯೋಜನೆಯು ಕೆಲಸದ ಮೊದಲು ಸಾಮಾನ್ಯ ಅಧ್ಯಯನಕ್ಕಾಗಿ ಪ್ರತಿದಿನ ಎರಡು ಗಂಟೆಗಳನ್ನು ಮೀಸಲಿಡುವುದನ್ನು ಒಳಗೊಂಡಿರುತ್ತದೆ. ಪ್ರಸ್ತುತ ವ್ಯವಹಾರಗಳು ಮತ್ತು ಪತ್ರಿಕೆ ವಿಶ್ಲೇಷಣೆಗಾಗಿ ಕೆಲಸದ ವಿರಾಮದ ಸಮಯದಲ್ಲಿ 45 ನಿಮಿಷಗಳು ಮತ್ತು ಐಚ್ಛಿಕ ವಿಷಯಕ್ಕಾಗಿ ಕೆಲಸದ ನಂತರ ಎರಡು ಗಂಟೆಗಳ ಸಮಯವನ್ನು ಮೀಸಲಿಡಬಹುದು.


  upsc cse 2023 exam date and exam time table
  ಪ್ರಾತಿನಿಧಿಕ ಚಿತ್ರ


  ಊಟದ ನಂತರ, ಕಲಿಕೆಯನ್ನು ಬಲಪಡಿಸಲು 20 ನಿಮಿಷಗಳ ರಿವಿಷನ್ ಅನ್ನು ಶಿಫಾರಸು ಮಾಡಲಾಗುತ್ತದೆ. ವಾರಾಂತ್ಯದಲ್ಲಿ, ವಾರದ ಕೆಲಸವನ್ನು ಪರಿಶೀಲಿಸುವುದು ಮತ್ತು ಉತ್ತರ ಬರವಣಿಗೆ ಮತ್ತು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ. ಪೂರ್ವಭಾವಿ ಪರೀಕ್ಷೆಗೆ ಹಲವಾರು ತಿಂಗಳುಗಳ ಮೊದಲು, ಪರಿಸರ ಮತ್ತು ವೈಜ್ಞಾನಿಕ ವಿಷಯಗಳಿಗೆ ನಿರ್ದಿಷ್ಟ ಒತ್ತು ನೀಡುವ ಮೂಲಕ ಸಾಮಾನ್ಯ ಅಧ್ಯಯನದ ಸಂಬಂಧಿತ ಅಂಶಗಳ ಮೇಲೆ ಗಮನ ಹರಿಸಬೇಕು.


  ನಾಗರಿಕ ಸೇವೆಗಳ ಪರೀಕ್ಷಾ ಪಠ್ಯಕ್ರಮದಲ್ಲಿರುವ ಅಂಶಗಳನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳುವುದು ಮತ್ತು ಪರೀಕ್ಷೆಯ ಸಮಯಕ್ಕೆ ಅದೆಲ್ಲವನ್ನು ಮತ್ತೆ ನೆನಪು ಮಾಡಿಕೊಳ್ಳುವುದಕ್ಕೆ ಆಗಾಗ್ಗೆ ವಿಷಯಗಳನ್ನು ರಿವಿಷನ್ ಮಾಡಬೇಕು ಎಂದು ಹೇಳುತ್ತಾರೆ.


  ಇದನ್ನೂ ಓದಿ: UPSC Success Story: ಕೇವಲ 4 ಅಂಕಗಳಿಂದ IAS ಕನಸು ಭಗ್ನ; ಮುಂದೆ ಸಾಧನೆಗೆ ದಾರಿಯಾಗಿದ್ದು ‘ಆ’ ಘಟನೆ


   ಸಿಎಸ್ಎಟಿ (ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್) ಪತ್ರಿಕೆಗೆ ಮೀಸಲಾದ ಅಭ್ಯಾಸ ಸಹ ಅಗತ್ಯವಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆಯನ್ನು ನೀವು ಚೆನ್ನಾಗಿ ಬರೆದಿದ್ದು, ಅದರಲ್ಲಿ ಪಾಸ್ ಆಗುತ್ತೇನೆ ಎಂಬ ನಂಬಿಕೆ ಇದ್ದಲ್ಲಿ, ಮುಖ್ಯ ಪರೀಕ್ಷೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಶುರು ಮಾಡಬೇಕು ಮತ್ತು ನಿಮ್ಮ ಕೆಲಸದಿಂದ ಸಮಯ ತೆಗೆದುಕೊಳ್ಳುವುದು ಸೂಕ್ತವಾಗಿದೆ, ಏಕೆಂದರೆ ಇದಕ್ಕೆ ತುಂಬಾನೇ ಗಂಭೀರವಾದ ಅಧ್ಯಯನದ ಅಗತ್ಯವಿದೆ. ಮೇನ್ಸ್ ನಂತರ, ಕೆಲಸಕ್ಕೆ ಮರಳುವುದು ಮತ್ತು ಸಂದರ್ಶನಕ್ಕಾಗಿ ಪ್ರಸ್ತುತ ವ್ಯವಹಾರಗಳನ್ನು ಉಳಿಸಿಕೊಳ್ಳುವುದು ನಿರ್ಣಾಯಕವಾಗಿದೆ.


  5. ಓದಿದ ವಿಷಯಗಳನ್ನು ವಾರಕೊಮ್ಮೆ ಸ್ನೇಹಿತರೊಂದಿಗೆ ಚರ್ಚಿಸಿ


  ಇದೇ ರೀತಿಯ ಗುರಿಯನ್ನು ಹೊಂದಿರುವ ಜನರ ಜೊತೆಗೆ ಸಂಪರ್ಕ ಸಾಧಿಸುವುದು ಮತ್ತು ಪರೀಕ್ಷೆಗೆ ತಯಾರಿ ನಡೆಸಿರುವ ಅಧ್ಯಯನ ಮಾಡುವವರ ಒಂದು ಗುಂಪನ್ನು ನಿರ್ಮಿಸಿಕೊಳ್ಳುವುದು ಸಹ ತುಂಬಾನೇ ಸಹಾಯಕವಾಗುತ್ತದೆ. ವಾರಾಂತ್ಯದಲ್ಲಿ ಸ್ನೇಹಿತರ ಜೊತೆಯಲ್ಲಿ ಕೂತು ವಿಷಯಗಳ ಬಗ್ಗೆ ಚರ್ಚೆಯನ್ನು ಮಾಡಿ ಮತ್ತು ಪ್ರತಿ ಸದಸ್ಯರಿಗೆ ನಿರ್ದಿಷ್ಟ ವಿಷಯಗಳನ್ನು ನಿಯೋಜಿಸುವುದು ಸಮಯವನ್ನು ತುಂಬಾನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.


  ಮತ್ತು ಅಂತಿಮವಾಗಿ, ಐಎಎಸ್ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವೃತ್ತಿಪರರು ತಮ್ಮನ್ನು ಮತ್ತು ತಮ್ಮ ಸಾಮರ್ಥ್ಯಗಳನ್ನು ನಂಬುವುದು ಅತ್ಯಗತ್ಯವಾಗಿದೆ. ನೀವು ಈ ಪರೀಕ್ಷೆಯನ್ನು ಇಲ್ಲಿಯವರೆಗೆ ಪಾಸ್ ಮಾಡಿಕೊಂಡು ಬಂದಿದ್ದೀರಿ ಎಂದರೆ ನಿಮ್ಮಲ್ಲಿ ಆ ಕೌಶಲ್ಯ ಮತ್ತು ಜ್ಞಾನ ಇದೆ ಅಂತಾನೆ ಅರ್ಥ. ವಿಷಯಗಳನ್ನು ಒಟ್ಟಿಗೆ ತೆಗೆದುಕೊಳ್ಳಬೇಡಿ. ಒಂದರ ನಂತರ ಇನ್ನೊಂದನ್ನು ತೆಗೆದುಕೊಳ್ಳಿ. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ, ಪ್ರೇರೇಪಿತರಾಗಿರಿ ಮತ್ತು ಸಕಾರಾತ್ಮಕವಾಗಿರಿ.

  Published by:Kavya V
  First published: