• ಹೋಂ
 • »
 • ನ್ಯೂಸ್
 • »
 • Jobs
 • »
 • VMinclusion Taara: ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗಾಗಿ ಉಚಿತ ತರಬೇತಿ! ನೀವೂ ಜಾಯ್ನ್​​ ಆಗಿ

VMinclusion Taara: ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗಾಗಿ ಉಚಿತ ತರಬೇತಿ! ನೀವೂ ಜಾಯ್ನ್​​ ಆಗಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈವರೆಗೂ ಸುಮಾರು ೨೨ ಸಾವಿರ ಮಹಿಳೆಯರು ಈ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈಗಾಗಲೇ ೨೩ ಸಾವಿರಕ್ಕೂ ಹೆಚ್ಚು ನೋಂದಣಿಯಾಗಿರುವುದು ಇದರ ವಿಶೇಷ. ನೀವೂ ಕೂಡಾ ಇತರ ಮಹಿಳೆಯರಂತೆ ನೀವೂ ಸಾಧನೆ ಮಾಡಲು ಬಯಸಿದರೆ ಖಂಡಿತ ಇದನ್ನು ಟ್ರೈ ಮಾಡಬಹುದು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಎಷ್ಟೋ ಮಹಿಳೆಯರು (Women) ತಮ್ಮ ನಿತ್ಯದ ಜೀವನವನ್ನು ಹವ್ಯಾಸ ಹಾಗೂ ವೃತ್ತಿ ಎರಡನ್ನೂ ಕೂಡಾ ಸಂಭಾಳಿಸಿಕೊಂಡು ಹೋಗಲು ಕಷ್ಟಪಡುತ್ತಾರೆ. ಅಂದುಕೊಂಡಿದ್ದನ್ನು ಮಾಡಲೂ ಕೂಡ ಆಗದ ಪರಿಸ್ಥಿತಿ ಎದುರಿಸುತ್ತಿರುತ್ತಾರೆ. ಅಂತವರಿಗಾಗಿ ಉಚಿತ ತರಬೇತಿ (Free Training) ನೀಡುವ ಸಂಸ್ಥೆಯೊಂದು ಹುಟ್ಟಿಕೊಂಡಿದೆ. ಎಲ್ಲಾ ಮಹಿಳೆಯರು ತಮ್ಮ ವೃತ್ತಿ (Career) ಜೀವನವನ್ನು ಉತ್ತಮವಾಗಿಸಿಕೊಳ್ಳಲು, ನೀವು ಅಂದುಕೊಂಡಿದ್ದನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ. ಅಧಿಕೃತ ಜಾಲತಾಣದ (Website) ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ನೀವು ಸೇರಿಕೊಳ್ಳಲು ಬಯಸಿದರೆ ಈ ಲಿಂಕ್​ ಕ್ಲಿಕ್​ ಮಾಡಿ.


ಮದುವೆಯಾದ ಸಾಕಷ್ಟು ಮಹಿಳೆಯರು ಕುಟುಂಬ ನಿರ್ವಹಣೆ ಹಾಗೂ ಇತರೆ ವೈಯಕ್ತಿಕ ಕಾರಣದಿಂದಾಗಿ ತಮ್ಮ ವೃತ್ತಿ ಬದುಕನ್ನು ಅರ್ಧಕ್ಕೆ ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಕಾಲಕ್ರಮೇಣ ತಾವೂ ಸಹ ತಮ್ಮ ವೃತ್ತಿ ಬದುಕನ್ನು ಪುನಃಸ್ಥಾಪಿಸಿಕೊಳ್ಳುವ ಬಯಕೆಯೂ ಮೂಡಬಹುದು. ಅಂಥವರಿಗಾಗಿಯೇ ವಿಎಂವೇರ್‌ ಸಂಸ್ಥೆಯು "ವಿಎಂಇನ್‌ಕ್ಲೂಷನ್‌ ತಾರ" ಎನ್ನುವ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ, ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಕೊಡುಗೆ ನೀಡುವುದಾಗಿದೆ.


ಈವರೆಗೂ ಸುಮಾರು ೨೨ ಸಾವಿರ ಮಹಿಳೆಯರು ಈ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈಗಾಗಲೇ ೨೩ ಸಾವಿರಕ್ಕೂ ಹೆಚ್ಚು ನೋಂದಣಿಯಾಗಿರುವುದು ಇದರ ವಿಶೇಷ. ನೀವೂ ಕೂಡಾ ಇತರ ಮಹಿಳೆಯರಂತೆ ನೀವೂ ಸಾಧನೆ ಮಾಡಲು ಬಯಸಿದರೆ ಖಂಡಿತ ಇದನ್ನು ಟ್ರೈ ಮಾಡಬಹುದು.


ಇದನ್ನೂ ಓದಿ: Botany: ಸಸ್ಯಶಾಸ್ತ್ರದ ಬಗ್ಗೆ ನೀವು ತಿಳಿಯಬಹುದಾದ ಆಸಕ್ತಿದಾಯಕ ವಿಷಯ ಇಲ್ಲಿದೆ


ಈ ಕಾರ್ಯಕ್ರಮದ ವಿಶೇಷತೆ ಏನು?
2019ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಸಾಕಷ್ಟು ಮಹಿಳೆಯರ ವೃತ್ತಿ ಬದುಕನ್ನೇ ಬದಲಾಯಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡೇಟಾಸೆಂಟರ್, ನೆಟ್‌ವರ್ಕಿಂಗ್, ಕ್ಲೌಡ್ ಮತ್ತು ಕ್ಲೌಡ್ ಮ್ಯಾನೇಜ್‌ಮೆಂಟ್ ತಂತ್ರಜ್ಞಾನಗಳು ಸೇರಿದಂತೆ ಕ್ಲೌಡ್ ತಂತ್ರಜ್ಞಾನಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳ ತರಬೇತಿಯನ್ನು ನೀಡಲಾಗುತ್ತದೆ. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಹಾಗೂ ಈಗಾಗಲೇ ಉದ್ಯೋಗ ಪಡೆದು, ಕೆಲ ಕಾರಣದಿಂದ ಉದ್ಯೋಗ ತ್ಯಜಿಸಿ, ಈಗ ಮತ್ತೆ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವ ಮಹಿಳೆಯರಿಗೆ ಈ ತರಬೇತಿ ನೀಡಲಾಗುತ್ತದೆ.
ಈ ತರಬೇತಿಯೂ ಸಂಪೂರ್ಣ ಉಚಿತವಾಗಿದ್ದು, ಆನ್‌ಲೈನ್‌ ಮೂಲಕವೇ ಇದಕ್ಕೆ ನೋಂದಣಿಯಾಗಬಹುದು. ಈ ತರಬೇತಿಯು ಕನಿಷ್ಠ 4 ರಿಂದ 6 ತಿಂಗಳ ಅವಧಿಯಾಗಿದ್ದು, ತರಬೇತಿ ಪಡೆದ ಬಳಿಕ ಈ ಸಂಸ್ಥೆಯು ರಾಜ್ಯ ಸರ್ಕಾರದ ಅಧಿಕೃತ ಸರ್ಟಿಫಿಕೇಟ್‌ ನೀಡಲಿದೆ. ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದಾದರೆ ಇಲ್ಲಿ ಕ್ಲಿಕ್ ಮಾಡಿ


ಕೋರ್ಸ್‌ಅನ್ನು ಮೂರು ಹಂತದಲ್ಲಿ ವಿಂಗಡಿಸಲಾಗಿದೆ.
1. ಈಗಾಗಲೇ ಕೆಲಸದ ಅನುಭವ ಇರುವವರಿಗೆ ತಮ್ಮ ವೃತ್ತಿಯನ್ನು ಉನ್ನತೀಕರಿಸಿಕೊಳ್ಳುವವರಿಗೆ ಮಧ್ಯಮದ ಹಂತದ ತರಬೇತಿ,
2. ಈಗಷ್ಟೇ ಉದ್ಯೋಗ ಪ್ರಾರಂಭಿಸುವವರಿಗೆ ನೂತನವಾಗಿ ತರಬೇತಿ
3. ಈಗಾಗಲೇ ಉದ್ಯೋಗದಲ್ಲಿ ಉನ್ನತ ಸ್ಥಾನದಲ್ಲಿದ್ದವರಿಗೆ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುವುದು.
ಈ ತರಬೇತಿಗೆ ಸೇರಿಕೊಳ್ಳುವವರು ಕಡ್ಡಾಯವಾಗಿ ಕೆಲಸದಲ್ಲಿರಬಾರದು. ಜೊತೆಗೆ ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಈ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವು ಈಗಾಗಲೇ ನೀಡಿರುವ ಲಿಂಕ್​ನ ಮೇಲೆ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು. ನೀವೂ ಆನ್​ಲೈನ್​ ಮೂಲಕವೇ ತರಗತಿಯನ್ನು ಪೂರ್ಣಗೊಳಿಸಿ. ಉತ್ತಮ ವೃತ್ತಿ ಜೀವನ ನಿಮ್ಮದಾಗಿಸಿಕೊಳ್ಳಬಹುದು.


ತಿಂಗಳಲ್ಲಿ ಕೆಲವು ದಿನ ಇವೆಂಟ್​ಗಳು ಸಹ ನಡೆಯುತ್ತವೆ ಅದರ ಮಾಹಿತಿ ಕೂಡಾ ವೆಬ್​ಸೈಟ್​ನಲ್ಲಿ ಲಭ್ಯವಿದೆ.

First published: