• ಹೋಂ
  • »
  • ನ್ಯೂಸ್
  • »
  • Jobs
  • »
  • Career Tips: ಜಾಸ್ತಿ ವಯಸ್ಸಾಗಿದ್ರೆ ಅದನ್ನೇ ಬಲವಾಗಿಸಿಕೊಂಡು ಉದ್ಯೋಗ ಪಡೆಯಲು ಈ ಟಿಪ್ಸ್ ಅನುಸರಿಸಿ

Career Tips: ಜಾಸ್ತಿ ವಯಸ್ಸಾಗಿದ್ರೆ ಅದನ್ನೇ ಬಲವಾಗಿಸಿಕೊಂಡು ಉದ್ಯೋಗ ಪಡೆಯಲು ಈ ಟಿಪ್ಸ್ ಅನುಸರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಯಸ್ಸು 50 ದಾಟಿದವರಿಗೆ ಕೆಲಸ ಬಿಟ್ಟು ಇನ್ನೊಂದು ಕೆಲಸ ಜಾಸ್ತಿ ಸಂಬಳಕ್ಕೆ ಹುಡುಕಿಕೊಳ್ಳುವುದು ಎಂದರೆ ತುಂಬಾನೇ ಕಷ್ಟದ ಕೆಲಸವಾಗಿರುತ್ತದೆ.

  • Share this:

‘ನನಗೆ ತುಂಬಾನೇ ವಯಸ್ಸಾಯ್ತು (Age), ಈಗ ಯಾವ ಕಂಪನಿಯಲ್ಲೂ ನಾನು ಹುಡುಕುತ್ತಿರುವ ಕೆಲಸ (Job) ಮತ್ತು ಸಂಬಳ (Salary) ಸಿಗುವುದು ತುಂಬಾನೇ ಕಷ್ಟ’ ಅಂತೆಲ್ಲಾ ತುಂಬಾ ಜನ ಸೀನಿಯರ್ ಉದ್ಯೋಗಿಗಳು ಹೇಳುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ. ಹೆಚ್ಚಿನ ಉದ್ಯೋಗಿಗಳು ತಮಗೆ ವಯಸ್ಸು ಆಗ್ತಾ ಇದ್ದಂಗೆ ತಮಗಿರುವ ಉದ್ಯೋಗವಕಾಶಗಳು ಕಡಿಮೆ ಆಗುತ್ತವೆ ಅಂತ ತಿಳಿದುಕೊಳ್ಳುತ್ತಾರೆ.


ಏಕೆಂದರೆ ಕಂಪನಿಗಳು ಈಗ ತಾನೇ ಓದು ಮುಗಿಸಿಕೊಂಡು ಬಂದ ಅಭ್ಯರ್ಥಿಗಳನ್ನು ಕಡಿಮೆ ಸಂಬಳಕ್ಕೆ ನೇಮಿಸಿಕೊಂಡು ಕೆಲಸ ಮಾಡಿಸಿಕೊಳ್ಳಬಹುದು ಅಂತ ಹೆಚ್ಚಾಗಿ ಕಡಿಮೆ ವಯಸ್ಸಿನ ಯುವಕ ಮತ್ತು ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಇನ್ನೂ ಕೆಲಸದಲ್ಲಿ 10-15 ವರ್ಷಗಳ ಅನುಭವ ಇರುವವರಿಗೂ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುತ್ತಾರೆ.


ಆದರೆ ವಯಸ್ಸು 50 ದಾಟಿದವರಿಗೆ ಕೆಲಸ ಬಿಟ್ಟು ಇನ್ನೊಂದು ಕೆಲಸ ಜಾಸ್ತಿ ಸಂಬಳಕ್ಕೆ ಹುಡುಕಿಕೊಳ್ಳುವುದು ಎಂದರೆ ತುಂಬಾನೇ ಕಷ್ಟದ ಕೆಲಸವಾಗಿರುತ್ತದೆ. ಆದರೆ ಕಂಪನಿಗಳ ನೇಮಕಾತಿಯಲ್ಲಿ ವಯಸ್ಸಿನ ಆಧಾರಿತ ತಾರತಮ್ಯವು ಕಾನೂನುಬಾಹಿರವಾಗಿದ್ದರೂ, 50 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಉದ್ಯೋಗಾಕಾಂಕ್ಷಿಗಳು ಕಾರ್ಯನಿರ್ವಾಹಕ ಮಟ್ಟದ ಉದ್ಯೋಗಗಳನ್ನು ಹುಡುಕುವಾಗ ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ.


ಆ ಪಾತ್ರಕ್ಕೆ ವಿಶೇಷ ಕೌಶಲ್ಯಗಳು ಅಥವಾ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೊಡಗಿಸಿಕೊಳ್ಳಬೇಕಾದಾಗ ಇದು ವಿಶೇಷವಾಗಿ ನಿಜ ಅಂತ ಅನ್ನಿಸುತ್ತದೆ.




ಉನ್ನತ ಮಟ್ಟದ ಕೆಲಸವನ್ನು ಹುಡುಕುತ್ತಿರುವಾಗ ವಯಸ್ಸನ್ನು ಅನುಕೂಲವೆಂದು ಪರಿಗಣಿಸಿ


ಕೆಲಸದ ಸ್ಥಳದ ವಯಸ್ಸಿಗೆ ಸಂಬಂಧಿಸಿದ ಅಧ್ಯಯನದ ಪ್ರಕಾರ, 21 ಪ್ರತಿಶತದಷ್ಟು ಹಳೆಯ ಉದ್ಯೋಗಾಕಾಂಕ್ಷಿಗಳು ತಮ್ಮ ಕೆಲಸದ ಹುಡುಕಾಟದ ಸಮಯದಲ್ಲಿ ಕೆಲವು ರೀತಿಯ ವಯಸ್ಸಾದ ಪ್ರತಿಕ್ರಿಯೆಯನ್ನು ವರದಿ ಮಾಡುತ್ತಾರೆ.


ಈಗ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು 50 ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿಪರರನ್ನು ಒಳಗೊಂಡಿರುವುದರಿಂದ, ಈ ಜನಸಂಖ್ಯಾಶಾಸ್ತ್ರವು ಕಾರ್ಯನಿರ್ವಾಹಕ ಪಾತ್ರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ.


ಅದಕ್ಕಾಗಿಯೇ ಉನ್ನತ ಮಟ್ಟದ ಸ್ಥಾನಗಳನ್ನು ಹುಡುಕುವಾಗ ನಿಮ್ಮ ವಯಸ್ಸನ್ನು ಅನುಕೂಲವೆಂದು ಪರಿಗಣಿಸುವುದು ಅತ್ಯಗತ್ಯ. ಕಾರ್ಯನಿರ್ವಾಹಕ ಉದ್ಯೋಗ ಅಭ್ಯರ್ಥಿಯಾಗಿ ನಿಮ್ಮ ಮೌಲ್ಯವನ್ನು ಬಲಪಡಿಸಲು ನೀವು ಮಾಡಲೇಬೇಕಾದ ಐದು ಕೆಲಸಗಳು ಇಲ್ಲಿವೆ ನೋಡಿ.


1. ನಿಮ್ಮ ಅನುಭವ ಮತ್ತು ಪರಿಣತಿಯನ್ನು ತೋರಿಸಲು ನಿಮ್ಮ ರೆಸ್ಯೂಮ್ ಅನ್ನು ಅಪ್ಡೇಟ್ ಮಾಡಿ


‘ಅಯ್ಯೋ ನನಗೆ ವಯಸ್ಸಾಗಿದೆ, ಕೆಲಸ ಸಿಗುತ್ತೋ, ಇಲ್ಲವೋ’ ಅಂತ ಯೋಚನೆ ಮಾಡುವ ಬದಲು, ನಿಮ್ಮ ರೆಸ್ಯೂಮ್ ನಲ್ಲಿ ಸ್ಪಷ್ಟವಾಗಿ ನಿಮ್ಮ ವಯಸ್ಸಿನಲ್ಲಿ ಮಾಡಿದ ಕೆಲಸದ ಅನುಭವ ಮತ್ತು ನೀವು ಪರಿಣತಿ ಪಡೆದ ಕೆಲಸಗಳ ಬಗ್ಗೆ ವಿವರವಾಗಿ ಬರೆದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.


ನ್ಯಾಷನಲ್ ಅಸೋಸಿಯೇಷನ್ ಆಫ್ ಕಾಲೇಜ್ಸ್ ಅಂಡ್ ಎಂಪ್ಲಾಯರ್ಸ್ ಪ್ರಕಾರ, 91 ಪ್ರತಿಶತದಷ್ಟು ಉದ್ಯೋಗದಾತರು ಹೆಚ್ಚು ಅನುಭವಿ ಅಭ್ಯರ್ಥಿಗಳು ತಮ್ಮ ಪ್ರತಿಭೆಯ ಹುಡುಕಾಟದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಿದ್ದಾರೆ.


ಕಾರ್ಯನಿರ್ವಾಹಕ ಪಾತ್ರಗಳನ್ನು ಹುಡುಕುವಾಗ, ಪ್ರಮಾಣೀಕರಿಸಬಹುದಾದ ವಿವರಗಳ ಮೂಲಕ ನಿಮ್ಮ ಸಾಮರ್ಥ್ಯಗಳನ್ನು ಎತ್ತಿ ತೋರಿಸುವ ರೀತಿಯಲ್ಲಿ ನಿಮ್ಮ ರೆಸ್ಯೂಮ್ ಅನ್ನು ತಯಾರು ಮಾಡಿಕೊಳ್ಳಿ.




ಉದಾಹರಣೆಗೆ, ಹಿಂದಿನ ಕಂಪನಿಗಳಲ್ಲಿ ನೀವು ನಿರ್ವಹಿಸಿದ ಪಾತ್ರಗಳಲ್ಲಿ ನೀವು ಯಾವ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಿ ಪರಿಹರಿಸಿದ್ದೀರಿ? ನೀವು ಎಷ್ಟು ಯೋಜನೆಗಳನ್ನು ನಿರ್ವಹಿಸಿದ್ದೀರಿ ಮತ್ತು ನೀವು ಯಾವ ಫಲಿತಾಂಶಗಳನ್ನು ನೀಡಿದ್ದೀರಿ? ನೀವು ಗೆದ್ದ ಯಾವುದೇ ಪ್ರಶಸ್ತಿಗಳನ್ನು ಅಥವಾ ನೀವು ಭಾಗವಹಿಸಿದ ಸಮ್ಮೇಳನಗಳನ್ನು ಸಹ ನೀವು ನಿಮ್ಮ ರೆಸ್ಯೂಮ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು.


2. ನೀವು ಬೆಳೆಸಿಕೊಂಡ ನೆಟ್ವರ್ಕ್ ಅನ್ನು ಚೆನ್ನಾಗಿ ಬೆಳೆಸಿಕೊಳ್ಳಿ


ವಯಸ್ಸಾದ ಉದ್ಯೋಗಿಯಾಗಿ, ನಿಮ್ಮ ವೃತ್ತಿಜೀವನದುದ್ದಕ್ಕೂ ನೀವು ಬಲವಾದ, ವಿಸ್ತಾರವಾದ ವೃತ್ತಿಪರ ನೆಟ್ವರ್ಕ್ ಅನ್ನು ಬೆಳೆಸಿಕೊಂಡಿರುತ್ತೀರಿ. ಆ ಜನರ ಸಹಾಯ ಪಡೆಯುವುದು ಒಳ್ಳೆಯದು. ಏಕೆಂದರೆ ನೀವು ಸಂಭಾವ್ಯ ಪಾತ್ರಗಳನ್ನು ಪರಿಗಣಿಸಿದಾಗ, ಕಂಪನಿ ಅಥವಾ ಅದರ ಮಾಲೀಕರನ್ನು ತಿಳಿದಿರುವ ಯಾವುದೇ ಸಂಪರ್ಕಗಳನ್ನು ಸುಲಭವಾಗಿ ತಲುಪಬಹುದು.


ಆಸಕ್ತಿಯ ಉದ್ಯೋಗದಾತರಿಗೆ ಹತ್ತಿರವಿರುವ ಯಾರನ್ನಾದರೂ ನೀವು ತಿಳಿದಿಲ್ಲದಿದ್ದರೂ, ಕಾರ್ಯನಿರ್ವಾಹಕ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಲಹೆ ಪಡೆಯುವುದು ಉಪಯುಕ್ತವಾಗಿದೆ.


ನೀವು ಇಷ್ಟು ವರ್ಷಗಳ ಕಾಲ ಬೆಳೆಸಿಕೊಂಡಿರುವ ನೆಟ್ವರ್ಕ್ ನಿಮಗೆ ತುಂಬಾನೇ ಸಹಾಯಕ್ಕೆ ಬರುತ್ತದೆ, ಆದ್ದರಿಂದ ಈ ನೆಟ್ವರ್ಕ್ ಗಳನ್ನು ಬಳಸಿಕೊಳ್ಳಲು ಹಿಂಜರಿಯಬೇಡಿ. ನಿಮಗಿರುವ ನೆಟ್ವರ್ಕ್ ಗಳು ನಿಮ್ಮನ್ನು ಸರಿಯಾದ ದಿಕ್ಕಿನೆಡೆಗೆ ಕರೆದುಕೊಂಡು ಹೋಗಲು ತುಂಬಾನೇ ಸಹಾಯ ಮಾಡುತ್ತವೆ.


3. ಹೊಸ ಹೊಸ ತಂತ್ರಜ್ಞಾನ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿ


ಕಾರ್ಯನಿರ್ವಾಹಕರಾಗಿ, ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಮತ್ತು ಬಳಸಿಕೊಳ್ಳುವ ಸಾಮರ್ಥ್ಯ ನಿಮಗೆ ಬೇಕಾಗಬಹುದು. ಈ ವಿಷಯದಲ್ಲಿ ಅನೇಕ ಅನುಭವಿ ವೃತ್ತಿಪರರು ಹಿಂದೆ ಉಳಿದಿದ್ದಾರೆ ಎಂದು ಭಾವಿಸಬಹುದು. ಯಾವುದೇ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವು ಹಳೆಯ ಕೆಲಸಗಾರರು ಕಲಿಯಲು ಸ್ವಲ್ಪ ಸಮಯ ಬೇಕಾಗಬಹುದು.


ವಯಸ್ಸು ಅಥವಾ ವೃತ್ತಿಯನ್ನು ಲೆಕ್ಕಿಸದೆ ಯಾವುದೇ ವೃತ್ತಿಪರರು ಇತ್ತೀಚಿನ ದಿನಗಳಲ್ಲಿ ಇಂತಹ ಉದ್ಯಮ ಪ್ರವೃತ್ತಿಗಳಲ್ಲಿ ಅಗ್ರಸ್ಥಾನದಲ್ಲಿ ಉಳಿಯುವುದು ತುಂಬಾನೇ ಅತ್ಯಗತ್ಯವಾಗುತ್ತದೆ.


ಮೂಲಭೂತ ಅಂಶಗಳನ್ನು ಒಳಗೊಂಡಿರುವ ಆನ್ಲೈನ್ ಕೋರ್ಸ್ ಗಳ ಲಾಭವನ್ನು ಪಡೆದುಕೊಳ್ಳಿ, ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ.


ಪ್ರಾತಿನಿಧಿಕ ಚಿತ್ರ


4. ನಿಮ್ಮ ಸಾಮಾಜಿಕ ಉಪಸ್ಥಿತಿಯ ಬಗ್ಗೆ ಜಾಗರೂಕರಾಗಿರಿ


ಕಾರ್ಯನಿರ್ವಾಹಕ-ಮಟ್ಟದ ವೃತ್ತಿಪರರು ಎಂದರೆ ಅವರನ್ನು ಹೆಚ್ಚಾಗಿ ತಮ್ಮ ಕಂಪನಿಯ ಮುಖವಾಗಿ ನೋಡಲಾಗುತ್ತದೆ. ಈ ಪಾತ್ರಗಳನ್ನು ನಿರ್ವಹಿಸುವಾಗ, ನಿಮ್ಮ ಆನ್ಲೈನ್ ಉಪಸ್ಥಿತಿಯ ಮೌಲ್ಯವನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ.


ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಗುಣವಾಗಿ ಸರಿಹೊಂದಿಸಿಕೊಳ್ಳಿ. ಉದಾಹರಣೆಗೆ, ಆಕ್ರಮಣಕಾರಿ ಅಥವಾ ವೃತ್ತಿಪರವಲ್ಲ ಎಂದು ಪರಿಗಣಿಸಬಹುದಾದ ಯಾವುದೇ ಪೋಸ್ಟ್ ಗಳನ್ನು ಅಲ್ಲಿಂದ ಮೊದಲು ತೆಗೆದು ಹಾಕಿ.


ನಿಮ್ಮ ಫೋಟೋಗಳನ್ನು ನಿಮ್ಮ ವೃತ್ತಿಪರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ಅಪ್ಡೇಟ್ ಮಾಡಿ ಮತ್ತು ನೀವು ಪ್ರತಿಕ್ರಿಯಿಸಬೇಕಾದ ಯಾವುದೇ ಕಾಮೆಂಟ್ ಗಳು ಅಥವಾ ಸಂದೇಶಗಳಿಗಾಗಿ ಮೇಲ್ವಿಚಾರಣೆ ಮಾಡಿ. ನೀವು ಇನ್ನೂ ಆನ್ಲೈನ್ ಉಪಸ್ಥಿತಿಯನ್ನು ನಿರ್ಮಿಸದಿದ್ದರೆ, ಸಂಬಂಧಿತ ಉದ್ಯಮ ಸಮುದಾಯಗಳಿಗೆ ಸೇರಲು ಮತ್ತು ಇತರ ವೃತ್ತಿಪರರೊಂದಿಗೆ ತೊಡಗಿಸಿಕೊಳ್ಳಲು ಇದು ಒಳ್ಳೆಯ ಸಮಯ.


ಇದು ನೀವು ಕೆಲಸ ಮಾಡುವ ಕ್ಷೇತ್ರದ ಬಗ್ಗೆ ನಿಮ್ಮ ಜ್ಞಾನ ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ಸ್ವಂತ ನೆಟ್ವರ್ಕ್ ಅನ್ನು ಸಹ ಹೆಚ್ಚು ಮಾಡಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.


5. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಇರಿಸಿಕೊಳ್ಳಿ


ಕಾರ್ಯನಿರ್ವಾಹಕ ಪಾತ್ರಕ್ಕಾಗಿ ಸಂದರ್ಶನ ಮಾಡುವಾಗ, ನಿಮ್ಮ ಸಾಮರ್ಥ್ಯಗಳನ್ನು ಹೇಳಿಕೊಳ್ಳುವಾಗ ಮತ್ತು ನೀವು ಮಾಡಿರುವ ಕೆಲಸಗಳನ್ನು ಹೇಳಿಕೊಳ್ಳುವಾಗ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಿ. ನಿಮ್ಮ ಕೆಲಸದ ಅನುಭವಗಳ ವರ್ಷಗಳನ್ನು ಚರ್ಚಿಸುವುದರ ಹೊರತಾಗಿ, ನಿಮ್ಮ ಸಂಭಾವ್ಯ ಉದ್ಯೋಗದಾತರಿಗೆ ನೀವು ಹೇಗೆ ಅವರ ಕಂಪನಿಗೆ ಮೌಲ್ಯವನ್ನು ಸೇರಿಸಬಹುದು ಎಂಬುದನ್ನು ಒತ್ತಿ ಹೇಳಿ.


ನಿಮ್ಮನ್ನು ಪ್ರತ್ಯೇಕಿಸುವ ಯಾವುದೇ ವಿಶೇಷ ಕೌಶಲ್ಯಗಳು ಅಥವಾ ಜ್ಞಾನವನ್ನು ಹೈಲೈಟ್ ಮಾಡುವ ಮೂಲಕ ನಿಮ್ಮನ್ನು ನೀವು ಅನನ್ಯವಾಗಿರಿಸಿಕೊಳ್ಳಿ ಮತ್ತು ಆ ಗುಣಗಳು ನಿಮ್ಮನ್ನು ಪಾತ್ರಕ್ಕಾಗಿ ನೇಮಿಸಿಕೊಂಡರೆ ಸಂಸ್ಥೆಗೆ ಹೇಗೆ ಪ್ರಯೋಜನವಾಗುತ್ತವೆ ಎಂಬುದನ್ನು ಸಹ ಅವರಿಗೆ ವಿವರಿಸಿ.


ಉದಾಹರಣೆಗೆ, ಔಟ್ ಆಫ್ ದಿ ಬಾಕ್ಸ್ ಅಂತಾರಲ್ಲ ಹಾಗೆ ತುಂಬಾ ಜನಕ್ಕೆ ಬಾರದ ಆಲೋಚನೆಗಳು ನಿಮಗೆ ಬಂದು, ಆ ಆಲೋಚನೆಗಳು ಮತ್ತು ನಿಮ್ಮ ಕೆಲಸದ ಸಾಮರ್ಥ್ಯವು ಹೊಸ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತಂಡವು ಎದುರಿಸಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ತರಲು ನೀವು ಹೇಗೆ ಸಹಾಯ ಮಾಡುತ್ತೀರಿ ಎಂಬುದನ್ನು ನೀವು ವಿವರಿಸಬಹುದು.


ಇದನ್ನೂ ಓದಿ: Career Tips: ಕಂಪನಿ ನಿಮಗೆ ಯಾವ ಆಧಾರದ ಮೇಲೆ ಪ್ರೊಮೋಷನ್, ಸ್ಯಾಲರಿ ಹೈಕ್ ನೀಡುತ್ತೆ ಗೊತ್ತೇ?


ನಿಮ್ಮ ವೃತ್ತಿಜೀವನದುದ್ದಕ್ಕೂ ನೀವು ಅಭಿವೃದ್ಧಿಪಡಿಸಿದ ಕೌಶಲ್ಯಗಳನ್ನು ನೀವು ಹೇಗೆ ಬಳಸಲು ಯೋಜಿಸುತ್ತೀರಿ ಎಂಬುದನ್ನು ವಿವರಿಸುವುದು ಸಂದರ್ಶನ ಪ್ರಕ್ರಿಯೆಯ ಅಂತ್ಯದ ವೇಳೆಗೆ ನಿಮ್ಮನ್ನು ಒಬ್ಬ ಬಲವಾದ ಅಭ್ಯರ್ಥಿ ಅಂತ ಕಂಪನಿಯವರು ಪರಿಗಣನೆಗೆ ತೆಗೆದುಕೊಳ್ಳುವಂತೆ ಆಗುತ್ತದೆ.


ನೀವು ನಿಮ್ಮ ವಯಸ್ಸಿಗಿಂತ ಹೆಚ್ಚಿನವರು ಅನ್ನೋದನ್ನ ಮಾತ್ರ ಮರೆಯಬೇಡಿ


ಕಾರ್ಯನಿರ್ವಾಹಕ ಉದ್ಯೋಗಗಳನ್ನು ಹುಡುಕುವಾಗ ನಿಮ್ಮ ವಯಸ್ಸು ನಿಮಗೆ ತಡೆಗೋಡೆಯಂತೆ ತೋರಿದರೂ, ಅದು ನಿಜವಾಗಿಯೂ ನಿಮಗೆ ಸಹಾಯ ಮಾಡುತ್ತದೆ.


ಕಂಪನಿಗಳು ಸದಾ ಯಾವುದೇ ಪಾತ್ರಕ್ಕೆ ಜ್ಞಾನದ ಸಂಪತ್ತನ್ನು ತರಬಲ್ಲ ಜನರನ್ನು ನೇಮಿಸಿಕೊಳ್ಳಲು ಬಯಸುತ್ತವೆ. ಆದ್ದರಿಂದ ವಯಸ್ಸು ನಿಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗಲು ಬಿಡಬೇಡಿ.


ನೀವು ಕೆಲಸಕ್ಕೆ ಸರಿಯಾದ ಅಭ್ಯರ್ಥಿ ಏಕೆ ಅಂತ ತೋರಿಸಲು ನಿಮ್ಮೆಲ್ಲಾ ಅನುಭವ ಮತ್ತು ಸಾಮರ್ಥ್ಯವನ್ನು ಒಟ್ಟುಗೂಡಿಸಿ. ಕೆಲವು ಸಮಯದ ನಂತರ, ನಿಮ್ಮ ಈ ಎಲ್ಲಾ ಕಾರ್ಯತಂತ್ರದ ವಿಧಾನಗಳು ನಿಮಗೆ ಪರಿಪೂರ್ಣ ಕಾರ್ಯನಿರ್ವಾಹಕ ಕೆಲಸವನ್ನು ಪಡೆಯಲು ಸಹಾಯ ಮಾಡುತ್ತದೆ.

First published: