ನಿಮ್ಮ ರೆಸ್ಯೂಮ್ ಶಾರ್ಟ್ಲಿಸ್ಟ್ (Resume Shortlisted) ಆಗಬೇಕು ಎಂದರೆ ನೀವು ಹೆಚ್ಚಿನ ಕಾಳಜಿ ವಹಿಸಲೇಬೇಕು. ನಿಮ್ಮ ರೆಸ್ಯೂಮ್ ಚೆನ್ನಾಗಿರಬೇಕು ಎಂದರೆ ಫಾರ್ಮೆಂಟ್, ವಿನ್ಯಾಸ, ಅಕ್ಷರದ ಫಾಂಟ್ ಬಗ್ಗೆ ಯೋಚಿಸಬೇಡಿ. ರೆಸ್ಯೂಮ್ನಲ್ಲಿರುವ ನಿಮ್ಮ ಮಾಹಿತಿಯ ಬಗ್ಗೆ ಗಮನ ಕೊಡಿ. HR ನಿಮ್ಮ ರೆಸ್ಯೂಮ್ ಅನ್ನು ಶಾರ್ಟ್ ಲಿಸ್ಟ್ ಮಾಡಬೇಕು ಎಂದರೆ ಕೆಲವೊಂದು ಪದಗಳನ್ನು (English Words) ಬಳಸಬೇಕು. ಸಾಕಷ್ಟು ಕಂಪನಿಗಳಿಗೆ ರೆಸ್ಯೂಮ್ ಅನ್ನು ಮೇಲ್ ಮಾಡಿದರೂ. ಆ ಕಡೆಯಿಂದ ಯಾವುದೇ ಕರೆ ಬರುವುದಿಲ್ಲ. ನಿಮ್ಮ ರೆಸ್ಯೂಮ್ ಅನ್ನು HR ಶಾರ್ಟ್ ಲಿಸ್ಟ್ ಮಾಡಿರುವುದಿಲ್ಲ. ಏಕೆಂದರೆ ನಿಮ್ಮ ರೆಸ್ಯೂಮ್ನಲ್ಲಿರುವ ತಪ್ಪುಗಳಿಂದ ಹೀಗೆ ಆಗುತ್ತಿರುತ್ತೆ. ಹಾಗಾಗಿ ಇನ್ನಾದರೂ ಆ ಬಗ್ಗೆ ಎಚ್ಚೆತ್ತುಕೊಳ್ಳಿ.
ಸ್ಕಿಲ್ ಆಧಾರಿತ ಪದ ಬಳಕೆ ಇರಲಿ
ನಿಮ್ಮ ರೆಸ್ಯೂಮ್ನಲ್ಲಿ ಬಳಸಬೇಕಾದ ಪದಗಳಲ್ಲಿ ಅತ್ಯಂತ ಮುಖ್ಯವಾದ ಪದ Strategic Thinking. ಕೆಲಸದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಗಾರಿಕೆ ಅಗತ್ಯ. ಇದನ್ನು ಕೆಲಸ ನೀಡುವ ಸಂಸ್ಥೆಗಳು ಉದ್ಯೋಗಿಗಳಿಂದ ಬಯಸುತ್ತವೆ. ಈ ಬಗ್ಗೆ ನೀವು ರೆಸ್ಯೂಮ್ನಲ್ಲಿ ಹೇಳುವುದು, ಅವರ ಗಮನವನ್ನು ಸೆಳೆಯುತ್ತದೆ. 2ನೇ ಪದ Problem Solving ಕೆಲಸ ಸರಾಗವಾಗಿ ನಡೆಯಬೇಕು ಎಂದರೆ ಸಮಸ್ಯೆಗಳಿರಬಾರದು. ಸಮಸ್ಯೆಗಳು ಬಂದಾಗ ಕಂಒನಿಗೆ ಟ್ರಬಲ್ ಶೂಟರ್ ಬೇಕಾಗುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವುದು ಒಂದು ಪ್ರಮುಖ ಕೌಶಲ್ಯ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದ್ದರೆ. ಅದರ ಬಗ್ಗೆ ರೆಸ್ಯೂಮ್ ನಲ್ಲಿ ಬರೆಯಿರಿ.
ಒಂದೊಳ್ಳೆ ಉದ್ಯೋಗಿ ನೀವು ಎಂಬ ಅನಿಸಿಕೆ ಬರಬೇಕು
Communication ಪದವನ್ನು ಕೂಡ ಯ್ಯೂಸ್ ಮಾಡಿ. ಯಾವುದೇ ಕೆಲಸವಾಗಲೇ ಕಮ್ಯುನಿಕೇಷನ್ ತುಂಬಾನೇ ಮುಖ್ಯ. ಈ ನಿಟ್ಟಿನಲ್ಲಿ ನಿಮಗಿರುವ ಕೌಶಲ್ಯಗಳ ಬಗ್ಗೆ ಉಲ್ಲೇಖಿಸಿ. Time Management ಪದವನ್ನು ನೋಡಿದ್ರೆ ಕಂಪನಿಯವರಿಗೆ ಖುಷಿಯಾಗುತ್ತೆ. ಸಮಯ ನಿರ್ವಹಣೆ ಕೌಶಲ್ಯವನ್ನು ಪ್ರತಿಯೊಂದು ಕಂಪನಿಯೂ ಉದ್ಯೋಗಿಯಿಂದ ನಿರೀಕ್ಷಿಸುತ್ತದೆ. ನೀಡಿದ ಸಮಯದಲ್ಲಿ ಕೆಲಸಗಳನ್ನು ಮಾಡಿ ಮುಗಿಸುವವರು ಬೇಕು. ಇದನ್ನು HR ಗಮನಿಸುತ್ತಾರೆ.
ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲುವಂತ ವ್ಯಕ್ತಿತ್ವ ಇರಲಿ
Creativity ಅನ್ನೋದು ವಿಭಿನ್ನವಾಗಿ ಚಿಂತಿಸುವ ಒಂದು ಸ್ಕಿಲ್. ಇದು ವಿಭಿನ್ನವಾಗಿ ನಿಮ್ಮನ್ನು ಒಂದು ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತವೆ. ಅಭ್ಯಾಸ, ಅನುಭವದಿಂದ ಬೆಳೆಯುವಂತ ಕ್ವಾಲಿಟಿ ಇದು. ಪ್ರತಿ ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳಲ್ಲಿ ಕ್ರಿಯೇಟಿವಿಟಿ ಸ್ಕಿಲ್ ಗಳನ್ನು ಬಯಸುತ್ತವೆ.
ಇದನ್ನೂ ಓದಿ: Resume Tips-7: ಯಾವುದೇ ಕಾರಣಕ್ಕೂ ನಿಮ್ಮ ರೆಸ್ಯೂಮ್ನಲ್ಲಿ ಈ ಮಾಹಿತಿಗಳು ಇರಬಾರದು, ಎಚ್ಚರಿಕೆ!
Hard Working ಪದ ಬಳಸುವುದನ್ನು ಮರೆಯಬೇಡಿ. ನಿಮ್ಮ ಕಠಿಣ ಪರಿಶ್ರಮದ ಬಗ್ಗೆ ತಿಳಿಸಿ. ಯಾವುದೋ ಹೊಸ ವಿಷಯವನ್ನು ಕಲಿಯಲು ನೀವು ಎಷ್ಟು ಶ್ರಮ ಹಾಕಿದಿರಿ. ಎಷ್ಟು ಸಮಯ ಅದಕ್ಕಾಗಿ ವ್ಯಯಿಸಿದಿರಿ ಎಂದು ತಿಳಿಸಿ.
ವಿಶ್ವಾಸ ಮೂಡಿಸುವಂತೆ ಪದ ಬಳಕೆ ಇರಬೇಕು
Leadership ಬಗ್ಗೆಯೂ ರೆಸ್ಯೂಮ್ ನಲ್ಲಿ ಉಲ್ಲೇಖಿಸಿ. ನಿಮ್ಮೊಳಗಿನ ನಾಯಕತ್ವದ ಗುಣದ ಬಗ್ಗೆ ತಿಳಿಸಬೇಕು. ಹಿಂದಿನ ಕೆಲಸಲ್ಲಿ ಇಲ್ಲವೇ ಶೈಕ್ಷಣಿಕ ಹಂತದಲ್ಲಿ ಲೀಡರ್ ಆಗಿ ಕಾರ್ಯನಿರ್ವಹಿಸಿದ ಕ್ರೀಡೆ ಬಗ್ಗೆ ನಮೂದಿಸಿ. ಎನ್ ಎಸ್ಎಸ್, ಎನ್ ಸಿಸಿ ಅಥವಾ ಯಾವುದೇ ಕಾರ್ಯಕ್ರಮವನ್ನು ಮುಂದಾಳತ್ವ ನಿರ್ವಹಿಸಿದ ಒಂದು ಉದಾಹರಣೆಯನ್ನು ಇಲ್ಲಿ ತಿಳಿಸಬಹುದು. ಯಾವುದಾದರೂ ಪ್ರಾಜೆಕ್ಟ್, ಕ್ರೀಡೆಯ ಕ್ಯಾಪ್ಟನ್ ನೀವಾಗಿದ್ದರೆ ಅದನ್ನು ರೆಸ್ಯೂಮ್ಗೆ ಸೇರಿದಬಹುದು.
ನೆನಪಿನಲ್ಲಿಡಿ: ಅತಿಯಾದ ಹೊಗಳಿಕೆ ಇರದಂತೆ ನೋಡಿಕೊಳ್ಳಿ. ಎಲ್ಲಾ ನೀವೇ ಮಾಡಿದ್ದೀರಿ ಎಂಬ ಅರ್ಥದಲ್ಲಿ ವಾಕ್ಯಗಳು ಇರಬಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ