ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ (Exam) ಒಂದಾದ UPSC ಪರೀಕ್ಷೆಯನ್ನು ಕಬ್ಬಿಣದ ಕಡಲೆ ಎಂದು ಪರಿಣಿತರು ಕರೆಯುತ್ತಾರೆ. 2022 ನೇ ಸಾಲಿನ ಈ ಪರೀಕ್ಷೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿರುವುದು ಮತ್ತೊಂದು ವಿಶೇಷ (Special). ಪ್ರತಿ ವರ್ಷದಂತೆ ಈ ವರ್ಷವು ಟಾಪ್ 1 ನೇ ಸ್ಥಾನ ಗಳಿಸಿದ ಟಾಪರ್ ನ ಅಂಕಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರೋದು ಸ್ಪೆಷಲ್ ಏನಲ್ಲ.
ಯುಪಿಎಸ್ ಸಿ ಟಾಪರ್ ಆಗಿ ಇಶಿತಾ ಕಿಶೋರ್ ಮಿಂಚು
ಈ ವರ್ಷ UPSC ಟಾಪರ್ ಆಗಿ ಇಶಿತಾ ಕಿಶೋರ್ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ಅಂಕಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಯಾವೆಲ್ಲ ಸಬ್ಜೆಕ್ಟ್ ಗಳಿಗೆ ಎಷ್ಟೆಲ್ಲ ಅಂಕಗಳನ್ನು ಗಳಿಸಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.
UPSC ಟಾಪರ್ ಇಶಿತಾ ಕಿಶೋರ್ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2022 ರಲ್ಲಿ ಅಖಿಲ ಭಾರತ 1 ನೇ ರ್ಯಾಂಕ್ ಗಳಿಸಿದ್ದಾರೆ. ಇಶಿತಾ ಅವರ ಅಂಕಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ತನ್ನ ಸಿವಿಲ್ ಸರ್ವೀಸ್ ಪೇಪರ್‌ನಲ್ಲಿ ಒಟ್ಟು 1094 ಅಂಕಗಳನ್ನು ಪಡೆದಿದ್ದಾಳೆ.
ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್, ಯುಪಿಎಸ್‌ಸಿ ಯು 2023ರ ಮೇ 23 ರಂದು ಸಿವಿಲ್ ಸರ್ವಿಸಸ್ ಎಕ್ಸಾಮ್ 2022 ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: SSLC Result: ಎಲ್ಲಾ ವಿಷಯಗಳಲ್ಲೂ 35 ಅಂಕ ಪಡೆದು ಜಸ್ಟ್ ಪಾಸ್ ಆದ ವೈಭವ್! ಹೇಗಿತ್ತು ನೋಡಿ ಈತನ ಸಂಭ್ರಮ
5 ಲಕ್ಷಕ್ಕೂ ಹೆಚ್ಚು ಜನರು ಪರೀಕ್ಷೆಗೆ ಹಾಜರಾಗಿದ್ದರು ಮತ್ತು 5 ಸಾವಿರಕ್ಕೂ ಹೆಚ್ಚು ಮಂದಿ ವ್ಯಕ್ತಿತ್ವ ಪರೀಕ್ಷೆಯ ಸುತ್ತಿಗೆ ಆಯ್ಕೆಯಾದರು. ಅದರಲ್ಲಿ 933 ಮಂದಿಯನ್ನು ಆಯೋಗ ಶಿಫಾರಸು ಮಾಡಿದೆ. 933 ರಲ್ಲಿ, ಅಭ್ಯರ್ಥಿಗಳಲ್ಲಿ ಒಬ್ಬರಾದ ಇಶಿತಾ ಕಿಶೋರ್ ಅಖಿಲ ಭಾರತ 1ನೇ ಶ್ರೇಯಾಂಕವನ್ನು ಪಡೆದಿದ್ದಾರೆ. ಅವರ ಮಾರ್ಕ್‌ಶೀಟ್ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಶಿತಾ ಕಿಶೋರ್ ಒಟ್ಟು 1094 ಅಂಕ ಪಡೆದಿದ್ದಾರೆ. ಅವರು ತಮ್ಮ ಲಿಖಿತ ಪರೀಕ್ಷೆಯಲ್ಲಿ ಒಟ್ಟು 901 ಅಂಕಗಳನ್ನು ಮತ್ತು ಅವರ ವ್ಯಕ್ತಿತ್ವ ಪರೀಕ್ಷೆಯಲ್ಲಿ 193 ಅಂಕಗಳನ್ನು ಪಡೆದರು. ಅವರು ಪ್ರಬಂಧ 1, ಜನರಲ್ ಸ್ಟಡೀಸ್, ಜನರಲ್ ಸ್ಟಡೀಸ್ II, ಜನರಲ್ ಸ್ಟಡೀಸ್ III, ಜನರಲ್ ಸ್ಟಡೀಸ್ IV ನಲ್ಲಿ 1094 ಅಂಕಗಳನ್ನು ಗಳಿಸಿದ್ದಾರೆ.
ಅವರು ತಮ್ಮ ಐಚ್ಛಿಕ ವಿಷಯ ಪತ್ರಿಕೆಯಾಗಿ ರಾಜ್ಯಶಾಸ್ತ್ರ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಪೇಪರ್ V ಮತ್ತು VI ಅನ್ನು ಆರಿಸಿಕೊಂಡಿದ್ದಾರೆ. ಈ ಎರಡು ಪತ್ರಿಕೆಗಳಲ್ಲೂ ಸಹ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಇಶಿತಾ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದಿದ್ದಾರೆ. ಇಶಿತಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಮ್ಮದೇ ಆದ ಟಿಪ್ಪಣಿಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಮೂರನೇ ಪ್ರಯತ್ನದಲ್ಲಿ ಸಾಧನೆ ಮಾಡಿದ ಇಶಿತಾ
ಇಶಿತಾ ತಮ್ಮ ಮೂರನೇ ಪ್ರಯತ್ನದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದರು ಮತ್ತು ನಿತ್ಯ 8-9 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.
ಇಶಿತಾ ಪ್ರಕಾರ, UPSC ಅನ್ನು ಪಾಸ್ ಮಾಡಲು - ಪ್ರತಿ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಆಕಾಂಕ್ಷಿಗಳಿಗೆ ಅವರು ನೀಡುವ ಸಲಹೆಗಳಲ್ಲಿ ಪ್ರಮುಖವಾದ ಸಲಹೆ ಎಂದರೆ ವಿವರವಾದ ಅಧ್ಯಯನಕ್ಕೆ ಸೂಕ್ತ ವೇಳಾಪಟ್ಟಿಯನ್ನು ತಯಾರಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ಸರಿಯಾದ ಮಾಹಿತಿಯನ್ನು ಪರೀಕ್ಷೆಯಲ್ಲಿ ಬಳಸುವುದು ಮುಖ್ಯ. ಇಶಿತಾ ಕಿಶೋರ್ ಅವರು ತಮ್ಮ ಶಿಕ್ಷಣದ ಹೊರತಾಗಿ, ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.
ಈ ವರ್ಷ, ಟಾಪ್ 3 ಸ್ಥಾನಗಳನ್ನು ಹುಡುಗಿಯರು ಪಡೆದುಕೊಂಡಿದ್ದಾರೆ. ಮೊದಲ ಸ್ಥಾನವನ್ನು ಇಶಿತಾ, ಎರಡನೇ ಸ್ಥಾನವನ್ನು ಗರಿಮಾ ಸೋನಿ ಮತ್ತು ಮೂರನೇ ಸ್ಥಾನವನ್ನು ಉಮಾ ಹರತಿ ಎನ್ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ