ಬೆಂಗಳೂರಿನ ಯುವತಿ ಎಚ್.ಎಸ್ ಭಾವನಾ (H.S Bhavana) ಯುಪಿಎಸ್ ಸಿ ಪರೀಕ್ಷೆಯಲ್ಲಿ (UPSC Exam) ಕರ್ನಾಟಕದ ಟಾಪರ್ ಎನಿಸಿಕೊಂಡಿದ್ದಾರೆ. 55ನೇ ರ್ಯಾಂಕ್ ಗಳಿಸುವ ಮೂಲಕ ಕರ್ನಾಟಕದ ಅಭ್ಯರ್ಥಿಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಭಾವನಾ ತಮ್ಮ 6ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. 2018ರಲ್ಲಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿ, IRTS ಹುದ್ದೆ ಪಡೆದುಕೊಂಡಿದ್ದರು. ಇದರಿಂದ ತೃಪ್ತರಾಗದ ಭಾವನಾ 2022ರಲ್ಲಿ ಮತ್ತೆ ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಿದ್ದರು.
ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಭಾವನಾ
ಬೆಂಗಳೂರಿನ ಎಚ್‌ಎಸ್ ಭಾವನಾ ಅವರು ಅಖಿಲ ಭಾರತ ಶ್ರೇಣಿ 55 ಅನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಬೆಂಗಳೂರು ಬನಶಂಕರಿ ನಿವಾಸಿಯಾಗಿರುವ ಭಾವನಾ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಪ್ರಸ್ತುತ ಭಾರತೀಯ ರೈಲ್ವೆ ಸಂಚಾರ ಸೇವೆಯಲ್ಲಿ (IRTS) ಕೆಲಸ ಮಾಡುತ್ತಿದ್ದಾರೆ. ಭಾವನಾ ಅವರು 2018 ರಲ್ಲಿ AIR 314 ಅನ್ನು ಪಡೆದುಕೊಂಡಿದ್ದರು . ಈಗ ರಾಜ್ಯ ಟಾಪರ್ ಆಗಿದ್ದು, ತನ್ನ 6ನೇ ಪ್ರಯತ್ನದಲ್ಲಿ ಈ ರ್ಯಾಂಕ್ ಗಳಿಸಿದ್ದಾರೆ.
ರಾಜಧಾನಿಯ ಇಂಜಿನಿಯರಿಂಗ್ ಪದವೀಧರೆ
ಭಾವನಾ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಯಲಹಂಕದ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದಿದ್ದಾರೆ. ಭಾವನಾ ಅವರು ಭಾರತೀಯ ಆಡಳಿತ ಸೇವೆಗೆ ಸೇರುವ ಭರವಸೆ ಹೊಂದಿದ್ದಾರೆ.
ಭಾವನಾ ಸಲಹೆ
ಭಾವನಾ ಅವರ ಕಠಿಣ ಪರಿಶ್ರಮ ಮತ್ತು ತಾಳ್ಮೆ ಈ ಫಲಿತಾಂಶಕ್ಕೆ ಕಾರಣವಾಗಿದೆ. ಇನ್ನು ಆಕಾಂಕ್ಷಿಗಳಿಗೆ ಸಲಹೆ ನೀಡಿರುವ ಭಾವನಾ ವಿವಿಧ ಸಂಸ್ಥೆಗಳಿಂದ ತರಬೇತಿಗಳನ್ನು ಹೆಚ್ಚಿನ ಸಹಾಯವನ್ನು ನೀಡುವುದಿಲ್ಲ. ನಿಮ್ಮನ್ನು ನಂಬಿ ಅಭ್ಯಾಸದಲ್ಲಿ ತೊಡಗಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: UPSC Success Story: ಕನ್ನಡ ಮಾಧ್ಯಮದಲ್ಲಿ ಓದಿರುವ ಅಣ್ಣಿಗೇರಿಯ ಬಡ ಯುವಕ ಸಿದ್ದಲಿಂಗಪ್ಪ ಇನ್ಮುಂದೆ ದೊಡ್ಡ ಅಧಿಕಾರಿ
ಅಖಿಲ ಭಾರತ ಮಟ್ಟದಲ್ಲಿ ಇತರ ರಾಜ್ಯಗಳ ಕೆಲವು ಉನ್ನತ ರ‍್ಯಾಂಕರ್‌ಗಳು ಸಹ ಬೆಂಗಳೂರಿನ ಸಂಸ್ಥೆಗಳಿಂದ ತರಬೇತಿ ಪಡೆದರು. AIR 155 ನೊಂದಿಗೆ ಮೆಲ್ವಿನ್ ವರ್ಗೀಸ್ ಮತ್ತು AIR 197 ನೊಂದಿಗೆ ಸೂರಜ್ D ಈಗಾಗಲೇ IRS ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೃತಿ ಸಾಧನೆ
ಬೆಳಗಾವಿ ಜಿಲ್ಲೆಯ ಶೃತಿ ಯರಗಟ್ಟಿ ತಮ್ಮ ಆರನೇ ಪ್ರಯತ್ನದಲ್ಲಿ AIR 362 ಮೂಲಕ CSE ತೇರ್ಗಡೆಯಾಗಿದ್ದಾರೆ. ಶೃತಿಗೆ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಹಾಗಾಗಿ B.Sc ಮುಗಿಸಿ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ದೆಹಲಿಯಲ್ಲಿ ಒಂದು ವರ್ಷ ತಯಾರಿ ನಡೆಸಿ ನಂತರ ಬೆಂಗಳೂರಿಗೆ ಬಂದು ಪ್ರತಿನಿತ್ಯ 12ರಿಂದ 14 ಗಂಟೆ ಓದಿ ಸಾಧನೆ ಮಾಡಿದ್ದಾರೆ.
617ನೇ ರ್ಯಾಂಕ್ ಪಡೆದಿರುವ ಮೇಘನಾ
ಇಂಜಿನಿಯರಿಂಗ್ ಪದವೀಧರ ಮತ್ತು ನಿವೃತ್ತ ಡಿಸಿಎಫ್ ಅವರ ಪುತ್ರಿ ಐ ಎನ್ ಮೇಘನಾ ತನ್ನ ಎರಡನೇ ಪ್ರಯತ್ನದಲ್ಲಿ 617 ನೇ ರ್ಯಾಂಕ್ ಗಳಿಸಿದ್ದಾರೆ. ತಾನು ಬೆಂಗಳೂರಿನ ವಿಜಯನಗರದಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದೆ ಎಂದು ಅವರು ಹೇಳಿದರು. ಇಂಜಿನಿಯರಿಂಗ್ ಮುಗಿಸಿ ಮಗಳು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಎಂದು ಮೇಘನಾ ತಂದೆ ಐ.ಎಂ.ನಾಗರಾಜ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ