• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಏಮ್ಸ್ ವೈದ್ಯೆ ಈಗ IAS ಅಧಿಕಾರಿ; UPSCಯಲ್ಲಿ 16ನೇ Rank ಪಡೆದ ಅಂಶು ಪ್ರಿಯಾ

Success Story: ಏಮ್ಸ್ ವೈದ್ಯೆ ಈಗ IAS ಅಧಿಕಾರಿ; UPSCಯಲ್ಲಿ 16ನೇ Rank ಪಡೆದ ಅಂಶು ಪ್ರಿಯಾ

ಐಎಎಸ್ ಅಂಶು ಪ್ರಿಯಾ

ಐಎಎಸ್ ಅಂಶು ಪ್ರಿಯಾ

ಎಂಬಿಬಿಎಸ್ ಪದವೀಧರೆ ಆಗಿರುವ ಅಂಶು ಪ್ರಿಯಾ ಅವರು ಯುಪಿಎಸ್ ಸಿ ಅಲ್ಲಿ ಸಾಧನೆ ಮಾಡಿರುವ ಯಶಸ್ಸಿನ ಕಥೆ ಇಲ್ಲಿದೆ.

  • Share this:

'ಸದ್ದಿಲ್ಲದೇ ನಿಮ್ಮ ಪರಿಶ್ರಮ ಸಾಗಲಿ ಅದರ ನಂತರ ಬರುವ ಯಶಸ್ಸು (Success)  ದೊಡ್ಡ ಸದ್ದು ಮಾಡುತ್ತದೆ' ಎಂಬ ಮಾತನ್ನು ಆಗಾಗ ಕೇಳುತ್ತಲೇ ಇರುತ್ತೆವೆ. ಸತತ ಪರಿಶ್ರಮ, ತಾಳ್ಮೆ, ಕೆಲಸದಲ್ಲಿ ತೋರುವ ಸಮರ್ಪಣಾ ಭಾವ ಇವೆಲ್ಲವೂ ಒಬ್ಬ ವ್ಯಕ್ತಿಯ ಸಾಧನೆಗೆ (Achievement) ಮೆಟ್ಟಿಲುಗಳಾಗಿರುತ್ತವೆ.


ಸತತವಾದ ತಮ್ಮ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲನ್ನು ಏರಿದ ಮತ್ತು ತಾಳ್ಮೆಯ ಮೂಲಕ ತಮ್ಮ ಗುರಿಯನ್ನು ಸಾಧಿಸಿದ ಎಂಬಿಬಿಎಸ್ ಪದವೀಧರೆ ಆಗಿರುವ ಅಂಶು ಪ್ರಿಯಾ ಅವರು ಇಂದು ಭಾರತದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್ ಸಿ ಅಲ್ಲಿ ಸಾಧನೆ ಮಾಡಿರುವ ಯಶಸ್ಸಿನ ಕಥೆ ಈ ಲೇಖನದಲ್ಲಿ ನೀಡಿದ್ದೇವೆ.


ಭಾರತದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಯಲ್ಲಿ ಪಾಸ್ ಆಗಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಪ್ರತಿ ವರ್ಷ ಈ ಪರೀಕ್ಷೆಗೆ ಅರ್ಜಿ ಹಾಕುವವರ ಸಂಖ್ಯೆ ಲಕ್ಷಗಳಲ್ಲಿ ಇರುತ್ತದೆ. ಆದರೆ ಅದರಲ್ಲಿ ಯಶಸ್ಸು ಗಳಿಸುವವರ ಸಂಖ್ಯೆ ತೀರಾ ಕಡಿಮೆ.




ಈಗೀಗ ಲಕ್ಷಾಂತರ UPSC ಅರ್ಜಿದಾರರು ಪ್ರಸ್ತುತ ತಮ್ಮ ಅಧ್ಯಯನಕ್ಕಾಗಿ ಸಾಕಷ್ಟು ಸಮಯ ಮತ್ತು ಶ್ರಮವನ್ನು ವಿನಿಯೋಗಿಸುತ್ತಿದ್ದಾರೆ. ಈ ಪರೀಕ್ಷೆಯಲ್ಲಿ ಹಿಂದಿನ ವರ್ಷ ಯಶಸ್ಸು ಪಡೆದವರ ಕಥೆಗಳು ಮುಂದೆ ಈ ಪರೀಕ್ಷೆ ಬರೆಯಬೇಕೆಂಬವರಿಗೆ ಅಧ್ಯಯನ ಮಾಡಲು ಪ್ರೇರೇಪಿಸುತ್ತಿವೆ.


ಈ ಪರೀಕ್ಷೆಯ ಅಭ್ಯರ್ಥಿಗಳು ಪರೀಕ್ಷೆಗೆ ಇನ್ನೂ ಉತ್ತಮವಾಗಿ ತಯಾರಾಗಲು ಸಹಾಯ ಮಾಡಲು ಉನ್ನತವಾಗಿ ಸಾಧನೆ ಮಾಡಿದವರ ಸಲಹೆಯನ್ನು ಆಗಾಗ ಗೂಗಲ್ ನಲ್ಲಿ ಹುಡುಕುತ್ತಲೇ ಇರುತ್ತಾರೆ. ಹಾಗೆಯೇ, ಈಗ ನಮ್ಮ ನಿಮ್ಮ ಮುಂದಿರುವ ಯಶಸ್ಸಿನ ಕಥೆ ತಮ್ಮ ಸತತ ಪರಿಶ್ರಮದ ಮೂಲಕ ತಮ್ಮ ಗುರಿಯನ್ನು ಸಾಧಿಸಿದ ಎಂಬಿಬಿಎಸ್ ಪದವೀಧರೆ ಅಂಶು ಪ್ರಿಯಾ ಅವರದ್ದಾಗಿದೆ.


ಹಾಗಿದ್ರೆ ಐಎಎಸ್ ಅಂಶು ಪ್ರಿಯಾ ಯಾರು?


ಬಿಹಾರದ ಮುಂಗೇರ್ ಜಿಲ್ಲೆಯವರಾದ ಅಂಶು ಪ್ರಿಯಾ ಅವರು ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಆಕೆಯ ತಂದೆ ಪ್ರೊಫೆಸರ್. ಆಕೆಯ ಅಜ್ಜಿಯರಿಬ್ಬರೂ ಶಿಕ್ಷಕರಾಗಿದ್ದರು. ಅವರು ಶಿಕ್ಷಣ ತಜ್ಞರ ಕುಟುಂಬದಿಂದ ಬಂದವರು.




ಇವರ ಶೈಕ್ಷಣಿಕ ಹಿನ್ನೆಲೆ ಏನು?


ಅಂಶು ಪ್ರಿಯಾ ತನ್ನ ಪ್ರೌಢಶಾಲಾ ಶಿಕ್ಷಣವನ್ನು ನೊಟ್ರೆ ಡೇಮ್ ಅಕಾಡೆಮಿ ಮುಂಗೇರ್‌ ನಲ್ಲಿ ಪಡೆದರು. ನಂತರ AIIMS ಗಾಗಿ ಪಾಟ್ನಾಗೆ MBBS (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ಪದವಿಯನ್ನು ಪಡೆಯಲು ಹೋದರು.


ಇದಾದ ನಂತರ ಅವರು AIIMS ಪಾಟ್ನಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದರು. ನಂತರ ಇವರು ಕೆಲವು ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.


ಅಂಶು ಪ್ರಿಯಾ ಅವರ ಯುಪಿಎಸ್ಸಿ ಜರ್ನಿ ಹೇಗಿತ್ತು?


ಇದಾದ ನಂತರ ಅವರು ತಮ್ಮ MBBS ಪದವಿಯ ಸಮಯದಲ್ಲಿ UPSC ಪರೀಕ್ಷೆಯನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದರು. ಆದರೆ ಈ ಪರೀಕ್ಷೆಯಲ್ಲಿ ಅವರಿಗೆ ಯಶಸ್ಸು ಅಷ್ಟು ಸುಲಭವಾಗಿ ದೊರಕಲಿಲ್ಲ. ಅವರ ಮೂರನೇ ಪ್ರಯತ್ನದವರೆಗೂ ಅವರು ಪರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ.


ಅವರು 2019 ರಲ್ಲಿ ಮೊದಲ ಬಾರಿಗೆ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ ಯುಪಿಎಸ್ಸಿ ಪರೀಕ್ಷೆಯ ಮೊದಲ ಫೇಸ್ ಆದ ಪ್ರೀಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಇದಾದ ನಂತರ ತನ್ನ ಎರಡನೇ ಪ್ರಯತ್ನದಲ್ಲೂ ಅಂಶು ಪ್ರಿಯಾ ವಿಫಲರಾದರು. ಆದರೆ 2021 ರಲ್ಲಿ, ಅವರು ಅಂತಿಮವಾಗಿ ಪರೀಕ್ಷೆಯಲ್ಲಿ ಯಶಸ್ವಿಯಾದರು ಮತ್ತು AIR 16 ಅನ್ನು ಪಡೆದರು.


ಇದನ್ನೂ ಓದಿ: Success Story: 5ನೇ ಪ್ರಯತ್ನದಲ್ಲಿ UPSC ಪಾಸ್ ಆಗಿ IPS ಆದ ಹಾಸನ SP ಹರಿರಾಮ್ ಶಂಕರ್


ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಅದರ ಜೊತೆಗೆ ಹಲವಾರು ಟೆಸ್ಟ್ ಸರಣಿಗಳನ್ನು ತೆಗೆದುಕೊಂಡರು. ವೈದ್ಯಕೀಯ ವಿಜ್ಞಾನ ಅವರ ಆಪ್ಷನಲ್ ವಿಷಯವಾಗಿತ್ತು. ಅಂಶು ಪ್ರಿಯಾ ಇತ್ತೀಚೆಗಷ್ಟೇ ರಾಜಸ್ಥಾನದ ಜೋಧ್‌ಪುರದಲ್ಲಿ ಟ್ರೈನಿ IAS ಆಗಿ ಮೊದಲ ಸ್ಥಾನ ಪಡೆದಿದ್ದಾರೆ. ವೈದ್ಯರಾಗಿದ್ದ ಅಂಶು ಪ್ರಿಯಾ ಈಗ ಐಎಎಸ್‌ ಅಂದ್ರೆ ಸುಮ್ಮನೆನಾ? ಯುಪಿಎಸ್ಸಿ ತುಂಬಾ ಕಷ್ಟಕರವಾದ ಪರೀಕ್ಷೆ ಅಂತಾರೆ. ಆದರೆ ಇಂತಹವರನ್ನು ನೋಡಿದಾಗ ಸಾಧನೆ ಮಾಡೋ ಮನಸಿದ್ರೆ ಯಾವ ಪರೀಕ್ಷೆಯು ಕಷ್ಟವಲ್ಲ ಎಂದು ತಿಳಿಯುತ್ತದೆ.


ಈ ಪರೀಕ್ಷೆ ಪಾಸ್‌ ಮಾಡೋದಕ್ಕೆ ಬೇಕಾಗಿರೋದು ಮುಖ್ಯವಾಗಿ ಹಾರ್ಡ್‌ವರ್ಕ್‌, ತಾಳ್ಮೆ, ಸತತವಾಗಿ ಓದಿರೋದನ್ನು ರಿವೀಶಿನ್‌ ಮಾಡೋ ಗುಣ. ಇವಿಷ್ಟು ನಿಮ್ಮತ್ರ ಇದ್ರೆ ನೀವು ಈ ವರ್ಷ ರ್ಯಾಂಕ್‌ ಲಿಸ್ಟ್‌ ಅಲ್ಲಿ ಇರ್ತಿರಿ.

top videos
    First published: