• ಹೋಂ
 • »
 • ನ್ಯೂಸ್
 • »
 • Jobs
 • »
 • Success Story: ಗರ್ಭಿಣಿಯಾಗಿದ್ರೂ ಕೆಲಸ ಮಾಡಿಕೊಂಡೇ UPSCಗೆ ತಯಾರಿ! ಇದು IAS ಅಧಿಕಾರಿ ಪದ್ಮಿನಿ ನಾರಾಯಣ್ ಸ್ಫೂರ್ತಿದಾಯಕ ಕಥೆ

Success Story: ಗರ್ಭಿಣಿಯಾಗಿದ್ರೂ ಕೆಲಸ ಮಾಡಿಕೊಂಡೇ UPSCಗೆ ತಯಾರಿ! ಇದು IAS ಅಧಿಕಾರಿ ಪದ್ಮಿನಿ ನಾರಾಯಣ್ ಸ್ಫೂರ್ತಿದಾಯಕ ಕಥೆ

ಐಎಎಸ್​ ಅಧಿಕಾರಿ ಪದ್ಮಿನಿ ನಾರಾಯಣ್

ಐಎಎಸ್​ ಅಧಿಕಾರಿ ಪದ್ಮಿನಿ ನಾರಾಯಣ್

ಈ‌ಗ ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ UPSC ಪ್ರಿಲಿಮ್ಸ್ 2023 ಪರೀಕ್ಷೆಗೆ ಲಕ್ಷಾಂತರ ಆಕಾಂಕ್ಷಿಗಳು ಪ್ರಸ್ತುತ ತಯಾರಿ ನಡೆಸುತ್ತಿದ್ದಾರೆ. ಹಿಂದಿನ ವರ್ಷಗಳ IAS-IPS ಅಧಿಕಾರಿಗಳ ಯಶೋಗಾಥೆಗಳು ಈ ಸಮಯದಲ್ಲಿ ಅವರಿಗೆಲ್ಲಾ ಸ್ಫೂರ್ತಿಯಾಗುತ್ತವೆ.

 • Share this:

ಸಾಮಾನ್ಯವಾಗಿ ಎಷ್ಟೋ ಜನ ಹುಡುಗಿಯರಿಗೆ (Woman) ತಾವು ಪದವಿ ಓದುವಾಗ (Education) ಮನೆಯಲ್ಲಿ ಮದುವೆ (Marriage) ಮಾಡಿಸಿದರೆ, ನಂತರ ತಮ್ಮ ಓದನ್ನು ಅಲ್ಲಿಗೆ ನಿಲ್ಲಿಸಿ ಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಮದುವೆಯಾದರೂ, ಮಕ್ಕಳಾದರೂ (Children) ಸಹ ತಮ್ಮ ಓದನ್ನು ಮಾತ್ರ ನಿಲ್ಲಿಸೋದೆ ಇಲ್ಲ. ಹೇಗಾದರೂ ಮಾಡಿ ತಾವು ಓದುತ್ತಿರುವ ಪದವಿ ಶಿಕ್ಷಣವನ್ನು ಪೂರ್ತಿಯಾಗಿ ಮುಗಿಸುತ್ತಾರೆ ಮತ್ತು ಯಾವುದಾದರೂ ಉದ್ಯೋಗದ (Job) ಆಯ್ಕೆಗಳು ಅವರ ಮುಂದೆ ಇದ್ದರೆ ಅವುಗಳನ್ನು ಸಹ ಅವರು ಮುಕ್ತ ಮನಸ್ಸಿನಿಂದ ಮತ್ತು ಧೈರ್ಯದಿಂದ ಸ್ವೀಕರಿಸುತ್ತಾರೆ ಅಂತ ಹೇಳಬಹುದು.


ಇಲ್ಲೊಬ್ಬ ಮಹಿಳೆ ತಾನು ಗರ್ಭಿಣಿಯಾಗಿದ್ದರೂ ಸಹ ಕೆಲಸಕ್ಕೆ ಹೋಗುವುದರ ಜೊತೆಗೆ ಯುಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಮಹಿಳೆಯ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.


ಇದನ್ನೂ ಓದಿ: UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ


ಪದ್ಮಿನಿ ನಾರಾಯಣ್ ಅವರ ಕಥೆ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿ


ಈ‌ಗ ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಯುಪಿಎಸ್‌ಸಿ ಪ್ರಿಲಿಮ್ಸ್ 2023 ಪರೀಕ್ಷೆಗೆ ಲಕ್ಷಾಂತರ ಆಕಾಂಕ್ಷಿಗಳು ಪ್ರಸ್ತುತ ತಯಾರಿ ನಡೆಸುತ್ತಿದ್ದಾರೆ. ಹಿಂದಿನ ವರ್ಷಗಳ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಯಶೋಗಾಥೆಗಳು ಈ ಸಮಯದಲ್ಲಿ ಅವರಿಗೆಲ್ಲಾ ಸ್ಫೂರ್ತಿಯಾಗುತ್ತವೆ ಅಂತ ಹೇಳಬಹುದು.


ಐಎಎಸ್​ ಅಧಿಕಾರಿ ಪದ್ಮಿನಿ ನಾರಾಯಣ್


ಹೌದು, ಐಎಎಸ್ ಪದ್ಮಿನಿ ನಾರಾಯಣ್ ಅವರ ಸ್ಫೂರ್ತಿದಾಯಕ ಕಥೆ ಕೇಳಿದರೆ ಎಂತಹವರಿಗೂ ಸ್ಫೂರ್ತಿ ಸಿಕ್ಕೆ ಸಿಗುತ್ತದೆ ಅಂತ ಹೇಳಬಹುದು. ಪದ್ಮಿನಿ ಈಗಾಗಲೇ ಭಾರತದ ಕಠಿಣ ಪರೀಕ್ಷೆ ಅಂತ ಹೇಳುವ ಯುಪಿಎಸ್‌ಸಿ ಪರೀಕ್ಷೆಯನ್ನು ಉತ್ತಮ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದ್ದಾರೆ. ಪದ್ಮಿನಿ ನಾರಾಯಣ್ ಅವರು ಗರ್ಭಿಣಿಯಾಗಿದ್ದಲ್ಲದೆ, ಪರೀಕ್ಷೆಗಾಗಿ ಅಧ್ಯಯನ ಮಾಡುವಾಗ ಹೊರಗೆ ಹೋಗಿ ಕೆಲಸ ಸಹ ಮಾಡುತ್ತಿದ್ದರಂತೆ.


ಐಎಎಸ್ ಪದ್ಮಿನಿ ನಾರಾಯಣ್ ಯಾರು?


ಯುಪಿಎಸ್‌ಸಿ ಸಿಎಸ್ಇ 2019 ರ ಪರೀಕ್ಷೆಯಲ್ಲಿ ಪದ್ಮಿನಿ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 152ನೇ ರ್ಯಾಂಕ್ ಪಡೆದು ಪರೀಕ್ಷೆಯನ್ನು ಪಾಸ್ ಮಾಡಿ ಐಎಎಸ್ ಅಧಿಕಾರಿಯಾದರು.


ಪದ್ಮಿನಿ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಪದ್ಮಿನಿ ಅವರು 2010 ರಲ್ಲಿ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. 2011-2013 ರಲ್ಲಿ ಗುರುಗ್ರಾಮದ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.


ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಐಎಎಸ್ ಪದ್ಮಿನಿ ನಾರಾಯಣ್ ಏನ್ ಸಲಹೆ ನೀಡಿದ್ರು?


ದೆಹಲಿ ನಾಲೆಡ್ಜ್ ಟ್ರ್ಯಾಕ್ ಗೆ ನೀಡಿದ ಸಂದರ್ಶನದಲ್ಲಿ ಪದ್ಮಿನಿ ತಮ್ಮ ಅಧ್ಯಯನ ತಂತ್ರಗಳನ್ನು ಯುಪಿಎಸ್‌ಸಿ ಆಕಾಂಕ್ಷಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪದ್ಮಿನಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಿದ ಸಮಯದಲ್ಲಿ, ಅವರನ್ನು ಪ್ರವಾಸೋದ್ಯಮ ಸಚಿವಾಲಯವು ನೇಮಿಸಿಕೊಂಡಿತು.
ಮೊದಲನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಕೈಗೆಟುಕಲಿಲ್ಲ, ಆದರೂ ಛಲ ಬಿಡದ ಪದ್ಮಿನಿ ಅವರು ತಮ್ಮ ಓದುವ ಶೈಲಿಯನ್ನು ಮತ್ತು ಸಂಪನ್ಮೂಲಗಳನ್ನು ಬದಲಾಯಿಸಿಕೊಂಡರು. ಪ್ರತಿ ವಿಷಯಕ್ಕೆ ಕೇವಲ ಒಂದು ಪುಸ್ತಕವನ್ನು ಮಾತ್ರ ಅವರು ರೆಫರ್ ಮಾಡಲು ನಿರ್ಧರಿಸಿದರಂತೆ.


ಎರಡನೇ ಪ್ರಯತ್ನದಲ್ಲಿ ಅವರ ಪರೀಕ್ಷಾ ಸಿದ್ಧತೆ ತುಂಬಾನೇ ಪ್ರಬಲವಾಗಿದ್ದರಿಂದ ಅವರು ಅಭ್ಯಾಸ ಪರೀಕ್ಷೆಗಳನ್ನು ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.


ಪದ್ಮಿನಿಯ ಅಭಿಪ್ರಾಯದಲ್ಲಿ, ಅಣಕು ಪರೀಕ್ಷೆಗಳು ತೆಗೆದುಕೊಳ್ಳುವುದು ತುಂಬಾನೇ ಸಹಾಯವಾಗಿದೆಯಂತೆ. ಅವರು ಅಧ್ಯಯನ ಮಾಡುತ್ತಿದ್ದಾಗ, ತಮ್ಮ ಇಡೀ ದಿನವನ್ನು ಯಾವ ಯಾವ ವಿಷಯಗಳನ್ನು ಓದಬೇಕು ಅಂತ ನಿಗದಿಪಡಿಸಿಕೊಂಡಿದ್ದರಂತೆ. ಇದರ ಜೊತೆಗೆ ಪ್ರಸ್ತುತ ಘಟನೆಗಳ ಬಗ್ಗೆ ಅಪ್ಡೇಟ್ ಆಗಲು  ಅವರು ಕಚೇರಿಗೆ ಹೋಗುವಾಗ ದಿನಪತ್ರಿಕೆಗಳನ್ನು ಓದುತ್ತಿದ್ದರಂತೆ.


ಇದನ್ನೂ ಓದಿ: GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!


ಸಂದರ್ಶನದ ಸಮಯದಲ್ಲಿ, ಪದ್ಮಿನಿ ತಾನು ಗರ್ಭಿಣಿಯಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಆದ್ದರಿಂದ ಅವರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಿದರು.

top videos


  ಗರ್ಭಿಣಿಯಾಗಿದ್ದ ವೇಳೆ ಪ್ರತಿದಿನ 25 ರಿಂದ 30 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳುತ್ತಿದ್ದರು. ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರಂತೆ. ನೀವು ನಿಜವಾಗಿಯೂ ಏನಾದರೂ ಆಗಲು ಬಯಸಿದರೆ, ನೀವು ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅಂತಾರೆ ಪದ್ಮಿನಿ.

  First published: