• ಹೋಂ
 • »
 • ನ್ಯೂಸ್
 • »
 • Jobs
 • »
 • UPSC Success Story: ಕನ್ನಡ ಮಾಧ್ಯಮದಲ್ಲಿ ಓದಿರುವ ಅಣ್ಣಿಗೇರಿಯ ಬಡ ಯುವಕ ಸಿದ್ದಲಿಂಗಪ್ಪ ಇನ್ಮುಂದೆ ದೊಡ್ಡ ಅಧಿಕಾರಿ

UPSC Success Story: ಕನ್ನಡ ಮಾಧ್ಯಮದಲ್ಲಿ ಓದಿರುವ ಅಣ್ಣಿಗೇರಿಯ ಬಡ ಯುವಕ ಸಿದ್ದಲಿಂಗಪ್ಪ ಇನ್ಮುಂದೆ ದೊಡ್ಡ ಅಧಿಕಾರಿ

ಸಿದ್ದಲಿಂಗಪ್ಪ, ಹುಟ್ಟೂರಲ್ಲಿ ಸಂಭ್ರಮ

ಸಿದ್ದಲಿಂಗಪ್ಪ, ಹುಟ್ಟೂರಲ್ಲಿ ಸಂಭ್ರಮ

ಸಿದ್ದಲಿಂಗಪ್ಪ ಅವರದ್ದು ಬಡ ಕುಟುಂಬವಾಗಿದ್ದು, ಅವರ ತಂದೆ ಹುಬ್ಬಳ್ಳಿ ಗ್ರಾಮೀಣ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಲೂ ತಗಡಿನ ಶೆಡ್ಡಿನ ಮನೆಯಲ್ಲಿಯೇ ಇವರ ಕುಟುಂಬ ವಾಸವಾಗಿದೆ.  

 • Share this:

 ಹುಬ್ಬಳ್ಳಿ: 2022ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯ ಫಲಿತಾಂಶ (UPSC Result) ಮಂಗಳವಾರವಷ್ಟೇ ಹೊರ ಬಿದ್ದಿದೆ. ರಾಜ್ಯದ 25 ಮಂದಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಯುಪಿಎಸ್​ಸಿ ಸಾಧಕರ ಸರಣಿಯ ನಮ್ಮ ಇಂದಿನ ಅತಿಥಿ ಹುಬ್ಬಳ್ಳಿಯ ಯುವಕ ಸಿದ್ದಲಿಂಗಪ್ಪ ಕೆ ಪೂಜಾರ್. ಅಣ್ಣಿಗೇರಿ ಪಟ್ಟಣದ ಸಿದ್ದಲಿಂಗಪ್ಪ ಪೂಜಾರ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 589ನೇ Rank ಪಡೆದು ತೇರ್ಗಡೆಯಾಗುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.


ಕನ್ನಡ ಮೀಡಿಯಮ್​ ಹುಡ್ಗ ರೀ..


ಸಿದ್ದಲಿಂಗಪ್ಪ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ನಿವಾಸಿ. ಸಿದ್ದಲಿಂಗಪ್ಪ ಅವರು ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪಡೆದಿದ್ದಾರೆ. ನಂತರ ಬಿ.ಇ‌ ಎಲೆಕ್ಟ್ರಾನಿಕ್ಸ್ ಮುಗಿಸಿ ಬೆಂಗಳೂರಿನ ಖಾಸಗಿ‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷವಷ್ಟೇ ಮದುವೆಯಾಗಿರುವ ಸಿದ್ದಲಿಂಗಪ್ಪ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಸಾವಿರಾರು ಕನ್ನಡಿಗ ಅಭ್ಯರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.


ಮಗ ಏನು ಓದುತ್ತಿದ್ದ ಅಂತ ಗೊತ್ತಿರಲಿಲ್ಲ ರೀ..


ಇನ್ನು ಸಿದ್ದಲಿಂಗಪ್ಪ ಅವರ ಹುಟ್ಟೂರಲ್ಲಿ ಸಂತಸ ಮನೆ ಮಾಡಿತ್ತು. ಫಲಿತಾಂಶ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಲಿಂಗಪ್ಪ ಅವರ ತಾಯಿ ಶಾಂತವ್ವ, ನನ್ನ ಮಗ ಸಾಧನೆ ಮಾಡಿದ್ದಾನೆ ಎಂದು ಗೊತ್ತಾಯಿತು. ಆದರೆ ಅವನು ಏನು ಓದುತ್ತಿದ್ದ ಎಂದು ಗೊತ್ತಿರಲಿಲ್ಲ ಎಂದು ಮುಗ್ಧವಾಗಿ ಮಾತನಾಡಿದ್ದಾರೆ.


ಸಿದ್ದಲಿಂಗಪ್ಪ ಹಾಗೂ ಅವರ ತಾಯಿ ಶಾಂತವ್ವ


ಬಡವರ ಮಕ್ಳು ಬೆಳಿಬೇಕು..


ಸಿದ್ದಲಿಂಗಪ್ಪ ಅವರದ್ದು ಬಡ ಕುಟುಂಬವಾಗಿದ್ದು, ಅವರ ತಂದೆ ಹುಬ್ಬಳ್ಳಿ ಗ್ರಾಮೀಣ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಲೂ ತಗಡಿನ ಶೆಡ್ಡಿನ ಮನೆಯಲ್ಲಿಯೇ ಇವರ ಕುಟುಂಬ ವಾಸವಾಗಿದೆ.


ಯುಪಿಎಸ್​ ಸಿ ಪರೀಕ್ಷೆ ಫಲಿತಾಂಶ


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಾಗರಿಕ ಸೇವಾ ಅಂತಿಮ ಪರೀಕ್ಷೆಯ 2022ರ ಫಲಿತಾಂಶವನ್ನು ಪ್ರಕಟಿಸಿದೆ. ಇಶಿತಾ ಕಿಶೋರ್ ಅವರು ಅಖಿಲ ಭಾರತ ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ನಂತರ ಸ್ಥಾನವನ್ನು ಗರಿಮಾ ಲೋಹಿಯಾ, ಉಮಾ ಹರತಿ.ಎನ್ ಮತ್ತು ಸ್ಮೃತಿ ಮಿಶ್ರಾ ಪಡೆದುಕೊಂಡಿದ್ದಾರೆ. ಮತ್ತೊಮ್ಮೆ ಮಹಿಳಾ ಅಭ್ಯರ್ಥಿಗಳು ಟಾಪರ್​ ಗಳೆನಿಸಿಕೊಂಡಿದ್ದಾರೆ.


ಇದನ್ನೂ ಓದಿ: UPSC Toppers List ಇಲ್ಲಿದೆ; ಬೆಂಗಳೂರಿನ ಡಾ ರಾಜ್ ಕುಮಾರ್ ಅಕಾಡೆಮಿಯ 11 ಮಂದಿ ಆಯ್ಕೆ

top videos


  ಈ ವರ್ಷ ಒಟ್ಟು 933 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 202ನೇ ಸಾಲಿನ ಪರೀಕ್ಷೆಯಲ್ಲಿ ಪಾಸ್​ ಆಗಿರುವ ಅಭ್ಯರ್ಥಿಗಳಲ್ಲಿ 345 ಸಾಮಾನ್ಯ ವರ್ಗಕ್ಕೆ ಸೇರಿದವರು. 99 ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್ಸಿ ಮತ್ತು 72 ಎಸ್ಟಿ ಅಭ್ಯರ್ಥಿಗಳಿದ್ದಾರೆ.

  First published: