2023ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗೆ (UPSC Exam) ದಿನಾಂಕ ಹೊರ ಬಿದ್ದಿದೆ. ಮೇ 28ರಂದು ಪ್ರಿಲಿಮ್ಸ್ ಪರೀಕ್ಷೆ (UPSC Prelims) ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆ.21 ಕೊನೆ ದಿನಾಂಕವಾಗಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಭರದಿಂದ ತಯಾರಿಯಲ್ಲಿ ತೊಡಗಿದ್ದಾರೆ. ಅವರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಐಎಫ್ಎಸ್ ಅಧಿಕಾರಿಯ ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ.
UPSC ಅರಣ್ಯ ಸೇವೆಗಳ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಗಳಿಸಿದ IFS ಅಧಿಕಾರಿ ಅರುಷಿ ಮಿಶ್ರಾ (IFS Arushi Mishra), UPSC ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಆಗಾಗ್ಗೆ ಉತ್ತರಿಸುತ್ತಾರೆ. ಇತ್ತೀಚೆಗೆ ಅವರ ಪ್ರಶ್ನಾವಳಿಯಲ್ಲಿ ಅವರು UPSC ಪರೀಕ್ಷೆಗೆ ತಯಾರಾಗಲು ಉತ್ತಮ ಪುಸ್ತಕಗಳನ್ನು ಸಲಹೆ ಮಾಡಿದ್ದಾರೆ. ನೀವು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನೀವು ಈ ಪುಸ್ತಕಗಳಿಂದ ಟಿಪ್ಪಣಿಗಳನ್ನು ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಈ ಪುಸ್ತಕಗಳನ್ನು ಅಧ್ಯಯನ ಮಾಡಿದ್ರೆ ಯುಪಿಎಸ್ಸಿ ಪರೀಕ್ಷೆ ಸುಲಭವಾಗುತ್ತೆ
1) ರಾಜಕೀಯ ವಿಷಯ ಅಧ್ಯನಕ್ಕಾಗಿ ಲಕ್ಷ್ಮೀಕಾಂತ ಪುಸ್ತಕ ಸೂಕ್ತ. NCERT ಹೊಸ ಪುಸ್ತಕವನ್ನು ಸಂಗ್ರಹಿಸಿ.
2) ಆಧುನಿಕ ಇತಿಹಾಸ ಅಧ್ಯನಕ್ಕಾಗಿ ಸ್ಪೆಕ್ಟ್ರಮ್ ಪುಸ್ತಕ ಸೂಕ್ತ
3) ಪ್ರಾಚೀನ ಇತಿಹಾಸ NCERT ಹೊಸ ಪುಸ್ತಕ ಹಾಗೂ ಲ್ಯೂಸೆಂಟ್/ ಅರಿಹಂತ್ ಮಾರ್ಗದರ್ಶಿ ಪುಸ್ತಕ
4) ಮಧ್ಯಕಾಲೀನ ಇತಿಹಾಸಕ್ಕೂ NCERT (ಹೊಸ) ಹಾಗೂ ಲ್ಯೂಸೆಂಟ್/ ಅರಿಹಂತ್ ಮಾರ್ಗದರ್ಶಿ ಪುಸ್ತಕ
5) ಕಲೆ ಮತ್ತು ಸಂಸ್ಕೃತಿ ಅಧ್ಯಯನಕ್ಕಾಗಿ ನಿತಿನ್ ಸಿಂಘಾನಿಯಾ ಅವರ ಜೆರಾಕ್ಸ್ ಟಿಪ್ಪಣಿಗಳನ್ನು ಅಧ್ಯಯನ ಮಾಡಬಹುದು. ಜೊತೆಗೆ NCERT (ಹೊಸ).
6) ಪರಿಸರ ವಿಷಯಕ್ಕಾಗಿ ಶಂಕರ್ ಐಎಎಸ್ ಪುಸ್ತಕ ಹಾಗೂ ಲ್ಯೂಸೆಂಟ್ ಗೈಡ್ ಪುಸ್ತಕ.
ಇದನ್ನೂ ಓದಿ: UPSC Exam: ಇಂಜಿನಿಯರಿಂಗ್ ಮಾಡಿದವರಿಗೆ ಯುಪಿಎಸ್ಸಿ ಪರೀಕ್ಷೆ ಸುಲಭವೇ, ಏನಿದು ಹೊಸ ವಾದ?
7) ಭೌಗೋಳಿಕ ಸಬ್ಜೆಕ್ಟ್ ಗಾಗಿ NCERT (ಹೊಸ), ಪೆರಿಯಾರ್ ಪ್ರಕಾಶನ ಜಿ.ಸಿ. ಲಿಯಾಂಗ್, kbc ನ್ಯಾನೋ ನಕ್ಷೆ ಕೆಲಸದ ಪುಸ್ತಕ ಹಾಗೂ ಅಟ್ಲಾಸ್ ಅಧ್ಯನ ಮಾಡಿ.
8) ಅರ್ಥಶಾಸ್ತ್ರಕ್ಕಾಗಿ ತರಬೇತಿ ಟಿಪ್ಪಣಿಗಳು , ಮೃಣಾಲ್ ಪಟೇಲ್ ಉಪನ್ಯಾಸಗಳು ಹಾಗೂ NCERT (ಹೊಸ)
9) ವಿಜ್ಞಾನಕ್ಕಾಗಿ ಲ್ಯೂಸೆಂಟ್/ ಅರಿಹಂತ್ ಮಾರ್ಗದರ್ಶಿ ಪುಸ್ತಕ
10) ಸಮಾಜ ವಿಜ್ಞಾನಕ್ಕಾಗಿ ಪ್ರಚಲಿತ ವಿದ್ಯಮಾನ ಟಿಪ್ಪಣಿಗಳು
11) ಅಂತರಾಷ್ಟ್ರೀಯ ವ್ಯವಹಾರಗಳು PT 365 ಪತ್ರಿಕೆ (ಫೋಟೋ ತೆಗೆದು ಇಟ್ಟುಕೊಳ್ಳಿ)
12) ಟೆಸ್ಟ್ ಸರಣಿ - ವಿಷನ್ ಐಎಎಸ್ ಎಲ್ಲಾ ಪ್ರಶ್ನೆಪತ್ರಿಕೆಗಳಿಗೂ ಉತ್ತರಿಸುವ ಮೂಲಕ ಅಭ್ಯಾಸ ಮಾಡಿ.
ಇವುಗಳ ಬಗ್ಗೆ ಮರೆಯದಿರಿ
ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಮೊದಲಿಗೆ ಕೋಚಿಂಗ್ ಪಡೆಯುವುದಾ ಅಥವಾ ಸ್ವಂತವಾಗಿ ಅಧ್ಯಯನ ಮಾಡುವುದಾ ಎಂದು ನಿರ್ಧರಿಸಬೇಕು. ನಿಮ್ಮ ನಿರ್ಧಾರ ಕೋಚಿಂಗ್ ಪಡೆಯುವುದಾದರೆ ಸೂಕ್ತವಾದ ಸೆಂಟರ್ ಆಯ್ಕೆ ಮಾಡಬೇಕು. ಸ್ವಯಂ ಅಧ್ಯಯನ ಮಾಡುವುದಾದರೆ ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಳ್ಳಬೇಕು. ಪರೀಕ್ಷೆಯ ವಿಧಾನವನ್ನು ಅರ್ಥ ಮಾಡಿಕೊಳ್ಳಿ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂಬಂತೆ ಯುಪಿಎಸ್ ಸಿ ಪರೀಕ್ಷೆ ನಡೆಯಲಿದೆ. 3 ಹಂತಗಳಲ್ಲಿ ಪಾಸ್ ಆಗಬೇಕು. ಪರೀಕ್ಷಾ ವಿಧಾನ, ಕಟ್ ಆಫ್ ಅಂಕಗಳ ಬಗ್ಗೆ ನಿಖರ ಮಾಹಿತಿ ಪಡೆಯಿರಿ. 5-6 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿದರೆ ನಿಮಗೆ ಪರೀಕ್ಷೆಯ ಬಗ್ಗೆ ಸ್ಪಷ್ಟತೆ ಬರುತ್ತದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸೂಕ್ತ ವೇಳಾಪಟ್ಟಿ, ತಂತ್ರ ಮುಖ್ಯ. ನಿಮಗೆ ಸರಿ ಹೊಂದುವ ಟೈಮ್ ಟೇಬರ್ ಕ್ರಿಯೇಟ್ ಮಾಡಿ. ದಿನಕ್ಕೆ ಎಷ್ಟು ಗಂಟೆ ಓದಬೇಕು, ಯಾವ ವಿಷಯಗಳನ್ನು ಓದಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿ. ವೇಳಾಪಟ್ಟಿಗೆ ಬದ್ಧರಾಗಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ