IAS, IPS ಅಥವಾ ಕೇಂದ್ರ ಸರ್ಕಾರಿ ನೌಕರಿಯ (Central Govt Jobs) ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಈಗಾಗಲೇ ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ (UPSC Prinims Exam 2023) ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 1ನೇ ತಾರೀಖಿನಿಂದ ಅಧಿಕೃತ ವೆಟ್ಸೈಟ್ ಆದ upsc.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಫೆಬ್ರವರಿ 21ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಜೊತೆಗೆ, ಯಾವುದೇ ತಪ್ಪುಗಳನ್ನು ಮಾಡಬಾರದು. ಆ ಬಗ್ಗೆ ನಿಖರ ಮಾಹಿತಿ ಇಲ್ಲಿದೆ.
UPSC | CSE Prelims Exam 2023 |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 1-2-2023 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 21-2-2023 |
ಅಧಿಕೃತ ವೆಬ್ ಸೈಟ್ | upsc.gov.in |
ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ |
UPSC ಪ್ರಿಲಿಮ್ಸ್ ಪರೀಕ್ಷೆ ದಿನಾಂಕ | 28-5-2023 |
UPSC ಮುಖ್ಯ ಪರೀಕ್ಷೆ | 15-9-2023 |
ಸಾಮಾನ್ಯ/ OBC/ EWS ಅರ್ಜಿ ಶುಲ್ಕ | 100 ರೂ. |
SC/ ST/ ಮಾಜಿ ಸೈನಿಕರು/ PWD/ ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ | ಉಚಿತ |
1) ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸಮೂದಿಸಬೇಕು
2) UPSC ಉಲ್ಲೇಖಿಸಿರುವ ನಿಯಮಾನುಸಾರ ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿ ಇರಬೇಕು
3) ನಿಮ್ಮ ಫೋಟೋ ಇರುವ ಯಾವುದೇ ಗುರುತಿನ ಚೀಟಿ ಇರಬೇಕು. (ಆಧಾರ/ವೋಟರ್ ಐಡಿ)
4) ಮೀಸಲಾತಿಗೆ ಸಂಬಂಧಿಸಿದ ದಾಖಲೆ. (ಜಾತಿ ಪ್ರಮಾಣ ಪತ್ರ)
5) ಶೈಕ್ಷಣಿಕ ವಿವರಗಳು
6) ಶುಲ್ಕ ಪಾವತಿ ವಿವರಗಳು
ಶುಲ್ಕ ಪಾವತಿಸುವುದು ಹೇಗೆ?
UPSC ಅರ್ಜಿ ಶುಲ್ಕವನ್ನು ಆನ್ ಲೈನ್ ಮೋಡ್ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್/ಮೊಬೈಲ್ ವಾಲೆಟ್) ಅಥವಾ ಬ್ಯಾಂಕ್ ಚಲನ್ ಮೂಲಕ ಪಾವತಿಸಬಹುದು.
ಇದನ್ನೂ ಓದಿ: UPSC Success Story: 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾಗ ಯುಪಿಎಸ್ಸಿ ಸಂದರ್ಶನ ನೀಡಿ ಯಶಸ್ವಿಯಾದ ಬುಶ್ರಾ
ಈ ದಿನಾಂಕಗಳನ್ನು ಮರೆಯದಿರಿ
UPSC IAS ಅಧಿಸೂಚನೆಯನ್ನು 1 ಫೆಬ್ರವರಿ 2023 ರಂದು ಬಿಡುಗಡೆ ಮಾಡಲಾಗುತ್ತದೆ. ಅಂದಿನಿಂದ upsc.gov.in ನಲ್ಲಿ UPSC CSE ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. UPSC ಪ್ರಿಲಿಮ್ಸ್ ಪರೀಕ್ಷೆಯು 28 ಮೇ 2023 ರಂದು ನಡೆಯಲಿದೆ. ಮುಖ್ಯ ಪರೀಕ್ಷೆಯು 15 ಸೆಪ್ಟೆಂಬರ್ 2023 ರಂದು ನಡೆಯಲಿದೆ. UPSC ಫಲಿತಾಂಶ ಮತ್ತು ಸಂದರ್ಶನದ ದಿನಾಂಕಗಳನ್ನು ನಂತರ ತಿಳಿಸಲಾಗುವುದು.
ಪ್ರಿಲಿಮ್ಸ್ ಪರೀಕ್ಷೆ ಯಾವ ಮಾದರಿಯಲ್ಲಿ ಇರುತ್ತೆ?
ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪರೀಕ್ಷಾ ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಮೊದಲ ಪ್ರಶ್ನೆಪತ್ರಿಕೆ GS ಮತ್ತು ಇನ್ನೊಂದು GST. ಜಿಎಸ್ ಪೇಪರ್ ನಲ್ಲಿ ಒಟ್ಟು 100 ಪ್ರಶ್ನೆಗಳಿರುತ್ತವೆ. ಅದರಲ್ಲಿ ಅಭ್ಯರ್ಥಿಯು ಉತ್ತಮ ಅಂಕಗಳನ್ನು ಗಳಿಸಬೇಕು. ಈ ಪತ್ರಿಕೆಯಲ್ಲಿ, ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕವನ್ನು ಕಳೆಯಲಾಗುತ್ತದೆ.
2ನೇ ಪ್ರಶ್ನೆಪತ್ರಿಕೆಯಾದ ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್ ನಲ್ಲಿ ಒಟ್ಟು 80 ಪ್ರಶ್ನೆಗಳನ್ನು ನೀಡಲಾಗುತ್ತದೆ. . ಇಲ್ಲಿ ಸರಿಯಾದ ಉತ್ತರಕ್ಕೆ 2.5 ಅಂಕಗಳನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕಗಳನ್ನು ಕಳೆಯಲಾಗುತ್ತದೆ. ಮೊದಲ ಪತ್ರಿಕೆಯ ಅಂಕಗಳ ಆಧಾರದ ಮೇಲೆ ಕಟ್ ಆಫ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಎರಡನೇ ಪತ್ರಿಕೆ ಅರ್ಹತಾ ಪತ್ರಿಕೆಯಾಗಿದ್ದು ಶೇಕಡಾ 33 ಅಂಕಗಳನ್ನು ಗಳಿಸಲೇಬೇಕು.
ಇನ್ನು ಪ್ರಿಲಿಮ್ಸ್ ಪ್ರಶ್ನೆ ಪತ್ರಿಕೆ ಬಹುಆಯ್ಕೆ ವಿಧಾನದಲ್ಲಿ ಇರುತ್ತದೆ. OMR ಶೀಟ್ ನಲ್ಲಿ ಉತ್ತರವನ್ನು ಆಯ್ಕೆ ಮಾಡಬೇಕು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತವಾದ ಮುಖ್ಯ ಪರೀಕ್ಷೆಗೆ ತೆರಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ