ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ (UPSC) ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಅವರಲ್ಲಿ ಕೆಲವರು ಮಾತ್ರ ಐಎಎಸ್, ಐಪಿಎಸ್ (IAS-IPS) ಅಧಿಕಾರಿಗಳಾಗುತ್ತಾರೆ. UPSC ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಎಷ್ಟು ಪೇಪರ್ ಗಳಿವೆ? ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆಯನ್ನು ಮೊದಲ ಹೆಜ್ಜೆ ಎಂದು ಪರಿಗಣಿಸಲಾಗುತ್ತೆ. ಏಕೆಂದರೆ ಯುಪಿಎಸ್ಸಿಯ ಪ್ರಿಲಿಮ್ಸ್ ಅರ್ಹತಾ ಪರೀಕ್ಷೆಯಾಗಿದೆ. ಮುಖ್ಯ ಪರೀಕ್ಷಾ ಹಂತಕ್ಕೆ ಹೋಗಲು ನೀವು ಪ್ರಿಲಿಮ್ಸ್ನಲ್ಲಿ ಪಾಸ್ ಆಗಲೇಬೇಕು. ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ.
ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಅಧ್ಯಯನವಾಗಿದ್ದು 100 ಪ್ರಶ್ನೆಗಳಿರುತ್ತವೆ
UPSC ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಎರಡು ಪೇಪರ್ಗಳಿದ್ದು, ಅದರಲ್ಲಿ ಮೊದಲ ಪೇಪರ್ ಜಿಎಸ್ (GS- GENERAL STUDIES) ಮತ್ತು ಇನ್ನೊಂದು ಸಿಎಸ್ಎಟಿ (CSAT- Civil Service Aptitude Test). ಜಿಎಸ್ ಪೇಪರ್ನಲ್ಲಿ ಒಟ್ಟು 100 ಪ್ರಶ್ನೆಗಳಿವೆ. ಈ ಪತ್ರಿಕೆಯಲ್ಲಿ, ಪ್ರತಿ ಸರಿ ಉತ್ತರಕ್ಕೆ ಎರಡು ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕವನ್ನು ಕಳೆಯಲಾಗುತ್ತದೆ.
ಪೇಪರ್ II, ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್
UPSS ಪ್ರಿಲಿಮ್ಸ್ ಪರೀಕ್ಷೆಯಲ್ಲಿ, ಅಭ್ಯರ್ಥಿಯು ಎರಡನೇ ಪತ್ರಿಕೆ C-SAT ನಲ್ಲಿ ಕಾಣಿಸಿಕೊಳ್ಳಬೇಕು. ಅದರಲ್ಲಿ ಒಟ್ಟು 80 ಪ್ರಶ್ನೆಗಳು ಬರುತ್ತವೆ. ಇಲ್ಲಿ ಸರಿಯಾದ ಉತ್ತರಕ್ಕೆ 2.5 ಅಂಕಗಳನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ ಮೂರನೇ ಒಂದು ಅಂಕಗಳನ್ನು ಕಳೆಯಲಾಗುತ್ತದೆ. ಇದು ಕೇವಲ ಅರ್ಹತಾ ಪತ್ರಿಕೆಯಾಗಿದೆ. ಮುಖ್ಯ ಪರೀಕ್ಷೆ, ಸಂದರ್ಶನದ ಅಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತೆ ಎಂಬುವುದನ್ನು ಮರೆಯಬೇಡಿ.
2ನೇ ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠ 35 ತೆಗೆಯಲೇಬೇಕು
ಅಭ್ಯರ್ಥಿಗಳು ಮೊದಲು ಪೇಪರ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಏಕೆಂದರೆ ಕಟ್ ಆಫ್ ಪಟ್ಟಿಯನ್ನು ಈ ಪತ್ರಿಕೆಯ ಆಧಾರದ ಮೇಲೆ ಮಾತ್ರ ತಯಾರಿಸಲಾಗುತ್ತದೆ. ಅದೇ ಸಮಯದಲ್ಲಿ, ಅಭ್ಯರ್ಥಿಗೆ ಎರಡನೇ ಪತ್ರಿಕೆಯಲ್ಲಿ ಅರ್ಹತೆ ಇದೆ ಎಂದು ಹೇಳಲು ಅದರಲ್ಲಿ ಒಟ್ಟು ಶೇಕಡಾ 33 ಅಂಕಗಳನ್ನು ಗಳಿಸುವುದು ಕಡ್ಡಾಯ.
UPSC ಪ್ರಿಲಿಮ್ಸ್ ಪರೀಕ್ಷೆಯು ಅಭ್ಯರ್ಥಿಯನ್ನು UPSC ಮೇನ್ಸ್ಗೆ ಮತ್ತು ನಂತರ ಮುಂದಿನ ಹಂತಗಳಿಗೆ ಮಾತ್ರ ಕಳುಹಿಸುತ್ತದೆ. ಐಎಎಸ್, ಐಪಿಎಸ್ ಹುದ್ದೆ ಸಿಗಲು ಮುಖ್ಯ ಪರೀಕ್ಷೆ, ಸಂದರ್ಶನದಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು.
ಇತ್ತೀಚಿಗಿನ ಮಾಹಿತಿ
ಇನ್ನು ಜನವರಿ 14ರಂದು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಹತ್ವದ ಪ್ರಕಟಣೆ ಹೊರಡಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (CSE) 2022 ಗಾಗಿ ವ್ಯಕ್ತಿತ್ವ ಪರೀಕ್ಷೆ (PT)ಯ ಇ-ಸಮ್ಮನ್ ಲೆಟರ್ ಗಳನ್ನು ಬಿಡುಗಡೆ ಮಾಡಿದೆ. ಸಿಎಸ್ಇ 2022 ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಇ-ಸಮ್ಮನ್ ಪತ್ರವನ್ನು ಡೌನ್ಲೋಡ್ ಮಾಡಬಹುದು. ಇ-ಸಮ್ಮನ್ ಪತ್ರಗಳನ್ನು ಮಾರ್ಚ್ 10, 2023 ರವರೊಳಗೆ ಡೌನ್ ಲೋಡ್ ಮಾಡಬೇಕು.
ನಾಗರಿಕ ಸೇವೆಗಳ ಪರೀಕ್ಷೆ 2022ರ ಸೆಪ್ಟೆಂಬರ್ 16 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 25 ರಂದು ಮುಕ್ತಾಯಗೊಂಡಿತು. ಡಿಸೆಂಬರ್ 6, 2022 ರಂದು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. CSE ಮುಖ್ಯಪರೀಕ್ಷೆಗೆ ಹಾಜರಾದ ಒಟ್ಟು 2,529 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. UPSC 1,026 ಅಭ್ಯರ್ಥಿಗಳಿಗೆ ಇ-ಸಮ್ಮನ್ ಪತ್ರಗಳನ್ನು ಬಿಡುಗಡೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ