• ಹೋಂ
  • »
  • ನ್ಯೂಸ್
  • »
  • Jobs
  • »
  • UPSC ಅಭ್ಯರ್ಥಿಗಳ ದಾರಿದೀಪವಾದ ಫಿಸಿಕ್ಸ್ ವಾಲಾ ಕೋಚಿಂಗ್ ಸೆಂಟರ್ ಅನ್ನು ಕಟ್ಟಿದ ಕಥೆಯೇ ರೋಚಕ

UPSC ಅಭ್ಯರ್ಥಿಗಳ ದಾರಿದೀಪವಾದ ಫಿಸಿಕ್ಸ್ ವಾಲಾ ಕೋಚಿಂಗ್ ಸೆಂಟರ್ ಅನ್ನು ಕಟ್ಟಿದ ಕಥೆಯೇ ರೋಚಕ

ಕೋಚಿಂಗ್ ಸೆಂಟರ್

ಕೋಚಿಂಗ್ ಸೆಂಟರ್

ಕೋಚಿಂಗ್‌ ಸೆಂಟರ್‌ಗಳಲ್ಲಿ ಪ್ರತೀಕ್ ಮಹೇಶ್ವರಿ ಮತ್ತು ಅಲಖ್ ಪಾಂಡೆ ಸ್ಥಾಪಿಸಿದ ಫಿಸಿಕ್ಸ್ ವಾಲಾ ಕೂಡ ಒಂದು. ಶಿಕ್ಷಣ, ಕೋಚಿಂಗ್‌ ಜೊತೆಗೆ ಈ ಕೇಂದ್ರವು ಲಾಭದಾಯಕವಾಗಿ ಸಹ ಮುಂದುವರೆಯುತ್ತಿದೆ.

  • Share this:

ಶಿಕ್ಷಣಕ್ಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ಪ್ರಸ್ತುತ ಆದ್ಯತೆ ಹೆಚ್ಚಾಗುತ್ತಿದ್ದ ಹಾಗೇ, ಕೋಚಿಂಗ್‌ ಸೆಂಟರ್‌, ಆನ್‌ಲೈನ್‌ನಲ್ಲಿ ಪಠ್ಯಕ್ರಮ ಒದಗಿಸುವ ವೇದಿಕೆಗಳು ಹೆಚ್ಚಾಗುತ್ತಿವೆ. ಹಲವು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಪ್ರಯತ್ನದಲ್ಲಿ ದೇಶದಲ್ಲಿ ಅತ್ಯುನ್ನತ ಕೋಚಿಂಗ್‌ ಸೆಂಟರ್‌ಗಳು (Coaching Centre) ತಲೆ ಎತ್ತಿವೆ.


ಯುಪಿಎಸ್‌ಸಿ ಅಭ್ಯರ್ಥಿಗಳ ದಾರಿದೀಪ ʻಫಿಸಿಕ್ಸ್ ವಾಲಾʼ


ಇಂತಹ ಕೋಚಿಂಗ್‌ ಸೆಂಟರ್‌ಗಳಲ್ಲಿ ಪ್ರತೀಕ್ ಮಹೇಶ್ವರಿ ಮತ್ತು ಅಲಖ್ ಪಾಂಡೆ ಸ್ಥಾಪಿಸಿದ ಫಿಸಿಕ್ಸ್ ವಾಲಾ ಕೂಡ ಒಂದು. ಶಿಕ್ಷಣ, ಕೋಚಿಂಗ್‌ ಜೊತೆಗೆ ಈ ಕೇಂದ್ರವು ಲಾಭದಾಯಕವಾಗಿ ಸಹ ಮುಂದುವರಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 3 ಲಕ್ಷ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಗುರಿಯನ್ನು ಕಂಪನಿ ಹೊಂದಿದೆ.


ಫಿಸಿಕ್ಸ್ ವಾಲಾ ಪ್ರೈವೇಟ್ ಲಿಮಿಟೆಡ್ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾಗಿದೆ. ಇದನ್ನು 2020 ರಲ್ಲಿ ಪ್ರತೀಕ್ ಮಹೇಶ್ವರಿ ಮತ್ತು ಅಲಖ್ ಪಾಂಡೆ ಎಂಬುವವರು ಸ್ಥಾಪಿಸಿದರು.




ಆಕಾಂಕ್ಷಿಗಳು ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್‌ಸಿಗೆ ತಯಾರಾಗಲು ಈ ಕೋಚಿಂಗ್‌ ಕೇಂದ್ರವು ಸಹಾಯ ಮಾಡುತ್ತದೆ. ಹಲವು ವಿದ್ಯಾರ್ಥಿ ಬಳಗವನ್ನು ಹೊಂದಿರುವ ಈ ಕೇಂದ್ರ ಲಾಭದಾಯಕತೆಯಲ್ಲೂ ಹಿಂದೆ ಬಿದ್ದಿಲ್ಲ.


ಮಹೇಶ್ವರಿ ಸಂದರ್ಶನವೊಂದರಲ್ಲಿ ಕಂಪನಿಯು ಯಾವುದೇ ಹೊಸ ಹಣವನ್ನು ಸಂಗ್ರಹಿಸಲು ನೋಡುತ್ತಿಲ್ಲ. ಬದಲಿಗೆ ನಾವು ಇನ್ನೂ ಉತ್ತಮವಾಗಿ ಮೌಲ್ಯಮಾಪನವನ್ನು ಹೆಚ್ಚಿಸಲು ನೋಡುತ್ತಿದ್ದೇವೆ ಎಂದರು.


ಕಂಪನಿಯು 1.1 ಬಿಲಿಯನ್ ಡಾಲರ್ (ಸುಮಾರು ರೂ 9000 ಕೋಟಿ) ಮೌಲ್ಯದಲ್ಲಿ 100 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದೆ. ಕಳೆದ ಮೂರು ವರ್ಷಗಳಿಂದ ಲಾಭದಲ್ಲಿದೆ ಎಂದು ಸಂದರ್ಶನದಲ್ಲಿ ತಿಳಿಸಿದ ಮಹೇಶ್ವರಿ ಅವರು ಉತ್ಪಾದಿಸಿದ ಶೇ 60ರಷ್ಟು ಹಣ ಬಳಕೆಯಾಗದೆ ಉಳಿದಿದೆ ಎಂದರು.


2022ರ ಹಣಕಾಸು ವರ್ಷದಿಂದ ಕಂಪನಿಯ ಬೆಳವಣಿಗೆಯು ನಾಲ್ಕು ಪಟ್ಟು ಬೆಳೆದಿದೆ ಎಂದು ಅವರು ಹೇಳಿದರು. ಹೀಗಾಗಿ ಲಾಭದ ಬಗ್ಗೆ ಯೋಚಿಸದೇ ಕೇವಲ ಗುಣಮಟ್ಟಕ್ಕೆ ಮಾತ್ರ ನಮ್ಮ ಹೆಚ್ಚಿನ ಆದ್ಯತೆ. ವಿದ್ಯಾರ್ಥಿಗಳು ತಮ್ಮ ಶುಲ್ಕವನ್ನು ಮುಂಚಿತವಾಗಿ ಪಾವತಿಸುತ್ತಾರೆ ಆದ್ದರಿಂದ ಅವರಿಗೆ ಹೆಚ್ಚುವರಿ ಹಣದ ಅಗತ್ಯವಿಲ್ಲ ಎಂದು ಅವರು ಹೇಳಿದರು.


ಒಟ್ಟು ಆದಾಯ


FY 2022 ರಲ್ಲಿ, ಕಂಪನಿಯು 97.8 ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿದೆ. ಅವರ ಒಟ್ಟು ಆದಾಯ 234 ಕೋಟಿ ರೂಪಾಯಿ ಆಗಿದೆ.


ಪ್ರತೀಕ್ ಮಹೇಶ್ವರಿ ಯಾರು? ಶಿಕ್ಷಣ ಹಿನ್ನೆಲೆ ಏನು?


ಪ್ರತೀಕ್ ಮಹೇಶ್ವರಿ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು IIT BHU (2007-2011) ನಲ್ಲಿ ತಮ್ಮ B-ಟೆಕ್ ಅನ್ನು ಮಾಡಿದರು. ʻಫಿಸಿಕ್ಸ್ ವಾಲಾʼ ಕಟ್ಟಿ ಬೆಳೆಸಲು ಇಬ್ಬರೂ ಶ್ರಮವಹಿಸಿದ್ದಾರೆ.




ಕಳೆದ ವರ್ಷ, ಪ್ರತೀಕ್ ಮಹೇಶ್ವರಿ ಮತ್ತು ಅಲಖ್ ಪಾಂಡೆ ಹುರುನ್ ಪಟ್ಟಿಯಲ್ಲೂ ಸ್ಥಾನ ಗಿಟ್ಟಿಸಿಕೊಂಡರು. 4000 ಕೋಟಿ ವೈಯಕ್ತಿಕ ಸಂಪತ್ತು ಹೊಂದಿರುವ 1103 ವ್ಯಕ್ತಿಗಳ ಪಟ್ಟಿಯಲ್ಲಿ ಅವರು 399 ನೇ ಸ್ಥಾನದಲ್ಲಿದ್ದಾರೆ. ಅವರು ಪೆನ್‌ಪೆನ್ಸಿಲ್ ಮತ್ತು ನೈಟ್ ಪಾಂಡಾ ಎಂಬ ಕಂಪನಿಯ ಸಂಸ್ಥಾಪಕರೂ ಹೌದು.


ಫಿಸಿಕ್ಸ್ ವಾಲಾ ಕೇಂದ್ರ


ಜನವರಿ 2023 ರ ಹೊತ್ತಿಗೆ, ಫಿಸಿಕ್ಸ್ ವಾಲಾ ಅಪ್ಲಿಕೇಶನ್ ಅನ್ನು 10 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇತ್ತೀಚೆಗೆ, ಕಂಪನಿಯು $100 ಮಿಲಿಯನ್ ನಿಧಿಯೊಂದಿಗೆ ಯುನಿಕಾರ್ನ್ ಕ್ಲಬ್ ಅನ್ನು ಪ್ರವೇಶಿಸಿತು.


ಕಂಪನಿಯು ಆಫ್‌ಲೈನ್ ಕೇಂದ್ರಗಳಲ್ಲಿ 70000 ವಿದ್ಯಾರ್ಥಿಗಳನ್ನು ದಾಖಲಿಸಿದೆ. ಇದು 2000 ಕ್ಕೂ ಹೆಚ್ಚು ಶಿಕ್ಷಕರನ್ನು ಹೊಂದಿದೆ. ಜನವರಿ 2023 ರ ಹೊತ್ತಿಗೆ, ಫಿಸಿಕ್ಸ್ ವಾಲಾವು ದೆಹಲಿ, ಭೋಪಾಲ್, ವಾರಣಾಸಿ, ನೋಯ್ಡಾ, ಲಕ್ನೋ, ಪುಣೆ, ಕೋಲ್ಕತ್ತಾ, ಸಿಲಿಗುರಿ, ಗುವಾಹಟಿ, ಮಾಲ್ಡಾ, ಪಾಟ್ನಾ ಮುಂತಾದ 60 ನಗರಗಳಲ್ಲಿ 45 ಕ್ಕೂ ಹೆಚ್ಚು ಆಫ್‌ಲೈನ್ ಕೇಂದ್ರಗಳನ್ನು ನಡೆಸುತ್ತಿದೆ. ಇತ್ತೀಚೆಗೆ ದೆಹಲಿಯ ರಾಜಿಂದರ್ ನಗರದಲ್ಲಿ UPSC ಯ ಪರೀಕ್ಷಾ ತಯಾರಿ ಕೇಂದ್ರವನ್ನು ಸಹ ಹೊಸದಾಗಿ ಪ್ರಾರಂಭಿಸಿದ್ದಾರೆ.

top videos
    First published: