ನೀವು ಹೊಸ ವರ್ಷಕ್ಕೆ (New Year 2023) ಹೊಸ ಕೆಲಸ ಹುಡುಕಬೇಕೆಂದಿದ್ದರೆ ನಿಮ್ಮ ರೆಸ್ಯೂಮ್ ಅನ್ನು ಅಪ್ ಡೇಟ್ (Resume Update) ಮಾಡುವುದು ಬಹಳ ಮುಖ್ಯವಾಗುತ್ತದೆ. ನೀವು ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ರೆಸ್ಯೂಮ್ (Resume) ಸಿದ್ಧವಾಗಿದೆಯೇ ಎಂದು ಪರಿಶೀಲಿಸುವುದು ಒಳ್ಳೆಯದು. ನಿಮ್ಮ ರೆಸ್ಯೂಮ್ ಒಳಗೊಂಡಿರಬೇಕಾದ 8 ಪ್ರಮುಖ ವಿಷಯಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ. ಆ ಪ್ರಮುಖ ಅಂಶಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ.
1. ಸಂಪರ್ಕ ಮಾಹಿತಿ: ಸಂಪರ್ಕ ಮಾಹಿತಿಯನ್ನು ಪುಟದ ಮೇಲ್ಭಾಗದಲ್ಲಿ ಸೇರಿಸಬೇಕು ಎನ್ನುತ್ತಾರೆ ತಜ್ಞರು. ನೀವು ನಿಮ್ಮ ಮನೆ ವಿಳಾಸವನ್ನು ಸೇರಿಸುವ ಅಗತ್ಯವಿಲ್ಲವಾದರೂ ನೇಮಕಾತಿ ಮಾಡುವವರು ನಿಮ್ಮನ್ನು ಕಾಂಟಾಕ್ಟ್ ಮಾಡಬಹುದಾದ ಸಂಪರ್ಕ ಮಾಹಿತಿಯನ್ನು ನೀಡಲೇಬೇಕು.
"ನಿಮ್ಮ ಹೆಸರು, ಫೋನ್ ಸಂಖ್ಯೆ, ಇಮೇಲ್ ಮತ್ತು ಲಿಂಕ್ಡ್ ಇನ್ ಪ್ರೊಫೈಲ್ URL ಅನ್ನು ಪುಟದ ಮೇಲ್ಭಾಗದಲ್ಲಿ ಸೇರಿಸಿ" ಎಂದು ಕಾರ್ಯನಿರ್ವಾಹಕ ವೃತ್ತಿ ತರಬೇತುದಾರರಾದ ಟೀನಾ ನಿಕೊಲಾಯ್ ಹೇಳುತ್ತಾರೆ. ಇನ್ನು, ಕಾರ್ಯನಿರ್ವಾಹಕ ರೆಸ್ಯೂಮ್ ಬರಹಗಾರ ಮೇರಿ ಎಲಿಜಬೆತ್ ಬ್ರಾಡ್ಫೋರ್ಡ್ ಕೇವಲ ಒಂದು ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸೇರಿಸಿ. ಹಲವಾರು ಸಂಪರ್ಕ ಆಯ್ಕೆಗಳು ಗೊಂದಲಮಯವಾಗಿರುತ್ತವೆ ಎಂಬುದಾಗಿ ಸಲಹೆ ನೀಡುತ್ತಾರೆ.
2. ವೃತ್ತಿಪರ ಶೀರ್ಷಿಕೆ: ಯಾರಾದರೂ ನಿಮ್ಮ ರೆಸ್ಯೂಮ್ ಅನ್ನು ಪರಿಶೀಲಿಸಿದಾಗ, ನೀವು ಬಯಸುತ್ತಿರುವ ರೋಲ್ ಬಗ್ಗೆ ಯಾವುದೇ ಪ್ರಶ್ನೆ ಏಳಬಾರದು ಎಂದು ಟಾಪ್ ರೆಸ್ಯೂಮ್ನ ವೃತ್ತಿ ತಜ್ಞ ಅಮಂಡಾ ಆಗಸ್ಟಿನ್ ಹೇಳುತ್ತಾರೆ.
"ಸಿನಿಯರ್ ಅಕೌಂಟಿಂಗ್ ಪ್ರೊಫೆಷನಲ್' ಅಥವಾ 'ಮಾರ್ಕೆಟಿಂಗ್ ಮತ್ತು ಸೇಲ್ಸ್ ಅಸೋಸಿಯೇಟ್' ನಂತಹ ವೃತ್ತಿಪರ ಶೀರ್ಷಿಕೆಯನ್ನು ನಿಮ್ಮ ರೆಸ್ಯೂಮ್ನ ಮೇಲ್ಭಾಗದಲ್ಲಿ ಸೇರಿಸುವ ಮೂಲಕ ನಿಮ್ಮ ಗುರಿಗಳು ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Resume Tips-3: ಈ ರೀತಿಯ ರೆಸ್ಯೂಮ್ಗಳನ್ನು ಕೂಡಲೇ ಕಂಪನಿಗಳ HR ರಿಜೆಕ್ಟ್ ಮಾಡ್ತಾರೆ, ಹುಷಾರ್
3. ಕೀವರ್ಡ್ಗಳು : ಕೀವರ್ಡ್ ಗಳು ರೆಸ್ಯೂಮ್ ಮೌಲ್ಯವನ್ನು ಹೆಚ್ಚಿಸುತ್ತವೆ. ನೀವು ತುಂಬಾ ವಿವರವಾಗಿ ಬರೆಯುವ ಬದಲು ಕೆಲವು ಪರಿಣಾಮಕಾರಿಯಾದ ಕೀವರ್ಡ್ಗಳು ಮತ್ತು ಪದಗುಚ್ಛಗಳನ್ನು ಸೇರಿಸಬೇಕು.
ಕಂಪನಿಯವರು ರೆಸ್ಯೂಮ್-ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಬಳಸಿದರೆ ಇದು ವಿಶೇಷವಾಗಿ ಸಹಾಯಕವಾಗುತ್ತದೆ. ಅಲ್ಲದೇ ನಿಮ್ಮ ಉದ್ಯೋಗ ಹುಡುಕಾಟಕ್ಕೆ ಸಂಬಂಧಿಸಿದ ಉದ್ಯೋಗ ವಿವರಣೆಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳುವುದು ಮುಖ್ಯವಾಗಿದೆ.
4. ಸಾಧನೆಗಳು: ನಿಮ್ಮ ಟೀಂ ಮತ್ತು ಕಂಪನಿಗೆ ನೀವು ಹೇಗೆ ಕೊಡುಗೆ ನೀಡಿದ್ದೀರಿ ಎಂಬುದನ್ನು ಉದ್ಯೋಗ ನೀಡುವವರು ತಿಳಿದುಕೊಳ್ಳಬೇಕು. ಅವರ ಕಂಪನಿಯ ಅಗತ್ಯತೆಗಳು ಮತ್ತು ಜವಾಬ್ದಾರಿಗಳೊಂದಿಗೆ ನಿಮ್ಮ ಸಾಮರ್ಥ್ಯಗಳು ಹೊಂದಿಕೆಯಾಗುತ್ತವೆಯೇ ಎಂದು ನಿರ್ಧರಿಸಲು ಇದು ಮುಖ್ಯ ಎಂದು ನಿಕೊಲಾಯ್ ಹೇಳುತ್ತಾರೆ. ಪ್ರತಿ ಕೆಲಸದ ಶೀರ್ಷಿಕೆ ಮತ್ತು ವಿವರಣೆಯ ಅಡಿಯಲ್ಲಿ, ಪ್ರಮುಖ ಮತ್ತು ಸಂಬಂಧಿತ ಸಾಧನೆಗಳನ್ನು ಸೇರಿಸಿ.
5. ಮೆಟ್ರಿಕ್ಸ್: "ಒಬ್ಬ ವ್ಯಕ್ತಿಯು ತಂಡವನ್ನು ಮುನ್ನಡೆಸಲು, ಕ್ಲೈಂಟ್ಗಳನ್ನು ನಿರ್ವಹಿಸಲು ಅಥವಾ ವ್ಯಾಪಾರವನ್ನು ಬೆಳೆಸಲು ಸಮರ್ಥನಾಗಿದ್ದರೆ ಉದ್ಯೋಗದಾತರಿಗೆ ಮೆಟ್ರಿಕ್ಗಳು ಸಹಾಯ ಮಾಡುತ್ತವೆ.
ನಿಮ್ಮ ಸಾಧನೆಗಳನ್ನು ಬ್ಯಾಕಪ್ ಮಾಡಲು ಮೆಟ್ರಿಕ್ಗಳು ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ "ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ" ಎಂದು ಹೇಳುವ ಬದಲು, "X ಮಾಡುವ ಮೂಲಕ 12 ತಿಂಗಳ ಅವಧಿಯಲ್ಲಿ 500% ರಿಂದ $1 ಮಿಲಿಯನ್ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ" ಎಂದು ಹೇಳಲು ಪ್ರಯತ್ನಿಸಿ.
6. ಮುಖ್ಯ ಪದವಿಗಳನ್ನು ಸೇರಿಸಿ: MBA ಅಥವಾ RN ನಂತಹ ಪ್ರಮುಖ ಕ್ಷೇತ್ರದಲ್ಲಿ ನೀವು ಪದವಿಯನ್ನು ಹೊಂದಿದ್ದರೆ ರೆಸ್ಯೂಮ್ನ ಮೇಲ್ಭಾಗದಲ್ಲಿ ನಿಮ್ಮ ಹೆಸರಿನ ನಂತರ ಅದನ್ನು ಸೇರಿಸಿ.
ಆಗ ನಿಮ್ಮ ಪದವಿಪೂರ್ವ, ಪದವಿಗಳನ್ನು ಬಿಟ್ಟುಬಿಡಬಹುದು. ನಿಮ್ಮ ಪ್ರಸ್ತುತ ಉದ್ಯೋಗ ಗುರಿಗಳಿಗೆ ಸಂಬಂಧಿಸದ ಪದವಿಗಳ ಸಂಕ್ಷಿಪ್ತ ರೂಪವನ್ನು ಕೂಡ ನೀವು ಹಾಕಬೇಕೆಂದಿಲ್ಲ.
7. ಸಂಬಂಧಿತ URL : "ನಿಮ್ಮ ವೈಯಕ್ತಿಕ ಬ್ರ್ಯಾಂಡ್ ಅನ್ನು ಹೈಲೈಟ್ ಮಾಡುವ ಲಿಂಕ್ಗಳನ್ನು ಸೇರಿಸಿ. ಈ ಮಾಹಿತಿಯನ್ನು ನಿಮ್ಮ ರೆಸ್ಯೂಮ್ನ ಮೇಲ್ಭಾಗದಲ್ಲಿ ನಿಮ್ಮ ಸಂಪರ್ಕ ಮಾಹಿತಿಯೊಂದಿಗೆ ಸೇರಿಸಿ.
ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ಗೆ URL ಅನ್ನು ಸೇರಿಸುವುದರ ಜೊತೆಗೆ, ನಿಮ್ಮ ಬ್ಲಾಗ್ ಅಥವಾ ಆನ್ಲೈನ್ಗೆ ಲಿಂಕ್ಗಳನ್ನು ಸೇರಿಸುವುದು ಉತ್ತಮ. ಇದು ನಿಮ್ಮ ರೆಸ್ಯೂಮ್ ಗೆ ಇನ್ನಷ್ಟಯ ಮೌಲ್ಯ ಸೇರಿಸುತ್ತವೆ.
8. ನೇರ ಭಾಷೆ ಮತ್ತು ಕ್ರಿಯಾಪದಗಳು: ನಿಮ್ಮ ರೆಸ್ಯೂಮ್ನಲ್ಲಿ, ನಿಮ್ಮ ಭಾಷೆ ನೇರ ಮತ್ತು ಸಂಕ್ಷಿಪ್ತವಾಗಿರಬೇಕು. ನಿಮ್ಮ ಸಾಧನೆಯ ಬಗ್ಗೆ ತಿಳಿಸಲು ಕ್ರಿಯಾಪದಗಳನ್ನು ಬಳಸಿ. ವಿಶೇಷಣಗಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ